ಎರಡನೇ ಬಾರಿ ಪ್ರಧಾನಿಯಾದ ಬೆನ್ನಲ್ಲೆ ರೈತರಿಗೆ ಬಿಗ್ ಗಿಫ್ಟ್ ಕೊಟ್ಟ ಮೋದಿ ಸರಕಾರ;

ಕರ್ನಾಟಕದಲ್ಲಿ ಸಾಲ ಮನ್ನಾ ಅಸ್ತ್ರ ಬಳಸಿದ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರಕಾರಗಳು ಅಧಿಕಾರಕ್ಕೆ ಬಂದು ಆರು ತಿಂಗಳಾದರು ಇನ್ನೂ ಎಲ್ಲಾ ರೈತರಿಗೆ ಋಣಮುಕ್ತ ಪತ್ರ ನೀಡುವಲ್ಲಿ ವಿಫಲವಾಗಿವೆ, ರಾಜ್ಯ ಸರಕಾರ ಮಾಡಲಾಗದಂತಹ ಇಂತಹ ಯೋಜನೆಗಳು ಕೇಂದ್ರ ಸರಕಾರ ದಿಢಿರ್ ಆಗಿ ಕೈಗೊಂಡು ರೈತರಗೆ ಬಂಪರ್ ಆಫರ್ ನೀಡಿದೆ.

ಕಳೆದ ಬಾರಿ ಪ್ರಧಾನಿ ಮೋದಿ ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದಲು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಲೇ ಬಂದಿದ್ದಾರೆ, ದೇಶದಲ್ಲಷ್ಟೆ ಅಲ್ಲದೆ ವಿದೇಶದಕ್ಕೆ ಭೆಟಿ ನೀಡುವ ಮೂಲಕ ಭಾರತವನ್ನು ಸಧೃಢ ರಾಷ್ಟ್ರವನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ, ಬಾರತದಲ್ಲಿಯೂ ಅನೇಕ ಯೋಜನೆಗಳು ಜನರ ಏಳಿಗೆಗಾಗಿ ಕೈಗೊಂಡಿದ್ದಾರೆ.

ಪ್ರಧಾನಿ ಮೋದಿಯವರು, ನಿರಂತರ ಜ್ಯೋತಿ, ಕುಟುಂಬ ಕಲ್ಯಾಣ ಇಲಾಖೆ, ವಯಸ್ಕರಿಗೆ ತಿಂಗಳ ಮಾಷಾಸನ, ಫಸಲ್ ಭಿಮಾ ಯೋಜನೆಯಂತಹ ಅನೇಕ ಯೋಜನೆಗಳು ಜನರ ಅನುಕೂಲಕ್ಕಾಗಿ ಜಾರಿಗೆ ತಂದಿದ್ದಾರೆ, ಇದೀಗ ರೈತರ ಆದಾಯ ದ್ವಿಗುಣಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಮೋದಿ ಅದೇಷ್ಟೋ ಯೋಜನೆಗಳು ಬಡವರ, ರೈತರ ಪರವಾಗಿ ಯೋಜನೆಗಳು ರೂಪಿಸಿದರು ಕೂಡ ಅವುಗಳ ಮಾಹಿತಿ ಹಾಗೂ ಯೋಜನೆಯ ಲಾಭ ಜನರಿಗೆ ತಲುಪಿಸುವಲ್ಲಿ ರಾಜ್ಯ ಬಿಜೆಪಿ ನಾಯಕರು ವಿಫಲರಾಗಿದ್ದಾರೆ ಹಿಗಾಗಿ ಮೋದಿ ನೇರವಾಗಿ ರೈತರನ್ನು ಸಂಪರ್ಕ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ರೈತರನ್ನು ನೇರವಾಗಿ ತಲುಪಲಿರುವ ಕೇಂದ್ರ ಮೋದಿ ಸರಕಾರ ರೈತರ ಖಾತೆಗೆ ನೇರವಾಗಿ ಹಣ ಹಾಕುವ ಮೂಲಕ ಕಮಿಷನ್ ದಂಧೆಕೋರರ ಜೇಬಿಗೆ ಕತ್ತರಿ ಹಾಕಿದ್ದಾರೆ ಎನ್ನಬಹುದು. ಕಳೆದ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿದ್ದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಎಲ್ಲಾ ರೈತರಿಗೆ ವಿತರಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.

ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಮೊದಲ ಸಂಪುಟ ಸಭೆಯಲ್ಲಿ ಎಲ್ಲಾ ರೈತರಿಗೆ ವಾರ್ಷಿಕ 6000 ರೂ. ನೆರವು ನೀಡುವ ಯೋಜನೆಯನ್ನು ವಿಸ್ತರಿಸಲು ತೀರ್ಮಾನಿಸಲಾಗಿದೆ. ವಾರ್ಷಿಕ 6000 ರೂ.ಗಳನ್ನು 3 ಕಂತುಗಳಲ್ಲಿ ರೈತರ ಖಾತೆಗೆ ಜಮೆ ಮಾಡಲಾಗುತ್ತಿದ್ದಾರೆ ಇದರಿಂದ ರೈತರಿಗೆ ಸಂಪೂರ್ಣ ಮೊತ್ತ ಕೈತಲುಪಲಿದೆ.

ಈಗಾಗಲೇ ಸಣ್ಣ ಅತಿ ಸಣ್ಣ ರೈತರಿಗೆ ಮೊದಲ ಮತ್ತು ಎರಡನೇ ಕಂತಿನ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಇದೆ ವೇಳೆ ಮಹತ್ವದ ಪ್ರಧಾನಮಂತ್ರಿ ಕಿಸಾನ್ ಪಿಂಚಣಿ ಯೋಜನೆಗೆ ಕೇಂದ್ರ ಸಂಪುಟ ಸಭೆ ಅನುಮೋದನೆ ನೀಡಿದೆ. 60 ವರ್ಷ ವಯಸ್ಸು ಮೀರಿದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾಸಿಕ 3000 ರೂ. ಪಿಂಚಣಿ ನೀಡುವ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಎರಡನೇ ಬಾರಿ ಮೋದಿ ಪ್ರಧಾನಿಯಾದ ನಂತರ ರೈತರಿಗೆ ಮೊದಲ ಆದ್ಯತೆ ನೀಡಿರುವುದು ದೇಶದ ಬೆನ್ನೆಲೆಬು ಗಟ್ಟಿಗೊಳಿಸುತ್ತಿದ್ದಾರೆ ಎನ್ನಬಹುದು. ಅಂದುಕೊಂಡಂತೆ ಎಲ್ಲವೂ ನಡೆದರೆ ಶೀಘ್ರವೇ ಯೋಜನೆ ಜಾರಿಗೆ ತರಲಾಗುವುದು ಎಂದು ಹೇಳಲಾಗಿದೆ.

-Team Google Guru

Leave a Reply

Your email address will not be published. Required fields are marked *

error: Content is protected !!