ಮೋದಿ ಸರ್ಕಾರದಿಂದ ಘೋಷಣೆಯಾಯ್ತು ಮತ್ತೊಂದು ಐತಿಹಾಸಿಕ ಯೋಜನೆ; ಇದರ ಲಾಭವನ್ನ ನೀವೂ ಪಡೆಯಬಹುದು, ಇಲ್ಲಿದೆ ಸಂಪೂರ್ಣ ಮಾಹಿತಿ

ಹೊಸ ಪ್ಯಾನ್ ಕಾರ್ಡ್ ಪಡೆಯಲು ಗ್ರಾಹಕರಿಗೆ ಇದೀಗ ಹೊಸ ನಿಯಮಗಳು ಜಾರಿಯಾಗಲಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಹೆಚ್ಚುವರು ತೆರಿಗೆ ತಪ್ಪಿಸುವಿಕೆಯನ್ನು ತಡೆಗಟ್ಟಲು ಮತ್ತು ತೆರಿಗೆದಾರರಿಗೆ ಸಾಮ್ಯತೆಯನ್ನು ಒದಗಿಸಲು ಆದಾಯ ತೆರಿಗೆ ಇಲಾಖೆ ಕೆಲವು ಹೊಸ ಪ್ಯಾನ್ ಕಾರ್ಡ್ ನಿಯಮಗಳನ್ನು ರೂಪಿಸಿದೆ ಎನ್ನಲಾಗುತ್ತಿದೆ.

ಗ್ರಾಹಕರು ಇದೀಗ ಸರಳ ಮಾರ್ಗದಲ್ಲಿ ತಮ್ಮ ಪ್ಯಾನ್ ಕಾರ್ಡ್ ಪಡೆದುಕೊಳ್ಳಬಹುದಾದಂತಹ ನಿಯಮಗಳು ಜಾರಿಯಾಗಲಿವೆ ಎಂದು ಇಲಾಖೆ ತಿಳಿಸಿದೆ. ಕಳೆದ ತಿಂಗಳು ನವೆಂಬರ್‌ನಲ್ಲಿ, ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ 1962 ರ ಆದಾಯ ತೆರಿಗೆ ನಿಯಮಗಳನ್ನು ಡಿಸೆಂಬರ್ 5 ರ ತನಕ ಜಾರಿಯಲ್ಲಿದ್ದು ಇದೀಗ ಆ ನಿಯಮಗಳನ್ನು ತಿದ್ದುಪಡಿಯ ಆಧಿಸೂಚನೆ ಹೊರಡಿಸಲಾಗಿದೆ ಎಂದು ಹೇಳಲಾಗಿದೆ.

ಪ್ಯಾನ್ ಕಾರ್ಡ್‌ನಲ್ಲಿ ಆದ ಕೆಲವು ಬದಲಾವಣೆಗಳು ಈ ರೀತಿಯಾಗಿವೆ: ಸಣ್ಣ ಉದ್ಯಮಗಳಿಂದ ತೆರಿಗೆ ತಪ್ಪಿಸುವಿಕೆಯನ್ನು ತಡೆಯಲು ಹೊಸ ಬದಲಾವಣೆ ರೂಪಿಸಿದ ಇಲಾಖೆ, ಇಂದಿನಿಂದ ರೂ. 2.5 ಲಕ್ಷಕ್ಕಿಂತಲೂ ಹೆಚ್ಚಿನ ಹಣಕಾಸಿನ ವಹಿವಾಟುಗಳನ್ನು ನಿರ್ವಹಿಸುತ್ತಿರುವ ಎಲ್ಲ ಘಟಕಗಳು ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು ಎಂದು ಹೇಳಲಾಗಿದೆ.

ವೈಯಕ್ತಿಕ ತೆರಿಗೆದಾರರಿಗೆ ಈ ಮೇಲಿನ ನಿಯಮವು ಅನ್ವಯವಾಗುತ್ತದೆ ಆದರೆ ನಿರ್ವಾಹಕ, ನಿರ್ದೇಶಕ, ಪಾಲುದಾರ, ಟ್ರಸ್ಟೀ, ಲೇಖಕ, ಸಂಸ್ಥಾಪಕ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಪ್ರಧಾನ ಅಧಿಕಾರಿ ಅಥವಾ ಕಚೇರಿಯಲ್ಲಿ ಧಾರಕನಾಗಿ ವ್ಯವಹಾರದಲ್ಲಿ ತೊಡಗಿದ್ದರೆ ಅಥವಾ ಸಂಸ್ಥೆಗಳ ಪರವಾಗಿ ಕಾರ್ಯನಿರ್ವಹಿಸಲು ಅರ್ಹ ವ್ಯಕ್ತಿಗೆ ಈ ನಿಯಮ ಅನ್ವಯಿಸುತ್ತವೆ.

ಹೊಸ ನಿಯಮಗಳಲ್ಲಿ ಪದಯಾನ್ ಕಾರ್ಡ್ ಹೊಂದುವ ಗ್ರಾಹಕ ತಂದೆ ಅಥವಾ ತಾಯಿಯ ಹೆಸರನ್ನು ಕಡ್ಡಾಯವಾಗಿ ನೀಡಬೇಕೆಂಬ ಕಡ್ಡಾಯವೇನಿಲ್ಲ. ಪಾನ್ ಕಾರ್ಡ್ ಅರ್ಜಿದಾರರಿಗೆ ಇನ್ನು ಮುಂದೆ ಸರಳವಾಗಿ ಅತೀ ಶೀಘ್ರದಲ್ಲೇ ಪ್ಯಾನ್ ದೊರೆಯಲಿದೆ ಎಂದು ಹೇಳಲಾಗುತ್ತಿದೆ, ಇಷ್ಟೇ ಅಲ್ಲ ಅಭ್ಯರ್ಥಿಗಳು ತಂದೆ ಅಥವಾ ತಾಯಿ ಈ ಇಬ್ಬರಲ್ಲಿ ಯಾರ ಹೆಸರು ಅವರು PAN ಕಾರ್ಡಿನಲ್ಲಿ ಮುದ್ರಿಸಬೇಕೆಂದು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ಇಂದಿನಿಂದ ಪರಿಣಾಮಕಾರಿ ಎಂದು ಮತ್ತೊಂದು ತಿದ್ದುಪಡಿ ಆ ಪಾನ್ ಕಾರ್ಡ್ ಅಭ್ಯರ್ಥಿಗಳ ಕಾಳಜಿ ವಹಿಸಿದ ಇಲಾಖೆ ಗ್ರಾಹಕರ ತಂದೆ ವಿಚ್ಛೆದನ ಪಡೆದು ಬೆರೆಡೆ ಇದ್ದರೆ ತಾಯಿಯ ಹೆಸರು ಅಳವಡಿಸಿಕೊಳ್ಳುವ ಅವಕಾಶ ಕಲ್ಪಿಸಿಕೊಟ್ಟಿದೆ, ಹಾಗಯೇ ತಂದೆ ಅಥವಾ ತಾಯಿಯ ಮರಣವಾದರೇ ಪ್ಯಾನ್ ಕಾರ್ಡ್ ಮೇಲೆ ಅವರಿಬ್ಬರಲ್ಲಿ ಯಾರ ಹೆಸರು ಬೇಕಾದರೂ ನೀಡುವ ಸೌಲಭ್ಯ ವದಗಿಸಿದೆ.

ಪ್ಯಾನ್ ಕಾರ್ಡ್ ಹೊಂದಿರದ ಗ್ರಾಹಕರಿಗೆ ಮತ್ತೊಂದು ಅವಕಾಶವಿದ್ದು ನೀವು ಭವಿಷ್ಯದಲ್ಲಿ ಒಂದು ಪಾನ್ ಕಾರ್ಡ್ ಹೊಂದಬೇಕಾದರೇ ಅರ್ಜಿ ಸಲ್ಲಿಸಿದ ಎರಡು ದಿನಗಳ ಒಳಗಾಗಿ ಪ್ಯಾನ್ ಕಾರ್ಡ್ ಪಡೆದುಕೊಳ್ಳುವ ಸೌಲಭ್ಯ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (ಸಿಬಿಡಿಟಿ) ಮಾಡಿಕೊಡಲಿದೆ ಎಂದು ಅಧ್ಯಕ್ಷರಾಗಿರುವ ಸುಶೀಲ್ ಚಂದ್ರ ಅವರು ತಿಳಿಸಿದ್ದಾರೆ.

ಐಟಿ ಇಲಾಖೆ ಒಂದು ಪೂರ್ವನಿರ್ಧರಿತ ಐಟಿ ರಿಟರ್ನ್ ಗಳಂತಹ ಸುಧಾರಣಾ ಕ್ರಮಗಳ ಒಂದು ಸರಣಿಯನ್ನು ಯೋಜಿಸುತ್ತಿರುವ ಕಾರಣ, ಇಂತಹ ಒಂದು ಮೌಲ್ಯಮಾಪಕ ಮತ್ತು ಆದಾಯದ ತ್ವರಿತ ಸಂಸ್ಕರಣೆಯಿಂದ ಅನುಮೋದನೆ ಪಡೆಯಬೇಕಾಗಿದೆ” ಎಂದು ಅವರು ಹೇಳಿದರು. ಆದಾಯ ತೆರಿಗೆ ಇಲಾಖೆ ಕೆಲವು ಸುಧಾರಣೆಗಳನ್ನು ಪರಿಚಯಿಸಲು ಇಂತಹ ಮಹತ್ತರ ಕಾರ್ಯಕ್ಕೆ ಕೈ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.

ಯಾರೂ ಬೇಕಾದರೂ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಇಲ್ಲಿ ವಯಸ್ಸು ಮತ್ತು ರಾಷ್ಟ್ರೀಯತೆಯ ಪ್ರಶ್ನೆ ಎದುರಾಗುವುದಿಲ್ಲ. ಮೈನರ್ ಅಥವಾ ಮಗುವಿನ ಹೆಸರಿನಲ್ಲಿ ಕೂಡ ಪ್ಯಾನ್ ಕಾರ್ಡ್ ಮಾಡಿಸುವುದಾದರೆ ಪಾಲಕರ ರುಜು ಕಡ್ಡಾಯ. ಆದಾಯ ತೆರಿಗೆ ಇಲಾಖೆ ತಾಣಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

ಕೆಳಗಿನ ತಾಣಗಳು ಸಹ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ನೆರವಾಗುತ್ತವೆ. NSDL Website (Application for PAN) UTI Website ಈ ಎರಡು ವೆಬ್ಸೈಟ್ ಗಳು ಸರ್ಕಾರದಿಂದ ಮಾನ್ಯತೆ ಪಡೆದಿವೆ. ಹೊಸ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾದರೆ ಕನಿಷ್ಠ ಎರಡು ಗುರುತಿನ ಚೀಟಿ ಮತ್ತು ವಿಳಾಸ ದೃಢಿಕರಣ ವನ್ನು ನೀಡಬೇಕಾಗುತ್ತದೆ.

– Team Google Guruu

Leave a Reply

Your e-mail address will not be published. Required fields are marked *

error: Content is protected !!