ಬಾಬ್ರೀ ಮಸೀದಿ ಹಾಗು ರಾಮಮಂದಿರದ ಬಗ್ಗೆ ಅಚ್ಚರಿಯ ಮಾಹಿತಿ ಹೊರಹಾಕಿದ ಪುರಾತತ್ತ್ವ ಇಲಾಖೆಯ ಮಾಜಿ ನಿರ್ದೇಶಕ ಕೆಕೆ ಮೊಹಮ್ಮದ್

ನಿಮ್ಮ ಮನೆಗೆ ಯಾರಾದರೂ ಹೊರಗಿನವರು ಬಂದು ದಾಳಿ ನಡೆಸಿ ಬಳಿಕ ಮನೆಯನ್ನೆಲ್ಲಾ ಧ್ವಂಸಗೊಳಿಸಿ ಆ ಜಾಗದಲ್ಲಿ ನಿಮ್ಮ ಮನೆಯ ಅವಶೇಷಗಳನ್ನೇ ಬಳಸಿಕೊಂಡು ಮನೆ ಕಟ್ಟಿಕೊಂಡು ಬಿಟ್ಟರೇನು ಆ ಮನೆ ಆ ಗೂಂಡಾನದ್ದಾಗುತ್ತಾ? ಇಲ್ಲ ತಾನೇ? ಅದೇ ರೀತಿಯ ದಾಳಿಯನ್ನ ಅಫ್ಘಾನಿಸ್ತಾನದಿಂದ ಭಾರತದ ಮೇಲೆ ದಾಳಿ ಮಾಡಲು ಬಂದಿದ್ದ ಬಾಬರ್ ನೂ ಕೂಡ ಮಾಡಿದ್ದ. ಆಯೋಧ್ಯೆಯಲ್ಲಿದ್ದ ಭವ್ಯ ರಾಮಮಂದಿರವನ್ನ ಕೆಡವಿ ಅಲ್ಲಿ ಮಸೀದಿಯನ್ನು ಕಟ್ಟಿದ್ದ. ಹಾಗೆಂದ ಮೇಲೆ ಅದು ಆತನ ಜಾಗವಾಗಿಬಿಡುತ್ತಾ?

ಆಯೋಧ್ಯೆಯ ರಾಮಜನ್ಮಭೂಮಿ ವಿಚಾರದಲ್ಲಿ ಸುಪ್ರೀಂಕೋರ್ಟ್ ಹೇಳುವುದೇನೆಂದರೆ “ಇದು ಮಂದಿರ-ಮಸ್ಜಿದ್ ವಿಚಾರವಲ್ಲ ಬದಲಿಗೆ ಇದು ಭೂಮಿಯ ವಿಚಾರವಾಗಿದೆ, ಇದು ಕೇವಲ ಟೈಟಲ್ ಸೂಟ್ ವಿಚಾರವಾಗಿದೆ ಅಂದರೆ ಆ ಭೂಮಿ ಹಿಂದುಗಳಿಗೆ ಸೇರಿದ್ದೋ ಅಥವ ಮುಸಲ್ಮಾನರಿಗೆ ಸೇರಿದ್ದೋ” ಎಂಬುದಾಗಿದೆ.

ಹಿಂದುಗಳನ್ನ ಕೋರ್ಟ್, ಕಮ್ಯುನಿಸ್ಟ್ ಹಾಗು ಸೆಕ್ಯೂಲರ್ ಗಳು ಅದೆಷ್ಟು ಅಪಮಾನ ಮಾಡುತ್ತಿದ್ದಾರೆ ಅನ್ನೋ ಸಣ್ಣ ಅನುಮಾನ ಕೂಡ ಹಿಂದುಗಳಿಗೆ ಬರುತ್ತಿಲ್ಲ, ಬಾಬರ್‌ನೇನು ಅಫ್ಘಾನಿಸ್ತಾನದಿಂದ ಆಯೋಧ್ಯೆಯ ಭೂಮಿ ಹೊತ್ತು ತಂದಿದ್ದನೇ? ಅದ್ಯಾವ ತರ್ಕದಲ್ಲಿ ಆಯೋಧ್ಯೆಯ ಭೂಮಿ ಮುಸಲ್ಮಾನರದ್ದಾಗಿಬಿಡುತ್ತೆ?

ಅಲ್ಲಿ ಮಂದಿರವಿತ್ತು, ಅದನ್ನ ಒಡೆದು ಹಾಕಿ‌ ಮಸ್ಜಿದ್ ನಿರ್ಮಾಣ ಮಾಡಲಾಗಿತ್ತು ಹಾಗು ಇದಕ್ಕೆ ಸಾಕ್ಷಿ ಒಬ್ಬ ಮುಸಲ್ಮಾನನೇ ಆಗಿದ್ದು ಆತ ಸರ್ಕಾರದ ಅಧಿಕಾರಿಯಾಗಿದ್ದ. ಬಾಬ್ರೀ ಮಸೀದಿಯ ಉತ್ಖನನವನ್ನ ನಡೆಸಲಾಗಿತ್ತು, ಈ ರೀತಿಯ ಉತ್ಖನನವನ್ನ ಭಾರತ ಸರ್ಕಾರದ ASI(Archeological Survey of India) ಮಾಡಿಸುತ್ತದೆ. ಪ್ರಾಚೀನ ಇತಿಹಾಸದ ಕುರುಹುಗಳನ್ನ ಪತ್ತೆ ಹಚ್ಚಲು ASI ಇಂತಹ ಉತ್ಖನನಗಳನ್ನ ನಡೆಸುತ್ತದೆ.

ಬಾಬ್ರೀ ಮಸೀದಿಯ ಉತ್ಖನನದ ವೇಳೆಗೆ ASI ರೀಜನಲ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಆ ಅಧಿಕಾರಿಯ ಹೆಸರು ಕೆಕೆ ಮೊಹಮ್ಮದ್ ಎಂದು, ಆತ ಕೂಡ ಸುನ್ನಿ ಮುಸಲ್ಮಾನನೇ. ಬಾಬ್ರೀ ಮಸೀದಿಯ ಬಗ್ಗೆ ಅವರೇನು ಹೇಳುತ್ತಾರೆ ಅನ್ನೋದನ್ನ ಒಮ್ಮೆ ಕೇಳೋಣ ಬನ್ನಿ

ಬಾಬ್ರೀ ಮಸೀದಿಯ ಉತ್ಖನನಕ್ಕಾಗಿ ASI ನ ಯಾವ ತಂಡಕ್ಕೆ ನೀಡಲಾಗಿತ್ತೋ ಆ ತಂಡದ ಕೆಲಸಗಾರರೆಲ್ಲರೂ ಹಿಂದುಗಳೇ ಆಗಿದ್ದರು ಆದರೆ ಅದರ ಮುಖ್ಯ ಅಧಿಕಾರಿ ಮಾತ್ರ ಒಬ್ಬ ಮುಸಲ್ಮಾನನಾಗಿದ್ದ, ಆತನ ಹೆಸರೇ ಕೆಕೆ ಮೊಹಮ್ಮದ್.

ಇವರ ಸಮ್ಮುಖದಲ್ಲೇ ಬಾಬ್ರೀ ಮಸೀದಿಯ ಉತ್ಖನನವನ್ನ ಮಾಡಲಾಗಿತ್ತು. ಹಿಂದುಗಳು ನಿಜ‌ ಹೇಳುತ್ತಿದ್ದಾರೋ ಇಲ್ಲ ಸುಳ್ಳು ಹೇಳುತ್ತಿದ್ದಾರೋ ಅನ್ನೋ ಕಾರಣಕ್ಕಾಗಿ ಬಾಬ್ರೀ ಮಸೀದಿ ಕೆಡವಿದ ಬಳಿಕ ಮಸೀದಿಯ ಕೆಳ ಭಾಗದದಲ್ಲಿ ಮಂದಿರವಿದೆಯೋ ಮಸೀದಿಯೇ ಇತ್ತೋ ಎಂದು ಭಾರತ ಸರ್ಕಾರ ಉತ್ಖನನ ನಡೆಸಿತ್ತು.

ASI ನ ಮಾಜಿ‌ ಡೈರೆಕ್ಟರ್ ಆಗಿದ್ದ ಕೆಕೆ ಮೊಹಮ್ಮದ್ ರವರು ಹೇಳುವ ಪ್ರಕಾರ “ಉತ್ಖನನವಾಗುತ್ತಿದ್ದ ವೇಳೆಯಲ್ಲಿ ನಾನು ಅದೇ ಜಾಗದಲ್ಲಿ ಉಪಸ್ಥಿತನಿದ್ದೆ, ನಾನು ನನ್ನ ರಿಪೋರ್ಟಿನಲ್ಲೊ ಆ ಜಾಗದಲ್ಲಿ ಮಂದಿರವೇ ಇತ್ತು ಹಾಗು ಆ ಜಾಗ ಹಿಂದುಗಳಿಗೆ ಬಿಟ್ಟು ಕೊಡಬೇಕು,‌ ಹಿಂದುಗಳ ಭೂಮಿಯನ್ನ ವಶಪಡಿಸಿಕೊಳ್ಳಲಾಗಿದೆ” ಎಂದಿದ್ದರು.

ಆದರೆ ಕಟು ಸತ್ಯವನ್ನ ಹೇಳಿದ್ದಕ್ಕಾಗಿ ಕೆಕೆ ಮೊಹಮ್ಮದ್ ರವರಿಗೆ ಸಿಕ್ಕ ಪ್ರತಿಫಲವೆಂದರೆ ಅವರನ್ನ ಸಸ್ಪೆಂಡ್ ಮಾಡಲಾಗಿತ್ತು. ಬಳಿಕ ಕೆಕೆ ಮೊಹಮ್ಮದ್ ರವರ ರಿಪೋರ್ಟಿನ ಆಧಾರದ ಮೇಲೆಯೇ ಹಿಂದುಗಳ ಪರವಾಗಿ 2010 ರಲ್ಲಿ ಹೈಕೋರ್ಟ್ ತೀರ್ಪು ನೀಡಿತ್ತು. ಯಾವುದೋ ದೇಶದಿಂದ ಬಂದ ಲೂಟಿಕೋರ, ಮತಾಂಧನೊಬ್ಬ ಬೇರೊಬ್ಬರ ಜಾಗದ ಮೇಲೆ ಅತಿಕ್ರಮಣ ಮಾಡಿಕೊಂಡರೆ ಆತ ಆ ಜಾಗದ ಮಾಲೀಕನಾಗಿಬಿಡುತ್ತಾನಾ?

ಇಂತಹ ಸಿಂಪಲ್ ಲಾಜಿಕ್ ಸೋ ಕಾಲ್ಡ್ ಸೆಕ್ಯೂಲರ್ ಗಳಿಗೆ ಅರ್ಥವಾಗುವುದಿಲ್ಲವಾ? ಆದರೆ ಈ ಪ್ರಕರಣವನ್ನ ಕೋರ್ಟ್, ಕಮ್ಯುನಿಸ್ಟ್ ಹಾಗು ಸೆಕ್ಯೂಲರ್ ಗಳು ಮಾತ್ರ ಇಲ್ಲಿಯವರೆಗೆ ವಿವಾದವಾಗೇ ಇರುವಂತೆ ಇಟ್ಟಿದ್ದಾರೆ, ಆದರೆ ಸಾಕ್ಷ್ಯಾಧಾರಗಳು ಹಾಗು ಕೆಕೆ ಮೊಹಮ್ಮದ್ ರವರಂತಹ ASI ಡೈರೆಕ್ಟರ್ ಆಗಿದ್ದಂತಹವರ ರಿಪೋರ್ಟ್ ಗಳು ಮಾತ್ರ ಅದು ರಾಮಮಂದಿರದ ಜಾಗವೇ ಎಂದು ಸಾರಿ ಸಾರಿ ಹೇಳುತ್ತಿದೆ.

– Team Google Guruu

Leave a Reply

Your e-mail address will not be published. Required fields are marked *

error: Content is protected !!