ಭಾರತದಲ್ಲಿ ಪಾಕಿಸ್ತಾನದ ಬಾವುಟ ಹಾರಾಡುವುದನ್ನು ಕಂಡು ಸಹಿಸದ ಈ ವೀರ ಯೋಧ ಮಾಡಿದ್ದೇನು ಗೊತ್ತೆ..?

ನಮ್ಮ ದೇಶದಲ್ಲಿ ಪಾಕ್ ಧ್ವಜ ಹಾರಾಡುವುದನ್ನು ನೋಡಲಾಗುತ್ತಿಲ್ಲ ಎಂದು ತನ್ನ ಮೇಲಾಧಿಕಾರಿಗಳು ಹೇಳಿದ್ದನ್ನು ಕೇಳಿದ ಓರ್ವ ಸೈನಿಕ ತನ್ನ ಪ್ರಾಣವನ್ನು ಲೆಕ್ಕಿಸದೆ ಪಾಕಿಸ್ತಾನದ ಧ್ವಜವನ್ನು ಕೆಳಗಿಳಿಸಿ, ಅದೇ ಜಾಗದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ, ಸೆಲ್ಯೂಟ್ ಮಾಡುವುದರ ಮೂಲಕ ಭಾರತ ದೇಶದ ಆತ್ಮ ಗೌರವವನ್ನು ಹೆಚ್ಚಿಸಿದ್ದಾನೆ.

ಆ ಘಟನೆಯ ವಿವರಗಳು ಹೀಗಿವೆ. ದಕ್ಷಿಣ ಕಾಶ್ಮೀರ ಪ್ರದೇಶದಲ್ಲಿಒಂದು ಮೊಬೈಲ್ ಟವರ್ ಮೇಲೆ ಪಾಕಿಸ್ತಾನದ ಧ್ವಜ ಹಾರಾಡುತ್ತಿದೆ. ವಾಸ್ತವದಲ್ಲಿ ಆ ಪ್ರದೇಶ ಭಾರತ ದೇಶದೊಳಗಿದೆ. ಆದರೆ ಉಗ್ರವಾದಿಗಳು ಹೆಚ್ಚಾಗಿರುವ ಪ್ರದೇಶ. ಆ ಪ್ರದೇಶದಲ್ಲಿ ಒಂದು ಮೊಬೈಲ್ ಟವರ್ ಮೇಲೆ ಪಾಕಿಸ್ತಾನದ ಧ್ವಜ ಹಾರಾಡುತ್ತಿರುವುದು ಭಾರತದ ಘನತೆಗೆ ಧಕ್ಕೆಯುಂಟು ಮಾಡಿದಂತೆ ಕಾಣಿಸುತ್ತಿದ್ದರೆ, ಇದನ್ನು ಸಹಿಸದ ಸುಮಂತ್ ಎಂಬ ವೀರ ಸೈನಿಕ, ಬುಲೆಟ್ ನಿರೋಧಕ ಜಾಕೆಟ್ ಧರಿಸಿ ಟವರ್ ಹತ್ತಲು ಪ್ರಾರಂಭಿಸಿದ.

ಸುಮಾರು 50 ಅಡಿ ಏರಿದ ಸುಮಂತ್ ಪಾಕ್ ಧ್ವಜವನ್ನು ಕೆಳಗಿಳಿಸಿ, ಅದೇ ಜಾಗದಲ್ಲಿಭಾರತದ ಧ್ವಜವನ್ನು ಹಾರಿಸಿ, ಅಲ್ಲಿಂದಲೇ ಸೆಲ್ಯೂಟ್ ಹೊಡೆದ. ಅಪಾಯವನ್ನು ಲೆಕ್ಕಿಸದೆ ತನ್ನ ಪ್ರಾಣವನ್ನು ಪಣಕ್ಕಿಟ್ಟು ಇಂತಹ ಸಾಹಸ ಮಾಡಿದ ಸುಮಂತ್ ಗೆ ಅಭಿನಂದನೆಗಳು.

ಇಲ್ಲಿ ಒಂದು ಮಾತನ್ನು ಹೇಳಲೇ ಬೇಕು. ನಮ್ಮ ಧ್ವಜದ ಸ್ಥಾನದಲ್ಲಿ ನಿಮ್ಮಧ್ವಜ ಹಾರಾಡಿದಾಗ ತಮ್ಮ ಪ್ರಾಣಗಳನ್ನೂ ಲೆಕ್ಕಿಸದ ವೀರ ಸೈನಿಕರು ನಮ್ಮ ಬಳಿ ಇದ್ದಾರೆ. ದೇಶದ ಗೌರವಕ್ಕೆ ಧಕ್ಕೆಯುಂಟಾಗುತ್ತಿದ್ದರೆ ಎಂತಹ ತ್ಯಾಗಕ್ಕೂ ಸಿದ್ದವಿರುವ ನಮ್ಮ ಹೆಮ್ಮೆಯ ಸೈನಿಕರು ತಮ್ಮ ಪ್ರಾಣದ ಹಂಗು ತೊರೆದು ದೇಶ ಕಾಯುತ್ತಾರೆ.

ಲೇ ಪಾಪಿ ಪಾಕಿಸ್ತಾನ ಒಂದು ವೇಳೆ ನೀವು ನಮ್ಮ ದೇಶದ ಮೇಲೆ ಯುದ್ಧಮಾಡಿದರೆ, ನಿನ್ನ ಗತಿ ಏನಾಗುತ್ತದೆಂದು ಒಂದೇ ಒಂದು ಬಾರಿ ಆಲೋಚಿಸು, ನರಿ ಬುದ್ದಿ ಮಾಡೋದು ಬಿಟ್ಟು ನಿಯತ್ತಾಗಿ ಬಾಳೋದನ್ನ ಕಲಿತರೆ ಒಳ್ಳೆಯದು ಇಲ್ಲವಾದಲ್ಲಿ ಸರ್ವನಾಶ ಕಟ್ಟಿಟ್ಟ ಬುತ್ತಿ ನಿನಗೆ ಎನ್ನುವುದು ನೆನಪಿರಲಿ.

-Team Google Guru

Leave a Reply

Your e-mail address will not be published. Required fields are marked *

error: Content is protected !!