ಪಾಕ್‌ಗೆ ನಡುಕ ಹುಟ್ಟಿಸಿದ ಭಾರತ; ನಾಳೆ ಮುಹೂರ್ತ ಫಿಕ್ಸ್.!

ನಾಳೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಪಿಎಸ್​​ಎಲ್​​ವಿ ಸಿ 46 ಮೂಲಕ RISAT 2B ಉಪಗ್ರಹವನ್ನು ಉಡಾವಣೆ ಮಾಡಲಿದೆ. ಈ ಹಿನ್ನೆಲೆ ಉಡಾವಣೆ ಕಾರ್ಯ ಸುಸೂತ್ರವಾಗಿ ನಡೆಯಲಿ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

ಇತ್ತೀಗಷ್ಟೇ ಇಸ್ರೋ, RISAT-2B ಎಂಬ ರಡಾರ್​ ಇಮೇಜಿಂಗ್ ಅರ್ಥ್​​ ಅಬ್ಸರ್ವೇಷನ್ ಸ್ಯಾಟಲೈಟ್​​ ಬಗ್ಗೆ ಘೊಷಣೆ ಮಾಡಿತ್ತು. ಪಾಕ್​ ಗಡಿಯಲ್ಲಿ ಉಗ್ರರ ಹಾಗೂ ಪಾಕ್ ಸೇನೆಯ ಚಲನವಲನ ಮೇಲೆ ನಿಗಾ ಇಡುವ ಸಾಮರ್ಥ್ಯವನ್ನು ಈ ಉಪಗ್ರಹ ಹೊಂದಿದ್ದು, ಇದು ಪಾಕ್​ಗೆ ಚಳಿ ಬಿಡಿಸಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಈ ಉಪಗ್ರಹ ನಾಳೆ ಪಿಎಸ್​​ಎಲ್​​ವಿ- ಸಿ46 ಮೂಲಕ ಉಡಾವಣೆಯಾಗಲಿದೆ. ನಾಳೆ ಬೆಳಗ್ಗೆ 5.27ಕ್ಕೆ ಆಂಧ್ರಪ್ರದೇಶದ ಶ್ರಿಹರಿಕೋಟಾದಲ್ಲಿರೋ ಸತೀಶ್​ ಧವನ್​ ಸ್ಪೇಸ್​​ ಸೆಂಟರ್​​ನಿಂದ ಉಪಗ್ರಹ ಉಡಾವಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇಂದು ಶಿವನ್​ ಅವರು PSLV C 46 ನ ಮಾಡೆಲ್​​​ ತಿರುಪತಿಗೆ ಕೊಂಡೊಯ್ದು ದೇವರ ಮುಂದೆ ಇಟ್ಟು, ಮಿಷನ್​ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದ್ರು. ಇದೇ ವೇಳೆ ಮಾತನಾಡಿದ ಅವರು, PSLV C 46 ಹೊತ್ತೊಯ್ಯಲಿರುವ RISAT 2B ಉಪಗ್ರಹದಿಂದ ಭಯೋತ್ಪಾದನೆ ನಿಗ್ರಹಿಸಲು ಭಾರತಕ್ಕೆ ನೆರವಾಗಲಿದೆ ಎಂದರು. ಗಡಿ ಪ್ರದೇಶಗಳಲ್ಲಿ ಉಗ್ರರ ಚಲನವಲನ ಹಾಗೂ ಅವರ ಅಡಗುದಾಣಗಳನ್ನ ಪತ್ತೆ ಹಚ್ಚಲು ಭದ್ರತಾ ಪಡೆಗೆ ಇದು ಸಹಾಯಕವಾಗಲಿದೆ ಎಂದು ತಿಳಿಸಿದ್ರು.

ಚಂದ್ರಯಾನ 2 ಯೋಜನೆ ಪ್ರಗತಿಯಲ್ಲಿದೆ ಎಂದು ಇದೇ ವೇಳೆ ಮಾತನಾಡಿದ ಅವರು ಇನ್ನು ಇತ್ತೀಚೆಗಷ್ಟೇ  ಸಾರ್ವಜನಿಕರೂ ಕೂಡ ಉಪಗ್ರಹ ಉಡಾವಣೆಯನ್ನು ನೇರವಾಗಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಸತೀಶ್​ ಧವನ್​ ಸ್ಪೇಸ್​ ಸೆಂಟರ್​​ನ ವ್ಯೂವರ್ಸ್​ ಗ್ಯಾಲರಿಯಿಂದ ಸಾಮಾನ್ಯ ಜನರು ಕೂಡ ಸ್ಯಾಟಿಲೈಟ್​ ಉಡಾವಣೆಯನ್ನ ಕಣ್ತುಂಬಿಕೊಳ್ಳಬಹುದು.

ಇದಕ್ಕೆ ಉಡಾವಣೆಗೆ 5 ದಿನಗಳ ಮುನ್ನ ಆನ್​ಲೈನ್​ ಮೂಲಕ ರೆಜಿಸ್ಟ್ರೇಷನ್ ಮಾಡಿಕೊಂಡವರಿಗೆ ಮಾತ್ರ ಈ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಲಾಗುತ್ತಿದೆ.

– Team Google Guru

Leave a Reply

Your email address will not be published. Required fields are marked *

error: Content is protected !!