ಒಂದೇ ದಿನದಲ್ಲಿ ಇಬ್ಬರು ಪೋಲಿಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ ಮುಖ್ಯಮಂತ್ರಿ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಜಾತ್ಯತೀತ ಜನತಾ ದಳ ಪಕ್ಷ ತನ್ನ ತಪ್ಪನ್ನು ಸರಿ ಪಡಿಸಿಕೊಳ್ಳಲು ಹಾಗೂ ಜನರ ಅಭಿಮತ ಸಂಗ್ರಹಿಸುವ ಹಿತಾದೃಷ್ಟಿಯಿಂದ ಗ್ರಾಮ ವಾಸ್ತವ್ಯ ಹೂಡಿದ್ದರು ಎಂಬ ಅಸ್ತ್ರ ಹೊಂದಿದ್ದರು.

ಮಿಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಹೂಡಿರುವ ಕಾರಣ ಅಲ್ಲಿ ಆ ಗ್ರಾಮದ ಶಾಲೆಯಲ್ಲಿ ತಂಗಿದ್ದು ಇದೀಗ ಆ ಶಾಲೆ ಹೈಟೆಕ್ ಶಾಲೆಯಾಗಿ ಹೊರ ಹೊಮ್ಮಿದೆ, ಹೌದು ಮುಖ್ಯಮಂತ್ರಿ ವಾಸವಾಗುವ ಸ್ಥಳವಾದ ಶಾಲೆಗೆ ರಾತ್ರೋ ರಾತ್ರಿ ಬಣ್ಣ ಬಳಿದು ವಿದೇಶಿ ಶೌಚಾಲಯ ನಿರ್ಮಿಸುವ ಮೂಲಕ ಆ ಶಾಲೆ ಅಭಿವೃದ್ಧಿ ಪಡಿಸಿದ್ದಾರೆ.

ಸಿಎಂ ರಾಯಚೂರಿನ ಕರೇಗುಡ್ಡ ಗ್ರಾಮದಲ್ಲಿ  ವಾಸ್ತವ್ಯ ಹೂಡಿದ ವೇಳೆ ವೈಟಿಪಿಎಸ್ ಗುತ್ತಿಗೆ ಕಾರ್ಮಿಕರು ಮರು ನೇಮಕಕ್ಕೆ ಒತ್ತಾಯಿಸಿ ಸಿಎಂ ತೆರಳುತ್ತಿದ್ದ ವಾಹನಕ್ಕೆ ಅಡ್ಡಗಟ್ಟಿ ಪ್ರತಿಭಟನೆ ನಡೆಸಿ ಗ್ರಾಮ ವಾಸ್ತವ್ಯಕ್ಕೆ ಅಡ್ಡಿ ಪಡಿಸಿದ್ದರು ಈ ಘಟನೆಯ ಹಿನ್ನೆಲೆಯಲ್ಲಿ ಗರಂ ಆಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಖಡಕ್ ನಿರ್ಧಾರ ಕೈಗೊಂಡಿದ್ದಾರೆ.

ಸಿಎಂ ಕುಮಾರಸ್ವಾಮಿ ಕರೇಗುಡ್ಡಗ್ರಾಮ ವಾಸ್ತವ್ಯದ ವೇಳೆ ಸರಿಯಾದ ಭದ್ರತೆ ನೀಡಿಲ್ಲ ಎಂದು ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡುವಂತೆ ಆದೇಶಿಸಲಾಗಿದೆ.
ರಾಯಚೂರಿನ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ನಿಂಗಪ್ಪ ಹಾಗೂ ಯರಗೇರಾ ಇನ್ಸ್​ಪೆಕ್ಟರ್​ ದತ್ತಾತ್ರೇಯ ಅಮಾನತ್ತಿಗೆ ಒಳಗಾಗಿರುವ ಅಧಿಕಾರಿಗಳು.

ಈ ಘಟನೆಗೆ ಭದ್ರತಾ ವೈಫಲ್ಯವೇ ಕಾರಣ ಎಂದು ಪರಿಗಣಿಸಿ ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತ್ತಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಆದೇಶ ಹೊರಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

-Team Nationalist Views

Leave a Reply

Your e-mail address will not be published. Required fields are marked *

error: Content is protected !!