Watsapp ನಲ್ಲಿ ಸ್ನೇಹಿತರು ಸಂಬಂಧಿಕರು ಕಳಿಸಿದ ಸಂದೇಶಗಳು ಸತ್ಯ ಅಥವಾ ಸುಳ್ಳು ಎಂದು ತಿಳಿಯಲು ಏನು ಮಾಡಬೇಕು.? ಇಲ್ಲಿದೆ ಸುಲಭ ಮಾರ್ಗ.!

ವಾಟ್ಸಾಪ್ ಕೇವಲ ಚಾಟ್ ಮಾಡುವುದಕ್ಕಾಗಿ ಮಾತ್ರ ಬಳಸದೆ ಭಾರತೀಯರಾದ ನಾವು ಅದನ್ನು ಮಾಹಿತಿ ಹಂಚಿಕೊಳ್ಳಲೆಂದೆ ಬಳಸುವ ಸಾಧ್ಯತೆ ಹೆಚ್ಚು, ಹೀಗಾಗಿ ವಾಟ್ಸಾಪ್‌ನಲ್ಲಿ ಬರುವ ಹಲವು ಸಂದೇಶಗಳು ಹಾಗೂ ಸುದ್ದಿಗಳು ಯಾರೋ ಕಳಿಸಿದ್ದನ್ನು ಪರಿಶಿಲಿಸದೆ ಅದನ್ನು ಇತರರಿಗೆ ಕಳಿಸುತ್ತೆವೆ. ಹೀಗೆ ಮಾಡುವುದರಿಂದ ಕೆಲವೊಂದು ಸುಳ್ಳು ಸುದ್ದಿಗಳು ವೈರಲ್ ಆಗಿ ಎಲ್ಲಾ ಕಡೆ ನಾವೆ ಹರಡಿದಂತಾಗುತ್ತದೆ.

ಸುಳ್ಳು ಸುದ್ದಿಗಳು ಹರಡಿ ಎಲ್ಲರನ್ನೂ ಮೂರ್ಖರನ್ನಾಗಿ ಮಾಡೋದು ತಪ್ಪು ಅಲ್ಲವೆ.? ಹೀಗಾಗಿಯೆ ಸುಳ್ಳು ಸುದ್ದಿ ಹರಡುವುದನ್ನು ತಡೆಗಟ್ಟಲು ಒಂದು ಹೊಸ ಮಾರ್ಗ ಕಂಡು ಹಿಡಿಯಲಾಗಿದೆ, ಇದರಿಂದ ಪ್ರತಿಯೊಬ್ಬರು ತಮಗೆ ಬಂದ ಸುದ್ದಿ ಸತ್ಯ ಅಥವಾ ಸುಳ್ಳು ಎಂದು ಪರಿಶಿಲಿಸಬಹುದಾಗಿದೆ.

ಹಲವಾರು ಫೋಟೊ, ವಿಡಿಯೋ, ಏನೋ ಬರೆದು ಸುಳ್ಳು ಸುದ್ದಿ ಹರಡುವುದು ಸರ್ವೆ ಸಾಮಾನ್ಯ, ಇತ್ತಿಚಿನ ದಿನಗಳಲ್ಲಂತು ಚುನಾವಣೆಗೆ ಸಂಬಂಧಿಸಿದ ಎಡಿಟ್​ ಮಾಡಿದ ಫೋಟೋ ಅಥವಾ ವಿಡಿಯೋ ಬಳಸಿ ಪಕ್ಷದ ಅಥವಾ ರಾಜಕೀಯ ಮುಖಂಡರ ಬಗ್ಗೆ ಅಪಪ್ರಚಾರ ಮಾಡಲು ಯತ್ನಿಸಬಹುದು. ಇವುಗಳನ್ನು ತಡೆಗಟ್ಟಲು ವಾಟ್ಸಾಪ್ ಹೆಲ್ಪ್​​ಲೈನ್​​ ಒಂದು ಹೊಸ ನಂಬರ್​ ಪರಿಚಯಿಸಿದೆ.

ವಾಟ್ಸಾಪ್‌ನಲ್ಲಿ ನಿಮಗೆ ಬಂದ ಸುದ್ದಿ ನಿಜವೋ ಸುಳ್ಳೊ ಎಂದು ಪರೀಕ್ಷಿಸಲು, ಆ ಮಾಹಿತಿಯನ್ನು +919643000888 ಈ ನಂಬರ್‌ಗೆ  ವಾಟ್ಸ್​​ಆ್ಯಪ್​ನಲ್ಲಿ ಕಳಿಸಬಹುದು. ಒಂದು ವೇಳೆ ಯಾವುದಾದರೂ ಮಾಹಿತಿ ಸುಳ್ಳು ಎಂದು ನಿಮಗೆ ತಿಳಿದಿದ್ರೆ ಅದನ್ನೂ ಕೂಡ ಟಿಪ್​​ ಲೈನ್​​ ಮೂಲಕ ತಿಳಿಸಬಹುದು.

ನಿಮಗೆ ಬಂದ ಸುದ್ದಿಯನ್ನು ಪರಿಶೀಲಿಸಲು ಆ ಸುದ್ದಿಯನ್ನು ಈ ನಂಬರ್‌‌ನ ವಾಟ್ಸಾಪ್‌ಗೆ 9643000888 ಕಳಿಸಬೇಕು, ನಂತರ ವೆರಿಫಿಕೇಷನ್ ಸೆಂಟರ್​​ ನಿಂದ ನಿಮ್ಮ ಮಾಹಿತಿಯನ್ನು ಪರಿಶೀಲನೆ ಮಾಡಬೇಕೋ ಬೇಡವೋ ಎಂದು ಕೇಳುತ್ತದೆ. ಆಗ ನೀವು ಎಸ್ ಎಂದು ಹೇಳಬೇಕು.

ಪರಿಶೀಲನೆ ಮುಕ್ತಾಯವಾದ ಬಳಿಕ ವೆರಿಫಿಕೇಷನ್​ ಸೆಂಟರ್​​ನಿಂದ ನಿಮಗೆ ರಿಪ್ಲೈ ಬರುತ್ತದೆ. ನಿಮ್ಮ ಮಾಹಿತಿ ನಿಜವೋ, ಸುಳ್ಳೋ, ದಾರಿ ತಪ್ಪಿಸುವ ಸುದ್ದಿಯೋ, ವಿವಾದಾದ್ಮಕವಾದ ಸುದ್ದಿಯೋ ಎಂದು ಪರಿಶೀಲಿಸಿ ನಿಮಗೆ ಪ್ರತಿಕ್ರಿಯೆ ನೀಡುತ್ತದೆ. ಜೊತೆಗೆ ಅದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನೂ ಒದಗಿಸುತ್ತದೆ.

ಫೋಟೋ, ವಿಡಿಯೋ, ಲಿಂಕ್ ಅಥವಾ ಟೆಕ್ಸ್ಟ್​​​ ಮಾಹಿತಿಯನ್ನು ಕೂಡ ನೀವು ಪರಿಶೀಲನೆಗೆ ಕಳಿಸಬಹುದು.
ನೀವು ಕಳಿಸಿದ ವಿಷಯ ಹಳೆಯದ್ದಾಗಿದ್ದರೆ ಬೇಗನೆ ಪ್ರತಿಕ್ರಿಯೆ ಬರುತ್ತದೆ. ಒಂದು ವೇಳೆ ಅದು ಹೊಸ ವದಂತಿಯಾಗಿದ್ದರೆ ಪ್ರತಿಕ್ರಿಯೆ ಬರೋದು ಸ್ವಲ್ಪ ತಡವಾಗಬಹುದು.

ಇಂಗ್ಲಿಷ್​​ ಮಾತ್ರವಲ್ಲದೆ ಸ್ಥಳೀಯ ಭಾಷೆಗಳಾದ ಹಿಂದಿ, ತೆಲುಗು, ಬೆಂಗಾಲಿ ಮತ್ತು ಮಲಯಾಳಂನಲ್ಲಿರೋ ಮಾಹಿತಿಯನ್ನು  ಕೂಡ ಇದರಿಂದ ಪರಿಶೀಲಿಸಲಾಗುವುದು.

– Gururaj Sahukar