ಕಾಶ್ಮೀರ ತಲುಪಲಿದ್ದಾರೆ ಸಾವಿರಾರು ಹಿಂದೂ ಪಂಡಿತರು; ಮೋದಿ ಸರ್ಕಾರದಿಂದ ಕಾಶ್ಮೀರಿ ಪಂಡಿತರಿಗೆ ಸಿಹಿ ಸುದ್ದಿ

ಜಮ್ಮುವಿನಿಂದ ಇಂದು ಸಾವಿರಾರು ಕಾಶ್ಮೀರಿ ಪಂಡಿತರು ಕಾಶ್ಮೀರ ತಲುಪಲಿದ್ದಾರೆ. ಭಾರೀ ಬಿಗಿ ಭದ್ರತೆಯಲ್ಲಿ ಅವರೆಲ್ಲಾ ಕಾಶ್ಮೀರದಲ್ಲಿ ನಡೆಯಲಿರುವ ವಾರ್ಷಿಕ ಖೀರ್ ಭವಾನಿ ಜಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಉತ್ಸವ ಕಾಶ್ಮೀರರದಿಂದ ವಿಸ್ಥಾಪಿತವಾಗಿದ್ದ ಕಾಶ್ಮೀರಿ ಪಂಡಿತರದ ಅತಿ ದೊಡ್ಡ ಧಾರ್ಮಿಕ ಉತ್ಸವಗಳಲ್ಲಿ ಒಂದಾಗಿದೆ.

ಉತ್ತರ ಕಾಶ್ಮೀರದ ಗಾಂದರಬಲ್ ಜಿಲ್ಲೆಯ ತುಲಮುಲ್ಲಾ ಹಳ್ಳಿಯಲ್ಲಿರುವ ಖೀರ್ ಭವಾನಿ ಮಂದಿರದಲ್ಲಿ ಕಾಶ್ಮೀರಿ ಪಂಡಿತರ ಪೂಜನೀಯ ದೇವಿ, ರಾಗನ್ಯಾ ದೇವಿಯ ಮೂರ್ತಿಯಿದೆ, ಇದು ಕಾಶ್ಮೀರಿ ಪಂಡಿತರ ಅತಿ ಪವಿತ್ರ ಧಾರ್ಮಿಕ ಸ್ಥಳವಾಗಿದೆ. ಭಕ್ತರು ಬರಿಗಾಲಿನಲ್ಲಿ ಈ ಪವಿತ್ರ ಸ್ಥಳಕ್ಕೆ ತೆರಳಿ ಬಳಿಕ ಅಲ್ಲಿ ಗುಲಾಬಿ ಹೂವನ್ನ ಅರ್ಪಿಸಿ ಪೂಜೆ ಅರ್ಪನೆ ಮಾಡುತ್ತಾರೆ. ಭಕ್ತಾದಿಗಳು ಪಕ್ಕದಲ್ಲೇ ಇರುವ ನದಿಯಲ್ಲಿ ಮುಳುಗಿ ಮಿಂದೇಳುತ್ತಾರೆ.

ಜೂನ್ 10 ರ ಜೇಷ್ಟ ಅಷ್ಟಮಿಯಂದು ಶುರುವಾಗುವ ಖೀರ್ ಭವಾನಿ ಉತ್ಸವಕ್ಕಾಗಿ ಭಾರತ ಹಾಗು ವಿದೇಶಗಳ ವಿಭಿನ್ನ ಪ್ರದೇಶಗಳಿಂದ 60 ರಿಂದ 70 ಸಾವಿರಕ್ಕೂ ಅಧಿಕ ಕಾಶ್ಮೀರದಿಂದ ಹೊರ ದಬ್ಬಲ್ಪಟ್ಟ ಕಾಶ್ಮೀರಿ ಪಂಡಿತರು ಕಾಶ್ಮೀರಿ ಕಣಿವೆಯಲ್ಲಿನ ಐದು ಪ್ರಸಿದ್ಧ ಮಂದಿರಗಳ ಯಾತ್ರೆ ನಡೆಸಲಿದ್ದಾರೆ ಎಂಬ ಅನುಮಾನವಿದೆ.

ತೀರ್ಥ ಯಾತ್ರಾರ್ಥಿಗಳಿಗೆ ಖೀರ್ ಭವಾನಿ ಜಾತ್ರೆಯ ಸ್ಥಳದವರೆಗೆ ತೆರಳುವ 100 ಕ್ಕೂ ಅಧಿಕ ಬಸ್‌ಗಳನ್ನ ಜಮ್ಮುವಿನ ಸಂಭಾಗ್ ನ ಆಯುಕ್ತ ರಾಜೀವ್ ವರ್ಮಾ, ರಾಹತ್ ಆಯುಕ್ತ ಟಿಕೆ ಭಟ್ಟ್ ಹಾಗು ಸರ್ವದಲೀಯ್ ಪ್ರವಾಸಿ ಸಮನ್ವಯ ಸಮಿತಿ(ATMCC) ಅಧ್ಯಕ್ಷ ವಿನೋದ್ ಪಂಡಿತ್ ರವರು ಜಮ್ಮು ನಗರದ ಹೊರ ವಲಯದ ಪ್ರದೇಶದಲ್ಲಿ ಈ ಯಾತ್ರೆಗೆ ಹಸಿರು ಧ್ವಜ ತೋರಿಸಿ ಬೀಳ್ಕೊಟ್ಟಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಭಯೋತ್ಪಾದನೆಗೆ ಹೆದರಿದ ಹಿಂದುಗಳು ಖೀರ್ ಭವಾನಿ ಜಾತ್ರೆಗೆ ತೆರಳಲು ನಿರಾಕರಿಸುತ್ತಿದ್ದರು ಆದರೇ ಇದೀಗ ಮೋದಿ ಸರಕಾರದ ಅವಧಿಯಲ್ಲಿ ಕಳೆದ ಮೂರು ವರ್ಷದಿಂದ ಸುಗಮವಾಗಿ ಜಾತ್ರೆಗೆ ತೆರಳಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ ಎಂದರೆ ಅರ್ಥ ಮಾಡಿಕೊಳ್ಳಬೇಕು ಮೋದಿ ಸರಕಾರ ಅದೆಷ್ಟು ಭಯೋತ್ಪಾದಕರನ್ನು ಕಾಶ್ಮಿರದಲ್ಲಿ ಹತ್ತಿಕ್ಕಿದ್ದಾರೆ ಎಂದು. ಇದಕ್ಕೆ ಹೇಳೊದು ಮೋದಿ ಇದ್ದರೆ ಅಸಾಧ್ಯವು ಸಾಧ್ಯ ಅಂತ.

– Team Google Guruu

Leave a Reply

Your e-mail address will not be published. Required fields are marked *

You may have missed

error: Content is protected !!