ಮಾತೆಯ ಚಮತ್ಕಾರ ಕಣ್ಣಾರೆ ಕಂಡು ಆಶ್ಚರ್ಯ ಚಕಿತರಾದ ಜನ

ಭಾರತೀಯರಲ್ಲಿ ದೇವರ ಕುರಿತಾಗಿ ಆಧ್ಯಾತ್ಮಿಕತೆ ಹಾಗು ನಂಬಿಕೆಗೇನು ಕೊರತೆಯಿಲ್ಲ, ಭಾರತೀಯರ ಹಾಗು ಬಹುತೇಕ ಹಿಂದುಗಳ ನಂಬಿಕೆಯಂತೆ ಜಗತ್ತಿನ ಪ್ರತಿಯೊಂದು ವಸ್ತುವಿನ ಕಣ ಕಣದಲ್ಲೂ ದೇವರಿದ್ದಾನೆ ಹಾಗು ಶುದ್ಧ ಅಂತಃಕರಣದಿಂದ ದೇವರನ್ನ ಪ್ರಾರ್ಥಿಸಿದರೆ ಸಾಕ್ಷಾತ್ ಭಗವಂತನೇ ದರ್ಶನ ನೀಡುತ್ತಾನೆ ಹಾಗು ಸ್ವಯಂ ತಾನೇ ಭಕ್ತನ ರಕ್ಷೆಗೆಂದು ಧರೆಗಿಳಿದು ಬರುತ್ತಾನೆ ಎಂಬುದು ನಾವು ಹಿಂದುಗಳ ನಂಬಿಕೆ.

ಇದಕ್ಕೆ ನಮ್ಮ ಕಣ್ಣ ಮುಂದೆಯೇ ವಾರಣಾಸಿ ಹಾಗು ಶಕ್ತಿನಗರದ ಮಧ್ಯೆಯಿರುವ ಡಾಲಾ-ಬಾರಿ ಕ್ಷೇತ್ರದಲ್ಲಿರುವ ವೈಷ್ಣೋದೇವಿ ಮಂದಿರದಲ್ಲಿ ಸಿಗುತ್ತೆ ಸಾಕ್ಷಿ. ಈ ಮಂದಿರದ ಸ್ಥಾಪನೆಯಾದಾಗಿನಿಂದಲೇ ವಿಶೇಷವಾದ ನಂಬಿಕೆ, ಶೃದ್ಧೆ ಈ ಮಂದಿರದ ದೇವರಲ್ಲಿ ಜನರಿಗೆ ಮೂಡಿದೆ. ಈ ದೇವಸ್ಥಾನಕ್ಕೆ ದಿನನಿತ್ಯ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಹಾಗು ದೂರ ದೂರದಿಂದ ಶೃದ್ಧಾಳುಗಳು ಈ ದೇವಸ್ಥಾನಕ್ಕೆ ಪ್ರತಿನಿತ್ಯ ಭೇಟಿ ನೀಡುತ್ತಾರೆ.

ಏನಿದರ ಇತಿಹಾಸ?

ಮಾ ವೈಷ್ಣೋದೇವಿ ಶಕ್ತಿಪೀಠ ಧಾಮದ ಸ್ಥಾಪನೆಯ ಇತಿಹಾಸ ಒಂದು ಆಶ್ವರ್ಯಕರ ಘಟನೆಯ ಮೂಲಕ ಸ್ಥಾಪಿತವಾಗಿದೆ. 2001 ರಲ್ಲಿ ಚೋಪನ್ ನಿವಾಸಿ ಮದನಲಾಲ್ ಗರ್ಗ್ ತಮ್ಮ ಮನೆಯಿಂದ ಕಾರಿನ ಮೂಲಕ ಬಾರಿ ಕ್ಷೇತ್ರದಲ್ಲಿ ತಾವು ಹಾಕಿದ್ದ ಕ್ರಶರ್ ಪ್ಲ್ಯಾಂಟ್ ಕಡೆಗೆ ಬರುತ್ತಿದ್ದ ಸಂದರ್ಭದಲ್ಲೇ ಅಚಾನಕ್ಕಾಗಿ ಅವರ ಕಾರು ಕಿಲ್ಲರ್ ರೋಡ್ ಎಂದೇ ಕುಖ್ಯಾತಿ ಗಳಿಸಿರುವ ವಾರಣಾಸಿ-ಶಕ್ತಿನಗರ್ ಮಾರ್ಗದಲ್ಲಿ ಬರುತ್ತಿದ್ದ ಟ್ರಕ್ ಒಂದಕ್ಕೆ ಗುದ್ದಿಬಿಟ್ಟಿತ್ತು.

ಆ ಅಪಘಾತ ಭಾರೀ ತೀವ್ರವಾಗಿತ್ತು, ಆ ಆ್ಯಕ್ಸಿಡೆಂಟ್ ನೋಡಿದ್ದ ಜನ ಭಾರೀ ಅವಘಡ ಸಂಭವಿಸಿದೆಯೆಂದೇ ಅಂದುಕೊಂಡಿದ್ದರು. ಹಲವಾರು ಗಂಟೆಗಳ ಶ್ರಮದ ಬಳಿಕ ಟ್ರಕ್ ನೊಳಗಡೆ ಸಿಕ್ಲಿಬಿದ್ದಿದ್ದ ಮದನಲಾಲ್ ರವರ ಕಾರನ್ನ ಹೊರತೆಗೆದಾಗ ಕಂಡ ದೃಶ್ಯವನ್ನ ನೋಡಿ ಅಲ್ಲಿದ್ದ ಜನರೆಲ್ಲ ದಂಗಾಗಿಬಿಟ್ಟಿದ್ದರು. ಅಂತಹ ಭಯಾನಕ ಅಪಘಾತವಾದರೂ ಕಾರಿನಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದರು. ಒಬ್ಬರಿಗೂ ಒಂಚೂರೂ ಗಾಯವಾಗಿರಲಿಲ್ಲ.

ಮದನಲಾಲರ ಕಾರನ್ನ ಹೊರ ತೆಗೆಯುತ್ತಿದ್ದಂತೆ ಅವರ ಬಾಯಿಂದ ಮಾ ವೈಷ್ಣೋದೇವಿಯ ಹೆಸರು ಹೊರ ಬಂತು. ಬಳಿಕ ಕ್ರಶರ್ ಅಸೋಸಿಯೇಷನ್ ನ ಸದಸ್ಯರೆಲ್ಲರೂ ಸೇರಿ ವೈಷ್ಣೋದೇವಿಯ ಮಂದಿರ ಕಟ್ಟಲು ಪಣ ತೊಟ್ಟರು. ವಾರಣಾಸಿ ಶಕ್ತಿನಗರ್ ಮಾರ್ಗವನ್ನ ಖುದ್ದು ಸುಪ್ರೀಂಕೋರ್ಟ್ ಕಿಲ್ಲರ್ ರೋಡ ಎಂದು ಕರೆದಿತ್ತು. ಆ ರಸ್ತೆ ಅಪಘಾತಗಳಿಗೆ ಅಷ್ಟು ಕುಖ್ಯಾತವಾದ ರಸ್ತೆಯಾಗಿತ್ತು.

ಇದೇ ಕಾರಣವನ್ನ ಅರಿತ ಮದನಲಾಲ್ ಹಾಗು ಅವರ ಸ್ನೇಹಿತರು ದುರ್ಘಟನೆ ಸಂಭವಿಸಿದ್ದ ಸ್ಥಳದ ಎದುರಿಗೇ ಜಮ್ಮುವಿನಿಂದ ಅಖಂಡ ಜ್ಯೋತಿಯನ್ನ ತಂದಯ ಭವ್ಯ ವೈಷ್ಣೋದೇವಿಯ ಮಂದಿರವನ್ನ ಕಟ್ಟಿಸಿಯೇ ಬಿಟ್ಟರು. ಓ ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ಬರೋಬ್ಬರಿ 3 ವರ್ಷಗಳೇ ತಗುಲಿದ್ದವು.

ಏನಿದರ ವಿಶೇಷತೆ?

ಈ ಕ್ಷೇತ್ರ ಸುತ್ತಲೂ ಪರ್ವತಗಳಿಂದ ಕೂಡಿದ ಹಾಗು ಸೋನ್ ನದಿಯ ದಡದಲ್ಲಿರುವ ಕ್ಷೇತ್ರವಾಗಿದೆ‌. ಸುತ್ತಲೂ ಕಲ್ಲುಗಳೇ ತುಂಬಿರುವ ಹಾಗು ಕ್ರಶರ್ ಪ್ಲ್ಯಾಂಟ್ ಗಳೇ ಇರುವ ಈ ಪ್ರದೇಶದಲ್ಲಿ ದೊಡ್ಡದಾದ ದೇವಸ್ಥಾನದ ನಿರ್ಮಾಣದ ಕಲ್ಪನೆಯನ್ನೂ ಯಾರೂ ಮಾಡಲಾರರು. ಆದರೆ ಯಾವಾಗ ಈ‌ ಮಂದಿರದ ನಿರ್ಮಾಣ ಶುರುವಾಯಿತೋ ಆಗ ಮಾ ವೈಷ್ಣೋದೇವಿಯ ಕೃಪೆಯಿಂದ ಮಂದಿರ ನಿರ್ಮಾಣಕ್ಕಾಗಿ ಹಣ ಹರಿದು ಬಂದಿತು ಹಾಗು ನಿರ್ಮಾಣ ಕಾರ್ಯ ಭರದಿಂದ ಸಾಗುತ್ತ ಹೋಯಿತು.

ದೇವಸ್ಥಾನ ನಿರ್ಮಾಣ ಕಾರ್ಯಕ್ಕಾಗಿ ಹಣದ ಕೊರತೆ ಎದುರಾಗಲೇ ಇಲ್ಲ. ಮಂದಿರ ನಿರ್ಮಾಣ ಕಾರ್ಯಕ್ಕಾಗಿ ಜಮ್ಮುವಿನಿಂದ ಯಾವಾಗ ಅಖಂಡ ಜ್ಯೋತಿಯನ್ನ ಇಲ್ಲಿಗೆ ತರಲಾಯಿತೋ ಆಗ ಅಚಾನಕ್ಕಾಗಿ ಹವಾಮಾನವೇ ಬದಲಾಗಿಬಿಟ್ಟಿತ್ತು. ಒಮ್ಮಿಂದೊಮ್ಮೆಲೇ ಜೋರಾಗಿ ಗಾಳಿ ಬೀಸಲಾರಂಭಿಸಿತ್ತು, ಜೋರಾದ ಮಳೆ, ಗುಡುಗು ಸಿಡಿಲಿನ ಆರ್ಭಟ ಶುರುವಾಗಿತ್ತು. ಇದನ್ನ ಕಂಡ ಅಲ್ಲಿನ ಜನ ನಿಜವಾಗಿಯೂ ಈ ಮಂದಿರದಲ್ಲಿ ಅದ್ಭುತವಾದ ಶಕ್ತಿಯ ಪದಾರ್ಪಣೆಯಾಗಿದೆ ಎಂಬುದು ಅರ್ಥವಾಗಿತ್ತು.

ಗುಹೆಯ ಮೂಲಕ ತೆರಳಬೇಕು ಮಂದಿರಕ್ಕೆ:

ಈ ಮಂದಿರ ಪ್ರವೇಶಿಸಬೇಕಾದರೆ ನೈಸರ್ಗಿಕ ಗುಹೆಯ ಮೂಲಕ ಯಾವ ರೀತಿಯಲ್ಲಿ ಜಮ್ಮುವಿನ ವೈಷ್ಣೋದೇವಿ ಮಂದಿರಕ್ಕೆ ತೆರಳಬೇಕೋ ಅದೇ ರೀತಿಯಲ್ಲಿ ಈ ಮಂದಿರವನ್ನ ಪ್ರವೇಶಿಸಬೇಕಾದರೂ ಗುಹೆಯಿಂದಲೇ ತೆರಳಬೇಕು. ಈ ಗುಹೆ ನೈಸರ್ಗಿಕ ಗುಹೆಯಲ್ಲದಿದ್ದರೂ ಒಂದು ರೀತಿಯಲ್ಲಿ ಅದೇ ರೀತಿಯ ಅನುಭವವನ್ನ ನೀಡುತ್ತದೆ. ಈ ಗುಹೆಯಲ್ಲಿ ತೆರಳಬೇಕಾದರೆ ನಿಮಗೆ ಕಾಡಿನಲ್ಲಿ ತೆರಳಿತ್ತಿರುವಂತೆ, ನಿಮಗೆ ಕಾಡು ಪ್ರಾಣಿಗಳಾದ ಆನೆ, ಚಿರತೆ, ಹುಲಿ, ಮಂಗ, ಹಾವುಗಳ ಪ್ರತಿರೂಪಗಳನ್ನ ಸೃಷ್ಟಿಸಲಾಗಿದ್ದು ಭಕ್ತರು ಒಂದು ಕ್ಷಣ ಹೆದರುತ್ತಾರೆ. ಆದರೆ ಭಕ್ತರಿಗೆ ಹೊಸ ಅನುಭವವಾಗೋದಂತೂ ಸತ್ಯ.

ಮಂದಿರದ ವಾಸ್ತುಶಿಲ್ಪ:

ಮಾ ವೈಷ್ಣೋದೇವಿ ಮಂದಿರ ನಿರ್ಮಾಣದಲ್ಲಿ ವಾಸ್ತುಶಿಲ್ಪದ ಕುರಿತಾಗಿ ವಿಶೇಷವಾಗಿ ಧ್ಯಾನವಹಿಸಲಾಗಿದೆ. ಓರಿಸ್ಸಾ ಪ್ರಾಂತ್ಯದಿಂದ ಬಂದ ಶಿಲ್ಪಕಾರರೊಬ್ಬರಾದ ಆರ್.ಕೆ.ಪರೇರಾ ಮೂಲಕ ಮಂದಿರದ ನಿರ್ಮಾಣ ಕಾರ್ಯವನ್ನ ಮಾಡಿಸಲಾಗಿದೆ. ಒಂದು ದೊಡ್ಡದಾದ ಜಾಗದಲ್ಲಿ ನಿರ್ಮಾಣವಾದ ಈ ದೇವಸ್ಥಾನದಲ್ಲಿ ಮೂರು ಅಂತಸ್ತಿನ ಗುಹೆಯೂ ಇವೆ. ಗುಹೆಯ ನಿರ್ಮಾಣದ ಪ್ರವೇಶದ್ವಾರದಿಂದ ಹಿಡಿದು 724 ವರ್ಗ ಮೀಟರ್ ಕ್ಷೇತ್ರಫಲದಲ್ಲಿ ಈ ದೇವಸ್ಥಾನ ಹರಡಿಕೊಂಡಿದೆ.

ವಾಸ್ತುಶಿಲ್ಪದ ಪ್ರಕಾರ ಮಂದಿರದಲ್ಲಿ ಮಾ ವೈಷ್ಣೋದೇವಿಯನ್ನ ಪ್ರತಿಷ್ಟಾಪಿಸಲಾಗಿದೆ. ಮೊದಲ ಅಂತಸ್ತಿನಲ್ಲಿ ಮಾತಾ ಮಹಾಲಕ್ಷಿ, ಎರಡನೆಯ ಅಂತಸ್ತಿನಲ್ಲಿ ಮಾತಾ ನವದುರ್ಗೆಯನ್ನ ಪ್ರತಿಷ್ಠಾಪಿಸಲಾಗಿದೆ. ಇದರ ಜೊತೆ ಜೊತೆಗೆ ಭಗವಾನ್ ಶಂಕರ, ವೀರ ಹನುಮಾನ್, ಭೈರೋ ಬಾಬಾ, ಮಾತಾ ಗಾಯತ್ರಿ ಹಾಗು ಬ್ರಹ್ಮನನ್ನೂ ಪ್ರತಿಷ್ಠಾಪಿಸಲಾಗಿದೆ.

ಮಂದಿರದ ಅರ್ಚಕರು ಏನಂತಾರೆ?

ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಕಾಂತ್ ತಿವಾರಿಯವರು ಈ ಕುರಿತು ಮಾತನಾಡುತ್ತ ಡಾಲಾ-ಬಾರಿ ಪ್ರದೇಶದಲ್ಲಿರುವ ಮಾತಾ ವೈಷ್ಣೋದೇವಿ ಶಕ್ತಿಪೀಠ ಧಾಮದಲ್ಲಿ ಪ್ರತಿನಿತ್ಯವೂ ದೂರ ದೂರದಿಂದ ಭಕ್ತರು ದರ್ಶನ, ಪೂಜೆ ಮಾಡಲು ಬರುತ್ತಾರೆ. ಇಲ್ಲಿ ಮಾತಾ ಆದಿಶಕ್ತಿಯ ನವರೂಪಗಳ ವಿಶೇಷ ಪೂಜೆಯನ್ನೂ ಮಾಡಲಾಗುತ್ತದೆ‌. ನವರಾತ್ರಿಯ ಸಂದರ್ಭದಲ್ಲಿ ದೇವಸ್ಥಾನಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಶ್ರಧ್ದಾಳುಗಳು ಬರುತ್ತಾರೆ ಹಾಗು ತಮ್ಮ ಇಷ್ಟಾರ್ಥಗಳನ್ನ ದೇವಿಯಲ್ಲಿ ಬೇಡಿಕೊಳ್ಳುತ್ತಾರೆ‌

ಕೃಷ್ಣ ಕುಮಾರ್ ಈ ದೇವಸ್ಥಾನದ ಬಗ್ಗೆ ಮಾತನಾಡುತ್ತ ವಾರಣಾಸಿ ಶಕ್ತಿನಗರ್ ಹೈವೇ ಮಧ್ಯೆ ಈ ಮಂದಿರವಿರುವ ಕಾರಣ ಝಾರ್ಖಂಡ್, ಬಿಹಾರ್, ಮಧ್ಯಪ್ರದೇಶ ದಿಂದಲೂ ಭಕ್ತಾದಿಗಳು ಆಗಮಿಸುತ್ತಾರೆ ಹಾಗು ಪೂಜಾ ಅರ್ಚನೆಯನ್ನೂ ಮಾಡಿಸುತ್ತಾರೆ‌. ಪ್ರತಿನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ದರ್ಶನಾರ್ಥಿಗಳು ದರ್ಶನ, ಪೂಜೆ ಮಾಡಿಸುತ್ತಾರೆ. ಇದು ದೂರದ ಉತ್ತರಪ್ರದೇಶದ ಮಾ ವೈಷ್ಣೋದೇವಿ ಮಂದಿರ, ಅಷ್ಟು ದೂರ ನಿಮಗೆ ಹೋಗಲು ಆಗದೆ ಇದ್ದರೆ ನಮ್ಮ ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯಲ್ಲೂ ಇದೇ ರೀತಿಯ ಮಾ ವೈಷ್ಣೋದೇವಿ ದೇವಸ್ಥಾನವನ್ನ ನಿರ್ಮಿಸಲಾಗಿದೆ.

ಮೇಲೆ ಹೇಳಿದ ದೇವಸ್ಥಾನದ ಪ್ರತಿಯೊಂದು ಅಂಶವನ್ನೂ ನೀವು ಕಲಬುರಗಿಯಲ್ಲಿ ನಿರ್ಮಿಸಲಾಗಿರುವ ವೈಷ್ಣೋದೇವಿ ಮಂದಿರದಲ್ಲಿ ಕಾಣಬಹುದಾಗಿದೆ. ಜಮ್ಮು ಗೆ ತೆರಳಿ‌ ಅಥವ ವಾರಣಾಸಿಗೆ ಹೋಗಲು ಆಗದವರು ಕಲಬುರಗಿಗೆ ಬಂದು ದರ್ಶನ ಪಡೆಯಬಹುದಾಗಿದೆ.

– Team Google Guruu

Leave a Reply

Your e-mail address will not be published. Required fields are marked *

error: Content is protected !!