ಖಾಸಗಿ ಬ್ಯಾಂಕುಗಳಿಗೆ ಕೋಟಿ ಕೋಟಿ ಹಣ ಹಾಕುತ್ತಿರುವ ಮೋದಿ ಸರಕಾರ; ಕಾರಣವೇನು ಗೊತ್ತಾ.?

ಮಧ್ಯಮ ವರ್ಗದ ಕೃಷಿಕರು, ಕೃಷಿ ಕಾರ್ಮಿಕರು, ನಗರ ಪ್ರದೇಶಗಳ ಅಸಂಘಟಿತ ಕಾರ್ಮಿಕರು, ನಿರುದ್ಯೋಗಿ ಯುವಕರು, ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ಬಂಪರ್ ಯೋಜನೆಗಳನ್ನು ಘೋಷಿಸಲು ಸಿದ್ಧತೆ ಮಾಡಿಕೊಂಡಿದೆ.

ನಿರುದ್ಯೋಗಿ ಯುವಕರಿಗೆ ಭತ್ಯೆ, ಖಾಸಗಿ ಕಂಪನಿಗಳಲ್ಲೂ ಮೀಸಲು ವ್ಯವಸ್ಥೆ ಮುಂತಾದವು ಕೂಡ ಇದರಲ್ಲಿ ಸೇರಿವೆ ಎನ್ನಲಾಗಿದೆ. ಕೇಂದ್ರ ಸರ್ಕಾರ ಮರು ಬಂಡವಾಳ ಕ್ರೂಡೀಕರಣಕ್ಕಾಗಿ 12 ಸಾರ್ವಜನಿಕ ವಲಯದ ಬ್ಯಾಂಕ್‍ಗಳಲ್ಲಿ 48,239 ಕೋಟಿ ರೂ. ತೊಡಗಿಸಲು ಮುಂದಾಗಿದೆ.

ಸರ್ಕಾರಿ ನೌಕರಿ ಹಾಗೂ ಶಿಕ್ಷಣದಲ್ಲಿ ಸಾಮಾನ್ಯ ವರ್ಗ ದವರಿಗೆ ಶೇ.10 ಮೀಸಲನ್ನು ಈಗಾಗಲೇ ಸರ್ಕಾರ ಜಾರಿಗೊಳಿಸಿದ್ದು, ಖಾಸಗಿ ಕಂಪನಿಗಳು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಸಾಮಾನ್ಯ ವರ್ಗದ ಬಡವರಿಗೆ ಶೇ.೧೦ರಷ್ಟು ಮೀಸಲು ಜಾರಿಗೊಳಿಸುವ ಸಾಧ್ಯತೆಯಿದೆ. ಈ ಎಲ್ಲ ಯೋಜನೆಗಳಿಗಾಗಿ ಕೇಂದ್ರದ ಉನ್ನತ ಮಟ್ಟದಲ್ಲಿ ಸಭೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.

ಕಾರ್ಪೋರೇಷನ್‍ ಬ್ಯಾಂಕ್‍ 9,086 ಕೋಟಿ ರೂ. ಗರಿಷ್ಟ ಮೊತ್ತ ಪಡೆಯಲಿದ್ದು, ಅಲಹಾಬಾದ್ ಬ್ಯಾಂಕ್‍ 6,896 ಕೋಟಿ ರೂ. ಪಡೆಯಲಿದೆ ಎಂದು ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ರಾಜೀವ್ ಕುಮಾರ್ ತಿಳಿಸಿದ್ದಾರೆ.

ಇನ್ನುಳಿದಂತೆ ಪಂಜಾಬ್ ನ್ಯಾಷನಲ್‍ ಬ್ಯಾಂಕ್‍ 5,908 ಕೋಟಿ ರೂ. ಬ್ಯಾಂಕ್‍ ಆಫ್‍ ಇಂಡಿಯಾ 4,638 ಕೋಟಿ ರೂ. ಯೂನಿಯನ್‍ ಬ್ಯಾಂಕ್‍ 4,112 ಕೋಟಿ ರೂ. ಆಂಧ್ರಾ ಬ್ಯಾಂಕ್‍ 3,256 ಕೋಟಿ ರೂ. ಸಿಂಡಿಕೇಟ್‍ ಬ್ಯಾಂಕ್‍ 1,603 ಕೋಟಿ ರೂ. ಹಾಗೂ ಬ್ಯಾಂಕ್‍ ಆಫ್‍ ಮಹಾರಾಷ್ಟ್ರ 205 ಕೋಟಿ ರೂ. ಪಡೆಯಲಿವೆ ಎಂದು ಹೇಳಲಾಗುತ್ತಿದೆ.

ಭಾರತವಿಂದು ಜಾಗತಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದ್ದು, 2018ರ ವೇಳೆಗೆ ನಮ್ಮ ಜಿಡಿಪಿ 2.6 ಟ್ರಿಲಿಯನ್‌ ಡಾಲರ್‌ಗೆ ತಲುಪಿತ್ತು ಮತ್ತು 2030ರ ವೇಳೆಗೆ 10 ಟ್ರಿಲಿಯನ್‌ ಡಾಲರ್‌ಗೆ ತಲುಪುವ ಭರವಸೆಯನ್ನು ನೀಡುತ್ತಿದೆ! ನಿಸ್ಸಂಶಯವಾಗಿಯೂ ಮೋದಿ ಸರ್ಕಾರವು ತನ್ನ ಬಹುಸ್ತರೀಯ ನೀತಿಗಳು ಮತ್ತು ನಿರ್ದಿಷ್ಟ ಹೂಡಿಕೆಗಳ ಮೂಲಕ ಈ ಗುರಿಯೆಡೆಗಿನ ದೇಶದ ವೇಗವನ್ನು ಹೆಚ್ಚಿಸಿದೆ.

-Team Google Guru

Leave a Reply

Your e-mail address will not be published. Required fields are marked *

error: Content is protected !!