ಗುಡ್ ನ್ಯೂಸ್: ಇನ್ನುಮುಂದೆ ತೈಲ ಬೆಲೆ ಏರಿಕೆಯಾಗಲ್ಲ

ಕಚ್ಚಾ ತೈಲದಲ್ಲಿ ನಿರಂತರವಾಗಿ ಕುಸಿತ ಕಾಣುವ ಲಕ್ಷಣಗಳು ಸದ್ಯಕ್ಕೆ ನಿಲ್ಲುವ ಸೂಚನೆಗಳು ಕಾಣುತ್ತಿಲ್ಲ. ಕಚ್ಚಾ ತೈಲವನ್ನ ಹೊರ ತೆಗೆದು ಜಗತ್ತಿನ ರಾಷ್ಟ್ರಗಳಿಗೆ ರಫ್ತು ಮಾಡುವ ತೈಲ ರಾಷ್ಟ್ರಗಳು ಹಾಗು ತೈಲ ರಾಷ್ಟ್ರಗಳ ಒಕ್ಕೂಟವಾದ ಓಪೆಕ್(OPEC) ಇನ್ನು ಮುಂದೆ ತಮ್ಮ ದೇಶದಲ್ಲಿ ಕಚ್ಚಾ ತೈಲ ಹೊರೆತೆಗೆಯುವ ಅಥವ ಕಡಿಮೆಗೊಳಿಸುವ ನಿರ್ಧಾರ‌ಕೈಗೊಳ್ಳುವ ಮುನ್ನ ಪ್ರಧಾನಿ ಮೋದಿ ಸಮೇತ ವಿಶ್ವ ನಾಯಕರ ಸಲಹೆಗಳನ್ನೂ ಕೇಳಿ ಮುಂದುವರೆಯಲಿದೆ.


ಅತ್ತ ಸೌದಿ ಅರೇಬಿಯಾದ ಪೆಟ್ರೋಲಿಯಂ ಮಂತ್ರಿ ಖಾಲಿದ್ ಅಲ್-ಫಲೀಹ್ ವಿಯೆಟ್ನಾಂ ನಲ್ಲಿ ನಡೆದ ಓಪೆಕ್ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಇಲ್ಲ, ನಾನು ತೈಲ ಉತ್ಪಾದನೆಯಲ್ಲಿ ಇಳಿಕೆ ಮಾಡುವ ವಿಚಾರದ ಕುರಿತಾದ ಒಪ್ಪಂದದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇದರರ್ಥ ತೈಲ ಉತ್ಪಾದನೆಯಲ್ಲಿ ಕಡಿತ್ ಬಗ್ಗೆ ಸದಸ್ಯ ರಾಷ್ಟ್ರಗಳಲ್ಲಿ ಇನ್ನೂ ಸಹಮತ ಮೂಡಿಲ್ಲ‌. ಇದನ್ನೆದುರಿಸುವುದೇ ನಮಗೆ ದೊಡ್ಡ ಸವಾಲಾಗಿದೆ” ಎಂದಿದ್ದಾರೆ.

ಸೌದಿ ಅರಬ್ ನ ತೈಲ ಸಚಿವ ಖಲೀಲ್ ಅಲ್-ಫಲೀಹ್ ಗುರುವಾರದಂದು ಮಾತನಾಡುತ್ತ ತೈಲ ಉತ್ಪಾದನಾ ರಾಷ್ಟ್ರಗಳ ಸಂಘಟನೆಯ ಒಕ್ಕೂಟವಾದ ಒಪೆಕ್ ಸಂಸ್ಥೆ ನಿರಂತರವಾಗಿ ಕುಸಿತ ಕಾಣುತ್ತಿರುವ ಕಚ್ಚಾ ತೈಲ ಬೆಲೆಯನ್ನ ತಡೆಯಲು ಈ ಕುರಿತು ವಿಚಾರ ನಡೆಸಲಿದ್ದು ಇದಕ್ಕೂ ಮೊದಲು ಭಾರತದ ಪ್ರಧಾನಿ ನರೇಂದ್ರ ಮೋದಿ ಸಮೇತ ವಿಶ್ವ ನಾಯಕರು ನೀಡಿರುವ ಸಲಹೆ ಸೂಚನೆಗಳನ್ನೂ ವಿಮರ್ಶಿಸಲಿದ್ದೇವೆ ಎಂದಿದ್ದಾರೆ.

ಜಗತ್ತಿನ ಅತಿ ಹೆಚ್ಚು ತೈಲ ಬಳಕೆ ಮಾಡುವ ರಾಷ್ಟ್ರದಲ್ಲಿ ಅತಿ ದೊಡ್ಡ ರಾಷ್ಟ್ರ ಭಾರತ ಮೂರನೆಯ ಸ್ಥಾನ ಪಡೆದಿದೆ‌. ಭಾರತ ತನ್ನ 80% ದಿನಬಳಕೆಯ ಕೆಲಸಗಳನ್ನ ಪೂರ್ಣಗೊಳಿಸಲು ಪೆಟ್ರೋಲ್ ಡೀಸೆಲ್ ಮೇಲೆಯೇ ಅವಲಂಬಿತವಾಗಿದೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಅವರು ವಿಶ್ವ ನಾಯರನ್ನೊಳಗೊಂಡ ಸಭೆಯಲ್ಲಿ ಒಪೆಕ್ ಸಂಸ್ಥೆ ಕಚ್ಚಾ ತೈಲದ ಬೆಲೆಯನ್ನ ಕಡಿಮೆಗೊಳಿಸುವ ಹಾಗು affordable price ನೀಡಬೇಕು ಎಂದು ಹೇಳಿದ್ದರು. 

ಪೆಟ್ರೋಲಿಯಂ ಉತ್ಪಾದನಾ ರಾಷ್ಟ್ರಗಳ ಒಕ್ಕೂಟ (OPEC) ನ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಫಲೀಹ್ ರವರು “ನಾವು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಸಲಹೆ ಸೂಚನೆಗಳನ್ನ ಗಂಭೀರವಾಗಿ ಪರಿಗಣಿಸಿದ್ದೇವೆ. ನಾವು G20 ಸಮ್ಮೇಳನದ ಮೂಲಕ ಅವರನ್ನ ಬ್ಯೂನಸ್ ಆಯರ್ಸ್ ನಲ್ಲಿ ಭೇಟಿಯಾಗಿದ್ದೆವು. ಆಗ ಅವರು(ಪ್ರಧಾನಿ ಮೋದಿ) ನಮಗೆ ತಮ್ಮ ದೇಶದ ಸಮಸ್ಯೆಗಳಲ್ಲೊಂದಾದ ಪೆಟ್ರೋಲ್ ಡಿಸೇಲ್ ಬೆಲೆಯೇರಿಕೆಯ ಕುರಿತಾಗಿ ಹಾಗು ಕಚ್ಚಾ ತೈಲ ಬೆಲೆ ಇಳಿಕೆ ಮಾಡಿ ಎಂಬುದರ ಕುರಿತಾಗಿ ಸ್ಪಷ್ಟವಾಗಿ ತಿಳಿಸಿದ್ದರು” ಎಂದಿದ್ದಾರೆ.

ಮುಂದೆ ಮಾತನಾಡುತ್ತ ಅವರು ಪ್ರಧಾನಿ ಮೋದಿ ಭಾರತೀಯ ನಾಗರಿಕರ ಬೇಕು ಬೇಡಗಳ ಬಗ್ಗೆ ತುಂಬಾ ಸ್ಪಷ್ಟವಾಗಿದ್ದಾರೆ, ಅವರಿಗೆ ತಮ್ಮ ದೇಶದ ಜನರ ಹಿತ ಬಹುಮುಖ್ಯ ಅನ್ನೋದನ್ನ ನಮಗರ ತಿಳಿಸಿದ್ದಾರೆ. ನಾನು ಭಾರತದಲ್ಲಿ ಅವರ ಜೊತೆ ಮೂರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ. ಅವರು ಭಾರತೀಯ ಜನರ ಪರ ಎಷ್ಟು ಕಾಳಜಿಯಿಂದ ಕೆಲಸ ಮಾಡುತ್ತಾರೆ ಅನ್ನೋದು ನನಗೆ ಅರ್ಥವಾಗಿತ್ತು” ಎಂದಿದ್ದಾರೆ.

ಸೌದಿ ಅರಬ್ ನ ಪೆಟ್ರೋಲಿಯಂ ಸಚಿವರಾದ ಖಲಿಲ್ ಅಲ್-ಫಲಹ್ ಮುಂದೆ ಮಾತನಾಡುತ್ತ “ರಷ್ಯಾದ ಸಚಿವರಾದ ಅಲೆಗ್ಸಾಂಡರ್ ನೋವಾಕ್ ರವರು ಸೆಂಟ್ ಪೀಟರ್ಸ್‌ಬರ್ಗ್ ನಲ್ಲಿ ಗುರುವಾರ ಮಾತನಾಡುತ್ತ ಜಲವಾಯು ಪರಿಸ್ಥಿತಿಯ ಕಾರಣಗಳಿಂದಾಗಿ ಅನ್ಯ ದೇಶಗಳ ಹೋಲಿಕೆಯಲ್ಲಿ ನಾವು ಕಚ್ಚಾ ತೈಕ ಉತ್ಪಾದನೆಯನ್ನ ಕಡಿತಗೊಳಿಸೋಕೆ ಕಷ್ಟ ಸಾಧ್ಯ ಅಂತ ತಿಳಿಸಿದ್ದರು” ಎಂದಿದ್ದಾರೆ.

ಜಗತ್ತಿನ ಹಲವಾರು ರಾಷ್ಟ್ರಗಳಿಗೆ ಕಚ್ಚಾ ತೈಲ ರಫ್ತು ಮಾಡುವ ಶ್ರೀಮಂತ ರಾಷ್ಟ್ರಗಳು ಇಂದು ಪ್ರಧಾನಿ ಮೋದಿಯವರನ್ನ ಸಂಪರ್ಕಿಸಿ, ಅವರ ಸಲಹೆ ಸೂಚನೆಗಳನ್ನ ಪಡೆಯದೆ ಕಚ್ಚಾ ತೈಲ ಬೆಲೆಯೇರಿಕೆಯಾಗಲಿ ಅಥವ ಕಚ್ಚಾ ತೈಲ ಉತ್ಪಾದನೆಯನ್ನ ಕಡಿತಗೊಳಿಸುವ ಯಾವ ನಿರ್ಧಾರವನ್ನೂ ಕೈಗೊಳ್ಳಲ್ಲ ಅಂರ ಹೇಳುತ್ತಿರೋದನ್ನ ನೋಡಿದರೆ ಪ್ರಧಾನಿ ಮೋದಿ ಒಬ್ಬ ವಿಶ್ವನಾಯಕರಾಗಿ ಜಗತ್ತಿಗೆ ಕಾಣುತ್ತಿದ್ದಾರೆ ಎಂದರೆ ಅದು ಭಾರತೀಯರಿಗೆ ಹೆಮ್ಮೆಯ ವಿಷಯವಲ್ಲದೆ ಮತ್ತಿನ್ನೇನು?

– Vinod Hindu Nationalist

Google Guruu ©2018 Copyrights Reserved

Leave a Reply

Your e-mail address will not be published. Required fields are marked *

error: Content is protected !!