ಆದಾಯ ತೆರಿಗೆ ಇಲಾಖೆಯ 12 ಹಿರಿಯ ಅಧಿಕಾರಿಗಳನ್ನು ಕೆಲಸದಿಂದ ಕಿತ್ತೊಗೆದ ಪ್ರಧಾನಿ ಮೋದಿ

ಕಳೆದ ಐದು ವರ್ಷದಿಂದ ಮೋದಿ ಸರಕಾರದ ಆಡಳಿತದಲ್ಲಿ ಯಾವುದೇ ಒಂದು ಭ್ರಷ್ಟಾಚಾರದ ಹಗರಣ ಕೇಳಿಬಂದಿಲ್ಲ ಅಷ್ಟಕ್ಕೂ ಪ್ರಧಾನಿ ಮೋದಿಯವರೇ ಹೇಳುವಂತೆ ನಾ ಖಾವುಂಗಾ ನಾ ಖಾನೆ ದೂಂಗಾ ಅಂದರೆ ನಾನು ಕಪ್ಪು ಹಣ ತಿನ್ನಲ್ಲ, ತಿನ್ನುವವರನ್ನು ಸುಮ್ಮನೆ ಬಿಡಲ್ಲ ಎಂದು ಹೇಳಿರುವ ಮಾತು ಇದೀಗ ಸತ್ಯವಾಗಿದೆ.

ಹೌದು ಭ್ರಷ್ಟಾಚಾರದ ಹಗರಣದ ಸುಳಿಯಲ್ಲಿ ಸಿಲುಕಿರುವ ಮೆಹೂಲ್ ಚೌಕ್ಸಿ, ವಿಜಯ್ ಮಲ್ಯ, ಕ್ರಿಶ್ಚಿಯನ್ ಮಿಶೆಲ್‌ರಂತಹ ದೊಡ್ಡ ದೊಡ್ಡ ಭ್ರಷ್ಟಾಚಾರ ಎಸಗಿದ ಶ್ರೀಮಂತರನ್ನು ಈಗಾಗಲೇ ಮೋದಿ ಬಿಸಿ ಮುಟ್ಟಿಸಿ ತಕ್ಕ ಪಾಠ ಕಲಿಸುತ್ತಿದ್ದಾರೆ ಈ ಬೆನ್ನಲ್ಲೆ ಮೂಲ ಮೋದಿ ಸರಕಾರ ಮತ್ತೊಂದು ಅಭೂತಪೂರ್ವ ಹೆಜ್ಜೆ ಇಟ್ಟಿದೆ.

ಈ ಬಾರಿ ಮೋದಿ ಸರಕಾರ ಅಂತಿಂಥ ಅಧಿಕಾರಿಗಳನ್ನು ಬಲೆ ಹಾಕಿಲ್ಲ ಈ ಬಾರಿ ಪಕ್ಕಾ ಪ್ಲ್ಯಾನ್ ಮಾಡಿ ಆದಯ ತೆರಿಗೆ ಇಲಾಖೆಯಲ್ಲಿರುವ ಭ್ರಷ್ಟರಿಗೆ ಬಲೆ ಬೀಸಿದ್ದಾರೆ. ಹೌದು ಆದಾಯ ತೆರಿಗೆ ಇಲಾಖೆಯವರೇ ಖುದ್ದಾಗಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪಡೆದ ಪ್ರಧಾನಿ ಮೋದಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಪ್ರಸ್ತುತ ಪ್ರಧಾನಿ ಮೋದಿಯವರು ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆಯ 12 ಹಿರಿಯ ಅಧಿಕಾರಿಗಳನ್ನು ವಜಾಗೊಳಿಸಿ ಎಂದು ಆದೇಶ ಹೊರಡಿಸಿದ್ದಾರೆ. ವೃತ್ತಿಗೆ ಸಂಬಂಧಪಟ್ಟಂತೆ ದುರ್ವರ್ತನೆ, ಭ್ರಷ್ಟಾಚಾರದ ಆರೋಪದಲ್ಲಿ ಹಿರಿಯ ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ.

ಜಂಟಿ ಆಯುಕ್ತ ಶ್ರೇಣಿಯ ಅಧಿಕಾರಿಯೂ ಈ ಪೈಕಿ ಇದ್ದು, ಭ್ರಷ್ಟಾಚಾರ, ಉದ್ಯಮಿಯಿಂದ ಸುಲಿಗೆ ಆರೋಪಗಳು ಕೇಳಿಬಂದಿವೆ. ಕೆಲಸಕ್ಕೆ ಕುತ್ತು ತಂದುಕೊಂಡಿರುವ ಅಧಿಕಾರಿಗಳ ಪೈಕಿ ಐಆರ್ ಎಸ್ ಅಧಿಕಾರಿಯೂ ಇದ್ದು, ಕುಟುಂಬ ಸದಸ್ಯರು ಹಾಗೂ ತನ್ನ ಹೆಸರಿನಲ್ಲಿ 3.17 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿವೆ.

ಇನ್ನು ಭ್ರಷ್ಟಾಚಾರ ಆರೋಪ ಹೊತ್ತು ಸಿಬಿಐ ತನಿಖೆ ಎದುರಿಸುತ್ತಿದ್ದ,  ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಕ್ಕಾಗಿ 2009 ರಲ್ಲೇ ಅಮಾನತುಗೊಂಡಿದ್ದ ಆದಾಯ ತೆರಿಗೆ ಆಯುಕ್ತರೊಬ್ಬರನ್ನೂ ಕೇಂದ್ರ ಸರ್ಕಾರ ಕೆಲಸದಿಂದ ಕಿತ್ತೆಸೆದಿದ್ದರು ಆದರೆ ಈಗ ಮತ್ತೆ ಭ್ರಷ್ಟಾಚಾರ ಎಸಗಿದ ಒಟ್ಟು ಹನ್ನೆರಡು ಅಧಿಕಾರಿಗಳನ್ನು ಕೆಲಸದಿಂದ ಕಿತ್ತೆಸೆದಿದ್ದಾರೆ.

-Team Google Guru

Leave a Reply

Your email address will not be published. Required fields are marked *

error: Content is protected !!