ಭರ್ಜರಿ ಗೆಲುವಿನ ಬಳಿಕ ಇದೀಗ ಮೋದಿ ಸಂಪುಟದಲ್ಲಿ ಯಾರಿಲಿದ್ದಾರೆ, ಅಮಿತ್ ಶಾಹ್, ಸ್ಮೃತಿ ಇರಾನಿಗೆ ಯಾವ ಸ್ಥಾನ ಗೊತ್ತಾ

ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತೀಯ ಜನತಾ ಪಕ್ಷ ಮತ್ತೊಮ್ಮೆ ಎರಡನೆ ಬಾರಿಗೆ ಜಯದ ನಾಗಾಲೋಟದೊಂದಿಗೆ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೇರಲಿದೆ. ಭರ್ಜರಿ ಗೆಲುವಿನ ಬಳಿಕ ಇದೀಗ ಮೋದಿ ಸಂಪುಟದಲ್ಲಿ ಯರ‌್ಯಾರು ಮಂತ್ರಿಗಳಾಗಲಿದ್ದಾರೆ ಎಂಬುದರ ಚರ್ಚೆ ಆರಂಭವಾಗಿದೆ‌. ಇಂತಹ ಚರ್ಚೆಗಳ ಮಧ್ಯೆಯೇ ಇದೀಗ ಅಮಿತ್ ಶಾಹ್ ರಂತಹ ಹೊಸಮುಖಗಳಿಗೂ ಮಂತ್ರಿ ಮಂಡಲದಲ್ಲಿ ಸ್ಥಾನ ಪಕ್ಕಾ ಆಗಿದೆ.

ಅದೇ ನರೇಂದ್ರ ಮೋದಿಯವರ ಕೇಂದ್ರೀಯ ಮಂತ್ರಿ ಪರಿಷದ್ ಶುಕ್ರವಾರದಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಿಗೆ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ರಾಷ್ಟ್ರಪತಿಯವರು ಪ್ರಧಾನಮಂತ್ರಿ ಸಮೇತ ಇಡೀ ಮಂತ್ರಿಮಂಡಲದ ರಾಜೀನಾಮೆಯನ್ನ ಸ್ವೀಕರಿಸಿ ಪ್ರಧಾನಮಂತ್ರಿಯ ನೂತನ ಸರ್ಕಾರವಾಗುವವರೆಗೆ ಪ್ರಧಾನಿಯ ಹುದ್ದೆಯ ಮೇಲೆಯೇ ಇರುವಂತೆ ಆಗ್ರಹಿಸಿದ್ದಾರೆ.

ಭಾರತೀಯ ಜನತಾ ಪಕ್ಷದ ನೇತೃತ್ವದ ರಾಷ್ಟ್ರೀಯ ಪ್ರಜಾಪ್ರಭುತ್ವ ಮೈತ್ರಿ(National Democratic Alliance NDA) ಯ ನೂತನ ಸಂಸದರನ್ನ ಶನಿವಾರದಂದು ಅಂದರೆ ಇಂದು ನಡೆಯಲಿರುವ ಬೈಠಕ್ ನಕ್ಲಿ ಔಪಚಾರಿಕವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನ ತಮ್ಮ ನಾಯಕನಾಗಿ ಆಯ್ಕೆ ಮಾಡಲಿದ್ದಾರೆ. ಇದರ ಜೊತೆ ಜೊತೆಗೆ ಸರ್ಕಾರ ರಚನೆಯ ದಿಶೆಯಲ್ಲಿ ಮಂತ್ರಿಮಂಡಲ ರಚನೆಯ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗುವುದು.

ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ಈ ಲೋಕಸಭಾ ಚುನಾವಣೆಯಲ್ಲಿ 303 ಸೀಟುಗಳನ್ನ ಗೆದ್ದು ಸ್ಪಷ್ಟ ಬಹುಮತ ಪಡೆದಿತ್ತು ಹಾಗು ಬಿಜೆಪಿ ನೇತೃತ್ವದ ಮಿತ್ರಪಕ್ಷಗಳು(NDA) 50+ ಸೀಟುಗಳನ್ನ ಪಡೆದು ಒಟ್ಟು 353 ಸೀಟುಗಳನ್ನ ಹೊಂದಿವೆ. ನೂತನ ಸರ್ಕಾರ ರಚನೆಯ ಕುರಿತಾಗಿ ನಡೆದಿರುವ ಬಿಸಿ ಬಿಸಿ ಚರ್ಚೆಯಲ್ಲಿ ಕೆಲ ನಾಯಕರು ಹೇಳುವ ಪ್ರಕಾರ ಅಮಿತ್ ಶಾಹ್ ಈ ಬಾರಿ ಮಂತ್ರಿಯಾಗಲಿದ್ದಾರಂತೆ.

ಅಮಿತ್ ಶಾಹ್‌ಗೆ ಮೋದಿ ಸಂಪುಟದಲ್ಲಿ ಗೃಹ, ವಿತ್ತ, ವಿದೇಶಾಂಗ ಅಥವ ರಕ್ಷಣಾ ಇಲಾಖೆಯ ಮಂತ್ರಿಯಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ‌. ವಿತ್ತ ಸಚಿವ ಅರುಣ್ ಜೆಟ್ಲಿ ಹಾಗು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರವರಿಗೆ ಆರೋಗ್ಯ ಸಮಸ್ಯೆಯಿರುವ ಕಾರಣ ಅವರ ಬಗ್ಗೆ ಇನ್ನೂ ನಿರ್ಧಾರ ಕೈಗೊಳ್ಳಲಾಗಿಲ್ಲ. ಹೀಗಾಗಿ ಅವರನ್ನ ನೂತನ ಸರ್ಕಾರದಲ್ಲಿ ಸೇರಿಸಿಕೊಳ್ಳುವುದರ ಬಗ್ಗೆ ಅನುಮಾನಗಳಿವೆ.

ಜೆಟ್ಲಿ ರಾಜ್ಯಸಭಾ ಸದಸ್ಯರಾಗಿದ್ದು ಅವರು 2014 ರ ಲೋಕಸಭಾ ಚುನಾವಣೆಯಲ್ಲಿ ಪಂಜಾಬಿನ ಅಮೃತಸರ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಸುಷ್ಮಾ ಸ್ವರಾಜ್ ಕಳೆದ ಚುನಾವಣೆಯಲ್ಲಿ ಮಧ್ಯಪ್ರದೇಶದ ವಿದಿಶಾ ದಿಂದ ಸ್ಪರ್ಧಿಸಿ ಗೆದ್ದಿದ್ದರು‌. ಈ ಚುನಾವಣೆಯಲ್ಲಿ ಅವರು ಸ್ಪರ್ಧಿಸಿರಲಿಲ್ಲ. ಈ ಇಬ್ಬರೂ ನಾಯಕರು ನೂತನ ಸರ್ಕಾರದಲ್ಲಿ ಶಾಮೀಲಾಗುತ್ತಾರೋ ಇಲ್ಲವೋ ಎಂಬುದರ ಬಗ್ಗೆ ಇನ್ನೂ ತೀರ್ಮಾನ ಕೈಗೊಳ್ಳಲಾಗಿಲ್ಲ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಮಿತ್ ಶಾಹ್ ರವರಿಗೆ ಈ ಕುರಿತಾಗಿ ಪ್ರಶ್ನಿಸಿದ್ದಾಗ ಅವರು ಇದಕ್ಕೆ ಉತ್ತರಿಸಿರಲಿಲ್ಲ ಹಾಗು ಇದು ಪ್ರಧಾನಮಂತ್ರಿಯ ವಿವೇಚನೆಗೆ ಬಿಟ್ಟ ನಿರ್ಧಾರ, ಅವರು ಹೇಗೆ ಹೇಳುತ್ತಾರೆ ಅದೇ ಫೈನಲ್ ನಿರ್ಣಯ ಎಂದಿದ್ದರು. ಸುದ್ದಿ ಮೂಲಗಳ ಪ್ರಕಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೂತನ ಸರ್ಕಾರದಲ್ಲಿ ಮುಖ್ಯ ಪಾತ್ರ ನಿರ್ವಹಿಸಲಿದ್ದಾರೆ. ಸ್ಮೃತಿ ಇರಾನಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನ ಅಮೇಥಿತಿ ಕ್ಷೇತ್ರದಿಂದ ಸೋಲಿಸಿದ್ದರು‌. ಹೀಗಾಗಿ ಪಕ್ಷ ಸ್ಮೃತಿ ಇರಾನಿಗೆ ದೊಡ್ಡ ಹುದ್ದೆ ನೀಡಲಿದೆ ಎಂದು ಹೇಳಲಾಗುತ್ತಿದೆ.

ಅದೇ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ರವಿಶಂಕರ್ ಪ್ರಸಾದ್, ಪಿಯೂಷ್ ಗೋಯಲ್, ನರೇಂದ್ರ ಸಿಂಗ್ ತೋಮರ್, ಪ್ರಕಾಶ್ ಜಾವ್ಡೇಕರ್ ರವರನ್ನ ನೂತನ ಮಂತ್ರಿಮಂಡಲದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೆಡಿಯೂ ಹಾಗು ಶಿವಸೇನೆ ಪಕ್ಷಗಳಿಗೂ ನೂತನ ಸರ್ಕಾರದಲ್ಲಿ ಸ್ಥಾನ ನೀಡಲಾಗುತ್ತದೆಯಂತೆ, ಇದಕ್ಕೆ ಕಾರಣ ಎರಡೂ ಪಕ್ಷಗಳು ಕ್ರಮವಾಗಿ 16 ಹಾಗು 18 ಸೀಟುಗಳನ್ನ ಗೆದ್ದು ಉತ್ತಮ ಪ್ರದರ್ಶನ ತೋರಿದ್ದವು.

ಕೇಂದ್ರಿಯ ಮಂತ್ರಿಮಂಡಲದಲ್ಲಿ ಪಶ್ಚಿಮ ಬಂಗಾಳ, ಓರಿಸ್ಸಾ ಹಾಗು ತೆಲಂಗಾಣದಿಂದ ಹೊಸ ಮುಖಗಳಿಗೆ ಮಣೆ ಹಾಕಬಹುದು ಎನ್ನಲಾಗುತ್ತಿದೆ. ಬಿಜೆಪಿಯ ವರಿಷ್ಟ ನಾಯಕರೊಬ್ಬರು ಈ ಕುರಿತು ಮಾತನಾಡುತ್ತ “ಮಂತ್ರಿಮಂಡಲದಲ್ಲಿ ಹಲವಾರು ಯುವ ಮುಖಗಳಿಗೆ ಸ್ಥಾನ ನೀಡುವ ಸಾಧ್ಯತೆಗಳಿವೆ, ಇದಕ್ಕೆ ಕಾರಣ ಬಿಜೆಪಿ ಎರಡನೆಯ ಹಂತದ ನಾಯಕರನ್ನ ಬೆಳೆಸುವ ಉದ್ದೇಶ ಹೊಂದಿದೆ” ಎಂದಿದ್ದಾರೆ.

– Team Google Guruu

Leave a Reply

Your e-mail address will not be published. Required fields are marked *

error: Content is protected !!