50% ಗಿಂತಲೂ ಅಧಿಕ ಮುಸಲ್ಮಾನರಿರುವ ಈ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದ ಸ್ಥಾನಗಳೆಷ್ಟು ಗೊತ್ತಾ;

ಲೋಕಸಭಾ ಚುನಾವಣೆ 2019 ರ ಫಲಿತಾಂಶ ಪ್ರಕಟವಾಗಿದೆ ಹಾಗು ಈ ಚುನಾವಣೆಯಲ್ಲಿ ಸ್ಪಷ್ಟವಾಗಿ ಕಂಡುಬಂದಿರುವ ಬಂದಿರುವ ಅಂಶಗಳು ತಥಾಕಥಿತ ಸೆಕ್ಯೂಲರ್‌ಗಳಿಗೆ ಕಲಿಯೋಕೆ ಬಹಳಷ್ಟು ಪಾಠಗಳನ್ನ ಜನ ತಿಳಿಸಿಕೊಟ್ಟಿದ್ದಾರೆ. ಪ್ರಧಾನಿ ಮೋದಿಯವರಂತೂ ಮತ್ತೊಮ್ಮೆ ಗೆದ್ದಿದ್ದಾರೆ ಹಾಗು ಅವರು ಎರಡನೆಯ ಬಾರಿಗೆ ಪ್ರಧಾನಮಂತ್ರಿಯೂ ಆಗಲಿದ್ದಾರೆ.

ಪ್ರಧಾನಿ ಮೋದಿ ಸದಾ “ಸಬಕಾ ಸಾಥ್ ಸಬಕಾ ವಿಕಾಸ್” ಮಂತ್ರವನ್ನ ಜಪಿಸುತ್ತಿರುತ್ತಾರೆ ಹಾಗು ಬಿಜೆಪಿ ಪಕ್ಷ ಟ್ರಿಪಲ್ ತಲಾಕ್ ನಿಂದ ನೊಂದಿರುವ ಮುಸ್ಲಿಂ ಮಹಿಳೆಯರ ಪರವಾಗಿ ಸಾಕಷ್ಟು ಹೋರಾಟ ಮಾಡಿತ್ತು. ಆದರೆ ವಿರೋಧಪಕ್ಷಗಳ ಸಹಕಾರವಿಲ್ಲವೆ ಟ್ರಿಪಲ್ ತಲಾಕ್ ಬಿಲ್ ಲೋಕಸಭೆಯಲ್ಲಿ ಪಾಸ್ ಆದರೂ ರಾಜ್ಯಸಭೆಯಲ್ಲಿ ವಿರೋಧಪಕ್ಷಗಳು ಬೆಂಬಲಿಸದ ಕಾರಣ ಅದು ಅಲ್ಲಿಗೆ ನಿಂತು ಹೋಗಿತ್ತು.

ಸಬಕಾ ವಿಕಾಸ್ ಅಂತೂ ಮಾಡಿದರು ಆದರೆ ಚುನಾವಣಾ ಫಲಿತಾಂಶದಲ್ಲಿ ಮಾತ್ರ ಸಬಕಾ ಸಾಥ್ ಮಾತ್ರ ಮಾತ್ರ ಮೋದಿ ಹಾಗು ಬಿಜೆಪಿಗೆ ಸಿಗಲೇ ಇಲ್ಲ, ಹೌದು ವಿಶೇಷವಾಗಿ ಮುಸ್ಲಿಂ ಬಾಹುಳ್ಯವಿರುವ ಕ್ಷೇತ್ರಗಳಲ್ಲಿ ಬಿಜೆಪಿಯ ಸ್ಥಿತಿ ತೀರಾ ಚಿಂತಾಜನಕವಾಗಿದೆ. ದೇಶದಲ್ಲಿ ಮುಸ್ಲಿಂ ಬಾಹುಳ್ಯವಿರೋ ಒಟ್ಟು 16 ಲೋಕಸಭಾ ಕ್ಷೇತ್ರಗಳಿದ್ದು ಇಲ್ಲಿ ಮುಸಲ್ಮಾನರು 50% ಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಮುಸ್ಲಿಂ ಬಾಹುಳ್ಯವಿರುವ ಈ 16 ಲೋಕಸಭಾ ಕ್ಷೇತ್ರಗಳು ಪಶ್ಚಿಮ ಬಂಗಾಳ, ಕೇರಳ, ಕಾಶ್ಮೀರ, ಅಸ್ಸಾಂ, ಉತ್ತರಪ್ರದೇಶ, ಬಿಹಾರ್ ಹಾಗು ಇನ್ನಿತರ ರಾಜ್ಯಗಳಲ್ಲಿವೆ. ಈ 16 ಕ್ಷೇತ್ರಗಳಲ್ಲಿ 50% ಕ್ಕೂ ಅಧಿಕ ಮುಸಲ್ಮಾನರ ಜನಸಂಖ್ಯೆಯಿದ್ದು ಈ ಎಲ್ಲಾ 16 ಕ್ಷೇತ್ರಗಳಲ್ಲೂ ಬಿಜೆಪಿ ಭಾರೀ ಹಿನ್ನಡೆ ಅನುಭವಿಸಿದೆ ಹಾಗು ಈ ಕ್ಷೇತ್ರಗಳ ಪೈಕಿ ಒಂದು ಲೋಕಸಭಾ ಕ್ಷೇತ್ರವನ್ನೂ ಬಿಜೆಪಿ ಗೆಲ್ಲೋಕೆ ಸಾಧ್ಯವಾಗಿಲ್ಲ.

ಮುಸ್ಲಿಂ ಬಾಹುಳ್ಯವಿರುವ ಈ ಕ್ಷೇತ್ರಗಳಾದರೂ ಯಾವುವು?

ಕೇರಳದ ಮಲಪ್ಪುರಂ, ಉತ್ತರಪ್ರದೇಶದ ಕಿಶನಗಂಜ್, ರಾಮಪುರ್, ಕಾಶ್ಮೀರದ ಶ್ರೀನಗರ್, ಬಾರಾಮುಲ್ಲಾ, ಅನಂತನಾಗ್, ಪಶ್ಚಿಮ ಬಂಗಾಳದ ಮಾಲ್ದಾ(ದಕ್ಷಿಣ), ಧುಬ್ರಿ, ಜಂಗಿಪುರ್, ಲಕ್ಷದ್ವೀಪ, ಹೈದ್ರಾಬಾದ್, ಬಹರಾಮಪುರ್, ಪೋನಲ್, ಮುರ್ಶಿದಾಬಾದ್, ಬಾರಪೇಟಾ ಹಾಗು ವಯನಾಡ್ ಕ್ಷೇತ್ರಗಳು ಮುಸ್ಲಿಂ ಬಾಹುಳ್ಯವಿರುವ ಕ್ಷೇತ್ರಗಳಾಗಿವೆ.

ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಠೇವಣಿಯೂ ಕಳೆದುಕೊಂಡಿದೆ:

ಲೋಕಸಭಾ ಚುನಾವಣೆಯ ಫಲಿತಾಂಶದಿಂದ ಸ್ಪಷ್ಟವಾದ ಅಂಶವೇನೆಂದರೆ ಎಲ್ಲೆಲ್ಲಿ ಮುಸ್ಲಿಂ ಜನಸಂಖ್ಯೆ 50% ಗಿಂತ ಅಧಿಕವೊದೆಯೋ ಅಲ್ಲಿ ಬಿಜೆಪಿ ಭಾರೀ ಮುಖಭಂಗ ಅನುಭವಿಸಿ ಸೋಲು ಕಂಡಿದೆ, ಸಬಕಾ ಸಾಥ್ ಸಬಕಾ ವಿಕಾಸ್ ಅನ್ನೋ ಮಂತ್ರ ಈ ಕ್ಷೇತ್ರಗಳಲ್ಲಿ ವರ್ಕೌಟ್ ಆಗೋಕೆ ಸಾಧ್ಯವೇ ಇಲ್ಲ, ಬಿಜೆಪಿಗೆ ಇಲ್ಲಿ ನೆಲೆ ಸಿಗೋದು ಈ ಜನ್ಮದಲ್ಲಿ ಸಾಧ್ಯವಿಲ್ಲ.

ಹಾಗು ಬಿಜೆಪಿಯ ಕೆಲ ನಾಯಕರು ಟ್ರಿಪಲ್ ತಲಾಕ್ ಗೋಸ್ಕರ ನಾವು ಮಾಡಿರುವ ಹೋರಾಟದಿಂದ ಮುಸ್ಲಿಂ ಮಹಿಳೆಯರಿಂದ ನಮಗೆ ಭರ್ಜರಿ ವೋಟ್ ಸಿಗುತ್ತೆ ಎಂದುಕೊಂಡಿದ್ದರು, ಅಂತಹ ನಾಯಕರಿಗೆ ಈ ಕ್ಷೇತ್ರಗಳ ಮುಸ್ಲಿಂ ಮಹಿಳಾ ಮತದಾರರು ಭರ್ಜರಿಯಾದ ಕಪಾಳಮೋಕ್ಷವನ್ನೇ ಮಾಡಿ ಸೋಲಿಸಿದ್ದಾರೆ.

ಇನ್ನೊಂದು ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಒಟ್ಟು 29 ಕ್ಷೇತ್ರಗಳಲ್ಲಿ ಮುಸಲ್ಮಾನರ ಜನಸಂಖ್ಯೆ 40% ಗಿಂತ ಅಧಿಕವಿದ್ದು ಈ 29 ಕ್ಷೇತ್ರಗಳ ಪೈಕಿ ಬಿಜೆಪಿ ಕೇವಲ 5 ಸೀಟುಗಳನ್ನ ಗೆಲ್ಲುವಲ್ಲಿ ಸಾಧ್ಯವಾಗಿದೆ. ಇವುಗಳಲ್ಲಿ ಉತ್ತರಪ್ರದೇಶದ ಸಹಾರನಪುರ್, ಸಂಭಲ್, ಗಾಜಿಪುರ್, ಅಮರೋಹಾ, ಮೊರಾದಾಬಾದ್ ದಂತಹ ಕ್ಷೇತ್ರಗಳಲ್ಲಿ ಬಿಜೆಪಿ ಸೋತು ಸುಣ್ಣವಾಗಿದೆ ಹಾಗು ಮೀರತ್ ನಂತಹ ಕ್ಷೇತ್ರಗಳಲ್ಲಿ ಬಿಜೆಪಿ ಸಿಕ್ಕಾಪಟ್ಟೆ ಕಠಿಣ ಪರಿಶ್ರಮದಿಂದ ಅದೂ ಕೇವಲ 10 ಸಾವಿರ ಅಂತರಗಳ ಮತಗಳಲ್ಲಿ ಗೆಲುವು ಸಾಧಿಸಿದೆ.

ನಾವು ಇಲ್ಲಿ ಹೇಳಲು ಹೊರಟಿರುವ ವಿಷಯವೇನೆಂದರೆ ಮುಸ್ಲಿಂ ಮತದಾರರ ಸಂಖ್ಯೆ 50% ದಾಟಿದರೆ ಆ ಕ್ಷೇತ್ರದಲ್ಲಿ ಹರಿ ಬ್ರಹ್ಮ ಬಂದು ನಿಂತು ಚುನಾವಣೆ ಎದುರಿಸಿದರೂ ಅಲ್ಲಿ ಬಿಜೆಪಿ ಗೆಲ್ಲೋಕೆ ಸಾಧ್ಯವಿಲ್ಲ, ಹಾಗಾಗಿ ಬಿಜೆಪಿ ಮುಸ್ಲಿಂ ತುಷ್ಟೀಕರಣವನ್ನ ಕೈಬಿಟ್ಟು, ಸಬಕಾ ಸಾಥ್ ಸಬಕಾ ವಿಕಾಸ್ ಮಂತ್ರದ ಬದಲು ಹಿಂದುಗಳ ಒಗ್ಗಟ್ಟಿಗಾಗಿ, ಹಿಂದುಗಳ ಒಳಿತಿಗಾಗಿ ಕೆಲಸ ಮಾಡಿದರೆ ಹಾಗು ಜನಸಂಖ್ಯಾ ನಿಯಂತ್ರಣ ಕಾನೂನು ತಂದರೆ ಮಾತ್ರ ಈಗ ಕಂಡಿರುವ ಗೆಲುವಿನ ನಾಗಲೋಟದಲ್ಲಿ ಮುಂದುವರೆಯಬಹುದು ಇಲ್ಲವಾದರೆ ಮುಂದೊಂದು ದಿನ ಕೇಸರಿ ಪಕ್ಷಕ್ಕೆ ಭಾರತದಲ್ಲಿ ನೆಲೆ ಕಳೆದುಕೊಳ್ಳೋದು ಖಚಿತ.

– Team Google Guruu

Leave a Reply

Your e-mail address will not be published. Required fields are marked *

error: Content is protected !!