ಶಾಕಿಂಗ್ ನ್ಯೂಸ್: ಭಾರತದಲ್ಲಿ ಕಾಂಗ್ರೆಸ್ ನೆಲಕಚ್ಚಲು ಈ ಸ್ವಾಮಿಜೀಯ ಶಾಪವೇ ಕಾರಣವಂತೆ; ದೇಶದ ಮಹಾನ್ ಸಂತರೊಬ್ಬ ಗಾಂಧಿ ಕುಟುಂಬಕ್ಕೆ ಕೊಟ್ಟ ಘೋರ ಶಾಪವೇನು ಗೊತ್ತಾ

ಹಿಂದೂ ಸಂಸ್ಕ್ರತಿ ಎಂದರೆ ಅದು ಪ್ರಪಂಚದ ಇನ್ಯಾವುದೆ ಭಾಗಕ್ಕೆ ಹೋದರು ಇಂತಹ ವಿಶಿಷ್ಟವಾದ ಸಂಸ್ಕ್ರತಿ ಸಿಗಲು ಸಾದ್ಯವಿಲ್ಲ ಇಲ್ಲಿ ಕಲ್ಲು, ಮಣ್ಣು, ಪಕ್ಷಿ, ಪ್ರಾಣಿ, ಗಿಡ, ಮರ, ಕಾಡು, ಗುಡ್ಡ ಎಲ್ಲವನ್ನು ದೇವರೆಂದು ತಿಳಿದು ಪೂಜಿಸುವ ಮಹಾನ್ ಸಂಸ್ಕ್ರತಿ ಹಿಂದುಗಳಲ್ಲಿದೆ. ನಾವು ಹಸುವಿನ ಒಂದೊಂದು ರೋಮಗಳಲ್ಲಿ ಒಂದೊಂದು ದೇವರಿದ್ದಾನೆ ಎಂದು ನಂಬುವ ಜನ ಈ ನಂಬಿಕೆಯಿಂದಲೇ ಹಿಂದುತ್ವ ಎಂಬುದು ಲಕ್ಷ ವರ್ಷಗಳಿಂದ ಬದುಕಿ ಬಾಳಿ ಬಂದಿದೆ.

ದೇಶದ ತುಂಬಾ ಗೋಹತ್ಯೆ ನಡೆಯುವ ಕಾಲದಲ್ಲಿ ಇದರ ವಿರುದ್ದ ದನಿ ಎತ್ತಿ ಹೋರಾಟ ಮಾಡಲು ನಿಂತ ಸಂತ ಸನ್ಯಾಸಿ ಒಬ್ಬರಿದ್ದರು ಅವರ ಹೆಸರು ಕೃಪಾತ್ರಿ ಮಹಾರಾಜ್ ಎಂದು. ಅವರ ಬಳಿಗೆ ಇಂದಿರಾಗಾಂಧಿ ಆಶೀರ್ವಾದ ಕೇಳಲು ಬಂದರು. ಬಂದು ಅವರಿಗೆ ನಮಸ್ಕರಿಸಿ ಸ್ವಾಮಿಗಳೆ ನನಗೆ ಅಭಯ ವಚನ ನೀಡಿ ನಾನು ಈ ಬಾರಿ ಪ್ರಧಾನಿಯಾಗಬೇಕೆಂದು ಅಪೇಕ್ಷೆ ಪಟ್ಟಿದ್ದೇನೆ ನಿಮ್ಮ ಆಶೀರ್ವಾದ ಬೇಕು ಎಂದು.

ಆಗ ಕೃಪಾತ್ರಿ ಮಹಾರಾಜರು ಆಶೀರ್ವಾದವೇನೋ ಮಾಡಬಹುದು ಆದರೆ ನನ್ನದೊಂದು ಬಯಕೆಯಿದೆ ಅದನ್ನ ಈಡೇರಿಸಿದರೆ ಆಶೀರ್ವಾದ ಮಾಡುತ್ತೇನೆ ನನ್ನ ವೈಯಕ್ತಿಕ ಲಾಭಕ್ಕಾಗಿ ಅಲ್ಲ ಹಿಂದೂ ಸಮಾಜದ ಉಳಿವಿಗಾಗಿ ಎಂದರು. ಆಗ ಇಂದಿರಾಗಾಂಧಿ ಆಯಿತು ಮಹಾರಾಜ್ ಅದೇನೆಂದು ಹೇಳಿ ಎಂದರು.

ಇದಕ್ಕೆ ಸ್ವಾಮಿಗಳು ನನ್ನದೊಂದು ಬಯಕೆ ಇದೆ ಅದೆಂದರೆ ನಾವು ಪೂಜಿಸುವ ನಮ್ಮ‌ ಪೂರ್ವಿಕರು ನಂಬಿರುವ ಇಲ್ಲಿಯವರೆಗೆ ಪೂಜಿಸಿ ಬೆಳೆಸಿದ ಗೋವಿನ ಹತ್ಯೆಯನ್ನು ಮಾಡುತ್ತಿರುವುದನ್ನ ನಿಲ್ಲಿಸಲು ನೀವು ಗೋಹತ್ಯಾ ನಿಷೇಧ ಕಾನೂನನ್ನ ಜಾರಿಗೆ ತರಬೇಕು ಎಂದು, ಅದಕ್ಕೆ ಇಂದಿರಾಗಾಂದಿ ಆಯಿತು ಮಹಾರಾಜ್ ನಾನು ಪ್ರಧಾನಿಯಾದ ಕೂಡಲೆ ಗೋಹತ್ಯೆ ಬಂದ್ ಎಂದು ಅಭಯ ನೀಡಿದಳು. ಅವರು ಆಶೀರ್ವಾದ ಮಾಡಿದರು.

ನಂತರ ಅವಳು ಪ್ರಧಾನಿ ಕೂಡ ಆದಳು. ನಂತರದಲ್ಲಿ ಗೋಹತ್ಯಾ ನಿಷೇಧ ಕಾನೂನು ಬಿಡಿ ಯಾವ ಮಟ್ಟದಲ್ಲಿ ಗೋಹತ್ಯೆ ನಡೆಯಿತೆಂದರೆ ಲೆಕ್ಕವಿಲ್ಲದಷ್ಟು ಹಸುಗಳ ಮಾರಣ ಹೋಮವಾಯಿತು. ಇದಕ್ಕೆ ಅನೇಕ ಪತ್ರಗಳನ್ನು ಇಂದಿರಾಗಾಂದಿಗೆ ಕೃಪಾತ್ರಿ ಮಹಾರಾಜರು ಬರೆದರು. ಇದ್ಯಾವುದಕ್ಕು ಅವಳ ಪ್ರತಿಕ್ರಿಯೆ ಬರದಾಗ ಒಂದು ನಿರ್ಧಾರಕ್ಕೆ ಬಂದರು.

ಒಂದು ದಿನ ತಮ್ಮ ಆಶ್ರಮದಲ್ಲಿದ್ದ ಅನೇಕ ಹಸುಗಳನ್ನ ಮತ್ತು ಸಂತ ಸನ್ಯಾಸಿಗಳನ್ನ ಕರೆದುಕೊಂಡು ಸಂಸತ್ ನ ಎದುರು ಧರಣಿ ಕುಳಿತು ಬಿಟ್ಟರು. ಇದನ್ನ‌ ಕಿಟಕಿಯಿಂದ ಕಂಡ ಇಂದಿರಾಗಾಂಧಿಗೆ ಎಲ್ಲಿಲ್ಲದ ‌ಕೋಪ ಬಂದಿತು. ಕೂಡಲೆ ಸೈನಿಕರನ್ನ‌‌ ಕರೆದು ಫೈರ್ ಆರ್ಡರ್ ಕೊಟ್ಟಳು. ಕೊಟ್ಟ ಕೆಲವೆ ನಿಮಿಷಗಳಲ್ಲಿ ನೂರಾರು ಸ್ವಾಮೀಜಿಗಳು, ಸಂತ ಸನ್ಯಾಸಿ ಗಳು ವಿಲಿವಿಲಿ ಒದ್ದಾಡಿ ಅಲ್ಲೇ ಪ್ರಾಣಬಿಟ್ಟರು ಅನೇಕ ಹಸುಗಳು ನೆಲಕ್ಕೆ ಉರುಳಿದವು.

ಒಂದು ಗುಂಡು ಬಂದು ಕೃಪಾತ್ರಿ ಮಹಾರಾಜರ ಸ್ವಾಮೀಜಿಯ ಎದೆಗೆ ನಾಟಿತು. ಅವರು ನೆಲಕ್ಕೆ ಬಿದ್ದರು. ಸ್ವಲ್ಪ ಚೇತರಿಸಿಕೊಂಡು ಮೇಲೆದ್ದು ಕೂಗಿ ಹೇಳಿದರು‌ , ಎಲೈ ಕಾಂಗ್ರೆಸ್ ನ ನಾಯಿಗಳೇ ಈ ದೇಶದ ಆಸ್ತಿ ನಿಮ್ಮಪ್ಪನ ಮನೆಯದು ಅಂತ ತಿಳ್ಕೊಂಡಿದ್ದೀರ ನೀವು ನಮಗೆ ಮಾಡಿದ ಮೋಸವನ್ನ ನಾನು ಕ್ಷಮಿಸುತ್ತೇನೆ ಆದರೆ ಸನ್ಯಾಸಿಗಳ ಕಣ್ಣೆದುರಿಗೆ ಹಸುಗಳ ಸಾವನ್ನು ಕಾಣುವಂತೆ ಮಾಡಿದ್ರಲ್ಲ ನಿಮ್ಮನ್ನ ಗೋಹತ್ಯೆಯ ಈ ಶಾಪ ಬಿಡಲ್ಲ ನೀವು ಗೋಪಾಷ್ಟಮಿ ದಿನ ನಾಶವಾಗಿ ಹೋಗ್ತಿರ ಅಂತ. ಅದನ್ನ ಹೇಳಿ ಸ್ವಲ್ಪ ಹೊತ್ತಲ್ಲೆ ಅವರು ನೆಲಕ್ಕೆ ಬಿದ್ದು ಪ್ರಾಣಬಿಟ್ಟರು‌.

ಆದರೆ ಅವರ ಮಾತು ಸಾಯ್ಲಿಲ್ಲ ಎಷ್ಟು ಬೇಗ ನಿಜ ಆಯ್ತು ಅಂದ್ರೆ ಕೇಂದ್ರದಲ್ಲಿ ಚುಕ್ಕಾಣಿ ಹಿಡಿದ ಇಂದಿರಾಗಾಂಧಿ ಅವರ ಅಂಗರಕ್ಷಕರ ಕೈಯಲ್ಲೆ ಗುಂಡಿಗೆ ಬಲಿಯಾಗಿ ಸತ್ತಳು ಅವಳು ಸತ್ತಂತಹ ದಿನ ಗೋಪಾಷ್ಟಮಿ, ರಾಜೀವ್ ಗಾಂದಿ ತನ್ನ ಮನೆಯಲ್ಲೆ ಸತ್ತರು ಅವರು ಸತ್ತಂತಹ ದಿನ ಗೋಪಾಷ್ಟಮಿಯ ದಿನವೇ ಆಗಿತ್ತು. ಸಂಜಯ್ ಗಾಂಧಿ ಬಾಂಬ್ ಸ್ಪೋಠದಲ್ಲೊ ಚೂರುಚೂರಾಗಿ ಸತ್ತಂತಹ ದಿನವೂ ಕೃಪಾತ್ರಿ ಮಹಾರಾಜರು ಅಸುನೀಗಿದ ದಿನವಾದ ಗೋಪಾಷ್ಟಮಿಯೇ ಆಗಿತ್ತು. ಹೀಗೆ ಪವಿತ್ರ ಗೋವಿನ ಶಾಪದಿಂದ ಗೋಪಾಷ್ಟಮಿಯ ದಿನ ತಾಯಿ ಮಗ ಇಬ್ಬರೂ ನಾಶವಾಗಿ ಹೋಗಿದ್ದರು.

ಕೃಪಾತ್ರಿ ಮಹಾರಾಜರ ಶಾಪದಿಂದಲೇ ಇಂದಿರಾ, ಸಂಜಯ್, ರಾಜೀವ್ ಗಾಂಧಿ ಪ್ರಾಣ ಕಳೆದು ಕೊಳ್ಳಬೇಕಾಯಿತು, ಅವರ ಶಾಪದ ಫಲವಾಗಿಯೇ ಸೋನಿಯಾ ಗಾಂಧಿ ಪ್ರಧಾನಿಯಾಗಲಿಲ್ಲ ಹಾಗು ಅವರ ಕುಟುಂಬದ ಕುಡಿ ರಾಹುಲ್ ಗಾಂಧಿ ಕೂಡ ಪ್ರಧಾನಿಯಾಗಲ್ಲ ಅಂತಲೇ ಹೇಳಲಾಗುತ್ತಿದೆ. ಗೋವಿನ ಶಾಪ ತಟ್ಟಿದ ಕುಟುಂಬ ಉದ್ಧಾರವಾಗಲು ಸಾಧ್ಯವಾ? ಖಂಡಿತವಾಗಿಯೂ ಇಲ್ಲ‌. ಇದೇ ಕಾರಣದಿಂದ ಇಂದು ಕಾಂಗ್ರೆಸ್ ಅಧಃಪತನ ಕಂಡಿದ್ದು ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಮುಕ್ತ ಭಾರತವಾಗೋದ್ರಲ್ಲಿ ಸಂಶಯವೇ ಇಲ್ಲ ಅಂತ ಪ್ರಧಾನಿ ಮೋದಿ ಆಗಾಗ ಹೇಳೋದು.

– Team Google Guruu

Leave a Reply

Your email address will not be published. Required fields are marked *

error: Content is protected !!