130 ವರ್ಷದ ಭಜರಂಗಬಲಿಯ ಮೂರ್ತಿ ಒಡೆಯೋಕೆ ಅಧಿಕಾರಿಗಳು ಬಂದಿದ್ದರು ಆದರೆ ಮುರಿದ್ದು ಬಿದ್ದದ್ದು ಮಾತ್ರ ಜೆಸಿಬಿ ಮಷೀನ್‌ಗಳು

ಕೆಲ ದಿನಗಳ ಹಿಂದೆ ಉತ್ತರಪ್ರದೇಶದ ಸಹಾರನಪುರ್‌ನಲ್ಲಿ ನ್ಯಾಶನಲ್ ಹೈವೇ (ರಾಷ್ಟ್ರೀಯ ಹೆದ್ದಾರಿ) ಮಾಡಲು ಕೆಲಸ ನಡೆದಿತ್ತು. ರಸ್ತೆಯ ಮಧ್ಯೆ ಒಂದು ಹನುಮನ ಮಂದಿರವೊಂದು ಅಡ್ಡಲಾಗಿತ್ತು, ರಸ್ತೆಯ ನಿರ್ಮಾಣಕ್ಕಾಗಿ ರಸ್ತೆಗೆ ಅಡ್ಡಲಾಗಿದ್ದ ಆ ಮಂದಿರವನ್ನ ಒಡೆದಯ ಹಾಕಲು ಜನ ಸಾಕಷ್ಟು ಪ್ರಯತ್ನ ಮಾಡಿದರು. ಆದರೆ ಆ ಮಂದಿರದ ಇಟ್ಟಿಗೆಗಳೂ ಕೂಡ ಅಲುಗಾಡಿಸಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ಅಧಿಕಾರಿಗಳು ಇದನ್ನ ತೆರವುಗೊಳಿಸಲು ಮಷೀನ್‌ಗಳನ್ನ ತರಿಸಿದರು.

ಆದರೆ ಮಂದಿರವನ್ನ ಒಡೆಯುವ ಸಮಯ ಬಂದಾಗ ಅಧಿಕಾರಿಗಳು ತರಿಸಿದ್ದ ಎಲ್ಲಾ ಜೆಸಿಬಿ ಮಷೀನ್‌ಗಳೂ ಕೆಟ್ಟು ಹೋದವು. ಅದಾದ ಬಳಿಕ ಕೆಲಸಗಾರರು ಮಂದಿರವನ್ನ ಒಡೆದು ಹಾಕೋದು ಬೇಡ ಎಂದು ಹೇಳಿದರು. ಸದ್ಯ ಆ ಮಂದಿರವನ್ನ ಒಡೆಯುವ ಕೆಲಸವನ್ನ ಸದ್ಯ ಕೈ ಬಿಡಲಾಗಿದೆ.

ತಿಲಿಹಾರ್ ಠಾಣಾ ವ್ಯಾಪ್ತಿಯಲ್ಲಿನ ನ್ಯಾಶನಲ್ ಹೈವೇ 24 ನ ಕಚಿಯಾನಿ ಹಳ್ಳಿಯ ಬಳಿಯಿರುವ ಹನುಮನ ಈ ಮಂದಿರ ಬರೋಬ್ಬರಿ 130 ವರ್ಷಗಳಷ್ಟು ಪುರಾತನ ಮಂದಿರವಾಗಿದೆ. ನ್ಯಾಶನಲ್ ಹೈವೇ 24 ನ್ನ ಚತುಷ್ಪತ(ಫೋರ್ ಲೇನ್) ಮಾಡಲು ಸರ್ಕಾರ ನಿರ್ಧರಿಸಿತ್ತು, ಆದರೆ ಇದನ್ನ ಮಾಡಲು ಮುಂದಾದಾಗ ಆ ರಸ್ತೆಯ ಮಧ್ಯೆ ಈ ಹನುಮನ ಮಂದಿರ ಅಡ್ಡವಾಗಿತ್ತು. ಇದಾದ ಬಳಿಕ ರಸ್ತೆ ನಿರ್ಮಾಣ ಮಾಡುತ್ತಿರುವ ಕಂಪೆನಿಯ ಪ್ರಾಜೆಕ್ಟ್ ಮ್ಯಾನೆಜರ್ ಈ ಮಂದಿರವನ್ನ ಒಡೆದು ಹಾಕುವ ಆದೇಶ ನೀಡಿದ್ದ.

ಮಂದಿರವನ್ನ ಒಡೆಯುವ ಕಾರ್ಯ ಶುರು ಮಾಡಲಾಯಿತು. ದೊಡ್ಡ ದೊಡ್ಡ ಮಷೀನ್‌ಗಳನ್ನೂ ತರಲಾಯಿತು. ಆದರೆ ಆ ಮಷೀನ್‌ಗಳು ಮಂದಿರವನ್ನ ತೆರವುಗೊಳಿಸಲು ಮುಂದಾದಾಗ ಅಚಾನಕ್ಕಾಗಿ ಎಲ್ಲಾ ಬೃಹತ್ ಮಷೀನ್‌ಗಳೂ ಹನುಮನ ಚಮತ್ಕಾರವೆಂಬಂತೆ ಕೆಟ್ಟು ನಿಂತು ಹೋದವು. ಆದರೆ ಮಂದಿರದ ಒಂದು ಇಟ್ಟಿಗೆಯನ್ನೂ ಬೃಹತ್ ಜೆಸಿಬಿ ಮಷೀನ್‌ಗಳು ಅಲುಗಾಡಿಸಲು ಸಾಧ್ಯವಾಗಲಿಲ್ಲ.

ಇದಾದ ಬಳಿಕ ಕಂಪೆನಿಯ ಕೆಲಸಗಾರರು ಮಂದಿರದ ಬಳಿ ಪೂಜೆ ಸಲ್ಲಿಸಿದರು ಹಾಗು ಮಂದಿರವನ್ನ ಬೇರೆಡೆಗೆ ಸ್ಥಳಾಂತರಿಸುವ ನಿರ್ಧಾರ ಕೈಗೊಂಡರು. ಅದಾದ ಬಳಿಕ ಮಂದಿರದ ಕೆಲ ಭಾಗಗಳನ್ನ ಒಡೆಯಲು ಮಷೀನ್‌ಗಳು ಯಶಸ್ವಿಯಾದವು. ಆದರೆ ಯಾವಾಗ ಮೂರ್ತಿಯನ್ನ ಅಲ್ಲಿಂದ ಸ್ಥಳಾಂತರಿಸುವ ಸಮಯ ಬಂತೋ ಆಗ ದೊಡ್ಡ ದೊಡ್ಡ ಮಷೀನ್‌ಗಳನ್ನ ತರೆಸಲಾಯಿತು.

ಆ ಬೃಹತ್ ಮಷೀನ್‌ಗಳಿಂದ ಮೂರ್ತಿಯನ್ನ ಒಡೆಯೋಕೆ ಸಾಕಷ್ಟು ಪ್ರಯತ್ನ ಮಾಡಲಾಯಿತು ಆದರೆ ಮೂರ್ತಿಯ ಸಣ್ಣ ಭಾಗವನ್ನೂ ಒಡೆಯಲು ಸಾಧ್ಯವಾಗಲಿಲ್ಲ. ಇದನ್ನ ನೋಡಿದ ಅಕ್ಕಪಕ್ಕ ಹಳ್ಳಿಯ ಜನರು ಸ್ಥಳಕ್ಕಾಗಮಿಸಿ ಮಂದಿರವನ್ನ ಒಡೆಯಲು ಮುಂದಾದ ಕಂಪೆನಿಯ ವಿರುದ್ಧ ಪ್ರತಿಭಟಿಸಲಾರಂಭಿಸಿದರು.

ಸ್ಥಳೀಯರು ಹೇಳುವ ಪ್ರಕಾರ ಯಾವಾಗ ಮಂದಿರವನ್ನ ಒಡೆಯಲು ಎಲ್ಲ ಪ್ರಯತ್ನಗಳನ್ನೂ ನಡೆಸಲಾಯಿತು ಹಾಗು ಮಂದಿರವನ್ನ ಮಾತ್ರ ಉರುಳಿಸಲು ಸಾಧ್ಯವಾಗಲಿಲ್ಲ ಹಾಗಾಗಿ ಇದನ್ನ ಒಡೆಯಬಾರದು ಇದರಲ್ಲಿ ಅದೇನೋ ಶಕ್ತಿ ಅಡಗಿದೆ ಎಂದದ ಸ್ಥಳೀಯರು ಆಗ್ರಹಿಸಿದ್ದಾರೆ. ಈ ಮಂದಿರದ ಬಗ್ಗೆ ನಮ್ಮ ನಂಬಿಕೆಯಿತ್ತು ಈಗ ಅದು ಮತ್ತಷ್ಟು ಹೆಚ್ಚಾಗಿದೆ. ಈ ಮಂದಿರವನ್ನ ರಸ್ತೆಯ ಮಧ್ಯೆ ಬರುವಂತೆ ಮಾಡಿ ರಸ್ತೆ ನಿರ್ಮಿಸಬೇಕು ಎಂದು ಜನ ಆಗ್ರಹಿಸಿದ್ದಾರೆ.

– Team Google Guruu

Leave a Reply

Your e-mail address will not be published. Required fields are marked *

error: Content is protected !!