ನರೇಂದ್ರ ಮೋದಿ ಮಾಸ್ಟರ್‌ಸ್ಟ್ರೋಕಗೆ ಪಾಕ್ ನಾಯಕರೇ ಇಮ್ರಾನ್ ಖಾನ್‌ಗೆ ಉಗಿಯುತ್ತಿರೋದು ಹೇಗಂತ ನೋಡಿ

ಲೋಕಸಭಾ ಚುನಾವಣೆ 2019 ರ ಫಲಿತಾಂಶ ಬಂದ ಬಳಿಕ ಪ್ರಧಾನಿ ಮೋದಿಗೆ ಜಗತ್ತಿನ ದಿಗ್ಗಜ ರಾಷ್ಟ್ರಗಳ ನಾಯಕರ ಶುಭಾಷಯಗಳ ಮಹಾಪೂರವೇ ಹರಿದು ಬಂದಿತ್ತು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, ಚೀನಾ ಅಧ್ಯಕ್ಷ ಜಿನ್ ಪಿಂಗ್, ಭೂತಾನ್ ರಾಜ, ನೇಪಾಳದ ಪ್ರಧಾನಿ, ಅಫ್ಘಾನಿಸ್ತಾನದ ಅಧ್ಯಕ್ಷ, ಜಪಾನ್ ಪ್ರಧಾನಿ ಶಿಂಜೋ ಅಬೆ ಹೀಗೆ ಜಗತ್ತಿನ ಹಲವು ನಾಯಕರು ಪ್ರಧಾನಿ ಮೋದಿಗೆ ಶುಭಾಷಯ ಕೋರಿದ್ದರು.

ಆದರೆ ಪಾಕಿಸ್ತಾನದ ವತಿಯಿಂದ ಪ್ರಧಾನಿ ಮೋದಿಗೆ ಯಾವ ಸಂದೇಶವೂ ಬಂದಿರಲಿಲ್ಲ. ಪ್ರಧಾನಿ ಮೋದಿಯ ಭರ್ಜರಿ ಗೆಲುವು ಕಂಡು ಬಹುಶಃ ಪಾಕಿಸ್ತಾನಕ್ಕೆ ಎರಡು ಮೂರು ದಿನಗಳ ಕಾಲ ನಿದ್ದೆ ಬಂದಿಲ್ಲವೆನಿಸುತ್ತೆ. ಮೊನ್ನೆ ಪಾಕಿಸ್ತಾನದ ವಿದೇಶಾಂಗ ಮಂತ್ರಿ ಶಾಹ್ ಮೆಹಮೂದ್ ಖುರೇಷಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಲೋಕಸಭಾ ಚುನಾವಣೆಯ ಭರ್ಜರಿ ಗೆಲುವಿಗೆ ಶುಭಾಷಯಗಳನ್ನ ತಿಳಿಸಿದ್ದಾರೆ. ಜೊತೆ ಜೊತೆಗೆ ಭಾರತ ಪಾಕಿಸ್ತಾನದ ಜೊತೆ ಮಾತುಕತೆ ನಡೆಸುವ ಬಗ್ಗೆಯೂ ಪ್ರಸ್ತಾಪಿಸಿದ್ದರು.

ನರೇ‌ಂದ್ರ ಮೋದಿ ಯಾವಾಗ 2014 ರಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಧಾನಮಂತ್ರಿಯಾಗಿ ಆಯ್ಕೆಯಾದ್ದರೋ ಆಗ ಅವರು ಶಾಂತಿ ಮಾತುಕತೆ ನಡೆಸಲು ಪಾಕಿಸ್ತಾನಕ್ಕೆ ಒಂದು ಚಾನ್ಸ್ ಕೊಟ್ಟಿದ್ದರು ಹಾಗು ಆಗ ಪಾಕ್ ಪ್ರಧಾನಿಯಾಗಿದ್ದ ನವಾಜ್ ಶರೀಫ್ ರನ್ನ ತಮ್ಮ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು.

oನರೇಂದ್ರ ಮೋದಿ ಈಗ ಎರಡನೆಯ ಬಾರಿಗೆ ಮತ್ತೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ ಆದರೆ ಈ ಬಾರಿ ಪಾಕಿಸ್ತಾನಕ್ಕೆ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿಲ್ಲ, ನರೇಂದ್ರ ಮೋದಿಯವರು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ರಿಗೆ ಆಹ್ವಾನವನ್ನ ನೀಡಿಲ್ಲ.

ಈಗ ಪಾಕಿಸ್ತಾನ ಭಾರತದ ಮುಂದೆ ಬಂಡಿಯೂರಿದೆ, ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ, ಪಾಕಿಸ್ತಾನ ಇದೀಗ ಭಾರತದ ಜೊತೆ ಮಾತುಕತೆ ನಡೆಸಲೇಬೇಕು ಎಂಬ ದಾರಿಯನ್ನ ಹುಡುಕುತ್ತಿದೆ ಆದರೆ ಪ್ರಧಾನಿ ಮೋದಿ ಮಾತ್ರ ಪಾಕಿಸ್ತಾನಕ್ಕೆ ಯಾವ ವಿಕಲ್ಪವನ್ನೂ ನೀಡುತ್ತಿಲ್ಲ.

ಇಮ್ರಾನ್ ಖಾನ್‌ಗೆ ಮೋದಿ ಪ್ರಮಾಣವಚನ ಸಮಾಂಭ ಕಾರ್ಯಕ್ರಮದಲ್ಲಿ ಆಹ್ವಾನಿಸಿರದ ಕಾರಣ ಪಾಕಿಸ್ತಾನ ಮೀಡಿಯಾಗಳು ಈಗಾಗಲೇ ಬೆಂಕಿ‌ ಕಾರುತ್ತಿವೆ. ಪಾಕಿಸ್ತಾನ ಸರ್ಕಾರ ಕೂಡ ಇದೀಗ ಬೆಚ್ಚಿಬಿದ್ದರುವುದಲ್ಲದೆ ಪಾಕಿಸ್ತಾನಿ ಮೀಡಿಯಾಗಳಲ್ಲಿ ಈ ವಿಷ್ಯ ಈಗ ರಾಷ್ಟ್ರೀಯ ಚರ್ಚೆಯಾಗಿ ಗಲ್ಲಿಗಲ್ಲಿಗಳಲ್ಲಿ ಭಾರತದ ಈ ನಡೆಯ ಬಗ್ಗೆ ಚರ್ಚೆ ನಡೆಯುತ್ತಿವೆ.

ಈಗ ಈ ವಿಚಾರವಾಗಿ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ್ ಶರೀಫ್ ಮಗಳು ಮರಯನ್ ಶರೀಫ್ ಕೂಡ ಹೇಳಿಕೆ ನೀಡಿದ್ದಾರೆ. ಮರಯನ್ ಶರೀಫ್ ಇದೀಗ ಇಮ್ರಾನ್ ಖಾನ್ ಬಗ್ಗೆ ಟೀಕಿಸುತ್ತ ಹೀಗೆ ಹೇಳಿದ್ದಾರೆ, “ಇಮ್ರಾನ್ ಖಾನ್ ದಿನ ಬೆಳಗಾದರೆ ನರೇಂದ್ರ ಮೋದಿಯವರಿಗೆ ಫೋನ್ ಮಾಡಿ ಮಾತುಕತೆ ನಡೆಸುವಂತೆ ಬೇಡಿಕೊಳ್ಳುತ್ತಿರುತ್ತಾರೆ ಆದರೆ ನರೇಂದ್ರ ಮೋದಿ ಫೋನ್ ಕೂಡ ಪಿಕ್ ಮಾಡಲ್ಲ” ಎಂದಿದ್ದಾರೆ.

ಮರಯನ್ ಶರೀಫ್ ರವರು ಮುಂದೆ ಮಾತನಾಡುತ್ತ ಪಾಕಿಸ್ತಾನದ ಯೋಗ್ಯತೆಯಿಲ್ಲ ಎನ್ನುತ್ತ ಇಮ್ರಾನ್ ಖಾನ್ ವಿರುದ್ದ ವಾಗ್ದಾಳಿ ನಡೆಸುತ್ತ ಇಮ್ರಾನ್ ಖಾನ್ ಪಾಕಿಸ್ತಾನದ ಪರಿಸ್ಥಿತಿಯನ್ನ ಹದಗೆಡಿಸಿದ್ದಲ್ಲದೆ ಪಾಕಿಸ್ತಾನದ ಮಾನ ಮರ್ಯಾದೆ ಹರಾಜು ಹಾಕಿದ್ದಾರೆ ಎಂದಿದ್ದಾರೆ.

ನಿಮ್ಮ ಮಾಹಿತಿಗಾಗಿ ಇಲ್ಲಿ ತಿಳಿಸಬಯಸುವ ವಿಷಯವೇನೆಂದರೆ ನರೇಂದ್ರ ಮೋದಿಯವರು ಯಾವ ರೀತಿಯಲ್ಲಿ ಪಾಕಿಸ್ತಾನದ ಕುರಿತಾಗಿ ಜಗತ್ತಿಗೆ ಸಂದೇಶ ಕೊಟ್ಟಿದ್ದಾರೋ ಅದನ್ನ ನೋಡಿದತರ ಮೋದಿ ತಮ್ಮ ಎರಡನೆಯ ಅಧಿಕಾರಾವಧಿಯಲ್ಲಿ ಪಾಕಿಸ್ತಾನದ ಪರ್ಮನೆಂಟ್ ಟ್ರೀಟಮೆಂಟ್ ಕೊಡುವ ಮೂಡ್ ನಲ್ಲಿದ್ದಾರೆ ಹಾಗು ಈ ಭಯದಿಂದ ಪಾಕಿಸ್ತಾನ ಭಾರೀ ಚಿಂತಾಕ್ರಾಂತವಾಗಿದೆ.

– Team Google Guruu

Leave a Reply

Your e-mail address will not be published. Required fields are marked *

error: Content is protected !!