ಇಸ್ಲಾಮಿಕ್ ಮತಾಂಧರಿಂದ ನಲುಗಿಹೋಗಿದ್ದ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದ ಹಿಂದುಗಳಿಗಾಗಿ ಹೊಸ ಕಾನೂನನ್ನೇ ಜಾರಿಗೆ ತಂದ ಮೋದಿ ಸರ್ಕಾರ;

ಬಾಂಗ್ಲಾದೇಶ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದವರಿಗೆ ಯಾವುದೇ ಕಾರಣಕ್ಕೂ ಪೌರತ್ವ ನೀಡಬಾರದೆಂಬ ಕೂಗು ಒಂದು ಕಡೆಯಾದರೆ ಅಂಥವರಿಗೂ ಸಹ ಇಲ್ಲಿ ಮತದಾನದ ಅವಕಾಶ ನೀಡಬೇಕೆಂಬ ಧ್ವನಿ ಮತ್ತೊಂದು ಕಡೆ ಕೇಳಿಬರುತ್ತಿದೆ, ರಾಜಕಿಯದಲ್ಲಿ ಅಧಿಕಾರದ ಗದ್ದುಗೆ ಏರಲು ವಲಸಿಗರನ್ನು ಪ್ರೋತ್ಸಾಹಿಸುವ ಪಕ್ಷಗಳು ಅವರಿಗೆ ಜಾತಿ ಆಧಾರದ ಮೇಲೆ ಪಡಿತರ ಚೀಟಿಯೂ ಸಹ ಈಗಾಗಲೆ ಅನೇಕ ವಲಸಿಗರಿಗೆ ನೀಡಲಾಗಿದೆ.

ಇನ್ನೊಂದು ಕಡೆ ಅಮಿತ್ ಶಾ ಅವರು ಹೇಳುವಂತೆ “ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಾಂಗ್ಲಾ ವಲಸಿಗರಿಗೆ ಭಾರತದಿಂದ ಹೊರಹಾಕುತ್ತೆವೆ, ಕಾರಣ ನಮ್ಮ ದೇಶದ ಜನರಿಗೆ ಸಿಗಬೇಕಾದ ಸೌಲಭ್ಯ ಅನ್ಯ ದೇಶಿಯರ ಪಾಲಾಗುತ್ತಿವೆ” ಹೀಗಾಗಿ ಅಂಥವರನ್ನು ಮೊದಲು ಭಾರತದಿಂದ ಓಡಿಸುತ್ತೆವೆ ಎಂದಿದ್ದರು, ಆದರೆ ಇದೀಗ ಆ ತಿದ್ದುಪಡಿ ಕಾಯ್ದೆ ಸಂಚಲನ ಮೂಡಿಸಿದೆ ಎಂದು ಹೇಳಬಹುದು.

ಹೌದು, ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆಯಾದ ಬಾಂಗ್ಲಾದೇಶ, ಪಾಕಿಸ್ತಾನ, ಮತ್ತು ಅಪ್ಘಾನಿಸ್ತಾನದಿಂದ ಬಂದ ಮುಸ್ಲಿಮೇತರ ವಲಸಿಗರಿಗೆ ಭಾರತದ ಪೌರತ್ವ ನೀಡುವ ತಿದ್ದುಪಡಿ ಮಸೂದೆಯೂ ಇಂದು ಲೋಕಸಭೆಯಲ್ಲಿ ಅಂಗೀಕಾರ ಮಾಡಲಾಯಿತು.

ವಿದೇಶಿ ಮುಸ್ಲಿಮರು ತಮ್ಮ ದೇಶದಿಂದ ಭಾರತಕ್ಕೆ ವಲಸೆ ಬಂದು ಸುಮಾರು ಆರು ವರ್ಷಗಳಿಂದ ಭಾರತದಲ್ಲಿ ನೆಲೆಸಿರುವ ಹಿಂದೂ, ಮುಸ್ಲಿಂ, ಜೈನರು, ಕ್ರಿಶ್ಚಿಯನ್, ಸಿಖ್, ಬೌದ್ದರು ಹಾಗೂ ಪಾರ್ಸಿಯನ್ನರು ಯಾವುದೇ ದಾಖಲೆ ಹೊಂದಿದ್ದರೂ ಸಹ ಈ ಮಸೂದೆ ಭಾರತದ ಪೌರತ್ವವನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ.

ಈ ತಿದ್ದುಪಡಿಯ ಕುರಿತಾಗಿ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್, ಈ ಮಸೂದೆಯು ಸಂವಿಧಾನದಲ್ಲಿನ ವಿನಾಯಿತಿಗಳಿಗೆ ವಿರುದ್ಧವಾಗಿಲ್ಲ, ಮೂರು ನೆರೆಯ ರಾಷ್ಟ್ರಗಳಲ್ಲಿ ನೋವುಂಡ  ಅಲ್ಪಸಂಖ್ಯಾತರಿಗೆ ನೆರವು ನೀಡಲಿದೆ ಎಂದು ಹೇಳಿದ್ದಾರೆ.

ಒಮ್ಮೆ ಇಲ್ಲಿ ಪೌರತ್ವ ಪಡೆದು ಭಾರತ ಬಿಟ್ಟು ಬೇರೆ ಕಡೆ ಹೋಗಲು ಅವರಿಗೆ ಅವಕಾಶ ಇಲ್ಲ. ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಸೇರಿದಂತೆ ಅನೇಕ ನಾಯಕರು ನೆರೆಯ ರಾಷ್ಟ್ರಗಳ ನೊಂದ ಅಲ್ಪಸಂಖ್ಯಾತ ಜನರಿಗೆ ಆಶ್ರಯ ಒದಗಿಸುವ ಮನೋಭಾವ ಹೊಂದಿದ್ದರು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಅಫಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಿಂದ ಆಗಮಿಸಿ ಇಲ್ಲಿ ನೆಲೆಸಿರುವ ಹಿಂದೂ, ಸಿಖ್‌, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರೈಸ್ತ ಮತೀಯರು ಈ ಪೌರತ್ವ ಕಾಯಿದೆಯ ಲಾಭವನ್ನು ಪಡೆಯಬಹುದಾಗಿದೆ. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತ ಮೊದಲಿನಿಂದಲೂ ಅನೇಕ ಧರ್ಮಗಳ ನೆಲೆವೀಡಾಗಿದೆ.

ಲಕ್ಷಾಂತರ ಸಂಖ್ಯೆಯ ನಿರಾಶ್ರಿತರು ಭಾರತೀಯ ಮೂಲದವರು ಒಂದೆಡೆ ಅಲ್ಲಿದ್ದ ವೃತ್ತಿ, ಬದುಕಿನ ದಾರಿಗಳನ್ನು ತೊರೆದು ಹೊಸ ಕನಸುಗಳನ್ನು ಕಟ್ಟಿಕೊಂಡು ಇಲ್ಲಿಗೆ ಬಂದವರು. ಅಂಥವರನ್ನು ಹೊಸಬದುಕಿನ ಅವಕಾಶವನ್ನು ಇಲ್ಲಿ ಕಲ್ಪಿಸಿಕೊಡುವುದು ಮಾನವೀಯತೆಯ ದೃಷ್ಟಿಯಾಗಿದೆ.
ವೈವಿಧ್ಯತೆಯಲ್ಲಿ ಏಕತೆಯನ್ನು ಕಾಯ್ದುಕೊಂಡಿದೆ. ಏಕಕಾಲಕ್ಕೆ ಇಲ್ಲಿ ಹಲವಾರು ಧರ್ಮಗಳು ಸಹಬಾಳ್ವೆ ನಡೆಸುತ್ತಿವೆ. ನಮ್ಮದು ಜಾತ್ಯತೀತ ಗಣರಾಜ್ಯ ಎಂದು ಸಂವಿಧಾನ ಘೋಷಿಸಿದೆ.

ಒಟ್ಟಿನಲ್ಲಿ ಹೇಳುವುದಾದರೆ ಪಾಕಿಸ್ತಾನ ಬಾಂಗ್ಲಾದೇಶ ಅಫ್ಘಾನಿಸ್ತಾನದ ಹಿಂದೂ ವಲಸಿಗರಿಗೆ ಭಾರತದ ಪೌರತ್ವ ಕೊಟ್ಟಿರುವ ಕಾರಣ ಅವರು ಇಲ್ಲಿ ತಮ್ಮ ಮತದಾನದ ಅಧಿಕಾರ ಹಾಗೂ ಮೂಲಭೂತ ಹಕ್ಕನ್ನು ಪಡೆಯಲಿದ್ದಾರೆ ಹಾಗೆಯೇ ಮುಂಬರುವ ದಿನಗಳಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ ಎಂದು ಹೇಳಬಹುದು.

-Team Google Guruu

Leave a Reply

Your e-mail address will not be published. Required fields are marked *

error: Content is protected !!