ಮೋದಿ ಪ್ರಮಾಣ ವಚನ ಬೆನ್ನಲ್ಲೇ ರಾಹುಲ್ ಗಾಂಧಿಯನ್ನ ಲಾಕ್ ಮಾಡಿ ಖೆಡ್ಡಾಗೆ ಬೀಳಿಸಿದ ಸುಬ್ರಮಣಿಯನ್ ಸ್ವಾಮಿ

ನ್ಯಾಷನಲ್‌ ಹೆರಾಲ್ಡ್‌ ದಿನಪತ್ರಿಕೆಯನ್ನ 1938ರಲ್ಲಿ ಜವಹರಲಾಲ್‌ ನೆಹರೂ ಆರಂಭಿಸಿದ್ದರು. ಈ ಪತ್ರಿಕೆಯನ್ನ ಅಸೋಸಿಯೇಟೆಡ್​​ ಜರ್ನಲ್ಸ್​ ಲಿಮಿಟೆಡ್(ಎಜೆಎಲ್​​) ನಡೆಸುತ್ತಿತ್ತು. ಇಂಡಿಯನ್ ನ್ಯಾಷನಲ್​​ ಕಾಂಗ್ರೆಸ್​​ನಿಂದ ಎಜೆಎಲ್​ ₹90.25 ಕೋಟಿ ಬಡ್ಡಿ ರಹಿತ ಸಾಲ ಪಡೆದಿತ್ತು. ಈ ಸಾಲವನ್ನ ಹಿಂದಿರುಗಿಸಲಾಗಿಲ್ಲ ಎನ್ನಲಾಗಿದೆ.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ನ್ಯಾಷನಲ್​ ಹೆರಾಲ್ಡ್​​, 2008ರಲ್ಲಿ ಮುಚ್ಚಿಹೋಯ್ತು. ಪತ್ರಿಕೆಯ ಆಡಳಿತ ನೋಡಿಕೊಳ್ಳುತ್ತಿದ್ದ ಎಜೆಎಲ್‌ ಬಳಿಕ  ರಿಯಲ್‌ ಎಸ್ಟೇಟ್‌ ಕಂಪನಿಯಾಗಿ ಬದಲಾಗಿತ್ತು. 2010ರಲ್ಲಿ  ಸ್ಥಾಪನೆಯಾದ ಯಂಗ್​ ಇಂಡಿಯನ್ ಲಿಮಿಟೆಡ್​​​, ಎಜೆಎಲ್​​​ನ ಬಹುತೇಕ ಶೇರ್​​ಗಳು ಹಾಗೂ ಅದರ ಎಲ್ಲಾ (₹5000 ಕೋಟಿ ಮೊತ್ತದ್ದು ಎನ್ನಲಾದ)ಆಸ್ತಿಯನ್ನ ತನ್ನದಾಗಿಸಿಕೊಳ್ತು. 

ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಯಂಗ್​ ಇಂಡಿಯನ್ ಲಿಮಿಟೆಡ್​​ನ ಬೋರ್ಡ್ ಡೈರೆಕ್ಟರ್​ಗಳಾಗಿದ್ದು, ಸಂಸ್ಥೆಯ ಬಹುಪಾಲು ಶೇರ್​​ಗಳನ್ನ ಹೊಂದಿದ್ದಾರೆ. ಎಜೆಎಲ್​​​ನ ಆಸ್ತಿ ಪಡೆಯುವಲ್ಲಿ ಸೋನಿಯಾ ಹಾಗೂ ರಾಹುಲ್ ಗಾಂಧಿ​ ಅವ್ಯವಹಾರವೆಸಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ 2012ರಲ್ಲಿ ಕೋರ್ಟ್​ ಮೆಟ್ಟಿಲೇರಿದ್ದರು.

ಸೋನಿಯಾ ಹಾಗೂ ರಾಹುಲ್​​ ಅಲ್ಲದೆ, ಕಾಂಗ್ರೆಸ್​​ ಖಜಾಂಚಿ ಮೋತಿಲಾಲ್​​ ವೋರಾ, ಪ್ರಧಾನ ಕಾರ್ಯದರ್ಶಿ ಆಸ್ಕರ್​ ಫರ್ನಾಂಡಿಸ್​, ಪತ್ರಕರ್ತ ಸುಮನ್​ ದುಬೇ ಹಾಗೂ ಕಾಂಗ್ರೆಸ್​ ಓವರ್​ಸೀಸ್​ ಅಧ್ಯಕ್ಷ ಸ್ಯಾಮ್​​ ಪಿತ್ರೋಡಾ ಅವರನ್ನೂ ಕೂಡ ಈ ಪ್ರಕರಣದಲ್ಲಿ ಹೆಸರಿಸಲಾಗಿದೆ.

ನ್ಯಾಷನಲ್​ ಹೆರಾಲ್ಡ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಂಧಿ ಕುಟುಂಬಕ್ಕೆ ಇದೀಗ ಹಿನ್ನಡೆಯಾಗಿದ್ದೂ ಕೇಸ್​​ಗೆ ಸಂಬಂಧಿಸಿದಂತೆ ಗುರುಗ್ರಾಮದಲ್ಲಿರೋ ₹64 ಕೋಟಿ ಮೊತ್ತದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. 2018ರ ಡಿಸೆಂಬರ್​ನಲ್ಲಿ ಈ ಆಸ್ತಿಯನ್ನ ಖಾಯಂ ಆಗಿ ಜಪ್ತಿ ಮಾಡಿದ್ದು, ಈ ಬಗ್ಗೆ ಅಧಿಕಾರಿಗಳು ದೃಢಪಡಿಸಿದ್ದಾರೆ.

ಖಾಯಂ ಆಗಿ ಈ ಆಸ್ತಿಯನ್ನು ಜಪ್ತಿ ಮಾಡಲು ಜಾರಿ ನಿರ್ದೇಶನಾಲಯ ಕೋರ್ಟ್​ಗೆ ಅನುಮತಿ ಕೇಳಿತ್ತು. ಅದರಂತೆ ಈ ಕ್ರಮ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ದೀರ್ಘ ಕಾಲದಿಂದ ಚುನಾವಣಾ ಆಯೋಗ ಕಣ್ಣಿಟ್ಟಿದ್ದ ಈ ಆಸ್ತಿ ಈಗ ಖಾಯಂ ಆಗಿ ಜಪ್ತಿ ಆಗಿದೆ. ಇದರ ವಿರುದ್ಧ ಕೋರ್ಟ್​​ನಲ್ಲಿ ಪ್ರಶ್ನಿಸಲು ಗಾಂಧಿ ಕುಟುಂಬಕ್ಕೆ ಹೆಚ್ಚಿನ ಅವಕಾಶ ಉಳಿದಿಲ್ಲ.

ಯಂಗ್​ ಇಂಡಿಯಾ ಸಂಸ್ಥೆ ಕಾಂಗ್ರೆಸ್​​ಗೆ ಕೇವಲ ₹50 ಲಕ್ಷ ಹಣ ನೀಡಿ, ಎಜೆಎಲ್ ​​ಕಾಂಗ್ರೆಸ್​​ಗೆ ನೀಡಬೇಕಿದ್ದ ₹90.25 ಕೋಟಿ ಹಣವನ್ನು ಹಿಂಪಡೆಯುವ ಹಕ್ಕು ತನ್ನದಾಗಿಸಿಕೊಂಡಿದೆ ಎಂದು ಸ್ವಾಮಿ ಆರೋಪಿಸಿದ್ದಾರೆ.

ಈ ಎಲ್ಲಾ ದಾಖಲೆಗಳ ಪ್ರಕಾರ ಯಂಗ್​ ಇಂಡಿಯಾದ ಶೇ.76ರಷ್ಟು ಶೇರ್​​ಗಳು ಸೋನಿಯಾ ಹಾಗೂ ರಾಹುಲ್​ ಗಾಂಧಿ ಅವರ ಬಳಿ ಇದ್ದರೆ, ಮಿಕ್ಕ ಶೇ. 24ರಷ್ಟು ಶೇರ್​​ಗಳು ಪ್ರಕರಣದಲ್ಲಿ ಆರೋಪ ಹೊತ್ತಿರುವ ಇತರರ ಹೆಸರಿನಲ್ಲಿದೆ. ಇನ್ನು ಎಜೆಎಲ್​ಗೆ ನೀಡಿರೋ ಸಾಲ ಕೂಡ ಅಕ್ರಮ, ಇದನ್ನು ಪಾರ್ಟಿ ಫಂಡ್​​ನಿಂದ ನೀಡಲಾಗಿದೆ ಎಂದು ಕೂಡ ಸ್ವಾಮಿ ಆರೋಪ ಮಾಡಿದ್ದಾರೆ.

-Source First News

Leave a Reply

Your e-mail address will not be published. Required fields are marked *

error: Content is protected !!