ಎಲ್ಲಿಂದ ಬರ್ತಾರೆ ಎಲ್ಲಿಗೆ ಹೋಗ್ತಾರೆ ಈ ಸಾಧುಗಳು ಅನ್ನೋದು ಯಾರಿಗೂ ಈವರೆಗೂ ತಿಳಿದಿಲ್ಲ; ನಾಗಾ ಸಾಧುಗಳ ಬಗ್ಗೆ ನಿಮಗೆ ಗೊತ್ತಿರದ ರಹಸ್ಯ ರೋಚಕ ಮಾಹಿತಿಗಳು

ಇಂದು ನಾವು ನಿಮಗೆ ಹೇಳಲು ಹೊರಟಿರುವ ನಾಗಾ ಸಾಧುಗಳ ಜೀವನದ ಬಗ್ಗೆ ಹಾಗು ನಾಗಾ ಸಾಧುಗಳ ರಹಸ್ಯಗಳ ಬಗ್ಗೆ ತಿಳಿದರೆ ನೀವು ಒಮ್ಮೆ ಶಾಕ್ ಆಗ್ತೀರ. ಹೌದು ನಾಗಾ ಸಾಧುಗಳ ಜೀವನ ಭಾರೀ ರಹಸ್ಯದಿಂದಲೇ ಕೂಡಿರುತ್ತದೆ ಹಾಗು ಆ ರಹಸ್ಯಗಳ ಬಗ್ಗೆ ಹೊರ ಜಗತ್ತಿನ ಜನರಿಗೆ ಒಂದಿಷ್ಟೂ ಮಾಹಿತಿಯೇ ಇರೋದಿಲ್ಲ.

ನಾಗಾಸಾಧುಗಳ ಜೀವನ ಸದಾ ರಹಸ್ಯದಿಂದಲೇ ಕೂಡಿರುತ್ತದೆ, ಅಲ್ಲಿ ಯಾವ ರೀತಿಯ ಸಾಧುಗಳಿರುತ್ತಾರೆ ಅವರೇನು ಮಾಡ್ತಾರೆ? ಎಲ್ಲಿಂದ ಬರ್ತಾರೆ ಎಲ್ಲಿಗೆ ಹೋಗ್ತಾರೆ ಅನ್ನೋದರ ಕೆಲ ರೋಚಕ ಮಾಹಿತಿಯನ್ನ ಇಂದು ನಾವು ನಿಮಗೆ ತಿಳಿಸುತ್ತೇವೆ. ವಿಶೇಷವಾದ ಸಂಗತಿಯೇನೆಂದರೆ ಈ ನಾಗಾ ಸಾಧುಗಳು ಹಿಮಾಲಯದ ತಪ್ಪಲಿನಲ್ಲಿ ವಾಸಿಸುತ್ತಾರೆ, ಇವರು ಯಾವಾಗ ಎಲ್ಲಿಂದ ಬರ್ತಾರೆ ಎಲ್ಲಿಗೆ ಹೊರಟು ಹೋಗ್ತಾರೆ ಅನ್ನೋದು ಯಾರಿಗೂ ಗೊತ್ತಾಗುವುದಿಲ್ಲ‌.

ಬನ್ನಿ ನಾಗಾಸಾಧುಗಳ ಬಗ್ಗೆ ನಿಮಗೆ ಗೊತ್ತೇ ಇರದ ಹಾಗು ಅವರಿಗೆ ಸಂಬಂಧಿಸಿದ ಕೆಲ ರಹಸ್ಯಗಳ ಬಗ್ಗೆ ತಿಳಿದುಕೊಳ್ಳೋಣ

ನಾಗಾಸಾಧುಗಳು ಹಿಂದೂ ಧರ್ಮಾವಲಂಬಿ ಸಾಧುಗಳಾಗಿದ್ದು ವಿಶೇಷ ಸಂಗತಿಯೇನೆಂದರೆ ಇವರು ಸಂಪೂರ್ಣ ನಗ್ನರಾಗೇ ಇರುತ್ತಾರೆ ಹಾಗು ಅದರ ಜೊತೆ ಜೊತೆಗೆ ಯುದ್ಧ ಕಲೆಯಲ್ಲೂ ಪ್ರಾವೀಣ್ಯತೆ ಹೊಂದಿರುವುದಕ್ಕಾಗಿ ಇವರು ಫೇಮಸ್

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಯಾವ ವ್ಯಕ್ತಿ ನಾಗಾ ಸಾಧುವಾಗಲು ಇಚ್ಛಿಸುತ್ತಾನೋ ಆತ ಮೊದಲು ಅಖಾಡಾದಲ್ಲಿ ಪ್ರವೇಶ ಪಡೆಯಬೇಕು, ಪೂರ್ಣ ರೂಪದಿಂದ ಬ್ರಹ್ಮಚರ್ಯ ಜೀವನವನ್ನ ಪಾಲಿಸಬೇಕು. ನಾಗಾ ಸಾಧುವಾಗಲು ಪೂರ್ಣ ಪ್ರಕ್ರಿಯೆ ಮುಗಿಯಬೇಕೆಂದರೆ 6 ರಿಂದ 12 ವರ್ಷಗಳ ಸಮಯ ಹಿಡಿಯುತ್ತೆ.

ಇವರು ಸೇರಿಕೊಳ್ಳುವ ಅಖಾಡಾದ ಗುರುಗಳು ಇವರಿಗೆ ತಾವು ನಾಗಾ ಸಾಧುವಾಗಲು ಅರ್ಹರೋ ಇಲ್ಲವೋ ಅನ್ನೋದನ್ನ ಇವರ ಪರೀಕ್ಷೆ ನಡೆಸಿ ಬಳಿಕ ಮುಂದಿನ ಪ್ರಕ್ರಿಯೆಯನ್ನ ಶುರು ಮಾಡುತ್ತಾರೆ. ನಾಗಾ ಸಾಧುಗಳು ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದ ತಕ್ಷಣ ತಮ್ಮ ನಿತ್ಯ ಕ್ರಿಯೆಗಳು, ಸ್ನಾನ ಹಾಗಯ ಅದಾದ ಬಳಿಕ ಶೃಂಗಾರದ ಕೆಲಸವನ್ನ ಮೊದಲು ಮಾಡುತ್ತಾರೆ.

ಇದಾದ ಬಳಿಕ ಅವರು ಹವನ, ಧ್ಯಾನ, ಬಜ್ರೋಲಿ, ಪ್ರಾಣಾಯಾಮ, ಕಪಾಲ ಕ್ರಿಯಾ ಹಾಗು ನೌಲಿ ಕ್ರಿಯೆಗಳನ್ನ ಮಾಡುತ್ತಾರೆ‌. ಇಡೀ ದಿನದಲ್ಲಿ ಒಂದೇ ಬಾರಿ ಅದೂ ಸಂಜೆ ಹೊತ್ತಿಗೆ ಈ ಭೋಜನ ಮಾಡಿ ಬಳಿಕ ರಾತ್ರಿ ಮಲಗಲು ಹೊರಡುತ್ತಾರೆ. ಸಂತರುಗಳ 13 ಅಖಾಡಾಗಳಲ್ಲಿ 7 ಸನ್ಯಾಸಿ ಅಖಾಡಾಗಳೇ ನಾಗಾ ಸಾಧುಗಳನ್ನ ತಯಾರು ಮಾಡುತ್ತಾರೆ. ಇದರಲ್ಲಿ ಜೂನಾ, ಮಹಾನಿರ್ವಣಿ, ನಿರಂಜನಿ, ಅಟಲ, ಅಗ್ನಿ, ಆನಂದ ಹಾಗು ಆವಾಹನ್ ಅಖಾಡಾಗಳಿರುತ್ತವೆ.

ನಾಗಾ ಸಾಧುವಾಗುವ ಸಮಯದಲ್ಲಿ ಸಾಧುವಿಗೆ ಅಖಾಡಾದ ಧ್ವಜದ ಕೆಳಗೆ 24 ಗಂಟೆಗಳ ಕಾಲ ನಗ್ನವಾಗಿ ನಿಂತಿರಬೇಕಾಗುತ್ತದೆ‌. ನಿಮಗೆ ಈ ವಿಷ್ಯ ತಿಳಿದರೆ ಖಂಡಿತ ಬೆಚ್ಚಿಬೀಳುವಿರಿ, ಅದೇನೆಂದರೆ ನಾಗಾ ಸಾಧುವಾಗುವ ಪ್ರಕ್ರಿಯೆಯ ಬಳಿಲ ವರಿಷ್ಠ ನಾಗಾ ಸಾಧು ಶಿಶ್ನದ ವಿಶೇಷ ನರವೊಂದನ್ನ ಜೋರಾಗಿ ಎಳೆದು ಆತನನ್ನ ನಪುಂಸಕ ಮಾಡಿಬಿಡುತ್ತಾರೆ. ಇದಾದ ಬಳಿಕ ಆತ ನಾಗಾ ದಿಗಂಬರ ಸಾಧುವಾಗಿಬಿಡುತ್ತಾನೆ.

ನಾಗಾ ಎಂದರೆ ಸಂಸ್ಕೃತದಲ್ಲಿ ಬೆಟ್ಟ (Mountain) ಎಂದರ್ಥ, ಯಾರು ಬೆಟ್ಟಗಳ ತಪ್ಪಲಿನಲ್ಲಿ ವಾಸಿಸುತ್ತಾರೋ ಅವರನ್ನ ನಾಗಾ ಸಾಧುಗಳೆಂದು ಕರೆಯುತ್ತಾರೆ. ನಾಗಾ ಸಾಧುಗಳ ಪರಂಪರೆಯ ಇತಿಹಾಸದ ಬಗ್ಗೆ ಹುಡುಕುತ್ತ ಹೊರಟರೆ ಅದು ಹರಪ್ಪ, ಮೊಹೆಂಜೋದಾರೋ ಸಂಸ್ಕೃತಿಯತ್ತ ಬೊಟ್ಟು ಮಾಡಿ ತೋರಿಸುತ್ತದೆ. ಮೊಹೆಂಜೋದಾರೋ ಸಂಸ್ಕೃತಿಯ ಬಗ್ಗೆ ಸಿಕ್ಕ ಕುರುಹುಗಳು, ಅಲ್ಲಿ ಸಿಕ್ಕ ನಾಣ್ಯಗಳ ಮೇಲೆ ನಾಗಾಸಾಧುಗಳು ಶಿವನನ್ನ ಪಶುಪತಿನಾಥ ರೂಪದಲ್ಲಿ ಪೂಜೆ ಮಾಡುತ್ತಿರೋದನ್ನ ನಾವು ಕಾಣಬಹುದಾಗಿದೆ.

ಇಡೀ ಜಗತ್ತನೇ ಗೆಲ್ಲುತ್ತೇನೆ ಎಂದು ಹೊರಟಿದ್ದ ಅಲೆಗ್ಸಾಂಡರ್ ಭಾರತವನ್ನೂ ಗೆಲ್ಲಲು ಹೊರಟಿದ್ದ ಆದರೆ ಅದು ಆತನಿಂದ ಕೊನೆಗೂ ಆಗಲೇ ಇಲ್ಲ. ಅಲೆಗ್ಸಾಂಡರ್ ಹಾಗು ಆತನ ಸೇನೆ ನಾಗಾ ಸಾಧುಗಳನ್ನ ತಾವು ಭಾರತದ ನೆಲಕ್ಕೆ ತಲುಪಿದ್ದಾಗ ಭೇಟಿಯಾಗಿದ್ದರು. ಬುದ್ಧ ಹಾಗು ಮಹಾವೀರರೂ ಕೂಡ ನಾಗಾ ಸಾಧುಗಳನ್ನ ಕಾಣಲು ಹಾಗು ಅವರ ಕಠೋರ ತಪಸ್ಸು, ದೇಹದಂಡನೆಯನ್ನ ಕಾಣಲು ಉತ್ಸುಕರಾಗಿದ್ದರಂತೆ. ಜೈನ ದಿಗಂಬರಗಳ ಪರಂಪರೆಯ ಮೂಲ ನಾಗಾ ಸಾಧುಗಳಿಂದ ಎರವಲು ಪಡೆದ ಪರಂಪರೆಯೆಂದೇ ಹೇಳಲಾಗುತ್ತದೆ.

ಎಲ್ಲರೂ ನಾಗಾ ಸಾಧುಗಳಾಗೋಕೆ ಸಾಧ್ಯವಿಲ್ಲ, ಅದೃಷ್ಟವಂತ ಕೆಲವರಷ್ಟೇ ನಾಗಾ ಸಾಧುಗಳಾಗಬಲ್ಲರು ಎಂಬುದು ಅವರ ಅಭಿಪ್ರಾಯ. ಅಚಲವಾದ ನಂಬಿಕೆ, ಕಠೋರವಾದ ಬದ್ಧತೆಯಿರುವವ ಮಾತ್ರ ನಾಗಾ ಆಗಬಹುದು. ನಾಗಾ ಸಾಧುವಾಗಲು ನೀಡುವ ಟ್ರೈನಿಂಗ್ ಎಷ್ಟು ಕಠಿಣವಾಗಿರುತ್ತದೆಯೆಂದರೆ ಜಗತ್ತಿನ ಯಾವ ರಾಷ್ಟ್ರಗಳ ಸೇನೆಯ ಟ್ರೈನಿಂಗ್‌ಗೂ ಇದನ್ನ ಹೋಲಿಕೆ ಮಾಡಲು ಸಾಧ್ಯವಿಲ್ಲವಂತೆ.

ಹಿಂದೂ ಮಂದಿರಗಳನ್ನ ಮುಸ್ಲಿಂ ಆಕ್ರಮಣಕಾರರಿಂದ ರಕ್ಷಿಸಿ ಹೋರಾಡಿದ್ದ ನಾಗಾ ಸಾಧುಗಳು:

ಭಾರತದಲ್ಲಿ ಮುಸ್ಲಿಂ ಆಕ್ರಮಣಕಾರರು ಹಿಂದೂ ದೇವಾಲಯಗಳನ್ನ ನಾಶಮಾಡಿ ಮೂರ್ತಿ ಭಗ್ನವಾಗಲು ಮುಂದಾಗಿದ್ದ ಸಮಯದಲ್ಲಿ ನಾಗಾ ಸಾಧುಗಳು ವೈದಿಕ ಪರಂಪರೆಯ ರಕ್ಷಣೆಗಾಗಿ ಮುಸ್ಲಿಂ ಆಕ್ರಮಣಕಾರರ ವಿರುದ್ಧವೂ ಯುದ್ಧ ನಡೆಸಿ ಹಿಂದೂ ಮಂದಿರಗಳನ್ನ ರಕ್ಷಿಸಿದ್ದರು. ನಾಗಾ ಸಾಧುಗಳು ತಲ್ವಾರ್, ತ್ರಿಶೂಲ, ಗಧೆ, ತೀರ್ ಧನುಷ್ ಹಾಗಯ ತಮಗಿರುವ ಯುದ್ಧಕಲೆಯ ಮೂಲಕ ಶಿವನ ಮಂದಿರಗಳನ್ನ ಮುಸ್ಲಿಂ ಆಕ್ರಮಣಕಾರರಿಂದ, ಮೊಘಲರಿಂದ ರಕ್ಷಿಸಿದ್ದರು.

ಮತಾಂಧ, ಕ್ರೂರಿ ಔರಂಗಜೇಬ ಹಿಂದೂ ಮಂದಿರಗಳನ್ನ ಧ್ವಂಸಗೊಳಿಸಲೆಂದೇ ಕಟ್ಟಿದ್ದ ವಿಶೇಷವಾದ ಶಸ್ತ್ರಸಜ್ಜಿತ ಸೇನೆಯನ್ನ ನೂರಾರು ಬಾರಿ ನಾಗಾ ಸಾಧುಗಳೇ ಸೋಲಿಸಿ ಸದೆ ಬಡಿದಿದ್ದರು. ಈ ಭಯೋತ್ಪಾದಕ ಇಸ್ಲಾಮಿಕ್ ಮತಾಂಧರನ್ನ ಹುಚ್ಚುನಾಯಿಗಳಿಗಳಂತೆ ಅಟ್ಟಾಡಿಸಿಕೊಂಡು ಕತ್ತರಿಸಿ ಬಿಸಾಡಿ ಶಿವನ ಮಂದಿರಗಳನ್ನ ಹಾಗು ಅನ್ಯಮಂದಿರಗಳನ್ನ ರಕ್ಷಿಸಿದ್ದರು ನಾಗಾ ಸಾಧುಗಳು.

– Vinod Hindu Nationalist

Leave a Reply

Your email address will not be published. Required fields are marked *

error: Content is protected !!