ಪ್ರಧಾನಿ ಮೋದಿಯವರ ಮಹತ್ತರ ಯೋಜನೆಗೆ ಶರಣಾಗಿ OK ಎಂದು ಸಹಿ ಹಾಕಿದ ಕಟ್ಟರ್ ಮುಸ್ಲಿಂ ರಾಷ್ಟ್ರ..!

ಪ್ರಧಾನಿ ಮೋದಿ ಸರಕಾರ ತೈಲ ಆಮದು ಮಾಡಿಕೊಳ್ಳಲು ಮಹತ್ತರ ಯೋಜನೆಯನ್ನು ರೂಪಿಸಿದ್ದು, ಈ ಯೋಜನೆಯಿಂದ ಭಾರತಕ್ಕೆ ಸುಗಮವಾಗಿ ತೈಲ ಆಮದು ಮಾಡಿಕೊಳ್ಳಬಹುದು ಎನ್ನಲಾಗಿದೆ ಹಾಗಾದರೆ ಮೋದಿ ಕೈಗೆತ್ತಿಕೊಂಡಿರುವ ಆ ಮಹತ್ತರ ಯೋಜನೆ ಯಾವುದು, ಆ ಯೊಜನೆಯಿಂದ ಭಾರತಕ್ಕೆ ಹೇಗೆ ಉಪಯೋಗವಾಗುವುದು ಎಂದು ತಿಳಿಯಲು ಮುಂದೆ ಓದಿ.

ಭಾರತ ಹಾಗೂ ದುಬೈ ರಾಷ್ಟ್ರಗಳ ನಡುವಿನ ಸ್ನೇಹ ಬಾಂಧವ್ಯವನ್ನು ಗಟ್ಟಿಯಾಗಿಸಿಕೊಳ್ಳುವ ಕಾರಣ ಮೋದಿ ಸರಕಾರದ ಜೊತೆ ಈ ಒಪ್ಪಂದ ಮಾಡಿಕೊಂಡ ದುಬೈ‌ನ ರಾಜ ಈ ಯೋಜನೆಗೆ ಸಹಿ ಮಾಡಿದ್ದಾರೆ ಎನ್ನಲಾಗಿದೆ, ಈ ಕಾರಣದಿಂದಾಗಿ ಮುಂಬೈನಿಂದ ದುಬೈ ವರೆಗೂ ನೀರಿನ ಒಳಗಡೆ ರೈಲು ಸಂಪರ್ಕ ನಿರ್ಮಿಸುವ ಅತೀ ದೊಡ್ಡ ಯೋಜನೆಗೆ ಮೋದಿ ಸರಕಾರ ಕೈ ಹಾಕಿದ್ದಾರೆ ಎನ್ನಲಾಗಿದೆ.

ಮುಂಬೈ ರೈಲು ನಿಲ್ದಾಣದಿಂದ ದುಬೈನ ಫ್ಯೂಜೈರಾ ರೈಲು ನಿಲ್ದಾಣಕ್ಕೆ ನೀರಿನೊಳಗಿನ ರೈಲು ಸಂಪರ್ಕ ನಿರ್ಮಾಣವಾಗುತ್ತಿದ್ದು, ಎರಡೂ ದೇಶಗಳ ಪ್ರವಾಸಿಗರು ಸದ್ಯದಲ್ಲಿಯೇ ಸಾಗರದ ಮಧ್ಯದಿಂದ ರೈಲು ಸಂಪರ್ಕದ ಮೂಲಕ ಪ್ರಯಾಣಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ರೈಲುಸಂಪರ್ಕ ಜನರಿಗೆ ಪ್ರಯಾಣದ ಸೌಕರ್ಯ ಕಲ್ಪಿಸುವುದರ ಜೊತೆಜೊತೆಗೆ ಭಾರತದಿಂದ ದುಬೈಗೆ ಸರಕುಗಳ ವಿನಿಮಯಕ್ಕೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಯೋಜನೆಯಿಂದಾಗಿ ಪೈಪ್ ಲೈನ್ ​​ಮೂಲಕ ತೈಲವನ್ನು ರಫ್ತು ಹಾಗೂ ಆಮದು ಮಾಡುವ ಯೋಜನೆಗಳಿವೆ ಎಂದು ದುಬೈನ ಮಾಧ್ಯಮಗಳು ವರದಿ ಮಾಡಿವೆ.

ಈ ಯೋಜನೆಯು ಭಾರತದ ಮುಂಬಯಿ ನಗರದಿಂದ ಫುಜೈರಾದೊಂದಿಗೆ ಅಲ್ಟ್ರಾ ಸ್ಪೀಡ್ ಫ್ಲೋಟಿಂಗ್ ರೈಲುಗಳ ಮೂಲಕ ಸಂಪರ್ಕ ಕಲ್ಪಿಸುತ್ತೇವೆ, ಈ ಯೋಜನೆಯು ದ್ವಿಪಕ್ಷೀಯ ವ್ಯಾಪಾರವನ್ನು ಉತ್ತೇಜಿಸುವ ಗುರಿ ಹೊಂದಿದೆ. ಫ್ಯೂಜೈರಾ ಬಂದರಿನಿಂದ ಭಾರತಕ್ಕೆ ತೈಲ ರಫ್ತು ಮಾಡಲಿದ್ದು ಹಾಗೆಯೇ ಮುಂಬೈ‌ನ ಉತ್ತರ ಭಾಗದಲ್ಲಿರುವ ನರ್ಮದಾ ನದಿಯಿಂದ ಹೆಚ್ಚುವರಿ ನೀರನ್ನು ದುಬೈಗೆ ಆಮದು ಮಾಡಿಕೊಳ್ಳುವ ಯೋಜನೆಯಾಗಿದ್ದು ಇದರ ಜೊತೆಗೆ, ಇತರ GCC ಪಾಲುದಾರರು ರಫ್ತು ಮತ್ತು ಆಮದುಗಳನ್ನು ಸುಧಾರಿಸಬಹುದು ಎಂದು ನ್ಯಾಷನಲ್ ಅಡ್ವೈಸರ್ ಬ್ಯೂರೊ ಲಿಮಿಟೆಡ್‌‌ನ ಸಂಸ್ಥಾಪಕ ಅಲ್ಶೆಹಿ ಹೇಳಿದ್ದಾರೆ.

ಈ ಪರಿಕಲ್ಪನೆಯು ಆಕಾರವನ್ನು ನೈಜ ರೂಪ ಪಡೆದುಕೊಳ್ಳಲು ವಿಶ್ಲೆಷಣೆ ನಡೆಸಿ ಅನೇಕ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಕಾರಣ ಇದೊಂದು ದೊಡ್ಡ ಮಟ್ಟದ ಯೋಜನೆಯಾಗಿದ್ದು ಒಳನೀರಿನ ರೈಲ್ವೆ ಸಂಪರ್ಕ ಸುಮಾರು 2000 ಕಿಲೊಮೀಟರ್ ಇರುತ್ತದೆ ಹೀಗಾಗಿ ಯೋಜನೆಯನ್ನು ಕಾರ್ಯ ಸಾಧ್ಯತೆಗೆ ತರುವುದು ಸುಲಭದ ಮಾತಲ್ಲ ಅದರ ಹಿಂದೆ ಅಧ್ಯಯನವು ಇರುತ್ತದೆ ಎಂದು ಅಲ್ಶೆಹಿ ಹೇಳಿದ್ದಾರೆ.

ಇತ್ತಿಚಿನ ದಿನಗಳಲ್ಲಿ ನೀರೊಳಗಿನ ಬುಲೆಟ್ ರೈಲ್ವೆ ಸಂಪರ್ಕಕ್ಕೆ ಕೈ ಹಾಕಿದ ಚೀನಾ ಸರಕಾರವು ಶಾಂಘೈ ನಿಂದ ಝೌಸಾನ್ ಗೆ ಸಂಪರ್ಕಿಸಲು ದೇಶದಲ್ಲಿ ಮೊಟ್ಟಮೊದಲ ಬಾರಿ ಪ್ರಯತ್ನಿಸಿತ್ತು ಎಂದು ದುಬೈನ ಖಲೀಜ್ ಟೈಮ್ಸ್ ಮಾಧ್ಯಮ ವರದಿಯ ಮಾಡಿದೆ.

-Team Google Guruu

Leave a Reply

Your e-mail address will not be published. Required fields are marked *

error: Content is protected !!