ಜಗತ್ತಿನ ಸವಾಲುಗಳನ್ನು ಎದುರಿಸಲು ಜಿ 20 ಶೃಂಗಸಭೆಯಲ್ಲಿ ಮೋದಿ ಮಂಡಿಸಿದ ಮಹತ್ತರ ವಿಚಾರಗಳೇನು.?

ಜಪಾನ್ ಶೃಂಗ ಸಭೆಯಲ್ಲಿ ಭಾಗವಹಿಸಿದ್ದ ನರೇಂದ್ರ ಮೋದಿ ಮೊದಲಿಗೆ ಜಪಾನ್‌ನಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರ ಪರವಾಗಿ ಮಾತನಾಡಿ ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಜಪಾನ್ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದ್ದಾರೆ. ಭಾರತ ಮುಂದಿನ ಐದು ವರ್ಷಗಳಲ್ಲಿ ಐದು ಟ್ರಿಲಿಯನ್ ಆರ್ಥಿಕವಾಗಿ ಬೆಳೆಯುವ ಗುರಿ ಹೊಂದಿದೆ ಇದಕ್ಕಾಗಿ ಭಾರತ ಜಪಾನ್ ಮಹತ್ತರ ಪಾತ್ರ ವಹಿಸಿಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಾಗತಿಕ ಸವಾಲುಗಳನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಐದು ಅಂಶಗಳ ವಿಧಾನವನ್ನು ಮಂಡಿಸಿದರು. ಜಿ 20 ಶೃಂಗಸಭೆಯ ಹೊರತಾಗಿ ಜಪಾನ್‌ನ ಒಸಾಕಾದಲ್ಲಿ ನಡೆದ ಅನೌಪಚಾರಿಕ ಬ್ರಿಕ್ಸ್ ನಾಯಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಮೂರು ಪ್ರಮುಖ ಸವಾಲುಗಳತ್ತ ಗಮನ ಹರಿಸುವುದಾಗಿ ಹೇಳಿದರು. 

ಮೊಟ್ಟ ಮೊದಲನೆಯದಾಗಿ, ವಿಶ್ವ ಆರ್ಥಿಕತೆಯಲ್ಲಿ ಆರ್ಥಿಕ ಹಿಂಜರಿತ ಮತ್ತು ಅನಿಶ್ಚಿತತೆ” ಎಂದು ಅವರು ಹೇಳಿದರು. ಮುಂದೆ, ಡಿಜಿಟಲೀಕರಣ ಮತ್ತು ಹವಾಮಾನ ಬದಲಾವಣೆಯಂತಹ ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನಗಳ ಕುರಿತು ಅವರು ಮಾತನಾಡಿದರು, ಇದು ಭವಿಷ್ಯದ ಪೀಳಿಗೆಗೆ ಇದೊಂದು ಪ್ರಮುಖ ಕಾಳಜಿ ಸಂಗತಿಯಾಗಿದೆ.

ಹಾಗೂ ಭಯೋತ್ಪಾದನೆ ಎಲ್ಲಾ ಮಾನವೀಯತೆಗೆ ಬಹು ದೊಡ್ಡ ಅಪಾಯವಾಗಿದೆ ಎಂದು ಅವರು ಹೇಳುವ ಮೂಲಕ ಇದು ಮುಗ್ಧ ಜನರ ಜೀವನವನ್ನು ತೆಗೆದುಕೊಳ್ಳುವುದು ಮಾತ್ರವಲ್ಲದೇ ಆರ್ಥಿಕ ಅಭಿವೃದ್ಧಿ ಮತ್ತು ಕೋಮು ಸೌಹಾರ್ದತೆಯ ಮೇಲೂ ಪರಿಣಾಮ ಬೀರುತ್ತದೆ. ಭಯೋತ್ಪಾದನೆ ಮತ್ತು ವರ್ಣಭೇದ ನೀತಿಗೆ ಬೆಂಬಲ ನೀಡುವ ಎಲ್ಲಾ ಮಾಧ್ಯಮಗಳನ್ನು ನಾವು ನಿಲ್ಲಿಸಬೇಕು ಎಂದು ಬ್ರಿಕ್ಸ್ ರಾಷ್ಟ್ರಗಳಲ್ಲಿ ಮನವಿ ಮಾಡಿಕೊಂಡರು.

ಕಾರು ಉತ್ಪಾದನೆಯಿಂದ ಹಿಡಿದು ಬುಲೆಟ್ ರೈಲು ಉತ್ಪಾದನೆಯವರೆಗೂ ಭಾರತ ಜಪಾನ್ ಒಟ್ಟಿಗೆ ಸೇರಿ ಕಾರ್ಯ ನಿರ್ವಹಿಸಲಿವೆ ಹಾಗೂ ಭಾರತ ಜಪಾನ್ ದ್ವಿಪಕ್ಷೀಯ ಸ್ನೇಹ ಸಂಬಂಧ ಗಟ್ಟಿಯಾಗಿದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಜಿ 20 ಶೃಂಗಸಭೆಯಲ್ಲಿ ಬಹಿರಂಗವಾಗಿ ಹೇಳಿದ್ದಾರೆ.

ಒಂದು ಕಾಲದಲ್ಲಿ ಭಾರತ ಕಾರು ಉತ್ಪಾದನೆಗಾಗಿ ಜಪಾನ್ ಜೊತೆ ಕೈ ಜೋಡಿಸಿದ್ದೆವು ಆದರೆ ಇಂದು ಬುಲೆಟ್ ರೈಲು ನಿರ್ಮಿಸಲು ಒಟ್ಟಾಗಿ ನಿಂತಿದ್ದೆವೆ ಜಪಾನ್ ಗೆ ಭಾರತದ ಮಾನವ ಶಕ್ತಿಯಿಂದ ಅಭಿವೃದ್ಧಿಯತ್ತ ಕರೆದೊಯ್ಯುತ್ತಿದೆ ಎಂದು ಭಾರತದ ಜನಸಂಖ್ಯೆಯ ಕುರಿತು ಮೋದಿ ಉಲ್ಲೆಖಿಸಿದ್ದಾರೆ.

-Team Republic Kannada

Leave a Reply

Your e-mail address will not be published. Required fields are marked *

error: Content is protected !!