ಜನರ ಮಧ್ಯೆಯೇ ಹುಚ್ಚುನಾಯಿಯಂತೆ ಶಾಸಕನನ್ನ ಅಟ್ಟಾಡಿಸಿ ಕಪಾಳಮೋಕ್ಷ ಮಾಡಿದ‌ ದಿಟ್ಟ ಮಹಿಳಾ IPS

ಒಂದು ಕಡೆ ಗಡಿಯನ್ನ ಕಾಯುತ್ತಿರೋ ಸೈನಿಕರು ದೇಶವನ್ನ ಕಾಪಡುತ್ತಿದ್ದರೆ ದೇಶದೊಳಗೆ ಜನರಿಗೆ ಸುರಕ್ಷತೆ ನೀಡುತ್ತಿರುವವರು ಪೋಲಿಸರು, ಈ ಇಬ್ಬರೇ ದೇಶದಬಾಸಲಿ ಹೀರೋಗಳು ಹಾಗು ಇವರ ಕೈಯಲ್ಲೇ ದೇಶದ ಸುರಕ್ಷತೆಯ ಜವಾಬ್ದಾರಿಯಿರೋದು‌. ಒಂದು ವೇಳೆ ರಾಜಕೀಯ ಪರಿಸ್ಥಿತಿ ಬಿಗಡಾಯಿಸಿದರೆ, ಕಾನೂನಜ ಸುವ್ಯವಸ್ಥೆಯನ್ನ ರಾಜಕಾರಣಿಗಳು ಹಾಳು ಮಾಡಿದರೆ ಅದಕ್ಕಾಗೇ ಕಾನೂನಿದೆ ಕೋರ್ಟ್ ಇದೆ.

ಯಾವ ರೀತಿಯಲ್ಲಿ ರಾಜಕಾರಣಿಗಳು ತಮ್ಮ ಮನಸೋ ಇಚ್ಛೆ ಈ ದೇಶದಲ್ಲಿ ಆಟವಾಡುತ್ತಾರೋ ಅದರಿಂದ ದೇಶದ ಜನರಂತೂ ರಾಜಕಾರಣಿಗಳ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ. ಆದರೆ ಈ ದೇಶದಲ್ಲಿ ಭ್ರಷ್ಟ, ಧಿಮಾಕಿನಿಂದ ವರ್ತಿಸುವ ರಾಜಕಾರಣಿಗಳನ್ನೂ ಬಗ್ಗುಬಡಿಯುವ ಪ್ರಾಮಾಣಿಕ ಅಧಿಕಾರಿಗಳಿಗೂ ನಮ್ಮಲ್ಲಿ ಕೊರತೆಯಿಲ್ಲ‌.

72 ವರ್ಷಗಳ ಬಳಿಕ ನಿಯುಕ್ತಿಯಾದ ಮಹಿಳಾ SP:

ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಗೆ 72 ವರ್ಷಗಳ ಬಳಿಕ ಮೊದಲ ಬಾರಿಗೆ ಮಹಿಳಾ SP ಸಿಕ್ಕಿದ್ದಾರೆ. ಇವರ ಹೆಸರು ಸೌಮ್ಯ ಸಾಂಬಶಿವನ್‌. ಹುಡುಗಿಯರನ್ನ ಚುಡಾಯಿಸುವ ಪೋಲಿಗಳಿಗೆ ಬುದ್ಧಿ ಕಲಿಸೋಕೆ ಮಹಿಳೆಯರಿಗೆ ಟ್ರೇನಿಂಗ್ ಕೊಟ್ಟಿದ್ದ ಆಫೀಸರ್ ಬಗ್ಗೆ ನೀವು ಈ ಹಿಂದೆ ಕೇಳಿದ್ದಿರಲ್ಲ ಅದೇ ಆಫೀಸರ್ ಈ ಸೌಮ್ಯ ಸಾಂಬಶಿವನ್.

ಹುಡುಗಿಯರನ್ನ ಚುಡಾಯಿಸುವವರ ವಿರುದ್ಧ ವಿಶಿಷ್ಟವಾದ ಸ್ಪ್ರೇ ಬಳಸಲು ಟ್ರೇನಿಂಗ್ ನೀಡುತ್ತ ಒಂದು ವೇಳೆ ಪೋಲಿಗಳು ಚುಡಾಯಿಸಲು ಇಲ್ಲ ರೇಪ್ ಮಾಡಲು ಮುಂದಾದರೆ ಆತನ ಮುಖಕ್ಕೆ ಸ್ಪ್ರೇ ಹೊಡೆದು ಅರ್ಧಗಂಟೆಯವರೆಗೆ ಆತ ಕಣ್ಣೇ ಬಿಡಲು ಬಾರದಂತೆ ಮಾಡುವ ಕಲೆಯನ್ನ ಇದೇ ಆಫೀಸರ್ ಯುವತಿಯರಿಗೆ ಟ್ರೇನಿಂಗ್ ನೀಡಿದ್ದರು.

ವಿಶಿಷ್ಟವಾದ ಸ್ಪ್ರೇ ತಯಾರಿಸಲು ನೀಡುತ್ತಾರೆ ಟ್ರೇನಿಂಗ್:

ಶಾಲಾ ಕಾಲೇಜುಗಳಿಗೆ ಹೋಗುವ ಯುವತಿಯರನ್ನ ಚುಡಾಯಿಸುವ ರೋಡ್ ರೋಮಿಯೋಗಳಿಗೆ ಬುದ್ಧಿ ಕಲಿಸಲು ಹಾಗು ಅಂತಹ ಘಟನೆಗಳನ್ನ ತಡೆಯಲು ಸೌಮ್ಯ ರವರು ಯುವತಿಯರಿಗೆ ವಿಶಿಷ್ಟ ಸ್ಪ್ರೇ ಬಳಸುವ ಟ್ರೇನಿಂಗ್ ಕೊಡುತ್ತಾರೆ. ಖಾರ, ರಿಫೈನ್ಡ್ ಹಾಗು ನೇಲ್ ಪೇಂಟ್ ಬಳಸಿ ಈ ಸ್ಪ್ರೇ ತಯಾರಿಸಲಾಗುತ್ತದೆ. ಸೌಮ್ಯ ಸಾಂಬಶಿವನ್ ಒಬ್ಬ ದಕ್ಷ ಹಾಗು ಖಡಕ್ ಆಫೀಸರ್ ಎಂದೇ ಖ್ಯಾತರಾಗಿದ್ದಾರೆ‌.

ಇಂತಹ ಖಡಕ್ IPS ಅಧಿಕಾರಿ ಇದೀಗ ಎಂತಹ ಸ್ಥಳಕ್ಕೆ ಪೋಸ್ಟಿಂಗ್ ಸಿಕ್ಕಿದೆಯೆಂದರೆ ಅಲ್ಲಿ ಗೂಂಡಾಗಿರಿ, ಗ್ಯಾಂಗ್ ರೇಪ್, ಮರ್ಡರ್ ಗಳು ಹಿಗ್ಗಾಮುಗ್ಗಾ ನಡೆಯುತ್ತಿದ್ದು ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಕುಸಿಯುವ ಹಂತದಲ್ಲಿದ್ದ ಸ್ಥಳಕ್ಕೆ ಸೌಮ್ಯ ರವರು SP ಆಗಿ ನಿಯುಕ್ತಿಗೊಂಡಿದ್ದಾರೆ. ಸೌಮ್ಯ ಮೂಲತಃ ಕೇರಳದವರಾಗಿದ್ದು ತಮ್ಮ ತಂದೆ ತಾಯಿಗೆ ಇವರು ಏಕೈಕ ಪುತ್ರಿಯಾಗಿದ್ದಾರೆ. ಇವರ ತಂದೆ ಎಂಜಿನಿಯರ್ ಆಗಿದ್ದರು‌.

MBA ಕೂಡ ಮಾಡಿದ್ದಾರೆ IPS ಸೌಮ್ಯ:

ಬಯೋ ಸ್ಟ್ರೀಮ್ ಗ್ಯಾಜುಯೇಟ್ ಕೋರ್ಸಿನಲ್ಲಿ ಸೌಮ್ಯ MBA ಮುಗಿಸಿದ್ದಾರೆ. ಸೌಮ್ಯ ಮಲ್ಟಿನ್ಯಾಶನಲ್ ಕಂಪೆನಿಯಲ್ಲೂ ಕೆಲಸ ಮಾಡಿದ್ದಾರೆ. ಸೌಮ್ಯ ಈ ಹಿಂದೆ ಸಿರಮೋರ್ ನಲ್ಲಿ SP ಆಗಿ ನಿಯುಕ್ತಿಗೊಂಡು ಕಾರ್ಯ ನಿರ್ವಹಿಸಿದ್ದರು. ಅದಕ್ಕೂ ಮೊದಲು ಅವರು ಶಿಮ್ಲಾದಲ್ಲಿ SSP ಕೂಡ ಆಗಿದ್ದರು. ಸೌಮ್ಯ ರವರು 2006 ರಲ್ಲಿ ಕಾರ್ಯಕ್ರಮವೊಂದರಲ್ಲಿ ದುರ್ವರ್ತನೆ ಹಾಗು ಧಿಮಾಕು ತೋರಿಸಿದ್ದ MLA ಯೊಬ್ಬನನ್ನ ಜನರೆದುರುರೇ ತುಂಬಿದ ಸಭೆಯಲ್ಲಿ ಹಿಗ್ಗಾಮುಗ್ಗ ಥಳಿಸಿ ಕಪಾಳಮೋಕ್ಷ ಮಾಡಿ ಜೈಲಿಗಟ್ಟಿದ್ದರಂತೆ.

IPS ಅಧಿಕಾರಿ ಎಂಥಾ ಖಡಕ್ ಅಧಿಕಾರಿಯೆಂದರೆ ಅವರ ಹೆಸರನ್ನ ಹಿಮಾಚಲ ಪ್ರದೇಶದಲ್ಲಿ ಸಣ್ಣ ಮಕ್ಕಳಿಗೂ ಸೌಮ್ಯ ಅಂದರೆ ಯಾರು ಅನ್ನೋದನ್ನ ಹೇಳುತ್ತಾರಂತೆ. ಹಿಮಾಚಲ ಪ್ರದೇಶದಲ್ಲಿ ಸುದ್ದಿಯಲ್ಲಿರುವ ಆಫೀಸರ್ ಎಂದೇ ಸೌಮ್ಯ ಖ್ಯಾತಿ ಪಡೆದಿದ್ದಾರೆ. IPS ಸೌಮ್ಯರವರನ್ನ ಸಾಹಸಿಗ ಆಫೀಸರ್ ಗಳ ಲಿಸ್ಟ್ ನಲ್ಲಿ ಗುರುತಿಸಲಾಗುತ್ತೆ.

ಸಿರಮೋರ್ ನಲ್ಲಿ ಡ್ರಗ್ಸ್, ಅಕ್ರಮ ಮದ್ಯ ಹಾಗು ಮಾನವ ಕಳ್ಳಸಾಗಣೆ ಯ ಜಾಲವನ್ನ ಭೇದಿಸುವ ಹಾಗು ಅದನ್ನ ಸಂಪೂರ್ಣವಾಗಿ ಮಟ್ಟ ಹಾಕಿದ ಶ್ರೇಯಸ್ಸು ಮಹಿಳಾ IPS ಸೌಮ್ಯರವರಿಗೇ ಸಲ್ಲುತ್ತದೆ. ಇವರು ಬ್ಲೈಂಡ್ ಮರ್ಡರ್ ಗಳ‌ ಹಲವಾರು ಪ್ರಕರಣಗಳನ್ನ ತಮ್ಮ ಚಾಣಾಕ್ಷತನದಿಂದ ಭೇದಿಸಿದ್ದಾರೆ‌. ಕುಖ್ಯಾತ ರೌಡಿಗಳು, ಅಪರಾಧಿಗಳನ್ನ ಹಿಡಿಯುವುದರಲ್ಲೂ ಸೌಮ್ಯ ಭಾರೀ ಫೇಮಸ್.

– Team Google Guruu

Leave a Reply

Your e-mail address will not be published. Required fields are marked *

error: Content is protected !!