70 ವರ್ಷಗಳಲ್ಲಿ ಆಗದ ‘ಈ’ ಕೆಲಸವನ್ನ ಫಟಾಪಟ್ಟಂತ ಮಾಡಿ ಮುಗಿಸಿದ ಪ್ರಧಾನಿ ಮೋದಿ

ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಂತೆಂಥಾ ಕೆಲಸಗಳನ್ನ ಮಾಡಿದೆಯೆಂದರೆ ಆ ಯೋಜನಾ ಕಾರ್ಯಗಳು ಭಾರತ ಸ್ವಾತಂತ್ರ್ಯವಾದಾಗಿನಿಂದಲೂ ದೇಶ ಕಂಡಿರಲಿಲ್ಲ‌. ಕಳೆದ ಐದು ವರ್ಷಗಳ ಆಡಳಿತದಲ್ಲಿ ಪ್ರಧಾನಿ ಮೋದಿ ದೇಶದ ಅಭ್ಯುದಯಕ್ಕಾಗಿ ಹಲವಾರು ಮಹತ್ವದ ನಿರ್ಧಾರಗಳನ್ನ ಕೈಗೊಂಡಿದ್ದಲ್ಲದೆ ಅವುಗಳನ್ನ ಸಾಕಾರಗೊಳಿಸುವಲ್ಲೂ ಯಶಸ್ವಿಯಾಗಿದ್ದಾರೆ.

ಅಂಥವುಗಳಲ್ಲಿ ಒಂದು ಎಂದರೆ ಅದು ‘ಮೇಕ್ ಇನ್ ಇಂಡಿಯಾ’ ಯೋಜನೆ, ಹೌದು ಈ ಯೋಜನೆಯ ಮೂಲಕ ಭಾರತದಲ್ಲೇ ವಸ್ತುಗಳನ್ನ ಉತ್ಪಾದಿಸಲಾಗುತ್ತೆ, ಭಾರತದ ಸ್ಥಿತಿ ಈ ಹಿಂದೆ ಹೇಗಿತ್ತೆಂದರೆ ಭಾರತ ಹೊರ ರಾಷ್ಟ್ರಗಳಿಂದ ಹಲವಾರು ವಸ್ತುಗಳನ್ನ ಆಮದು (import) ಮಾಡಿಕೊಳ್ಳುತ್ತಿತ್ತು, ಇದರಿಂದ ನಮ್ಮ ದೇಶದ ಹಣ ಹೊರ ರಾಷ್ಟ್ರಗಳಿಗೆ ಹರಿದು ಹೋಗುತ್ತಿತ್ತು. ಯಾವ ದೇಶ ಅತಿ ಹೆಚ್ಚು ಆಮದು ಮಾಡಿಕೊಳ್ಳುತ್ತೋ ಆ ರಾಷ್ಟ್ರದ ಆರ್ಥಿಕತೆ ಮೇಲೇಳುವುದೇ ಇಲ್ಲ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.

ಆದರೆ ಪ್ರಧಾನಿ ಮೋದಿಗೂ ಮೊದಲು ಯಾವ ಸರ್ಕಾರಗಳೂ ಈ ನಿಟ್ಟಿನಲ್ಲಿ ಯೋಚಿಸಿಯೇ ಇರಲಿಲ್ಲ,‌ ಮೋದಿ ಅಧಿಕಾರಕ್ಕೆ ಬಂದ ತಕ್ಷಣವೇ ಮೇಕ್ ಇನ್ ಇಂಡಿಯಾ ಯೋಜನೆ ಶುರು ಮಾಡಿದ್ದರು. ಮೋದಿಯವರ ಈ ಯೋಜನೆಯ ಬಗ್ಗೆ ವಿರೋಧಪಕ್ಷಗಳು ಸಾಕಷ್ಟು ಲೇವಡಿ ಮಾಡಿದ್ದವು ಹಾಗು ಮೇಕ್ ಇನ್ ಇಂಡಿಯಾ ಯೋಜನೆಯನ್ನ ಜೋಕ್ ಎಂದು ಹೇಳಿ ಪ್ರಧಾನಿ ಮೋದಿಯವರನ್ನ ಅಪಮಾನಗೊಳಿಸಲು ಸಾಕಷ್ಟು ಪ್ರಯಾಸಗಳನ್ನ ನಡೆಸಿದ್ದವು.

ಆದರೆ ಮೇಕ್ ಇನ್ ಇಂಡಿಯಾದ ಮ್ಯಾಜಿಕ್ ಈಗ ಜನರಿಗೆ ಕಾಣುತ್ತಲಿದೆ, ಭಾರತ ಯಾವ ವಸ್ತುಗಳನ್ನ ವಿದೇಶಗಳಿಂದ ಖರೀದಿಸುತ್ತಿತ್ತೋ ಈಗ ಅದೇ ವಸ್ತುಗಳನ್ನ ತನ್ನ ನೆಲದಲ್ಲೇ ಉತ್ಪಾದಿಸಿ ಹೊರ ರಾಷ್ಟ್ರಗಳಿಗೆ ರಫ್ತು (Export) ಮಾಡುವಲ್ಲಿ ಯಶಸ್ವಿಯಾಗಿದೆ. ಈಗ ನಮ್ಮ ದೇಶದ ಹಣ ನಮ್ಮಲ್ಲೇ ಇರಲಿದೆ ಹಾಗು ಹೊರ ರಾಷ್ಟ್ರಗಳ ಹಣ ಕೂಡ ಭಾರತಕ್ಕೇ ಹರಿದು ಬರಲಿದೆ. ಇದರಿಂದ ಭಾರತದ ಆರ್ಥಿಕತೆ ಬಲಿಷ್ಟವಾಗಲಿದ್ದು ಭಾರತ ಕೂಡ ಸೂಪರ್ ಪವರ್ ರಾಷ್ಟ್ರಗಳ ಸ್ಥಾನಕ್ಕೇರಲಿದೆ‌.

ಮೇಕ್ ಇನ್ ಇಂಡಿಯಾ ಯೋಜನೆಯಡಿ ಭಾರತವು ಉತ್ತಮ ಕ್ವಾಲಿಟಿಯ ಮೆಟ್ರೋ ಟ್ರೇನ್ ಕೋಚ್(ಬೋಗಿ) ರೆಡಿ ಮಾಡಿತ್ತು ಹಾಗು ಇದೀಗ ಭಾರತ ಈ ಮೆಟ್ರೋ ಕೋಚ್ ಗಳನ್ನ ವಿದೇಶಗಳಿಗೆ ರಫ್ತು ಮಾಡುವಲ್ಲೂ ಯಶಸ್ವಿಯಾಗಿದೆ. ಭಾರತ ಇದೀಗ ಆಸ್ಟ್ರೇಲಿಯಾಗೆ ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ನಿರ್ಮಿಸಲಾದ ಮೆಟ್ರೋ ಟ್ರೇನ್ ಕೋಚ್ ಗಳನ್ನ ರಫ್ತು(export) ಮಾಡಿದೆ ಹಾಗು ಈಗ ಆ ಕೋಚ್‌ ಗಳು ಈಗಾಗಲೇ ಆಸ್ಟ್ರೇಲಿಯಾದಲ್ಲಿ ಚಲಿಸಲು ಆರಂಭಿಸಿವೆ.

ಆಸ್ಟ್ರೇಲಿಯಾ ಭಾರತ ನಿರ್ಮಿಸಿರುವ ಮೆಟ್ರೋ ಕೋಚ್ ಗಳ ಗುಣಮಟ್ಟವನ್ನ ಪರೀಕ್ಷಿಸಲು ಸ್ಯಾಂಪಲ್ ಚೆಕ್ ಮಾಡಿತ್ತು, ಆಸ್ಟ್ರೇಲಿಯಾಗೆ ಈ ಮೆಟ್ರೋ ಕೋಚ್ ಗಳು ಇಷ್ಟವಾಗಿದ್ದ ಕಾರಣ ಅದು ಬರೋಬ್ಬರಿ 12 ಬಿಲಿಯನ್ ಡಾಲರ್ ಅಂದರೆ 1200 ಕೋಟಿ ರೂಪಾಯಿಯ ಆರ್ಡರ್ ಭಾರತಕ್ಕೆ ನೀಡಿತ್ತು. 2 ಬಿಲಿಯನ್ ಡಾಲರ್ ಎಂದರೆ ಅದೇನು ಕಮ್ಮಿಯಲ್ಲ. ಇದೀಗ ಭಾರತ ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ನಿರ್ಮಿಸಿರುವ ಮೆಟ್ರೋ ಕೋಚ್ ಗಳನ್ನ ಆಸ್ಟ್ರೇಲಿಯಾಗೆ ರಫ್ತು ಮಾಡಲಾರಂಭಿಸಿದೆ.

ಇದೀಗ ಭಾರತ ನಿರ್ಮಿತ ಮೆಟ್ರೋ ಕೋಚ್ ಗಳು ಆಸ್ಟ್ರೇಲಿಯಾದಲ್ಲಿ ಸಂಚರಿಸಲಿವೆ, ಇವುಗಳನ್ನ ಜನ ನೋಡುತ್ತಾರೆ, ಬೇರೆ ಬೇರೆ ರಾಷ್ಟ್ರಗಳಲ್ಲಿ ಇದರ ಪ್ರಚಾರವಾಗಲಿದೆ, ಅತ್ಯುತ್ತಮ ಕ್ವಾಲಿಟಿಯ ಕೋಚ್ ಗಳಿದಾಗಿದ್ದು ಜಗತ್ತಿನ ವಿವಿಧ ರಾಷ್ಟ್ರಗಳು ಇದೀಗ ಭಾರತಕ್ಕೆ ಆರ್ಡರ್ ನೀಡಲಿವೆ ಎಂದು ಹೇಳಲಾಗುತ್ತಿದೆ.

ಚೀನಾ ಕೂಡ ಮೆಟ್ರೋ ಕೋಚ್ ಗಳನ್ನ ನಿರ್ಮಿಸಿ ರಫ್ತು ಮಾಡುತ್ತಿತ್ತು, ಜಗತ್ತಿನ ವಿವಿಧ ರಾಷ್ಟ್ರಗಳು ಚೀನಾದಿಂದ ಅವುಗಳನ್ನ ಖರೀದಿಸುತ್ತಿದ್ದವು ಆದರೆ ಇದೀಗ ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ನಿರ್ಮಿಸಲಾಗಿರುವ ಮೆಟ್ರೋ ಕೋಚ್ ಗಳು ಚೀನಾ ಮೆಟ್ರೋ ಕೋಚ್ ಗಳಿಗಿಂತ ಉತ್ತಮ ಕ್ವಾಲಿಟಿ ಹೊಂದಿರುವುದಷ್ಟೇ ಅಲ್ಲದೆ ಚೀನಾಗಿಂತ ಭಾರತದ ಈ ಕೋಚ್ ಗಳ ಬೆಲೆ ಕಡಿಮೆಯೂ ಕೂಡ ಹೌದು.

ಹೀಗಾಗಿ ಸದ್ಯದಲ್ಲೇ ಜಗತ್ತು ಭಾರತದಿಂದಲೇ ಮೆಟ್ರೋ ಕೋಚ್ ಗಳನ್ನ ಆಮದು ಮಾಡಿಕೊಳ್ಳುವ ಸಮಯ ಬಹಳ ದೂರವಿಲ್ಲ. ಮೇಕ್ ಇನ್ ಇಂಡಿಯಾ ಬಗ್ಗೆ ಭಾರೀ ಅಪಹಾಸ್ಯ ಮಾಡಲಾಗಿತ್ತು ಆದರೆ ಈ ಯೋಜನೆಯ ಮೂಲಕ ದೇಶದ ಒಳಿತಾಗುವ ಟೈಂ ಕೂಡಿ ಬಂದಿದೆ ಹಾಗು ಭಾರತದಲ್ಲಿ ವಿದೇಶಿ ಕರೆನ್ಸಿ ಕೂಡ ಹರಿದು ಬರೋದು ಶುರುವಾಗಿರುವುದರಿಂದ ಭಾರತದ ರೂಪಾಯಿ ಮೌಲ್ಯ ಕೂಡ ಇದೀಗ ಡಾಲರ್ ನೆದುರು ಪುಟಿದೇಳಲಿದೆ.

ಇದಲ್ಲವೇ ಪ್ರಧಾನಿ ಮೋದಿ ತಾಕತ್ತು? ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯಾ ಕುರಿತಾಗಿ ನಿಮ್ಮ ಅಭಿಪ್ರಾಯವೇನು ಅನ್ನೋದನ್ನ ತಪ್ಪದೆ ಕಮೆಂಟ್ ಸೆಕ್ಷನ್ ನಲ್ಲಿ ತಿಳಿಸಿ

Team Google Guruu

Leave a Reply

Your e-mail address will not be published. Required fields are marked *

error: Content is protected !!