ಅತ್ತ ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ, ಇತ್ತ ರಾಜ್ಯದಲ್ಲಿ ಕುಮಾರಸ್ವಾಮಿ ಸರಕಾರ ಪತನ.?

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿನ ಹೀನಾಯ ಸೋಲು ಅನುಭವಿಸಿದ ಕಾಂಗ್ರೆಸ್ ಪಕ್ಷ ತಮ್ನ ಮೈತ್ರಿ ಸರಕಾರ ರಚಿಸಲು ಹರ ಸಾಹಸ ಪಡುತ್ತಿವೆ. ಅತ್ತ ಕಡೆ ಕೇಂದ್ರ ಸರಕಾರ ಮತ್ತೊಮ್ಮೆ ಸರಕಾರ ರಚಿಸಲು ಮುಂದಾಗಿದ್ದು ಇತ್ತ ಕಡೆ ರಾಜ್ಯ ದೋಸ್ತ ಸರಕಾರ ಉರುಳುವ ಭಯದ ವಾತಾವರಣ ಶುರುವಾಗಿದೆ ಎನ್ನಬಹುದು.

ಸೋಲುಂಡ ಕಾಂಗ್ರೆಸ್ ಪಕ್ಷಕ್ಕೆ ಈಗಿರುವ ಸರಕಾರ ಉಳಿಸಿಕೊಳ್ಳುವುದು ದೊಡ್ಡ ಜವಾಬ್ದಾರಿಯಾಗಿದೆ. ದೋಸ್ತಿ ಪಕ್ಷಗಳಿಗೂ ದೊಡ್ಡ ಮಟ್ಟದ ಸೋಲಾಗಿರುವ ಕಾರಣ ಈಗ ಪ್ರತಿಷ್ಠೆ ಕೈಬಿಟ್ಟು ಬಿಜೆಪಿಯನ್ನು ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಆಡಳಿತಾರೂಢ ಪಕ್ಷಗಳಲ್ಲಿನ ಅತೃಪ್ತ ಶಾಸಕರು ಬಿಜೆಪಿಯತ್ತ ಆಕರ್ಷಿತರಾಗಿ ಪಕ್ಷ ಬಿಟ್ಟು ಹೋಗದಂತೆ ನೋಡಿಕೊಳ್ಳುವುದು ದೊಡ್ಡ ಜವಾಬ್ದಾರಿಯಾಗಿದೆ.

ಅತ್ತ ಕೇಂದ್ರದಲ್ಲಿ ಎನ್​ಡಿಎ ಸರ್ಕಾರ ರಚಸಿ ಮೋದಿ ಪಟ್ಟಾಭಿಷೇಕ ನಡೆಯುತ್ತಿದ್ದರೇ, ಇತ್ತ ರಾಜ್ಯದಲ್ಲಿ ಮಾತ್ರ ಸಮ್ಮಿಶ್ರಸರ್ಕಾರದ ಮುಖಂಡರು ದೋಸ್ತಿ ಉಳಿಸಿಕೊಳ್ಳಲು ಸರ್ಕಸ್ ಆರಂಭಿಸಿದ್ದಾರೆ. ಅಸಮಧಾನಗಳನ್ನು ಹೋಗಲಾಡಿಸಿ ಒಕ್ಕಟ್ಟು ಮೂಡಿಸುವ ನಿಟ್ಟಿನಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್​​ ನಿವಾಸದಲ್ಲಿ ಉಪಹಾರ ಸಭೆ ಏರ್ಪಡಿಸಲಾಗಿದೆ.

ಈ ಉಪಹಾರ ಕೂಟದಲ್ಲಿ ಕಾಂಗ್ರೆಸ್​ಹಿರಿಯ ನಾಯಕರು, ಸಚಿವರು ಪಾಲ್ಗೊಂಡಿದ್ದಾರೆ. ಸಭೆಯಲ್ಲಿ ದೋಸ್ತಿ ಸರ್ಕಾರ ಉಳಿಸಿಕೊಳ್ಳೋ ಸಂಬಂಧ ಕಾರ್ಯತಂತ್ರ ರೂಪಿಸಲಾಗುತ್ತಿದ್ದು, ಸಂಪುಟ ವಿಸ್ತರಣೆ, ಆಪರೇಷನ್​​ ಕಮಲಕ್ಕೆ ಸಭೆಯಲ್ಲಿ ಪ್ರತಿತಂತ್ರ ಸಿದ್ಧಮಾಡಲಾಗಿದೆ.

ಲೋಕಸಭಾ ಫಲಿತಾಂಶಗಳ ಬಳಿಕ ರಾಜ್ಯದಲ್ಲಿ ಮೈತ್ರಿಪಕ್ಷಗಳ ನಡುವೆ ಭಿನ್ನಮತ ತೀವ್ರ ಸ್ವರೂಪವನ್ನು ಪಡೆದಿದೆ. ನಮ್ಮನ್ನು ಸೋಲಿಸಿದವರ ಜೊತೆ ಮೈತ್ರಿ ಮುಂದುವರಿಸಬೇಕಾ ಎಂಬ ಬಗ್ಗೆ ಜೆಡಿಎಸ್ ನಾಯಕರು ಗಂಭೀರ ಚರ್ಚೆ ನಡೆಸಿದ್ದಾರೆ. ಒಂದು ವೇಳೆ ಸಭೆ ವಿಫಲವಾದರೆ ಅತ್ತ ಮೋದಿ ಪ್ರಧಾನಿ, ಇತ್ತರ ರಾಜ್ಯದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿ ಪಕ್ಕಾ ಎಂದು ಹೇಳಲಾಗುತ್ತಿದೆ.

-Team Google Guru

Leave a Reply

Your email address will not be published. Required fields are marked *

error: Content is protected !!