ಮೋದಿ ಜೊತೆ ಆಟವಾಡುತ್ತಿರುವ ಈ ಪುಟ್ಟ ಬಾಲಕ ಯಾರು ಗೊತ್ತಾ – Google Guru

ಮೋದಿ ಜೊತೆ ಆಟವಾಡುತ್ತಿರುವ ಈ ಪುಟ್ಟ ಬಾಲಕ ಯಾರು ಗೊತ್ತಾ

ಪ್ರಧಾನಿ ನರೇಂದ್ರ ಮೋದಿಯವರಿಗೆ ಮಕ್ಕಳ ಮೇಲಿನ ಪ್ರೀತಿ ವಿಶ್ವಪ್ರಸಿದ್ಧವಾಗಿದೆ. ತನ್ನ ಪರಿಚಯಸ್ಥರ ಮತ್ತು ಅತಿಥಿಗಳ ಮಕ್ಕಳನ್ನು ಭೇಟಿಯಾದಾಗ ಅವರು ಯಾವಾಗಲೂ ಮಕ್ಕಳೊಂದಿಗೆ ವಿಶೇಷ ಸಂಪರ್ಕವನ್ನು ಕಂಡುಕೊಳ್ಳುತ್ತಾರೆ ಅದೇ ರೀತಿ ಅವರು ಇಂದು ಒಂದು ಮಗುವಿನೊಂದಿಗೆ ಆಡುತ್ತಿರುವ ಎರಡು ಆರಾಧ್ಯ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು ಆ ಫೋಟೊ ಎಲ್ಲರಿಗೂ ಹುಚ್ಚೆಬ್ಬಿಸಿದೆ ಎಂದು ಹೇಳಬಹುದು.

ಪುಟ್ಟ ಮಗುವನ್ನು ಮುದ್ದಾಡುತ್ತಿರುವ ಫೋಟೊವೊಂದನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು. ಇವತ್ತು ಸಂಸತ್‌ಗೆ ವಿಶೇಷ ಗೆಳೆಯರೊಬ್ಬರು ನನ್ನನ್ನು ಭೇಟಿ ಮಾಡಲು ಬಂದಿದ್ದರು ಎಂಬ ಶೀರ್ಷಿಕೆ ಹಾಕುವ ಮೂಲಕ ಮಗುವನ್ನು ಮುದ್ದಾಡುತ್ತಿರುವ ಫೋಟೊವನ್ನು ಮೋದಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೊಮ್ಮೆ ನಟ ಅಕ್ಷಯ್ ಕುಮಾರ್ ಅವರ ಮಗ ಆರವ್ ಅವರ ಕೈಕುಲುಕುವ ಮೂಲಕ ಮಾತನಾಡಿಸುತ್ತಾರೆ. ವಿಶಾಕಪಟ್ಟಣಂನಲ್ಲಿ ಮೋದಿ ಅವರೊಂದಿಗೆ ನಿಂತಿದ್ದರಿಂದ ಸೆಲೆಬ್ರಿಟಿ ಮಗು ಈ ಕೆಳಗಿನ ಚಿತ್ರದಲದಲಿದೆ ಗಮನಿಸಿ.

ಪ್ರಧಾನಿ ಮೋದಿ ಅವರು 2015 ರಲ್ಲಿ ಕೆನಡಾಕ್ಕೆ ಭೇಟಿ ನೀಡಿದಾಗ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಪುತ್ರಿ ಕೂಡ ಬೇಟಿ ನೀಡಿದಾಗ ಆ ಮುಗ್ದ ಬಾಲಕಿಯ ಕಿವಿ ಹಿಂಡುವುದರ ಮೂಲಕ ಸಂತಸ ವ್ಯಕ್ತಪಡಿಸಿದ್ದರು. ಆ ಫೋಟೊ ಕೂಡ ಭಾರಿ ಸದ್ದು ಮಾಡಿತ್ತು.

ಅಂದಹಾಗೆ ಮೋದಿ ಮುದ್ದಾಡುತ್ತಿರುವ ಮಗು ಯಾರದ್ದು ಎಂದು ಹಲವಾರು ನೆಟ್ಟಿಗರು ಪ್ರಶ್ನಿಸಿದ್ದಾರೆ. ಈ ಮಗು ಬಿಜೆಪಿ ಸಂಸದ ಸತ್ಯನಾರಾಯಣ್ ಜತಿಯಾ ಅವರ ಮೊಮ್ಮಗ ಇಂದು ಪ್ರಧಾನಿ ಕಛೆರಿಗೆ ಆಗಮನಿಸಿದಾಗ ಭೆಟಿಯಾದಾಗ ಸ್ವಲ್ಪ ಹೊತ್ತು ಖುಷಿಯ ಕ್ಷಣ ಅನುಭವಿಸಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.

ಕುಟುಂಬ ತೊರೆದ ಮೋದಿಯವರಿಗೆ ಇಲ್ಲ ಸಲ್ಲದ ಭಾಷಾ ಪ್ರಯೋಗ ಮಾಡುವವರಿಗೇನು ಗೊತ್ತು ಅವರೊಬ್ಬ ಭಾವನಾ ಜೀವಿ ಎಂದು, ಹೌದು ಮೋದಿಯವರಿಗೂ ಭಾವನೆಗಳು ಇವೆ ಅವರು ಕುಟುಂಬ ತೊರೆದಿದ್ದಾರೆ ನಿಜ ಆದರೆ ಅವರಿಗೆ ಇಡೀ ದೇಶವೇ ಒಂದು ಕುಟುಂಬ ಅದಕ್ಕಾಗಿಯೇ ಪುಲ್ವಾಮ ದಾಳಿಯಾದಾಗ ಗಳಗಳನೆ ಅತ್ತು ಕಣ್ಣೀರು ಹಾಕಿದ್ದರು.

-Team Google Guru

Leave a Reply

Your email address will not be published. Required fields are marked *

error: Content is protected !!