ರಾ’ಹುಲ್ ಗಾಂಧಿಯನ್ನೇ ದಂಗಾ’ಗಿಸಿದ ನವಜೋತ್ ಸಿಂಗ್ ಸಿದ್ದು ನಿರ್ಣಯ

ಪಂಜಾಬ್‌ನ ನವಜೋತ್ ಸಿಂಗ್ ಸಿದ್ದು ಕಾಂಗ್ರೆಸ್ ಪಕ್ಷದ ಮಂತ್ರಿಯಾಗಿ ಕಳೆದ ಹಲವು ವರ್ಷದಿಂದ ಕೆಲಸ ಮಾಡುತ್ತಿದ್ದು ಮೊನ್ನೆ ನಡೆದ ಲೋಕಸಭಾ ಚುನಾವಣೆಯ ಸಂಸರ್ಭದಲ್ಲಿ ದೇಶ ವಿರೋಧಿ ಹೆಸರಿನಲ್ಲಿ ತಮ್ಮ ಮಾನ ಹರಾಜು ಮಾಡಿಕೊಂಡಿದ್ದರು. ಹೌದು ಸಿದ್ದು ತನ್ನ ಪ್ರಚಾರದ ಸಂದರ್ಭದಲ್ಲಿ ಹಲವು ಕಾಂಗ್ರೆಸ್ ಕಾರ್ಯಕರ್ತರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದರು ಅವರ ಕುರಿತು ತುಟಿ ಬಿಚ್ಚಿರಲಿಲ.

ಇಷ್ಟೇ ಅಲ್ಲದೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ತೆರಳಿದ ನವಜೋತ್ ಸಿಂಗ್ ಸಿದ್ದು ಪಾಕಿಸ್ತಾನದ ಆರ್ಮಿ ಚೀಫ್ ಜೊತೆ ತಬ್ಬಿಕೊಂಡು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದರು, ಈ ಎಲ್ಲ ಕಾರಣದಿಂದಾಗಿ ಭಾರತೀಯರು ಸಿದ್ದುನ ದೇಶವಿರೋಧಿ ನೀತಿಗೆ ರೊಚ್ಚಿಗೆದ್ದು ಅನೇಕ ಟೀಕಾಪ್ರಹಾರ ನಡೆಸಿದ್ದರು.

ಇದೀಗ ಸಿದ್ದುಗೆ ಅದ್ಯಾವ ಜ್ಞಾನೋದಯವಾಗಿದೆಯೋ ಗೊತ್ತಿಲ್ಲ ಜನರ ಬೈಗುಳಕ್ಕೆ ಬೇಸತ್ತು ಕಾಂಗ್ರೆಸ್ ಅಧ್ಯಕ್ಷರಾದ ಮೋತಿಲಾಲ್ ವೋಹ್ರಾ ಅವರಿಗೆ ಪತ್ರ ಬರೆದು ಅದರಲ್ಲಿ ನಾನು ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೆನೆ ಎಂದು ಉಲ್ಲೇಖಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯ ನಂತರ ಕ್ಯಾಬಿನೆಟ್‌ನಲ್ಲಿ ಸಿದ್ದು ವಿರುದ್ಧ ಭಾರಿ ಟೀಕೆ ಕೇಳಿ ಬಂದಿದ್ದು ಇದಕ್ಕೆ ಉತ್ತರಿಸಲಾಗದ ನವಜೋತ್ ಸಿಂಗ್ ರಾಜಿನಾಮೆ ನೀಡಿದ್ದಾರೆ ಎನ್ನಲಾಗ್ತಿದೆ.

ಕ್ಯಾಬಿನೆಟ್ ನಲ್ಲಿ ಸ್ವಪಕ್ಷದ ನಾಯಕರ ಟೀಕೆಗಳು ಸಹುಸಲಾಗದ ನವಜೋತ್ ಸಿಂಗ್ ಸಿದ್ದು ರಾಜಿನಾಮೆ ನೀಡಿದ್ದು ಈ ಸಂಗತಿ ವಿಪಕ್ಷಗಳಿಗೆ ಭಾರಿ ಲಾಭದಾಯಕ ವಿಷಯವಾಗಿದೆ ಎನ್ನಬಹುದು. ಈ ವಿಷಯ ಮುಂದಿಟ್ಟುಕೊಂಡ ಬಿಜೆಪಿ ನಾಯಕ ತರುಣ್ ಚುಘ್ ಪಂಜಾಬ್ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ ಅದರಲ್ಲಿ ” ಸಿದ್ದು ಕಾಣೆಯಾಗಿದ್ದಾನೆ. ಮುಖ್ಯಮಂತ್ರಿ ಹಾಗೂ ಸಿದ್ದು ನಡುವೆ ಜಗಳ ಉಂಟಗಿದೆ ಹೀಗಾಗಿ ರಾಜ್ಯದಲ್ಲಿ ಇದೀಗ ಸಂವಿಧಾನ ಸಂಕಟದಲ್ಲಿದೆ” ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲದೆ ರಾಜ್ಯಪಾಲರು ಪಂಜಾಬ್ ಮಂತ್ರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರೇ ಅವರಿಗೆ ನಿವೃತ್ತಿ ಕೊಟ್ಟು ಬೇರೆ ಕೆಲಸ ಮಾಡಲು ಹಚ್ಚಬೇಕು, ಸಿದ್ದು ಸರಕಾರದ ಸಂಬಳ ಪಡೆಯುತ್ತಾರೆ ಆದರೇ ಸರ್ಕಾರದ ಕೆಲಸ ಮಾಡುತ್ತಿಲ್ಲ ಇದರ ಬಗ್ಗೆ ತನಿಖೆ ಮಾಡಿ ಎಂದು ಗಂಭೀರ ಅರೋಪ ಮಾಡಿದ್ದಾರೆ.

ಮೊನದನೆ ನಡೆದ 2019ರ ಲೋಕಸಭಾ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ಕಾಂಗ್ರೆಸ್ 5ಲೋಕಸಭಾ ಸೀಟುಗಳನ್ನು ಕಳೆದುಕೊಂಡಿದೆ ಇದಕ್ಕೆಲ್ಲ ಕಾರಣ ನವೋಜೋತ್ ಸಿಂಗ್ ಸಿದಗದು ಅವರ ಶಾಯರಿ ಹಾಗೂ ಅನವಶ್ಯಕ ಹೇಳಿಕೆ ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಿದ್ದು ಮೇಲೆ ಅಪವಾದ ಹೊರಸಿದ್ದಾರೆ. ನವಜೋತ್ ಸಿಂಗ್ ಸಿದ್ದು‌ನ ನಂಬಿ ಕಾಂಗ್ರೆಸ್ ಸೋಲಿನ ರುಚಿ ಉಂಡಿದೆ ಎಂದು ಅಮರಿಂದರ್ ತಿಳಿಸಿದ್ದಾರೆ.

ಆದರೇ ಇದಕ್ಕೆ  ಉತ್ತರಿಸಿದ ಸಿದ್ದು ಕ್ಯಾಬಿನೆಟ್ ಮಂತ್ರಿಗಳಿಗೆ “ಕಾಂಗ್ರೆಸ್ ಸೋಲಲು ನಾನೊಬ್ಬನೆ ಕಾರಣನಲ್ಲ, ಬದಲಾಗಿ ಸ್ವಪಕ್ಷ ಹಾಗೂ ಕಾರ್ಯಕರ್ತರು ಹಾಗೂ ಮೋದಿಜಿಯ ವರ್ಚಸ್ಸು”  ಎಂದು ಹೇಳಿದ್ದಾರೆ. ಇದಕ್ಕೆಲ್ಲ ಮುಕ್ತಾಯ ಎಂಬಂತೆ ಮಂತ್ರಿ ಸ್ಥಾನಕ್ಕೆ ಸಿದ್ದು ರಾಜಿನಾಮೆ ನೀಡಿದ್ದಾರೆ.

-Team Google Guru

Leave a Reply

Your email address will not be published. Required fields are marked *

error: Content is protected !!