ನಾಳೆ ಸಂಜೆ ರಾಜೀನಾಮೆ ನೀಡಲಿದ್ದಾರೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ.?

ಬೇಷರತ್ ಬೆಂಬಲ ನೀಡುತ್ತೆನೆ ಎಂಬ ಭರವಸೆ ನೀಡಿ ಐದು ವರ್ಷ ನೀವೆ ಮುಖ್ಯಮಂತ್ರಿ ಎಂದು ಜೆಡಿಎಸ್‌ನವರಿಗೆ ಹೇಳಿ ಮೈತ್ರಿ ಸರಕಾರ ರಚಿಸಿದ ಕಾಂಗ್ರೆಸ್ ಪಕ್ಷ ಒಳಗೊಳಗೆ ಹೆಚ್‌ ಡಿ ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ರಣತಂತ್ರ ರೂಪಿಸುತ್ತಿದ್ದಾರೆ ಎನ್ನಬಹುದು, ದೋಸ್ತಿ ಸರಕಾರ ರಚನೆಯಾದಾಗಿನಿಂದಲೂ ಇದುವರೆಗೂ ಸರಕಾರದ ಪತನ ಎಂಬ ಮಾತು ಕೇಳಿ ಬರುತ್ತಿರುವುದು ಕಾಮನ್ ವಿಷಯವಾಗಿದೆ.

ಒಂದು ಕಡೆ ಆಪರೇಷನ್ ಕಮಲದ ಅಸ್ತ್ರ ಪ್ರಯೋಗಿಸುತ್ತಿರುವ ಬಿಜೆಪಿ ಪಕ್ಷದ ನಾಯಕರು ಇನ್ನೊಂದು ಕಡೆ ಕಾಂಗ್ರೆಸ್‌ ಪಕ್ಷದ ಹಿರಿಯ ಹಾಗೂ ಘಟಾನುಘಟಿ ನಾಯಕರ ಹೇಳಿಕೆಗಳು ಇನ್ನೊಂದು ಕಡೆಯಾಗಿವೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾನು ಸಿಎಂ ಆಗಬಹುದು ಎಂಬ ಹೇಳಿಕೆ ನೀಡಿದ ನಂತರ ಕಾಂಗ್ರೆಸ್ ನ ಕೆಲವು ನಾಯಕರು ಬೆಂಬಲ ಸೂಚಿಸಿದ್ದಾರೆ.

ಮೊನ್ನೆಯಷ್ಟೆ ಎಕ್ಸಿಟ್​​ ಪೋಲ್​ ಹೊರಬರುತ್ತಿದ್ದಂತೆ ಕಾಂಗ್ರೆಸ್​ ಒಳಬೇಗುದಿ ಹೊರಬಿದ್ದಿದ್ದು, ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಅಲ್ಪಸಂಖ್ಯಾತ ನಾಯಕ ಹಾಗೂ ಮಾಜಿ ಸಚಿವ ರೋಷನ್ ಬೇಗ್​ ಕಿಡಿಕಾರಿದ್ದಾರೆ. ನೇರವಾಗಿ ಸಿದ್ಧರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿರುವ ರೋಷನ್ ಬೇಗ್, ಸಿದ್ದರಾಮಯ್ಯ ಒಬ್ಬ ದುರಹಂಕಾರಿ. ಸಿದ್ಧರಾಮಯ್ಯನವರ ಧರ್ಮ ಒಡೆಯುವ ನೀತಿಯಿಂದ ಕಾಂಗ್ರೆಸ್​ ಸಂಖ್ಯೆ ಪಾತಾಳಕ್ಕೆ ಕುಸಿಯಿತು ಎಂದು ನೇರವಾಗಿ ಆರೋಪಿಸಿದ್ದರು ಆದರೇ ಈಗ ಅದೆ ಹೇಳಿಕೆ ಮುಂದಿಟ್ಟುಕೊಂಡು ಡಿ ವಿ ಸದಾನಂದಗೌಡರು ಕಿಡಿ ಕಾರಿದ್ದಾರೆ.

ರೋಷನ್ ಬೇಗ್ ಹೇಳಿದ್ದರಲ್ಲಿ ತಪ್ಪೇನಿದೆ. ಸಿದ್ದರಾಮಯ್ಯ ಒಬ್ಬ ದುರಂಹಕಾರಿ. ರೋಷನ್ ಬೇಗ್ ಹೇಳಿದ್ದು ನಿಜ. ಸತ್ಯವನ್ನು ಬಹಳ ದಿನ ಮುಚ್ಚಿಡಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ. ನಗರದ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು ಹೆಚ್.ಡಿ.ಕುಮಾರಸ್ವಾಮಿ ನಾಳೆ ಸಂಜೆಯವರೆಗೆ ಮಾತ್ರ ಮುಖ್ಯಮಂತ್ರಿಯಾಗಿರುತ್ತಾರೆ ಎಂಬ ಹೊಸ ಬಾಂಬ್ ಸಿಡಿಸಿದ್ದಾರೆ.

ಇದಕ್ಕೂ ಒಂದು ಹೆಜ್ಜೆ ಮುಂದೆ ಎಂಬಂತೆ, ಕುಮಾರಸ್ವಾಮಿಯವರು ಬಹಳ ಎಂದರೇ ನಾಡಿದ್ದು ಬೆಳಗ್ಗೆವರಗೆ ಮಾತ್ರ ಅವರು ಸಿಎಂ ಆಗಿರುತ್ತಾರೆ ಎಂದು ಡಿ ವಿ ಸದಾನಂದಗೌಡರು ಹೇಳಿದ್ದಾರೆ. ಮೇ 24ರಂದು ಅವರು ಅಧಿಕಾರದಿಂದ ಕೆಳಗಿಳಿಯುತ್ತಾರೆ. ಹೊಸ ಸರ್ಕಾರ ರಚನೆಗೆ ನಾವು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ. ಶೇಕಡಾ ನೂರಕ್ಕೆ ನೂರರಷ್ಟು ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಇದೇ ವೇಳೆಯಲ್ಲಿ ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ನನ್ನ ಪಕ್ಷದ ಒಬ್ಬ ಶಾಸಕರು ಮಾತ್ರ ಇದ್ದರು, ಉಳಿದ ಏಳೂ ನನ್ನ ವಿರೋಧಿ ಶಾಸಕರಿದ್ದರು. ನನಗೆ ಪೂರ್ಣ ಗೆಲುವಿನ ವಿಶ್ವಾಸವಿದೆ. ಚುನಾವಣೆಯ ಕೊನೆಯ ಎರಡು ದಿನ ಕಾಂಗ್ರೆಸ್ ಮತ್ತು ಜೆಡಿಎಸ್ ನ‌ ಶಾಸಕರು ತಮ್ಮ ಎಲ್ಲಾ ಚಟುವಟಿಕೆಗಳನ್ನು ನಡೆಸಿದ್ದಾರೆ. ಕಳೆದ ಬಾರಿಗಿಂತ ಗೆಲುವಿನ‌ ಅಂತರದಲ್ಲಿ ಸ್ಚಲ್ಪ ವ್ಯತ್ಯಾಸ ಆಗಬಹುದು ಎಂದು ಬಿಜೆಪಿ ಅಭ್ಯರ್ಥಿ ಡಿ.ವಿ. ಸದಾನಂದ ಗೌಡರು ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ‌.

-Team Google Guruu

Leave a Reply

Your e-mail address will not be published. Required fields are marked *

error: Content is protected !!