ಮಣಿಯದ ಅತೃ’ಪ್ತ ಶಾ’ಸಕರು, ಕುಮಾ’ರಸ್ವಾಮಿಯವರ ಮುಂದಿನ ನಡೆ.?

ಕಳೆದ ಆರು ದಿನಗಳ ಹಿಂದೆಯೇ ಸಿಎಂ ಕುಮಾರಸ್ವಾಮಿ ಅವರಿಗೆ ವಿಶ್ವಾಸ ಮತಯಾಚನೆ ಮಾಡಲು ಅಧಿವೇಶನದಲ್ಲಿ ಸಮಯ ನಿಗದಿ ಮಾಡಲಾಗಿತ್ತು. ಆದರೆ, ಚರ್ಚೆಗೆ ಅವಕಾಶ ಕೇಳಿದ್ದ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಶುಕ್ರವಾರದವರೆಗೂ ಚರ್ಚೆಯನ್ನು ಮುಂದುವರಿಸಿದ್ದರು. ಇದರ ನಡುವೆ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ಬಹುಮತ ಸಾಬೀತುಪಡಿಸಲು ಎರಡು ಡೆಡ್​ಲೈನ್ ನೀಡಿದ್ದರು.

ಆದರೆ, ಅದಕ್ಕೆ ಸೊಪ್ಪು ಹಾಕದ ಮೈತ್ರಿ ಸರ್ಕಾರದ ನಾಯಕರು ಬಿಜೆಪಿಯ ವಿರೋಧದ ನಡುವೆಯೂ ಚರ್ಚೆಯನ್ನು ಮುಂದುವರೆಸಿದ್ದರು. ನಿನ್ನೆ ನಡೆದ ಕಲಾಪದಲ್ಲಿ ಬಹುಮತ ಸಾಬೀತುಪಡಿಸುವುದಾಗಿ ಸಿಎಂ ಕುಮಾರಸ್ವಾಮಿ ಘೋಷಿಸಿದ್ದರು. ನಿನ್ನೆ ಮಧ್ಯರಾತ್ರಿ 11.30 ಆದರೂ ಕಲಾಪ ಮುಗಿಯದ ಕಾರಣ ಇಂದಿಗೆ ಕಲಾಪವನ್ನು ಸ್ಪೀಕರ್ ಮುಂದೂಡಿದ್ದಾರೆ. ಇಂದು ಸಂಜೆ 4ರೊಳಗೆ ಬಹುಮತ ಸಾಬೀತುಪಡಿಸಲು ಸ್ಪೀಕರ್ ಕೊನೆಯ ಆದೇಶ ನೀಡಿದ್ದಾರೆ.

ಹೀಗಾಗಿ, 22 ದಿನಗಳಿಂದ ನಡೆಯುತ್ತಿರುವ ರಾಜ್ಯ ರಾಜಕೀಯದ ಹೈಡ್ರಾಮಾಕ್ಕೆ ಇಂದಾದರೂ ತೆರೆ ಬೀಳಲಿದೆಯಾ? ಎಂದು ಜನರು ಕುತೂಹಲದಿಂದ ಕಾಯುತ್ತಿದ್ದಾರೆ. ಸಚಿವ ಡಿಕೆಶಿ ಬಂದು ಹೋದ್ರೂ ಸದನಕ್ಕೆ ಹೊರಡದ ಸಿಎಂ ಕುಮಾರಸ್ವಾಮಿ, ಸದನದ ಚರ್ಚೆಯಲ್ಲಿ ಪಾಲ್ಗೊಳ್ಳದ ಸಭಾನಾಯಕ ಹೆಚ್​.ಡಿ. ಕುಮಾರಸ್ವಾಮಿ, ಇನ್ನೂ ತಾಜ್ ವೆಸ್ಟೆಂಡ್ ಹೋಟೆಲ್​ನಲ್ಲೇ ಉಳಿದಿದ್ದಾರೆ.

ಸಿಎಂ ಕುಮಾರಸ್ವಾಮಿ ಜೊತೆ ಚರ್ಚಿಸಿ ಇದೀಗ ವಾಪಾಸ್ ವಿಧಾನಸೌಧಕ್ಜೆ ತೆರಳಿದ ಡಿಕೆಶಿ, ಸಿಎಂ ಭೇಟಿ ಕುರಿತಾದ ಪ್ರತಿಕ್ರಿಯೆಗೆ ನಿರಾಕರಿಸಿದ ಡಿಕೆ ಶಿವಕುಮಾರ್. ಇಂದೇ ವಿಶ್ವಾಸಮತ ಪ್ರಕ್ರಿಯೆ ಮುಗಿಯುತ್ತೆ ಈ ಬಗ್ಗೆ ಸ್ಪೀಕರ್ ಆಶಾವಾದ ಹೊಂದಿದ್ದಾರೆ ಹಾಗಾಗಿ ನಾಳೆಗೆ ವಿಚಾರಣೆ ಮುಂದೂಡೋಣ ಎಂದು ಸುಪ್ರೀಂಕೋರ್ಟ್ ಸಿಜೆ ರಂಜನ್ ಗೊಗೊಯ್ ಅಭಿಪ್ರಾಯ ನೀಡಿದ್ದಾರೆ.

ಕಲಾಪ ಶುರುವಾದರೂ ಸಿಎಂ ಕುಮಾರಸ್ವಾಮಿ ಪತ್ತೆಯಿಲ್ಲ, ಇದರ ಅರ್ಥವಿಷ್ಟೇ, ರಾಜ್ಯವನ್ನು ಲೂಟಿ ಮಾಡಿ ಇನ್ನೂ ಅವರಿಗೆ ಮುಗಿದಿಲ್ಲ, ಜನರ ತೆರಿಗೆ ಹಣವನ್ನು ವ್ಯರ್ಥ ಮಾಡುತ್ತಾ ಇದ್ದಾರೆ, ಸದ್ಯದಲ್ಲೇ ಇದಕ್ಕೆಲ್ಲ ಕುಮಾರಸ್ವಾಮಿ ಕನ್ನಡಿಗರಿಗೆ ಉತ್ತರ ಕೊಡಬೇಕಾಗುತ್ತದೆ ಎಂದು ಸರ್ನಾಟಕ ಬಿಜೆಪಿ ಟ್ವೀಟ್ ಮಾಡಿದ್ದಾರೆ.

ಸುಪ್ರೀಂಕೋರ್ಟ್​ನಲ್ಲಿ ಪಕ್ಷೇತರರ ಅರ್ಜಿಯ ವಿಚಾರಣೆ ನಾಳೆಗೆ ಮುಂದೂಡಿದ್ದಾರೆ ಅಭಿಷೇಕ್ ಸಿಂಘ್ವಿ ವಾದ ಮಂಡನೆ
ಕೇವಲ 4 ದಿನ ಚರ್ಚೆಯಾಗಿದೆ, ಸ್ಪೀಕರ್ ನಡೆಗೆ ಸಿಂಘ್ವಿ ಸಮರ್ಥನೆ ನೀಡಿದ್ದು ನಾಳೆಗೆ ವಿಚಾರಣೆ ಮುಂದೂಡೋಣ
ವಿಶ್ವಾಸಮತ ಎಷ್ಟು ದಿನ ನಡೆದಿದೆ? ಹಿಂದೆ ಎಷ್ಟು ದಿನ ತೆಗೆದುಕೊಂಡಿದ್ದಾರೆ? ಕಲಾಪದ ವೇಳೆ ಗವರ್ನರ್ ಸೂಚನೆ
ರಾಜ್ಯಪಾಲರು ನಿರ್ದೇಶನ ನೀಡಿದ್ದೇಕೆ? ಚರ್ಚೆ ವೇಳೆ ನಿರ್ದೇಶನವೇಕೆ? ಅತೃಪ್ತರಿಗೆ ನೋಟಿಸ್ ನೀಡಿದ್ದಾರೆ
ಸ್ಪೀಕರ್ ನೋಟಿಸ್ ಕೊಟ್ಟಿದ್ದಾರೆ.

ಬಹುಮತ ಸಾಬೀತಿಗೆ ಕಾಂಗ್ರೆಸ್ ನಾಯಕರ ಬೇಸರ ಹಿನ್ನೆಲೆಯಲ್ಲಿ ಜನ‌ರಿಂದ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿವೆ ಹೀಗಾಗಿ ಸದ್ಯ ತಾಜ್ ವೆಸ್ಟೆಂಡ್ ನಲ್ಲಿರುವ ಸಿಎಂ ಕುಮಾರಸ್ವಾಮಿ ಸದನದಲ್ಲಿ ವಿದಾಯ ಭಾಷಣಕ್ಕೆ ಮೊರೆಹೋಗಲಿದ್ದಾರೆ ಎನ್ನಲಾಗ್ತಿದೆ ಈ ಹಿನ್ನೆಲೆಯಲ್ಲಿ ಮಾತನಾಡಿದ ಆರ್ ಅಶೋಕ್ “ಯಾವುದೇ ಸಂಶಯ ಇಲ್ಲದೆ ಇಂದು ಎಲ್ಲಾ ಪ್ರಕ್ರಿಯೆ ಮುಗಿಲಿಯಲಿದೆ
ಇವತ್ತು ಸಂಜೆ ವೇಳೆಗೆ ಯಾರಿಗೆ ಬಹುಮತ ಇದೆ, ಮುಖ್ಯಮಂತ್ರಿ ಆಗ್ತಾರೆ ಅನ್ನೋದು ಖಚಿತವಾಗಲಿದೆ ಇವತ್ತು ಶೇಕಡಾ 100 ಅಲ್ಲ, 1000 ಪರ್ಸೆಂಟ್ ಆಗೇ ಆಗಲಿದೆ” ಎಂದಿದ್ದಾರೆ.

-Team Google Guru

Leave a Reply

Your e-mail address will not be published. Required fields are marked *

error: Content is protected !!