ಕರ್ನಾಟಕದಲ್ಲಿ ಶಾಸಕರ ರಾಜೀನಾಮೆ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ 107 ಶಾಸಕರು ಬಿಜೆಪಿಗೆ.?

ಇನ್ನೂ ಕರ್ನಾಟಕದ ರಾಜಕೀಯ ಪ್ರಹಸನ ಮುಗಿದಿಲ್ಲ ಆಗಲೇ ಅತ್ತ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕ ಮುಕುಲ್ ರಾಯ್ ರವರ ಈ ಹೇಳಿಕೆ ಅಲ್ಲಿನ ರಾಜ್ಯ ರಾಜಕೀಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿಬಿಟ್ಟಿದೆ. ಮುಕುಲ್ ರಾಯ್ ರವರು ಪತ್ರಿಕಾಗೋಷ್ಠಿ ನಡೆಸಿ ಬಂಗಾಳದಲ್ಲಿ ಸಿಪಿಎಂ, ಕಾಂಗ್ರೆಸ್ ಹಾಗು ಟಿಎಂಸಿ ಪಕ್ಷದ 107 ಜನ ಬಿಜೆಪಿ ಸೇರಲಿದ್ದಾರೆ ಎಂಬ ಬಾಂಬ್ ಸಿಡಿಸಿದ್ದಾರೆ. ಅವರು ಮಾತನಾಡುತ್ತ ಈ ಎಲ್ಲಾ ಶಾಸಕರ ಲಿಸ್ಟ್ ಈಗಾಗಲೇ ರೆಡಿಯಾಗಿದ್ದು ಅವರೆಲ್ಲಾ ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ನಿಮ್ಮ ಮಾಹಿತಿಗಾಗಿ ಇಲ್ಲಿ ತಿಳಿಸಬಯಸುವ ವಿಷಯವೇನೆಂದರೆ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಹಾಗು ಕಾಂಗ್ರೆಸ್ಸಿನ ಹಲವಾರು ನಾಯಕರು ಈಗಾಗಲೇ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ‌. ಇತ್ತೀಚೆಗಷ್ಟೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಪಡೆದ ಬಳಿಕ ಹಲವು ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳ ನಾಯಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವ ಪ್ರಹಸನ ಇನ್ನೂ ಜಾರಿಯಲ್ಲಿದೆ.

ಇತ್ತ ಕರ್ನಾಟದಲ್ಲಿ ಇನ್ನೂ ರಾಜಕೀಯ ಡ್ರಾಮಾ ನಡೆಯುತ್ತಲೇ ಇದೆ. ಸದ್ಯ ಕರ್ನಾಟಕದಲ್ಲಿ ರಾಜಕೀಯ ಪ್ರಹಸನ ಮುಗಿದಿಲ್ಲ. ಜೆಡಿಎಸ್ ಹಾಗು ಕಾಂಗ್ರೆಸ್ ಮೈತ್ರಿ ಸರ್ಕಾರ ಬಿದ್ದುಹೋಗುವ ಎಲ್ಲ ಸೂಚನೆಗಳೂ ಕಂಡುಬರುತ್ತಿವೆ. ಕಾಂಗ್ರೆಸ್ ಹಾಗು ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಸರ್ಕಾರವನ್ನ ಬೀಳಿಸಲು ಬಿಜೆಪಿ ವಾಮಮಾರ್ಗದಿಂದ ಪ್ರಯತ್ನಿಸುತ್ತಿದೆ ಎಂದು ಬಿಜೆಪಿಯ ಮೇಲೆ ಆರೋಪ ಮಾಡುತ್ತಿವೆ. ಆದರೆ ಆಡಳಿತಾರೂಢ ಮೈತ್ರಿ ಸರ್ಕಾರ ತನ್ನ ಸರ್ಕಾರ ಉಳಿಸಿಕೊಳ್ಳುವ ಕೊನೆಯ ಪ್ರಯತ್ನಿದಲ್ಲಿದೆ.

ಶನಿವಾರದಂದು ಕರ್ನಾಟಕದ 11 ಕಾಂಗ್ರೆಸ್ ಹಾಗು ಜೆಡಿಎಸ್ ಪಕ್ಷದ 3 ಜನ ಶಾಸಕರು ರಾಜೀನಾಮೆ ನೀಡಲು ಸ್ಪೀಕರ್ ಕಛೇರಿಗೆ ತಲುಪಿದ್ದರು. ಇದಾದ ಬಳಿಕ ಬಿಜೆಪಿ ಹಾಗು ಕಾಂಗ್ರೆಸ್ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇದೆ. ಇದಷ್ಟೇ ಅಲ್ಲದೆ ಕಾಂಗ್ರೆಸ್ಸಿನ ಇನ್ನಿಬ್ಬರು ಶಾಸಕರಾದ ಡಾ.ಕೆ ಸುಧಾಕರ್ ಹಾಗು ಎಂಟಿಬಿ ನಾಗರಾಜ್ ಕೂಡ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದರು.

ಕಾಂಗ್ರೆಸ್ ಹಾಗು ಜೆಡಿಎಸ್ ಪಕ್ಷಗಳ ಟೆನ್ಶನ್ ಹೆಚ್ಚಾಗುತ್ತಲೇ ಇದೆ. ಇತ್ತ ಕರ್ನಾಟಕದಲ್ಲಿ 15 ಶಾಸಕರು ರಾಜೀನಾಮೆ ಸಲ್ಲಿಸಲು ಮುಂದಾಗಿದ್ದರೆ ಅತ್ತ ಗೋವಾದಲ್ಲೂ ಕೂಡ ಅತೃಪ್ತ ಕಾಂಗ್ರೆಸ್ ಶಾಸಕರು ಬಂಡಾಯವೆದ್ದು ಕಾಂಗ್ರೆಸ್ಸಿನ ಚಳಿ ಜ್ವರ ಬಿಡಿಸಲು ಮುಂದಾಗಿದ್ದಾರೆ. ಗೋವಾದಲ್ಲಿ ಅತೃಪ್ತ ಶಾಸಕರು ಕಾಂಗ್ರೆಸ್ಸಿನಿಂದ ಹೊರಬಂದು ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತೇವೆ ಎಂದು ತಿಳಿಸಿದ್ದಾರೆ.

ಗೋವಾದಲ್ಲಿ ಕಾಂಗ್ರೆಸ್ಸಿನ 15 ಶಾಸಕರಿದ್ದು ಅವರಲ್ಲಿ ಬರೋಬ್ಬರಿ 10 ಜನ ಶಾಸಕರು ವಿಧಾನಸಭಾ ಸ್ಪೀಕರ್ ರಾಜೇಶ್ ಪಾಟೇಕರ್‌ರನ್ನ ಭೇಟಿಯಾಗಿದ್ದಾರೆ ಹಾಗು ಬಿಜೆಪಿ ಸೇರ್ಪಡೆಯಾಗುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ಸಿಗೆ ಇದೀಗ ಡಬಲ್ ಶಾಕ್ ಕೊಡಲು ಕಾಂಗ್ರೆಸ್ ಶಾಸಕರೇ ಮುಂದಾಗಿದ್ದಾರೆ. ಏತನ್ಮಧ್ಯೆ ಇದೀಗ ಈ ಎರಡೂ ರಾಜ್ಯಗಳ ಹೊರತಾಗಿ ಅತ್ತ ಪಶ್ಚಿಮ ಬಂಗಾಳದಲ್ಲೂ ನೂರಕ್ಕೂ ಹೆಚ್ಚು ಬಿಜೆಪಿಯೇತರ ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದು ಮುಕುಲ್ ರಾಯ್ ಹೇಳಿರುವುದು ತೀವ್ರ ಕುತೂಹಲ ಸೃಷ್ಟಿಸಿದೆ.

– Team Google Guruu

Leave a Reply

Your e-mail address will not be published. Required fields are marked *

error: Content is protected !!