ತೆಲಂಗಾಣದಲ್ಲಿ ಸಂಪೂರ್ಣವಾಗಿ ಬಂದ್ ಆಗಲಿದೆಯಾ ದಲಿತರ ಮೀಸಲಾತಿ

ತೆಲಂಗಾಣ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಕಳೆದ ಕೆಲ ದಿನಗಳ ಹಿಂದೆ ಮುಸಲ್ಮಾನರಿಗೆ 12% ರಿಸರ್ವೇಶನ್ ನೀಡುವ ಕುರಿತಾಗಿ ಮಾತನಾಡಿದ್ದರು. ಆದರೆ ಭೀಮರಾವ್ ಅಂಬೇಡ್ಕರ್‌ರ ಸಂವಿಧಾನವು ಕೆಸಿ ಚಂದ್ರಶೇಖರ್ ರಾವ್(ಕೆಸಿಆರ್) ರ ಕೈ ಕಟ್ಟಿ ಹಾಕಿತ್ತು. ಯಾಕಂದ್ರೆ ಭಾರತದಲ್ಲಿ ಧರ್ಮದ ಆಧಾರದ ಮೇಲೆ ರಿಸರ್ವೇಶನ್ ನೀಡೋಕೆ ಸಾಧ್ಯವಿಲ್ಲ.

ಆದರೂ ತೆಲಂಗಾಣದಲ್ಲಿ ಆಗಿದ್ದೇನು? ನಮ್ಮ ದೇಶದಲ್ಲಿ ಸೆಕ್ಯೂಕರಿಸಂ ನಡೆಯುತ್ತಲೇ ಇರುತ್ತೆ, ದಲಿತರು ಬಿಜೆಪಿಗೆ ಮತ ಹಾಕಲೇ ಇಲ್ಲ, ಕಾಂಗ್ರೆಸ್ ಪಕ್ಷವನ್ನ ಗೆಲ್ಲಿಸಲು ತೆಲಂಗಾಣದಲ್ಲಿ ದಲಿತರ ಅಧಿಕ ವೋಟ್ ಗಳು ಚಲಾಚಣೆಯಾಗಿದ್ದವು, ಉಳಿದ ಸೆಕ್ಯೂಲರ್ ಗಳು ಹಾಗು ಮುಸಲ್ಮಾನರಂತೂ ಇಡೀ ತೆಲಂಗಾಣ ರಾಜ್ಯದಲ್ಲಿ ಟಿಆರ್‌ಎಸ್(ತೆಲಂಗಾಣ ರಾಷ್ಟ್ರೀಯ ಸಮಿತಿ) ಪಕ್ಷಕ್ಕೇ ತಮ್ಮ ಮತ ಚಲಾಯಿಸಿದ್ದರು.

ಟಿಆರ್‌ಎಸ್ ಹಾಗು ಮತಾಂಧ ಓವೈಸಿ ನೇತೃತ್ವದ AIMIM ಪಕ್ಷ ಒಳಗೊಳಗೇ ಡೀಲ್ ಗಳನ್ನ ಮಾಡಿಕೊಂಡಿವೆ, ಓವೈಸಿ ತನ್ನ ಪಕ್ಷದ ಕೇವಲ 8 ಅಭ್ಯರ್ಥಿಗಳನ್ನ ಮಾತ್ರ ತೆಲಂಗಾಣ ರಾಜ್ಯದಲ್ಲಿ ಕಣಕ್ಕಿಳಿಸಿದ್ದ. ಟಿಆರ್‌ಎಸ್ ಪಕ್ಷಕ್ಕೆ ಮುಸಲ್ಮಾನರು ಭಾರೀ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ‌. ಇದೇ ಕಾರಣದಿಂದ ಟಿಆರ್‌ಎಸ್ ಮತ್ತೆ ತೆಲಂಗಾಣದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಸಾಧ್ಯವಾಯಿತು.

ಇದೀಗ ತೆಲಂಗಾಣದಲ್ಲಿ ಮುಸಲ್ಮಾನರಿಗೆ ರಿಸರ್ವೇಶನ್ ಸಿಗದಿದ್ದರೇನಾಯ್ತು? ಈಗ ತೆಲಂಗಾಣ ರಾಜ್ಯದಲ್ಲಿ ಜೈ ಭೀಮ್ ಜೈ ಮೀಮ್(MIM) ಘೋಷಣೆಗಳೇ ಮೊಳಗುತ್ತಿವೆ, ಇದರರ್ಥ ದಲಿತರ ಹೆಸರಿನಲ್ಲಿ ಮುಸಲ್ಮಾನರು ತುಪ್ಪ ತಿನ್ನೋಕೆ ಮುಂದಾಗಿದ್ದಾರೆ‌.

ಈ ವಿಡಿಯೋವನ್ನ ಸೂಕ್ಷ್ಮವಾಗಿ ಗಮನಿಸಿ, ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ಮರು ಆಯ್ಕೆಯಾದ ಕೆಸಿ ಚಂದ್ರಶೇಖರ್ ರಾವ್ ತೆಲಂಗಾಣ ವಿಧಾನಸಭೆಯಲ್ಲಿ ಅಕ್ಬರುದ್ದಿನ್ ಓವೈಸಿಯ ಮುಂದೆ ಉತ್ತರಿಸುತ್ತಿರೋದು ಹೇಗಿದೆ ಅಂತ ನೋಡಿ

ತೆಲಂಗಾಣ ರಾಜ್ಯದಲ್ಲಿ ಈಗೇನು ದಲಿತರಿಗೆ ರಿಸರ್ವೇಶನ್ ಸಿಗುತ್ತಿದೆಯೋ ಅದರಲ್ಲಿ ಮುಸಲ್ಮಾನರಿಗೀಗ ಪಾಲು ಸಿಗಲಿದೆ. ಅಂದರೆ ದಲಿತರ ಹೆಸರಿನ ಮೇಲಿನ ರಿಸರ್ವೇಶನ್ ನಲ್ಲಿ ದಲಿತರಿಗೆ ನೀರು ಹಾಗು ಮುಸಲ್ಮಾನರಿಗೆ ತುಪ್ಪ ನೀಡಲಾಗುತ್ತೆ. ದಲಿತರ ಹಕ್ಕನ್ನ ಕಸಿದುಕೊಂಡು ಇದೀಗ ಅದನ್ನ ಮುಸಲ್ಮಾನರಿಗೆ ನೀಡುವ ಕೆಲಸವನ್ನ ತೆಲಂಗಾಣ ಮುಖ್ಯಮಂತ್ರಿ ಮಾಡಲಿದ್ದಾರೆ.

ಮೋದಿ ಸರ್ಕಾರ ದಲಿತರ ರಿಸರ್ವೇಶನ್ ಬಂದ್ ಮಾಡುಸಿಬಿಡುತ್ತಾರಂತ ಬಾಯಿ ಬಾಯಿ ಬಡ್ಕೊಂಡಿದ್ದ ಸೋ ಕಾಲ್ಡ್ ಸೆಕ್ಯೂಲರ್, ಮಹಾನ್ ದಲಿತವಾದಿಯಾದಂತಹ ಮಾಯಾವತಿ, ಇನ್ನಿತರರೆಲ್ಲಾ ಮಾತ್ರ ಈ ವಿಷಯದ ಕುರಿತಾಗಿ ಗಪ್ ಚುಪ್ ಆಗಿ ತುಟಿಕ್ ಪಿಟಿಕ್ ಎನ್ನದೆ ಬಾಯಿ ಮುಚ್ಚಿ ಕೂತಿದ್ದಾರೆ.

ಇಷ್ಟೇ ಅಲ್ಲದೆ ತೆಲಂಗಾಣದಲ್ಲಿನ ಎಲ್ಲಾ ಮುಸ್ಲಿಂ ಇಮಾಮ್ ಗಳಿಗೂ ಪ್ರತಿ ತಿಂಗಳು ಒಂದು ಸಾವಿರ ನೀಡುವುದಾಗಿ ಘೋಷಣೆಯಾಗಿದ್ದು ಇದು ಮುಂದಿನ ವರ್ಷದಿಂದ ಒಂದೂವರೆ ಸಾವಿರಕ್ಕೆ ಏರಿಸಲಾಗುವುದೆಂದು ಮುಖ್ಯಮಂತ್ರಿ ಕೆಸಿಆರ್ ತಿಳಿಸಿದ್ದಾರೆ. ಮಂದಿರಗಳಿಗೆ ಹಾಗು ಅರ್ಚಕರಿಗೆ ಬಿಡಿಗಾಸೂ ಇಲ್ಲ, ಆದರೆ ಇಮಾಮ್ ಗಳಿಗೆ ಮಾತ್ರ ಭರ್ಜರಿ ಗಿಫ್ಟ್

ಇದಷ್ಟೇ ಅಲ್ಲದೆ ಇನ್ನೂ ಹಲವಾರು exclusively for Muslims ಅನ್ನೋ ಯೋಜನೆಗಳನ್ನ ಟಿಆರ್‌ಎಸ್ ಸರ್ಕಾರ ತೆಲಂಗಾಣದಲ್ಲಿ ಜಾರಿಗೊಳಿಸಲು ಸಿದ್ಧವಾಗಿದೆ. ಅದನ್ನ ನಾವಲ್ಲ ತೆಲಂಗಾಣದ ಮುಖ್ಯಮಂತ್ರಿಯೇ ಹೇಳುತ್ತಿದ್ದಾನೆ. ಅಸಲಿಗೆ ಹೇಳಬೇಕೆಂದರೆ ತೆಲಂಗಾಣ ವಿಧಾನಸಭೆಯಲ್ಲಿ ಹಿಂದುತ್ವದ ಕುರಿತಾಗಿ ಮಾತನಾಡುವ ಶಾಸಕನಿರೋದು ಒಬ್ಬನೇ. ಅದಿ ಬಿಜೆಪಿಯಿಂದ ಆಯ್ಕೆಯಾಗಿರುವ ಹಿಂದುತ್ವವಾದಿ ಟೈಗರ್ ರಾಜಾ ಸಿಂಗ್.

ಉಳಿದ ಶಾಸಕರೆಲ್ಲಾ ಟಿಆರ್‌ಎಸ್, MIM, ಕಾಂಗ್ರೆಸ್ ಹಾಗು ಟಿಡಿಪಿ ಪಕ್ಷದವರಾಗಿದ್ದಾರೆ. ಇದೀಗ ತೆಲಂಗಾಣ ವಿಧಾನಸಭೆಯಲ್ಲಿ ಮುಸಲ್ಮಾನರ ಪರವಾಗಿ ಮಾತನಾಡೋಕೆ ಇಡೀ ವಿಧಾನಸಭೆಯೇ ಇದೆ ಆದರೆ ಹಿಂದುಗಳ ಪರವಾಗಿ ಮಾತನಾಡೋಕೆ ಕೇವಲ ಒಬ್ಬ ಶಾಸಕ ರಾಜಾ ಸಿಂಗ್ ಇದ್ದಾರೆ. ಹಿಂದುಗಳು ಸೆಕ್ಯೂಲರಿಸಂ ಪಾಲಿಸಿದರು ಹೊರತು ವಿಧಾನಸಭೆಯಲ್ಲಿ ತಮ್ಮ ಪರವಾಗಿ ಮಾತನಾಡಲು ಶಾಸಕರನ್ನ ಆಯ್ಕೆ ಮಾಡಲೇ ಇಲ್ಲ. ಆದರೆ ಮುಸಲ್ಮಾನರು ಹಾಗು ಸೆಕ್ಯೂಲರ್ ಗಳು ಒಂದಾಗಿ ತಮ್ಮ ಪ್ರತಿನಿಧಿಗಳನ್ನ ಆಯ್ಕೆ ಮಾಡಿ ಕಳಿಸಿದ್ದಾರೆ.

ಸೆಕ್ಯೂಲರಿಸಂ ನಶೆ ತಲೆಗೇರಿದ್ದ ಹಿಂದುಗಳಿಗೆ ಇದೀಗ ತೆಲಂಗಾಣದಲ್ಲಿ ಯಾವ ಮಾನ್ಯತೆಯೂ ಇಲ್ಲ. ಇಷ್ಟೇ ಅಲ್ಲದೆ ದಲಿತರು ತಮ್ಮ ಪಾಲಿನ ರಿಸರ್ವೇಶನ್ ನಲ್ಲೂ ಇದೀಗ ಮುಸಲ್ಮಾನರಿಗೆ ಪಾಲು ಕೊಡಬೇಕಾದ ಸ್ಥಿತಿಗೆ ಬಂದು ನಿಂತಿದ್ದಾರೆ. ಇದು ಹೀಗೇ ಮುಂದುವರೆದರೆ ತೆಲಂಗಾಣ ರಾಜ್ಯದಲ್ಲಿ ಮತ್ತೆ ನಿಜಾಮನ ಆಡಳಿತ ಶುರುವಾಗೋ ದಿನ ಬಹಳ ದೂರವಿಲ್ಲ.

– Team Google Guruu

Leave a Reply

Your e-mail address will not be published. Required fields are marked *

error: Content is protected !!