ಭಾರತದ 1000 ರೂ. ಈ ದೇಶಗಳಲ್ಲಿ 35000 ಕ್ಕೆ ಸಮ… ಹೋಗಿ ನೀವೂ ಆ ದೇಶದಲ್ಲಿ ಕೋಟ್ಯಾಧೀಶ್ವರರ ಜೀವನ ಅನುಭವಿಸಿ ಬನ್ನಿ

ರೂಪಾಯಿಯ ಇತಿಹಾಸದ ಮೇಲೆ ಸ್ವಲ್ಪ ಕಣ್ಣು ಹಾಯಿಸಿದರೆ 1947 ರಲ್ಲಿ ಒಂದು ರೂಪಾಯಿಯ ಮೌಲ್ಯ ಒಂದು ಡಾಲರ್ ಗೆ ಸಮವಿತ್ತು ಆದರೆ ಈಗ 65 ರೂ.ಗಳಿಗಿಂತಲೂ ಅಧಿಕವಾಗಿದೆ. ಆದರೆ ಈ ಪ್ರಪಂಚದಲ್ಲಿ ಇನ್ನೂ ಹಲವಾರು ದೇಶಗಳಿದ್ದು ಅಲ್ಲಿನ ಕರೆನ್ಸಿ ಭಾರತೀಯ ರೂಪಾಯಿ ಮೌಲ್ಯಕ್ಕಿಂತಲೂ ಅತೀ ಕಡಿಮೆ ಮೌಲ್ಯವನ್ನ ಹೊಂದಿವೆ.

ನೀವೂ ವಿದೇಶ ಪ್ರವಾಸದ ಬಗ್ಗೆ ಪ್ಲ್ಯಾನ್ ಮಾಡಿಕೊಂಡಿದ್ದರೆ, ಸುಂದರ ದೇಶಗಳನ್ನ ಸುತ್ತಾಡಿ ಬರುವ ಪ್ಲ್ಯಾನ್ ಹಾಕಿಕೊಂಡಿದ್ದರೆ ಬನ್ನಿ ಭಾರತದ ಕಡಿಮೆ ರೂಪಾಯಿ ಕರೆನ್ಸಿಯನ್ನೇ ಇಟ್ಟುಕೊಂಡು ಕೋಟ್ಯಾಧೀಶ್ವರರ ಹಾಗೆ ಎಂಜಾಯ್ ಮಾಡಿಬರಬಹುದಾದಂತಹ ದೇಶಗಳ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ. ಈ ದೇಶಗಳಲ್ಲಿ ಭಾರತದ ನೂರು ರೂ.ಇಟ್ಟುಕೊಂಡು ಕೂಡ ನೀವು ರಾಯಲ್ ಲೈಫ್ ಎಂಜಾಯ್ ಮಾಡಬಹುದು.

1. ಇಂಡೋನೇಷ್ಯಾ (1 ರೂಪಾಯಿ = 207.78 ಇಂಡೋಷಿಯನ್ ರುಪಿಯಾ):

ದ್ವೀಪಗಳ ದೇಶವೆಂದೇ ಪ್ರಸಿದ್ಧ ದೇಶ ಇಂಡೋನೇಷ್ಯಾ, ಸ್ವಚ್ಛ ನೀಲಿ ಬಣ್ಣದ ನೀರು ಹಾಗು ಉಷ್ಣವಲಯದ ಜಲವಾಯು ವಿರುವ ಅದ್ಭುತ ಹಾಗು ಸುಂದರ ದೇಶ ಇಂಡೋನೇಷ್ಯಾ. ಭಾರತೀಯ ಕರೆನ್ಸಿ ವ್ಯಾಲ್ಯೂ ಇಂಡೋನೇಷ್ಯಾ ಕರೆನ್ಸಿಗಿಂತ ಅತ್ಯಧಿಕವಾಗಿದೆ. ಇಷ್ಟೇ ಅಲ್ಲದೆ ಇಲ್ಲಿ ಭಾರತೀಯರಿಗೆ ಉಚಿತವಾಗಿ ವೀಸಾ ನೀಡಲಾಗುತ್ತೆ. ಇದರರ್ಥ ನೀವು ಹೆಚ್ಚು ಹಣ ಖರ್ಚು ಮಾಡದೆಯೇ ಸುಂದರವಾದ ಇಂಡೋನೇಷ್ಯಾ ದೇಶದ ಸೌಂದರ್ಯವನ್ನ ಸವಿದು ಬರಬಹುದು

2. ವಿಯೆಟ್ನಾಂ (1 ರೂಪಾಯಿ = 355.04 ವಿಯೆಟ್ನಾಂ ಡೋಂಗ್):

ಈ ಒಂದು ಸುಂದರ ದೇಶದಲ್ಲಿ ನಿಮಗೆ ಬೌದ್ಧ ಪಗೋಡಾ (ವಿಶಿಷ್ಟ ರೀತಿಯ ದೇವಾಲಯ), ಅದ್ಭುತವಾದ ವಿಯೇಟ್ನಾಮಿ ವ್ಯಂಜನ ಹಾಗು ನದಿಗಳಿಗೆ ಪ್ರಸಿದ್ಧವಾದ ದೇಶವೇ ವಿಯೆಟ್ನಾಂ, ನೀವು ಅಲ್ಲಿನ ಕಾಯಾಕಿಂಗ್ ಹೋಗಬಹುದು. ವಿದೇಶ ಪ್ರವಾಸ ಮಾಡಬೇಕು ಎಂಬ ಆಸೆಯಿರುವ ಭಾರತೀಯರಿಗೆ ವಿಯೆಟ್ನಾಂ ಹೇಳಿ ಮಾಡಿಸಿದ ಜಾಗ, ಯಾಕಂದ್ರೆ ವಿಯೆಟ್ನಾಂ ನ ಸಂಸ್ಕೃತಿ ಸಂಪೂರ್ಣವಾಗಿ ಬೇರೆಯದ್ದೇ ಇದೆ. ಈ ದೇಶ ಭಾರತದಿಂದ ಬಹಳ ದೂರವೂ ಇಲ್ಲ ಹಾಗು ಭಾರತದ ಕರೆನ್ಸಿಯಿಂದ ನೀವಿಲ್ಲಿ ಕೋಟ್ಯಾಧೀಶ್ವರರ ಜೀವನ ಸಾಗಿಸಬಹುದು. ಈ ದೇಶ ಯುದ್ಧ ಸಂಗ್ರಹಾಲಯ ಹಾಗು ವಾಸ್ತುಶಿಲ್ಪ ಕಲೆಯ ಆಕರ್ಷಣಾ ಕೇಂದ್ರವಾಗಿದೆ.

3. ಕಾಂಬೋಡಿಯ (1 ರೂಪಾಯಿ = 63.23 ಕಂಬೋಡಿಯನ್ ರಿಯಾಲ್):

ಕಾಂಬೋಡಿಯ ದೇಶದಲ್ಲಿ ವಿಶಾಲ ಕಾಯದ ಕಲ್ಲುಗಳಿಂದ ಅತ್ಯದ್ಭುತವಾಗಿ ಕಟ್ಟಲಾಗಿರುವ ಜಗತ್ತಿನ ಅತಿ ದೊಡ್ಡ ಹಿಂದೂ ದೇವಾಲಯಕ್ಕಾಗಿ ಪ್ರಸಿದ್ಧಿ ಹೊಂದಿದೆ. ಭಾರತೀಯ ಪ್ರಜೆಗಳು ಈ ದೇಶದಲ್ಲಿ ಹೆಚ್ಚು ಖರ್ಚು ಮಾಡದೆಯೇ ಈ ದೇಶದ ಪರ್ಯಟನೆ ನಡೆಸಬಹುದು. ಕಾಂಬೋಡಿಯಾದಲ್ಲಿ ರಾಯಲ್ ಪ್ಯಾಲೆಸ್, ರಾಷ್ಟ್ರೀಯ ಸಂಗ್ರಹಾಲಯ ಹಾಗು ಹಂಪೆಯ ರೀತಿಯಲ್ಲಿ ಅವಶೇಷಗಳುಳಿದಿರುವ ಪುರಾತನ ಜಾಗಗಳು ಆಕರ್ಷಣೀಯ ಕೇಂದ್ರಗಳಾಗಿವೆ. ಕಾಂಬೋಡಿಯ ಪಶ್ಚಿಮಿ ದೇಶಗಳ ಪರ್ಯಟಕರಲ್ಲಿ ಭಾರೀ ಜನಪ್ರೀಯ ದೇಶವಾಗಿದ್ದು ಈಗೀಗ ಭಾರತೀಯರಲ್ಲೂ ಕಾಂಬೋಡಿಯ ಬಗ್ಗೆ ಹೆಚ್ಚು ಆಸಕ್ತಿ ಮೂಡುತ್ತಿದೆ.

4. ಶ್ರೀಲಂಕಾ (1 ರೂಪಾಯಿ = 2.39 ಶ್ರೀಲಂಕಾ ರೂಪಾಯಿ):

ಸಮುದ್ರ ತಟಗಳು, ಬೆಟ್ಟ ಗುಡ್ಡಗಳ ನಾಡು, ಹಸಿರು ಸಿರಿ ವಲಯ, ಐತಿಹಾಸಿಕ ಹಾಗು ಪೌರಾಣಿಕ ಸ್ಮಾರಕಗಳಿಂದ ಶೃಂಗಾರಗೊಂಡಿರುವ ಶ್ರೀಲಂಕಾ ಭಾರತೀಯರಿಗೆ ಬೇಸಿಗೆಯ ರಜೆಗಳನ್ನ ಕಳೆಯೋಕೆ ಹೇಳು ಮಾಡಿಸಿದಂತಹ ಜನಪ್ರೀಯ ಸ್ಥಳಗಳಲ್ಲಿ ಒಂದು. ಶ್ರೀಲಂಕಾ ಭಾರತಕ್ಕೆ ಅತೀ ಸಮೀಪವಾದ ದೇಶವಾಗಿದ್ದು ಅತೀ ಕಡಿಮೆ ಫ್ಲೈಟ್ ಟಿಕೆಟ್ ರೇಟ್ ಇರೋ ಕಾರಣ ಈ ದೇಶಕ್ಕೆ ನೀವು ಹೋಗಿ ಬರಬಹುದು

5. ನೇಪಾಳ (1 ರೂಪಾಯಿ = 1.60 ನೇಪಾಳಿ ರೂಪಾಯಿ):

ಇಲ್ಲಿ ನಿಮಗೆ ಕೆಲ ಎಲ್ಲರಿಗಿಂತಲೂ ಆಶ್ಚರ್ಯಕರ ವಸ್ತುಗಳು ಕಾಣ ಸಿಗುತ್ತವೆ. ನೇಪಾಳ ಶೆರ್ಪಾ (ಪರ್ವತಾರೋಹಿ ಜನಗಳ ಗುಂಪು) ಗಳ ಭೂಮಿಯಾಗಿದೆ. ನೇಪಾಳದಲ್ಲಿ ಮೌಂಟ್ ಎವರೆಸ್ಟ್ ಹಾಗು ಇನ್ನೂ 7 ಅತೀ ಎತ್ತರದ ಪರ್ವತಗಳಿವೆ. ಈ ಪರ್ವತಗಳೇ ಪರ್ಯಟಕರ ಹಾಟ್ ಸ್ಪಾಟ್. ಭಾರತೀಯರಿಗೆ ಇನ್ನೊಂದು ಲಾಭಕರ ವಿಷಯವೇನೆಂದರೆ ನೇಪಾಳಕ್ಕೆ ಹೋಗಬೇಕಾದರೆ ಭಾರತೀಯರಿಗೆ ವೀಸಾದ ಅವಶ್ಯಕತೆಯಿಲ್ಲ. 

6. ಐಸ್ಲ್ಯಾಂಡ್ (1 ರೂಪಾಯಿ = 1.65 ಐಸ್ಲ್ಯಾಂಡಿಕ್ ಕ್ರೋನಾ):

ದ್ವೀಪದಲ್ಲಿರುವ ಈ ದೇಶ ಜಗತ್ತಿನ ಅತ್ಯಂತ ಸುಂದರ ಜಾಗಗಳಲ್ಲೊಂದು. ಬಿಸಿಲಿನ ಬೇಗೆಯಿಂದ ಹಾಗು ಬೇಸಿಗೆಯಿಂದ ತಪ್ಪಿಸಿಕೊಳ್ಳುವವರು ನಿಮ್ಮ ಪ್ರಯಾಣವಮ್ನ ಐಸ್ಲ್ಯಾಂಡ್ ಗೆ ಫಿಕ್ಸ್ ಮಾಡಿಕೊಳ್ಳಬಹುದು. ಐಸ್ಲ್ಯಾಂಡ್ ತನ್ನ ನೀಲೀ ಲಗೂನ್, ಜಲಪಾತಗಳು, ಗ್ಲೇಷಿಯರ್ ಹಾಗು ಕಪ್ಪು ಮರಳಿನ ಸಮುದ್ರದ ಬೀಚ್ ಗಳಿಗೆ ಫೇಮಸ್.

7. ಹಂಗೇರಿ (1 ರೂಪಾಯಿ = 3.99 ಹಂಗೇರಿ ಫೋರಿಂಟ್)

ಹಂಗೇರಿ ಒಂದು ದರ್ಗಾಗಳ ದೇಶವೆಂದೇ ಪ್ರಸಿದ್ಧವಾಗಿದೆ, ಇಲ್ಲಿನ ವಾಸ್ತುಕಲೆ ಹಾಗು ಇದರ ಸಂಸ್ಕೃತಿ ಜನಪ್ರಿಯವಾಗಿದ್ದು ಈ ದೇಶ ರೋಮನ್ನರು, ಟರ್ಕಿ ಹಾಗು ಅನ್ಯ ದೇಶಗಳ ಸಂಸ್ಕೃತಿಯಿಂದ ಪ್ರಭಾವಿತವಾಗಿರುವ ದೇಶ ಹಂಗೇರಿ. ಈ ದೇಶದಲ್ಲಿರುವ ಮಹಲ್ ಗಳು ಹಾಗು ಪಾರ್ಕ್ ಗಳನ್ನ ನೋಡೋಕೆ ನೀವು ಈ ದೇಶಕ್ಕೆ ಭೇಟಿ ಕೊಡಬಹುದಾಗಿದೆ. ಹಂಗೇರಿ ರಾಜಧಾನಿ ಬುದ್ಧಾಪೋಸ್ಟ್ ಜಗತ್ತಿನ ಅತ್ಯಂತ ರೊಮ್ಯಾಂಟಿಕ್ ನಗರಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪ್ರಸಿದ್ಧಿ ಪಡೆದಿದೆ.

– Vinod Hindu Nationalist

Leave a Reply

Your e-mail address will not be published. Required fields are marked *

error: Content is protected !!