ಭಾರತದ ಈ ಕಟ್ಟಕಡೆಯ ಹಳ್ಳಿಯ ರಹಸ್ಯದ ಬಗ್ಗೆ ನಿಮಗೆ ತಿಳಿದಿಲ್ಲವಾದರೆ ಈಗಲೇ ಓದಿ ತಿಳಿದುಕೊಳ್ಳಿ; ನೀವಾಗಬಹುದು ಕೋಟ್ಯಾಧೀಶ್ವರರು..!

ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಹೆಚ್ಚೆಚ್ಚು ಹಣ ಸಂಪಾದನೆ ಮಾಡಬೇಕೆಂದು ದಿನವೀಡಿ ಕಷ್ಟಪಡುತ್ತಾನೆ. ಆದರೂ ಆತ savings ಮಾಡುವಲ್ಲಿ ವಿಫಲನಾಗುತ್ತಾನೆ. ಆದರೆ ಮಿತ್ರರೇ ಇಂದು ನಾವು ಈ ಅಂಕಣದ ಮೂಲಕ ತಿಳಿಸಲು ಹೊರಟಿರುವ ಜಾಗದ ಬಗ್ಗೆ ಓದಿದರೆ ನೀವೊಮ್ಮೆ ಶಾಕ್ ಆಗುತ್ತೀರ.

ನಾವಿಂದು ನಿಮಗೆ ಹೇಳ ಹೊರಟಿರುವ ಈ ಜಾಗದ ಬಗ್ಗೆ ಹೇಳಲಾಗುವ ಮಾನ್ಯತೆಯ ಪ್ರಕಾರ ಯಾವ ಮನುಷ್ಯ ಹಣ ಸಂಪಾದಿಸಲು ಒದ್ದಾಡುತ್ತಿರುತ್ತಾನೋ ಆತ ಈ ಜಾಗಕ್ಕೆ ಹೋದರೆ ಆತನ ಸಕಲ ಸಂಕಷ್ಟಗಳು ಹಾಗು ಬಡತನವೂ ದೂರವಾಗಿಬಿಡುತ್ತಂತೆ. ನೀವೂ ಕೂಡ ಈ ಊರಿಗೆ ಒಮ್ಮೆ ಭೇಟಿ ಕೊಟ್ಟು ನಿಮ್ಮ ಅದೃಷ್ಟದ ಬಾಗಿಲನ್ನ ತೆರೆಯುವಂತೆ ಮಾಡಿಕೊಳ್ಳಬಹುದು. ಗೆಳೆಯರೇ ನಿಮಗೆ ತಿಳಿಸಬಯಸುವ ವಿಷಯವೇನೆಂದರೆ ಈ ಜಾಗ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿದೆ.

ಈ ಹಳ್ಳಿಯನ್ನ ಮಾಣಾ ಎಂದು ಕರೆಯಲಾಗುತ್ತದೆ. ಇಷ್ಟೇ ಅಲ್ಲದೆ ಈ ಹಳ್ಳಿಯ ಬಗ್ಗೆ ಹೇಳಲಾಗುವ ಮತ್ತೊಂದು ವಿಷಯವೇನೆಂದರೆ ಈ ಹಳ್ಳಿ ಶಾಪಮುಕ್ತ ಗ್ರಾಮವೆಂದೇ ಸುಪ್ರಸಿದ್ಧ. ಈ ಹಳ್ಳಿಗಾಗಲಿ ಅಥವ ಹಳ್ಳಿಯ ಜನರಿಗಾಗಲಿ ಜೀವನಪರ್ಯಂತ ಎಂದಿಗೂ ಶಾಪ ತಟ್ಟೋದೇ ಇಲ್ಕ ಎಂಬ ನಂಬಿಕೆಯಿದೆ. ಪುರಾಣಗಳ ಹಾಗು ಅಲ್ಲಿಯ ಜನರ ನಂಬಿಕೆಯ ಪ್ರಕಾರ ಭಗವಾನ್ ಶಿವನ ಚಮತ್ಕಾರ ಈ ಊರಲ್ಲಿ ಎಷ್ಟಿದೆಯೆಂದರೆ ಇಲ್ಲಿರುವ ಜನ ಹಾಗು ಈ ಜಾಗಕ್ಕೆ ಬರೋ ಜನರ ಬಡತನ ದೂರವಾಗಿಬಿಟ್ಟಿದೆಯಂತೆ.

ಅಷ್ಟೇ ಅಲ್ಲದೆ ಮತ್ತೂ ವಿಶೇಷವಾದ ಸಂಗತಿಯೇನೆಂದರೆ ಈ ಹಳ್ಳಿಗೆ ಬರುವ ವ್ಯಕ್ತಿಯ ಎಲ್ಲಾ ಪಾಪಗಳೂ ಕಳೆದಯಬಿಡುತ್ತವಂತೆ. ಇದೇ ಕಾರಣಕ್ಕಾಗಿ ಭಾರತದ ಕೊನೆಯ ಹಳ್ಳಿಯಾಗಿರುವ ಈ ಜಾಗಕ್ಕೆ ಜನ ಭೇಟಿ ಕೊಡಲು ಮುಗಿಬೀಳುತ್ತಾರೆ ಹಾಗು ಈ ಹಳ್ಳಿಗೆ ದಿನಾಲು ಸಾವಿರಾರು ಜನ ಭೇಟಿ ಕೊಡುತ್ತಾರೆ. ಈ ಊರಿನ ಬಗ್ಗೆ ಹೇಳಲಾಗುವ ವಿಷಯವೇಯ ಹಿಂದಿನ ಕಾಲದಲ್ಲಿ ಚಮೋಲಿ ಜಿಲ್ಲೆಯಲ್ಲಿನ ಈ ಹಳ್ಳಿಯ ಮೂಲಕವೇ ಭಾರತ ಹಾಗು ಟಿಬೇಟ್ ಗಳ ನಡಯವೆ ವ್ಯಾಪಾರ ವಹಿವಾಟು ನಡೆಯುತ್ತಿತ್ತು.

ಬದ್ರೀನಾಥ್ ಧಾಮದಿಂದ ಈ ಹಳ್ಳಿ ಕೇವಲ ಮೂರು ಕಿಲೋಮೀಟರ್ ದೂರದಲ್ಲಿದೆ. ಈ ಹಳ್ಳಿಯ ಹೆಸರು ಭಗವಾನ್ ಶಿವನ ಭಕ್ತ ಮಣಿಭದ್ರ ನ ಹೆಸರಿನಿಂದ ಮಾಣಿ ಎಂದಾಯಿತೆಂದು ಹೇಳಲಾಗುತ್ತದೆ. ಜನರು ಹೇಳುವ ಪ್ರಕಾರ ಒಂದು ಬಾರಿ ಈ ಹಳ್ಳಿಗೆ ಹೋಗಿ ಬಂದರೆ ಆ ವ್ಯಕ್ತಿಯ ಅದೃಷ್ಟವೇ ಬದಲಾಗಿಬಿಡುತ್ತಂತೆ. ಆತನ ಸರ್ವ ಸಂಕಷ್ಟಗಳೂ ದೂರವಾಗಿ ಆತನ ಬಡತನ ಕೂಡ ನಿರ್ಮೂಲನೆಯಾಗುತ್ತಂತೆ. ಅಷ್ಟೇ ಅಲ್ಲದೆ ಈ ಜಾಗಕ್ಕೆ ಹೋದರೆ ತನ್ನ ಜೀವನದಲ್ಲಿ ಮುಂದಾಗಬಹುದಾದ ಹಲವು ವಿಷಯಗಳ ಬಗ್ಗೆ ಮೊದಲೇ ಅರ್ಥವಾಗಿಬಿಡುತ್ತಂತೆ.

ನಂಬಿಕೆಗಳ ಪ್ರಕಾರ ಹಾಗು ಅಲ್ಲಿನ ಜನ ಹೇಳುವ ಪ್ರಕಾರ ಒಂದು ಸಲ ಮಾಣಿಕ್ ಶಾಹ್ ಹೆಸರಿನ ವ್ಯಾಪಾರಿಯೊಬ್ಬ ತನ್ನ ವ್ಯಾಪಾರ ವಹಿವಾಟಿಗಾಗಿ ಎಲ್ಲಿಗೋ ಹೊರಟಿದ್ದನಂತೆ. ಆಗ ಆತನನ್ನ ತಡೆದ ದರೋಡೆಕೋರರು ಆತನ ಕತ್ತು ಸೀಳಿ ಆತನನ್ನ ಕೊಂದುಬಿಟ್ಟಿದ್ದರು. ಆದರೆ ವಿಸ್ಮಯ, ಚಮತ್ಕಾರವೆಂಬಂತೆ ದೇಹದಿಂದ ತಲೆ ಬೇರ್ಪಟ್ಟರೂ ಆತನ ಬಾಯಿಯಿಂದ ಭಗವಾನ್ ಶಂಕರನ ನಾಮಸ್ಮರಣೆಯಾಗುತ್ತಿತ್ತು. ಬಳಿಕ ಶಿವನ ಅನುಗ್ರಹ ಹಾಗು ಶಿವನೇ ಆತನ ತಲೆಯನ್ನ ಮತ್ತೆ ಜೋಡಿಸಿದ್ದನಂತೆ. ಅದಾದ ಬಳಿಕ ಆತನನ್ನ ಮಣಿಭದ್ರ ಹೆಸರಿನಿಂದ ಈ ಜಾಗದಲ್ಲಿ ಪೂಜೆ ನೆರವೇರಿಸಲಾಗುತ್ತಿದೆಯಂತೆ.

ಆತ ಇದೇ ಊರಿನಲ್ಲಿ ಸಾವೀಗಾಡಿಗಿದ್ದ ಆದರೆ ಆತನ ಪರಮ ಭಕ್ತಿಗೆ ಮೆಚ್ಚಿದ್ದ ಶಿವ ಈ ಊರನ್ನ ಶಾಪಮುಕ್ತ ಗ್ರಾಮ ಮಾಡಿಬಿಟ್ಟಿದ್ದ. ಅಂದಿನಿಂದ ಇಂದಿನವರೆಗೆ ಈ ಊರಲ್ಲಿ ಒಬ್ಬನೇ ಒಬ್ಬ ಭಿಕ್ಷುಕನಾಗಲಿ ಅಥವ ಆರ್ಥಿಕವಾಗಿ ಕುಗ್ಗಿ ಹೋಗಿರುವ ಒಬ್ಬನೇ ಒಬ್ಬ ಬಡವನೂ ಕಾಣ ಸಿಗುವುದಿಲ್ಲ. ಈ ಹಳ್ಳಿಗೆ ದೇಶದ ಮೂಲೆ ಮೂಲೆಗಳಿಂದ ಪ್ರವಾಸಿಗರು ಬರುತ್ತಾರೆ. ಈ ಹಳ್ಳಿಗೆ ಬಂದು ಹೋದ ಅನೇಕರು ಬಡತನದಿಂದ ಹೊರಬಂದಿದ್ದಾರೆ ಎಂದು ಸ್ಥಳೀಯರ ನಂಬಿಕೆಯಷ್ಟೇ ಅಲ್ಲದೆ ಆ ಜಾಗಕ್ಕೆ ಹೋಗಿ ಬಂದವರೂ ಹೇಳುತ್ತಾರೆ.

ಈ ಹಳ್ಳಿ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿದ್ದು ಮಾಣಿ ಎಂಬ ಈ ಹಳ್ಳಿಯೇ ಭಾರತದ ಕೊನೆಯ ಹಳ್ಳಿಯಾಗಿದೆ. ಈ ಹಳ್ಳಿಯನ್ನ ದಾಟಿದರೆ ನಮಗೆ ಎದುರಾಗೋದೇ ಟಿಬೆಟ್, ಈ ಹಿಂದೆ ಟಿಬೇಟ್ ಕೂಡ ಭಾರತದ ಅಂಗವೆಂಬಂತೇ ಇತ್ತು ಆದರೆ ಚೀನಾ ಟಿಬೇಟ್ ಮೇಲೆ ಆಕ್ರಮಣ ಮಾಡಿ ಅಲ್ಲಿದ್ದ ಬೌದ್ಧ ಭಿಕ್ಕುಗಳನ್ನ ಅಲ್ಲಿಂದ ಓಡಿಸಿದ್ದರು. ಆ ಸಮಯದಲ್ಲೇ ಟಿಬೇಟ್ ನಿವಾಸಿಯಾಗಿದ್ದ ಬೌದ್ಧ ಧರ್ಮಗುರು ದಲೈ ಲಾಮಾ ಹಾಗು ಅವರ ಅನುಯಾಯಿ ಬೌದ್ಧರು ಟಿಬೇಟ್ ಬಿಟ್ಟು ಭಾರತಕ್ಕೆ ಓಡಿ ಬಂದಿದ್ದರು.

– Soujanya Rai

Leave a Reply

Your email address will not be published. Required fields are marked *

error: Content is protected !!