ಪಟೇಲರಂತೂ ಸ್ವರ್ಗ ಸೆರಿಬಿಟ್ಟರು ಆದರೆ ನೆಹರು ಪಟೇಲರ ಪುತ್ರಿಯನ್ನ ಯಾವ ಸ್ಥಿತಿಗೆ ತಂದನೆಂದರೆ ಆಕೆ ಬೀದಿಯಲ್ಲಿ____

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಮಾತನಾಡುತ್ತ ನೆಹರು ಪರಿವಾರವನ್ನೇ ಮುಂದಿಟ್ಟುಕೊಂಡು 70 ವರ್ಷಗಳಿಂದ ಅಧಿಕಾರ ನಡೆಸುತ್ತಿದೀರಲ್ಲ,‌ ನಿಮ್ಮ ಪಕ್ಷ ನಿಜವಾಗಿಯೂ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟಿದ್ದೇ ಆದಲ್ಲಿ, ನಿಮಗೆ ತಾಕತ್ತಿದ್ದರೆ ಗಾಂಧಿ ಪರಿವಾರದ ಹೊರತಾದ ವ್ಯಕ್ತಿಯೊಬ್ಬನನ್ನ ನಿಮ್ಮ ಪಕ್ಷದ ಅಧ್ಯಕ್ಷನಾಗಿ ಮಾಡಿ ಎಂದು ಸವಾಲು ಹಾಕಿದ್ದರು.

ಅದು ಕಾಂಗ್ರೆಸ್ ಪಕ್ಷದಲ್ಲಿ ಸಾಧ್ಯವೇ ಇಲ್ಲ ಬಿಡಿ, ಕಾಂಗ್ರೆಸ್ಸಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯೇ ಇಲ್ಲ ಅನ್ನೋದನ್ನ ಈಗ ಬಿಡಿ 1947 ರಲ್ಲೇ ನೆಹರು ಪ್ರೂವ್ ಮಾಡಿಬಿಟ್ಟಿದ್ದರು. ಸರ್ದಾರ್ ಪಟೇಲರನ್ನ ಅಧಿಕೃತವಾಗಿ ಇನ್ನೇನು ಪ್ರಧಾನಿಯೆಂದು ಘೋಷಿಸಬೇಕೆಂಬ ಹೊತ್ತಲ್ಲೇ ನೆಹರು ಗಾಂಧಿಯ ಮೇಲೆ ಒತ್ತಡ ಹೇರಿ ತಾನೇ ಪ್ರಧಾನಿಯಾಗಿ ಪಟೇಲರನ್ನ ಮೋಸ ಮಾಡಿದ್ದು ಪ್ರಜಾಪ್ರಭುತ್ವ ವಿರೋಧಿ ನಡೆಯಲ್ಲವೇ?

ಅಂದಿನಿಂದ ಹಿಡಿದು ಇಂದಿನವರೆಗೆ ಕಾಂಗ್ರೆಸ್ ಪಕ್ಷ ಸರ್ದಾರ್ ಪಟೇಲರನ್ನ ಯಾಕೆ ನೆನೆಯಲೇ ಇಲ್ಲ? ಸರ್ದಾರ್ ಪಟೇಲರೆಂದರೆ ಕಾಂಗ್ರೆಸ್ಸಿಗೆ ಯಾಕಷ್ಟು ದ್ವೇಷ? ಕಡೆ ಪಕ್ಷ ತಾವು ಗೌರವಿಸಿದ ದೇಶದ ಉಕ್ಕಿನ ಮನುಷ್ಯನನ್ನ ಪ್ರಧಾನಿ ಮೋದಿ ಗೌರವಿಸಿ ಅವರನ್ನ ಭಾರತವಷ್ಟೇ ಅಲ್ಲದೆ ಇಡೀ ಜಗತ್ತೇ ನೋಡುವಂತೆ ಮಾಡಲು ಜಗತ್ತಿನ ಅತಿ ಎತ್ತರದ ಪ್ರತಿಮೆಯನ್ನ ಸ್ಥಾಪಿಸಿದರು. ಆದರೆ ಕಾಂಗ್ರೆಸ್ಸಿಗೆ ಆ ವಿಷಯದಲ್ಲೂ ಸಮಾಧಾನವಿಲ್ಲ. ಪಟೇಲರ ಮೂರ್ತಿಯ ಬಗ್ಗೆಯೂ ಕಾಂಗ್ರೆಸ್ಸಿಗೆ ಅಸಹನೆಯಿದೆ.

ಸರ್ದಾರ್ ಪಟೇಲರನ್ನಷ್ಟೇ ಅಲ್ಲದೆ ಅವರ ಪುತ್ರಿಯ ಸ್ಥಿತಿಯನ್ನ ಕಾಂಗ್ರೆಸ್ ಯಾವ ಮಟ್ಟಕ್ಕೆ ತಂದಿತ್ತು? ಆಕೆಯ ನಿಧನವಾಗಿದ್ದು ಹೇಗೆ ಅಂತ ತಿಳಿದರೆ ನೀವು ಮಮ್ಮಲ ಮರುಗುವುದು ಖಂಡಿತ, ಇಂದು ಸರ್ದಾರ್ ಪಟೇಲರ ಪ್ರತಿಮೆಗೆ ವಿರೋಧಿಸುವ ಕಾಂಗ್ರೆಸ್ ಅಂದು ಪಟೇಲರ ಪುತ್ರಿಯನ್ನ ಯಾವ ಸ್ಥಿತಿಗೆ ನೂಕಿಬಿಟ್ಟಿತು ಅನ್ನೋದನ್ನ ನೀವು ತಿಳಿಯಲೇಬೇಕು.

ನೆಹರು ವಂಶದವರು ನೆಹರೂವಿನ ಬಳಿಕವೂ ದೇಶದ ಅಧಿಕಾರದ ಚುಕ್ಕಾಣಿ ಹಿಡಿದು ದೇಶವನ್ನ ಆಳಿದ್ದಾರೆ, ಇಂದು ಈ ಕುಟುಂಬದ ಬಳಿ ಅರಬೋಗಟ್ಟಲೇ ಆಸ್ತಿಯಿದೆ, ಸೋನಿಯಾ ಗಾಂಧಿ ಇಂಗ್ಲೆಂಡ್ ರಾಣಿಗಿಂತಲೂ ಶ್ರೀಮಂತೆಯಂತೆ. ನೆಹರು(ಗಾಂಧಿ) ವಂಶದ ಬಗ್ಗೆಯಂತೂ ನಿಮಗೆಲ್ಲಾ ಗೊತ್ತೇ ಇದೆ. ಆದರೆ ನಿಮಗೆ ಸರ್ದಾರ್ ಪಟೇಲ್ ವಂಶದವರ ಬಗ್ಗೆ ಏನಾದರೂ ಗೊತ್ತಿದೆಯಾ? ಅವರಿಗೆ ಮಕ್ಕಳಿದ್ದರು, ಅವರಿಗೂ ಒಬ್ಬ ಮಗಳಿದ್ದಳು, ಅವರದ್ದೂ‌ ಕುಟುಂಬವಿತ್ತು. ಕಾಂಗ್ರೆಸ್ ಪಕ್ಷ ಹಾಗು ನೆಹರು ಪಟೇಲರ ಕುಟುಂಬದ ಜೊತೆ ಎಂಥಾ ಅನ್ಯಾಯ ಮಾಡಿದರೆಂಬುದನ್ನ ನೀವು ತಿಳಿದುಕೊಳ್ಳಲೇಬೇಕು.

ಕಾಂಗ್ರೆಸ್ ಪಕ್ಷ ಹಾಗು ಸ್ಪೆಷಲ್ಲಿ ನೆಹರು ಹಾಗು ಅವರ ಕುಟುಂಬ ಸರ್ದಾರ್ ಪಟೇಲರನ್ನ ಎಷ್ಟು ದ್ವೇಷಿದುತ್ತಿದ್ದರು ಅನ್ನೋದನ್ನ ಪಟೇಲರು 1950 ರಲ್ಲಿ ನಿಧನವಾದ ಬಳಿಕ‌ ಕಾಂಗ್ರೆಸ್ ಅವರಿಗೆ ಭಾರತ ರತ್ನ ಕೊಡಲೂ ಕೂಡ ನಿರಾಕರಿಸಿದ್ದನ್ನ ನೋಡಿದರೇ ಅರ್ಥವಾಗುತ್ತೆ. ಆದರೆ ಯಾವಾಗ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತೋ ಆಗ 41 ವರ್ಷಗಳ ಬಳಿಕ ಅಂದರೆ ಪಟೇಲರು 1950 ರಲ್ಲಿ ಮರಣ ಹೊಂದಿದ ಬಳಿಕ 1991 ರಲ್ಲಿ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನ ನೀಡಲಾಯಿತು.

ಇಂದು ನಾವು ನಿಮಗೆ ಯಾವ ವಿಷಯವನ್ನು ತಿಳಿಸಲು ಹೊರಟಿದ್ದೇವೋ ಅ ವಿಷಯದ ಬಗ್ಗೆ ಬಹುತೇಕರಿಗೆ ಗೊತ್ತೇ ಇರದ ವಿಚಾರವಾಗಿದೆ, ಸರ್ದಾರ್ ಪಟೇಲರಿಗೆ ಮಗಳೊಬ್ಬಳಿದ್ದಳು, ಅವರ ಹೆಸರು ಮಣಿಬೆನ್ ಪಟೇಲ್ ಅಂತ. ಅವರೂ ಕಾಂಗ್ರೆಸ್ಸಿನ ನಾಯಕಿಯಾಗಿದ್ದವರೇ. ತಮ್ಮ ತಂದೆಯ ರೀತಿಯಲ್ಲೇ ಆಕೆಯೂ ಕೂಡ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದವರೇ. 1947 ರಲ್ಲಿ ಸರ್ದಾರ್ ಪಟೇಲರು ದೇಶದ ಪ್ರಥಮ ಗೃಹಮಂತ್ರಿಯಾಗಿದ್ದರು ಬಳಿಕ 1950 ರಲ್ಲಿ ಅವರ ನಿಧನವಾಗಿತ್ತು.

ಪಟೇಲರ ನಿಧನದ ಬಳಿಕ ಮಣಿಬೆನ್ ಪಟೇಲ್ ದೇಶದ ಪ್ರಧಾನಮಂತ್ರಿಯಾಗಿದ್ದ ನೆಹರೂವನ್ನ ಭೇಟಿಯಾಗಲು ತೆರಳಿದ್ದರು, ಆಕೆ ತನ್ನ ತಂದೆ ಹೇಳಿರುವ ಮಾತನ್ನ ಈಡೇರಿಸಲು ನೆಹರುವಿನ ಬಳಿ ಹೋಗಿದ್ದರು. ಸರ್ದಾರ್ ಪಟೇಲರು ತಮ್ಮ ಮಗಳಿಗೆ ತಮ್ಮ ಸಾವಿನ ಬಳಿಕ 2 ವಸ್ತುಗಳನ್ನು ಕೊಟ್ಟಿದ್ದರು, ಆ 2 ವಸ್ತುಗಳೇನೆಂದರೆ ಅದರಲ್ಲಿ ಒಂದು ಬ್ಯಾಗ್ ಹಾಗು ಮತ್ತೊಂದು ಪುಸ್ತಕವಾಗಿತ್ತು. ಆದರೆ ಮೊದಲು ನೆಹರು ಮಣಿಬೆನ್ ರನ್ನ ಭೇಟಿಯಾಗಲು ನಿರಾಕರಿಸಿಬಿಟ್ಟರು. ಆದರೆ ಬಹಳ ಹೊತ್ತು ಕಾಯಿಸಿದ ಬಳಿಕ ಮಣಿಬೆನ್ ರನ್ನ ಭೇಟಿಯಾದರು.

ಸರ್ದಾರ್ ಪಟೇಲರ ಪುತ್ರಿ ತಮ್ಮ ತಂದೆ ನೆಹರೂವಿಗೆ ನೀಡಲು ಹೇಳಿದ್ದ ಆ ಬ್ಯಾಗ್ ಹಾಗು ಪುಸ್ತಕವನ್ನ ನೆಹರು ಕೈಗಿಟ್ಟು ಹೀಗೆ ಹೇಳ್ತಾರೆ “ನಮ್ಮ ತಂದೆ ಸ್ವರ್ಗಾಧೀನರಾಗುವುದಕ್ಕೂ ಮುನ್ನ ಈ ಬ್ಯಾಗ್ ಹಾಗು ಪುಸ್ತಕವನ್ನ ನೆಹರೂವಿಗೇ ನೀಡಬೇಕೆಂದು ಹೇಳಿದ್ದರು, ಹಾಗಾಗಿ ಅದನ್ನ ನಿಮಗೆ ನೀಡಲು ನಾನು ದೆಹಲಿಗೆ ಬಂದಿದ್ದೇನೆ” ಎಂದರು. ನೆಹರು ಆ ಬ್ಯಾಗ್ ಹಾಗು ಪುಸ್ತಕವನ್ನ ತೆಗೆದುಕೊಂಡು ತಮ್ಮ ಕೋಣೆಯಿಂದ ಹೊರಟು ಬಿಟ್ಟರು.

ಅಷ್ಟಕ್ಕೂ ಆ ಬ್ಯಾಗ್‌ ನಲ್ಲಿ ಇದ್ದದ್ದೇನು? ಅ ಪುಸ್ತಕವೇನಿತ್ತು??

ಪಟೇಲರ ಪುತ್ರಿ ಮಣಿಬೆನ್ ಪಟೇಲ್ ನೆಹರೂವಿಗೆ ನೀಡಿದ ಅ ಬ್ಯಾಗಿನಲ್ಲಿತ್ತು ಬರೋಬ್ಬರಿ 35 ಲಕ್ಷ ರೂಪಾಯಿ(ಈಗ ಆ ಹಣ ನೂರಾರೇನು ಸಾವಿರಾರು ಕೋಟಿಯಷ್ಟಾಗಬಹುದು), ಆ ಹಣವನ್ನ ದೇಶದ ಜನ ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದ ದೇಣಿಗೆ ಹಣವಾಗಿತ್ತು. ಮತ್ತು ಆ ಪುಸ್ತಕದಲ್ಲಿದ್ದದ್ದೇನೆಂದರೆ ದೇಶದ ಯಾವ್ಯಾವ ಜನ ಎಷ್ಟೆಷ್ಟು ದೇಣಿಗೆ ನೀಡಿದ್ದಾರೆ ಅನ್ನೋ ಮಾಹಿತಿ ಆ ಪುಸ್ತಕದಲ್ಲಿತ್ತು. 1947 ರಲ್ಲಿ 35 ಲಕ್ಷವೆಂದರೆ ಈಗಿನ ಕಾಲದಲ್ಲಿ ಲೆಕ್ಕ ಹಾಕಿದರೆ ಎಷ್ಟಾಗಬಹುದೆಂದು ನೀವೆ ಲೆಕ್ಕ ಹಾಕಿ ನೋಡಿ.

ದೇಶದ ಮೇಲೆ ಸರ್ದಾರ್ ಪಟೇಲರಲ್ಲಿ ಎಷ್ಟು ನಿಷ್ಟೆಯಿತ್ತು‌ ಅನ್ನೋದನ್ನ ನೀವು ಈ ಒಂದು ವಿಚಾರದಿಂದಲೇ ತಿಳಿದುಕೊಳ್ಳಬಹುದಾಗಿದೆ. ಸರ್ದಾರ್ ಪಟೇಲರ ನಿಧನದ ಬಳಿಕ ಅವರ ಮಗಳು ಮಣಿಬೆನ್ ಪಟೇಲ್ ಆ 35 ಲಕ್ಷ ಹಣ ಹಾಗು ದೇಣಿಗೆ ನೀಡಿದವರ ಲಿಸ್ಟ್ ಇದ್ದ ಪುಸ್ತಕ ಮವನ್ನ ನೆಹರೂವಿನ ಕೈಗೆ ಒಪ್ಪಿಸಿದ್ದರು. ಮಣಿಬೆನ್ ಪಟೇಲರಿಂದ ಹಣ ಹಾಗು ಪುಸ್ತಕವನ್ನ ಪಡೆದ ನೆಹರು ಮಣಿಬೆನ್ ರಿಗೆ ನೀರು ಕೂಡ ಕುಡೀತೀರ ಅಂತ ಕೇಳಲಿಲ್ಲ, ಬಳಿಕ ಮಣಿಬೆನ್ ರನ್ನ ನೀವಿನ್ನು ಹೋಗಬಹುದೆಂದು ಕಳಿಸಿಬಿಟ್ಟರು. 35 ಲಕ್ಷ ಹಣ ಹಾಗು ಪುಸ್ತಕವನ್ನ ನೆಹರುವಿನ‌ ಕೈಗಿತ್ತು ಆಕೆ ಅಹ್ಮದಾಬಾದ್ ತೆರಳಿದರು.

ಅದಾದ ಬಳಿಕ ಕಾಂಗ್ರೆಸ್ ಪಕ್ಷವಾಗಲಿ ಅಥವ ಅದರ ನಾತಕರ‌್ಯಾರೂ ಮಣಿಬೆನ್ ಪಟೇಲರ ಬಗ್ಗೆ ವಿಚಾರಿಸಲೇ ಇಲ್ಲ, ಮಣಿಬೆನ್ ಪಟೇಲ್ ದೇಶದ ಪ್ರಥಮ ಗೃಹಮಂತ್ರಿಯ ಮಗಳಾಗಿದ್ದರೂ ಕೂಡ ಅವರು ಎಂಥಾ ಬಡತನ ಸ್ಥಿತಿಯಲ್ಲಿ ಬದುಕುತ್ತಿದ್ದರು ಅನ್ನೋದನ್ನ ನೀವು ಊಹಿಸಲೂ ಕೂಡ ಸಾಧ್ಯವಿಲ್ಲ. ಆಗಿನ ಕಾಲದಲ್ಲಿ ಗೃಹಮಂತ್ರಿಯೊಬ್ಬರ ಮಗಳು ಎಂಥಾ ಬಡತನದಲ್ಲಿ ಬದುಕುತ್ತಿದ್ದರೆಂದರೆ ಗುಜರಾತ್ ನಲ್ಲೂ ಕೂಡ ಕಾಂಗ್ರೆಸ್ ಆಡಳಿತ ಪಕ್ಷ ವಾಗಿತ್ತು, ಅವರದ್ದೇ ಸರ್ಕಾರವಿದ್ದರೂ ಕೂಡ ನೆಹರು ಪಟೇಲರನ್ನ ಎಷ್ಟು ದ್ವೇಷಿಸುತ್ತಿದ್ದರೆಂದರೆ ಪಟೇಲರ ವಂಶವನ್ನೂ ನೆಹರು ಸುಖವಾಗಿ ಬಾಳಲು ಬಿಡಲಿಲ್ಲ ಎಂದರೆ ತಪ್ಪಾಗಲಾರದು.

ತಮ್ಮ ಕೊನೆಯ ದಿನಗಳಲ್ಲಿ ಪಟೇಲರ ಪುತ್ರಿ ಮಣಿಬೆನ್ ಪಟೇಲರ ಕಣ್ಣುಗಳು ನಿಶಕ್ತವಾಗಿದ್ದವು, ಅವರ ಬಳಿ‌ 30 ವರ್ಷ ಹಳೆಯದಾದ ಕನ್ನಡಕವಿತ್ತು, ಅವರ ಕಣ್ಣುಗಳು ಎಷ್ಟು ವೀಕ್ ಆಗಿದ್ದವೆಂದರೆ ಆಕೆಯ ಕನ್ನಡಕದ ನಂಬರ್ ಭಾರೀ ಹೆಚ್ಚಾಗಿತ್ತು, ಹೊಸ ಕನ್ನಡಕದ ಅವಶ್ಯಕತೆ ಅವರಿಗಿತ್ತು. ಆದರೆ ಹೊಸ ಕನ್ನಡಕ ಕೊಳ್ಳಲು ಕೂಡ ಅವರ ಬಳಿ ದುಡ್ಡಿರಲಿಲ್ಲ. ಅವರು ಅಹ್ಮದಾಬಾದಿನ ರಸ್ತೆಗಳಲ್ಲಿ ನಡೆಯುತ್ತ ನಡೆಯುತ್ತಲೇ ಕುಸಿದು ಬೀಳುತ್ತಿದ್ದರು, ಇದೇ ರೀತಿಯಲ್ಲಿ ಕೊನೆಗೆ ಅವರ ನಿಧನವಾಯಿತು.

ನಿಮಗೆ ಇಲ್ಲಿ ಮತ್ತೊಂದು ವಿಷಯ ತಿಳಿಸಲೇಬೇಕು, ಆ್ಇನ ಕಾಲದಲ್ಲಿ ಗುಜರಾತ್ ನಲ್ಲಿ ಕಾಂಗ್ರೆಸ್ ಸರ್ಕಾರವೇ ಇತ್ತು, ಕಾಂಗ್ರೆಸ್ಸಿನ ಮುಖ್ಯಮಂತ್ರಿಯಾಗಿದ್ದವರು ಚಿಮನಭಾಯ್ ಪಟೇಲ್. ಪಟೇಲರ ಪುತ್ರಿಯ ಸ್ಥಿತಿ ಗಂಭೀರವಾಗಿದೆ ಇನ್ನೇನು ಅವರ ನಿಧನವಾಗುತ್ತೆ ಎಂಬ ಸುದ್ದಿ ತಿಳಿಯುತ್ತಲೇ ಚಿಮನಭಾಯ್ ಪಟೇಲ್ ತನ್ನ ಫೋಟೋಗ್ರಾಫರ್ ನ್ನ ಕಳೆದುಕೊಂಡು ಮಣಿಬೆನ್ ಬಳಿ ತೆರಳಿ ನಿಸ್ತೇಜ ಸ್ಥಿತಿಗೆ ತಲುಪಿದ್ದ ಮಣಿಬೆನ್ ಪಟೇಲರ ಜೊತೆ ಫೋಟೋ ತೆಗೆಸಿಕೊಂಡು ಅಲ್ಲಿಂದ ಹೊರಟು ಹೋದ.

ಮಣಿಬೆನ್ ಪಟೇಲರಿಗೆ ಒಂದು ಕನ್ನಡಕವನ್ನ ಕೊಡಿಸಲೂ ಕೂಡ ಕಾಂಗ್ರೆಸ್ ಮುಂದಾಗಲಿಲ್ಲ, ಅ ಸುದ್ದಿ ಆಗಿನ ಪತ್ರಿಕೆಗಳಲ್ಲೂ ಸುದ್ದಿಯಾಗಿತ್ತು ಅಷ್ಟೇ ಅಲ್ಲದೆ ಗುಜರಾತ್ ಮುಖ್ಯಮಂತ್ರಿ ಕೇವಲ ಫೋಟೋಗಾಗಿ ಮಣಿಬೆನ್ ರ ಬಳಿ ತೆರಳಿ ಬಳಿಕ ಅವರನ್ನ ಅದೇ ಸ್ಥಿತಿಯಲ್ಲಿ ಸಾಯಲು ಬಿಟ್ಟು ಬಿಟ್ಟರು ಅನ್ನೋದನ್ನೂ ಪತ್ರಿಕೆಗಳು ವರದಿ ಮಾಡಿದ್ದವು. ಮಣಿಬೆನ್ ಪಟೇಲರೂ ಅಸ್ತಂಗತರಾದರು, ಅವರ ನಿಧನದ ಬಳಿಕವೂ ಒಬ್ಬನೇ ಒಬ್ಬ ಕಾಂಗ್ರೆಸ್ ನಾಯಕನೂ ಅವರ ಮನೆಯ ಹತ್ತಿರವೂ ಸುಳಿಯಲಿಲ್ಲ.

ನೆಹರು(ಗಾಂಧಿ) ವಂಶದವರು ಈಗಲೂ ಅರಬೋಗಟ್ಟಲೆ ಅಸ್ತಿಯಮ್ಮ ಹೊಂದಿದ್ದಾರೆ ಆದರೆ ಕಾಂಗ್ರೆಸ್ ಪಕ್ಷ ಸರ್ದಾರ್ ಪಟೇಲರ ನಿಧನದ ಬಳಿಕವೂ ಅವರ ಕುಟುಂಬದ ಜೊತೆ ಹೇಗೆ ವರ್ತಿಸಿದರು ಅನ್ನೋದನ್ನ ನೀವು ಮಣಿಬೆನ್ ಪಟೇಲರ ಈ ದುಸ್ಥಿತಿಯನ್ನ ಕೇಳಿದ ಬಳಿಕ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದಾಗಿದೆ. ಭಾರತ ಸ್ವಾತಂತ್ರ್ಯವಾದ ಬಳಿಕ ಪಟೇಲರನ್ನ ಪ್ರಧಾನಿ ಪಟ್ಟಕ್ಕೆ ಏರುವುದನ್ನ ನೆಹರು ತಡೆದದ್ದರಿಂದ ಹಿಡಿದು ಇತಿಹಾಸದುದ್ದಕ್ಕೂ ಪಟೇಲರನ್ನ ಗಾಂಧಿ ಪರಿವಾರ ದ್ವೇಷಿಸುತ್ತಲೇ ಬಂದಿತ್ತು. ಇಂದು ಪಟೇಲರ ಮೂರ್ತಿಯನ್ನ ಪ್ರಧಾನಿ ಮೋದಿ ಸ್ಥಾಪಿಸಿದರೆ ಅದಕ್ಕೂ ಕಾಂಗ್ರೆಸ್ ಹಾಗು ಕಾಂಗ್ರೆಸ್ ಪ್ರೇರಿತ ಶಕ್ತಿಗಳು ಪಟೇಲರ ಮೂರ್ತಿಯ ವಿರುದ್ಧವೂ ವಿಷವುಗುಳುತ್ತಿರೋದನ್ನ ನೋಡಿದರೆ ಇಂತಹ ರಾಜಕಾರಣವನ್ನ ನೋಡಿದರೆ ಅಸಹ್ಯ ಅನಿಸುತ್ತೆ.

– Vinod Hindu Nationalist

Leave a Reply

Your email address will not be published. Required fields are marked *

error: Content is protected !!