ಪೇಸ್ ಬುಕ್ ಮಾಲಿಕನಿಂದ ಹೊಚ್ಚ ಹೊಸ ಆವಿಷ್ಕಾರ

ಪ್ರತಿಯೋಂದು ದೇಶದಲ್ಲಿ ತನದೇ ಆದ ಕರೆನ್ಸಿ ಚಲಾವಣೆಯಲಿದ್ದು ಪ್ರತಿಯೊಬ್ಬತಿಗೂ ತಿಳಿದಿರುವ ವಿಷಯ. ಆದರೇ ಈಗ ವಿಶ್ವದ ಅತಿದೊಡ್ಡ ಸಾಮಾಜಿಕ ಜಾಲತಾಣವಾಗಿರುವ ಫೇಸ್‌ಬುಕ್‌, ತನ್ನದೇ ಆದ ಕರೆನ್ಸಿ ಚಲಾವಣೆಗೆ ತರಲು ಉದ್ದೇಶಿಸಿದೆ, ಹೌದು ಫೇಸ್ ಬುಕ್ ತನ್ನ ಸ್ವಂತ ಕರೆನ್ಸಿ ಮಾರುಕಟ್ಟೆಗೆ ತರಲಿದೆಯಂತೆ.

ಈಗಾಗಲೆ ದೇಶದಾದ್ಯಂತ ಆನ್ಲೈನ್ ಪೇಮೆಂಟ್ ಚಾಲ್ತಿಯಲ್ಲಿದ್ದು ನರೇಂದ್ರ ಮೋದಿಯವರ ಮಾಡಿದ ಡಿಮಾನಿಟೈಜೇಷನ್ ಅಂದರೆ ನೋಟ್ ಬಂದ್ ಯೋಜನೆ ಎಲ್ಲರನ್ನೂ ಡಿಜಿಟಲ್ ಇಂಡಿಯಾಗೆ ಪಾದಾರ್ಪಣೆ ಮಾಡುವ ಹಾಗೇ ಮಾಡಿದೆ ಎನ್ನಬಹುದು.

ದೇಶದ ಜನತೆ ಡಿಜಿಟಲ್ ಇಂಡಿಯಾಕ್ಕೆ ಮೊರೆ ಹೋಗುತ್ತಿದ್ದಂತೆ ಎಚ್ಚೆತ್ತ ಫೇಸ್‌ಬುಕ್ ಕಂಪನಿಯ ಮಾಲಿಕ ಮಾರ್ಕ್ ಜೂಕರ್ ಬರ್ಗ್ ಅದನ್ನು ಹೊಸ ಮಾದರಿಯಾಗಿ ಪರಿಚಯಿಸಲು ಮುಂದಾಗಿದ್ದಾರೆ ಎನ್ನಬಹುದು ಈ ಬದಲಾವಣೆ ವಿಶ್ವದಲ್ಲೇ ಪ್ರಪ್ರಥಮವಾಗಿ ಜಾರಿಗೆ ತರಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಡಿಜಿಟಲ್‌ ಕರೆನ್ಸಿ ಬಿಟ್‌ಕಾಯಿನ್‌ ಮಾದರಿಯಲ್ಲಿ  ಜಾಗತಿಕ ಬಳಕೆಗಾಗಿ ಹೊಸ ಕರೆನ್ಸಿ ಸೃಷ್ಟಿಸಿ ಚಲಾವಣೆಗೆ ತರುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಂಸ್ಥೆಯು ಜೂನ್ 18 ರ ಮಂಗಳವಾರ ಪ್ರಕಟಿಸಿದೆ. ಇದರಿಂದ ಫೇಸ್‌ಬುಕ್‌ ತಾಣದಲ್ಲಿ ಇ ಕಾಮರ್ಸ್‌ ವಹಿವಾಟು ಮತ್ತು ಜಾಹೀರಾತುಗಳು ಹೆಚ್ಚಳಗೊಳ್ಳಬಹುದು ಎನ್ನುವುದು ಅದರ ನಿರೀಕ್ಷೆಯಾಗಿದೆ.

ಪೇ ಪಲ್‌, ಉಬರ್‌, ಸ್ಪೂಟಿಫೈ, ವೀಸಾ ಮತ್ತು ಮಾಸ್ಟರ್‌ಕಾರ್ಡ್‌ಗಳ ಸಹಯೋಗದಲ್ಲಿ ಈ ಡಿಜಿಟಲ್‌ ಕರೆನ್ಸಿ ಬಳಕೆಗೆ ತರಲು ಮುಂದಾಗಿದೆ. ಮುಂದಿನ 6 ರಿಂದ ಹನ್ನೆರಡು ತಿಂಗಳಲ್ಲಿ ಚಲಾವಣೆಗೆ ಬರಲಿರುವ ಡಿಜಿಟಲ್‌ ಕರೆನ್ಸಿಗೆ ‘ಲಿಬ್ರಾ’ (Libra) ಎಂದು ನಾಮಕರಣ ಮಾಡಿದ್ದಾರೆ.

ಫೇಸ್‌ಬುಕ್‌ನ 12ಕ್ಕೂ ಹೆಚ್ಚು ಪಾಲುದಾರರು ಈ ಕರೆನ್ಸಿ ಬಳಕೆಗೆ ತರಲು ನೆರವಾಗುತ್ತಿದ್ದಾರೆ. ಈ ಪ್ರಯತ್ನಕ್ಕೆ ಬೇಕಾದ 700 ಕೋಟಿ ನೆರವು ಸುಲಭವಾಗಿ ದೊರೆಯಲಿದೆ ಎಂದು ಫೇಸ್‌ಬುಕ್‌ ನಿರೀಕ್ಷಿಸಿದೆ. ಲಿಬ್ರಾ ವರ್ಗಾವಣೆಗೆ ಹೆಚ್ಚಿನ ಶುಲ್ಕದ ಹೊರೆ ಬೀಳುವುದಿಲ್ಲ.

ಬ್ಯಾಂಕ್‌ ಖಾತೆ ಮತ್ತು ಕ್ರೆಡಿಟ್‌ ಕಾರ್ಡ್‌ ಹೊಂದಿರದ ಲಕ್ಷಾಂತರ ಬಳಕೆದಾರರು ‘ಲಿಬ್ರಾ’ ಬಳಸಿ ಇ ಕಾಮರ್ಸ್‌ ವಹಿವಾಟು ನಡೆಸುವುದು ಸುಲಭವಾಗಿದೆ ಎಂದು ಫೇಸ್‌ ಬುಕ್ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

-Team Google Guru

Leave a Reply

Your e-mail address will not be published. Required fields are marked *

error: Content is protected !!