ನಿಗದಿಯಾಯ್ತು ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಿನಾಮೆ ನೀಡುವ ದಿನಾಂಕ.?

ಕಳೆದ ದಿನ ಎಂಟಿಬಿ ನಾಗರಾಜ್ ಅವರ ಮನವೊಲಿಸಲು ಸಚಿವ ಡಿ.ಕೆ.ಶಿವಕುಮಾರ ಯತ್ನ ನಡೆಸಿದರೂ ಅದರ ಬೆನ್ನಲ್ಲೇ ನಡೆದ ಸಿದ್ದರಾಮಯ್ಯ ಹಾಗೂ ಎಂಟಿಬಿ ಮಾತುಕತೆ ಮೈತ್ರಿ ಬಿಕ್ಕಟ್ಟಿಗೆ ತೇಪೆ ಹಾಕಲಿದೆಯಾ ಎನ್ನೋ ಕುತೂಹಲ ಮೂಡುತ್ತಿದ್ದಾದರೂ ಅದು ಅಷ್ಟಕ್ಕಷ್ಟೇ ಎಂಬಂತಾಗಿದೆಯಂತೆ. ರಾಜೀನಾಮೆ ನೀಡಿರೋ ಎಂಟಿಬಿ ನಾಗರಾಜ್ ರ ಮನವೊಲಿಸಲು ಮಾಜಿ ಸಿಎಂ ಸಿದ್ದರಾಮಯ್ಯ ವಿಫಲರಾಗಿದ್ದಾರೆ.

ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮಾಜೆ ಪಿಎಂ ಹೆಚ್‌.ಡಿ ದೇವೇಗೌಡರ ಮನೆಗೆ ಭೇಟಿ ನೀಡಿದ ಸಿಎಂ ಬರೋಬ್ಬರಿ ಎರಡರಿಂದ ಮೂರು ಗಂಟೆಗಳ ಕಾಲ ತಮ್ಮ ಮುಂದಿನ ನಡೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಸುಪ್ರೀಂಕೋರ್ಟ್ ಹಾಗೂ ಸ್ಪೀಕರ್‌ ನೀಡುವ ತೀರ್ಪು ತಮ್ಮ ಕಡೆಗೆ ಬಂದರೆ, ಬಾರದೇ ಹೋದರೆ ಮುಂದೆ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವುದರ ಬಗ್ಗೆ ಕೂಡ ಚರ್ಚೆ ನಡಿಸಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಸರಕಾರವನ್ನು ನಡೆಸಲು ಕಷ್ಟವಾದರೇ ಈ ಅಧಿವೇಶದನದಲ್ಲೇ ಬಹುಮತಯಾಚನೆಯಿಂದ ಹಿಂದೆ ಸರಿದು ಸದನದಲ್ಲಿ ವಿದಾಯ ಭಾಷಣ ಮಾಡಿ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಕಳೆದ ದಿನ ಎಂಟಿಬಿ ನಾಗರಾಜ್‌ ಅವರು ತಮ್ಮ ರಾಜೀನಾಮೆಯನ್ನು ವಾಪಸ್ಸು ತೆಗೆದುಕೊಳ್ಳುವುದರ ಬಗ್ಗೆ ಹೇಳಿದ ವೇಳೆಯಲ್ಲಿ ಸಿಎಂ ಸಹಜವಾಗಿ ಖುಷಿಯಾಗಿದ್ದರು.

ಎಂಟಿಬಿ ನಾಗರಾಜ್ ಅವರ ಮನವೊಲಿಸಲು ಸಚಿವ ಡಿ.ಕೆ.ಶಿವಕುಮಾರ ಯತ್ನ ನಡೆಸಿದ್ರು. ಅದರ ಬೆನ್ನಲ್ಲೇ ನಡೆದ ಸಿದ್ದರಾಮಯ್ಯ ಹಾಗು ಎಂಟಿಬಿ ಮಾತುಕತೆ ಮೈತ್ರಿ ಬಿಕ್ಕಟ್ಟಿಗೆ ತೇಪೆ ಹಾಕಲಿದೆಯಾ ಎನ್ನೋ ಕುತೂಹಲ ಮೂಡುತ್ತಿದ್ದಾದರೂ ಅದು ಅಷ್ಟಕ್ಕಷ್ಟೇ ಎಂಬಂತಾಗಿದೆಯಂತೆ. ರಾಜೀನಾಮೆ ನೀಡಿರೋ ಎಂಟಿಬಿ ನಾಗರಾಜ್ ರ ಮನವೊಲಿಸಲು ಮಾಜಿ ಸಿಎಂ ಸಿದ್ದರಾಮಯ್ಯ ವಿಫಲರಾಗಿದ್ದಾರೆ.

ಇದಾದ ಬೆನ್ನಲ್ಲೆ ನಾಗರಾಜ್‌ ಮುಂಬೈ ವಿಮಾನವನ್ನು ಹತ್ತಿ ಅತೃಪ್ತ ಶಾಸಕರ ಗುಂಪನ್ನು ಸೇರಿಕೊಂಡರೋ ಆಗ ಇನ್ಮುಂದೆ ಸರಕಾರ ನಡೆಸೋದಕ್ಕೆ ಆಗೋಲ್ಲ ಅಂತ ಅಂದುಕೊಂಡಿದ್ದಾರೆ ಎನ್ನಲಾಗಿದೆ. ಈಗಾಗಲೆ ಸ್ಪೀಕರ್ ವಿಪ್ ಜಾರಿ ಮಾಡಿ ಬುಧವಾರ ಸಂಸತ್ ಅಧಿವೇಶನ ಪ್ರಾರಂಭಿಸಲಾಗಿದ್ದು ಒಂದುವೇಳೆ ಅತೃಪ್ತ ಶಾಸಕರು ಗೈರಾದರೆ ವಿಶ್ವಾಸ ಮತ ದೊರಕದೆ ಅವತ್ತಿನ ದಿನವೇ ರಾಜಿನಾಮೆ ನೀಡುತ್ತಾರೆ ಎನ್ನಲಾಗಿದೆ.

-Team Google Guru

Leave a Reply

Your e-mail address will not be published. Required fields are marked *

error: Content is protected !!