ಸರ್ದಾರ್ ಪಟೇಲರ ಅಂತಿಮ‌ ಸಂಸ್ಕಾರಕ್ಕೆ ಹೋಗಬೇಡಿ ಅಂತ ಹೇಳಿದರೂ ಹೋದ ರಾಷ್ಟ್ರಪತಿ ರಾಜೇಂದ್ರ ಪ್ರಸಾದರಿಗೆ ನೆಹರು ಮಾಡಿದ್ದೇನು ಗೊತ್ತಾ

ನೆಹರೂವಿಗೆ ಸರ್ದಾರ್ ಪಟೇಲರೆಂದರೆ ಅದೆಷ್ಟು ದ್ವೇಷವಿತ್ತು ಅನ್ನೋದನ್ನ ನಾವು ವಿವರಿಸಿ ಹೇಳಲೂ ಕೂಡ ಸಾಧ್ಯವಿಲ್ಲ, ಎಲ್ಲಿ ಸರ್ದಾರ್ ಪಟೇಲರ ಕೈಗೆ ಅಧಿಕಾರ ಹೋಗಿಬಿಡುತ್ತೋ ಎಂಬ ಭಯವಿದ್ದ ನೆಹರು ಸರ್ದಾರ್ ಪಟೇಲರನ್ನ ಪಕ್ಷದಲ್ಲಿ ಸೈಡಲೈನ್ ಮಾಡಲು ನಾನ ಕಸರತ್ತುಗಳನ್ನ ನಡೆಸಿ ಕೊನೆಗೆ ಪಟೇಲರಿಗೆ ಒಲಿದಿದ್ದ ಪ್ರಧಾನ ಮಂತ್ರಿ ಹುದ್ದೆಯನ್ನ ನೆಹರು ಕಿತ್ತುಕೊಂಡಿದ್ದರು.

ನೆಹರು ಸದಾ ಮೋಹನದಾಸ್ ಗಾಂಧಿಯನ್ನ ಒಲಿಸಿಕೊಳ್ಳುವ ಕೆಲಸದಲ್ಲಿ ಹಾಗು ಗಾಂಧಿಯನ್ನ ಖುಷಿ ಪಡಿಸುವ ಕೆಲಸದಲ್ಲೇ ನಿರತನಾಗಿರುತ್ತಿದ್ದ. ಆದರೆ ಸರ್ದಾರ್ ಪಟೇಲರು ಮಾತ್ರ ಕಾಂಗ್ರೆಸ್ಸಿನ ಎಲ್ಲ ನಾಯಕರ ಜೊತೆಯಲ್ಲೂ ಉತ್ತಮ ಬಾಂಧವ್ಯವನ್ನ ಹೊಂದಿದ್ದರು. ಯಾವಾಗ ಭಾರತವನ್ನ ಬಿಟ್ಟು ಬ್ರಿಟಿಷರು ಹೊರಡಲು ಸಿದ್ಧರಾದರೋ ಆಗ ಕಾಂಗ್ರೆಸ್ಸಿನ ದೇಶದ 15 ಕಮಿಟಿಗಳಲ್ಲಿನ 13 ವೋಟ್ ಗಳು ಪಟೇಲರಿಗೇ ಬಂದಿದ್ದವು.

ಇದನ್ನ ಕಂಡ ನೆಹರು ದಿಗ್ಭ್ರಾಂತನಾಗಿ ಗಾಂಧಿಯ ಬಳಿ ತೆರಳಿ ನಾನೇ ಪ್ರಧಾನಮಂತ್ರಿ ಆಗಬೇಕು ಇಲ್ಲವಾದಲ್ಲಿ ನಾನು ಕಾಂಗ್ರೆಸ್ಸನ್ನ ಇಬ್ಭಾಗ ಮಾಡುತ್ತೇನೆ ಎಂದು ತನ್ನ ಅಸಮಾಧಾನ ಹೊರ ಹಾಕಿದ ಬಳಿಕ ಗಾಂಧಿ ಪ್ರಜಾಪ್ರಭುತ್ವದ ಕಗ್ಗೊಲೆಯನ್ನೇ ಮಾಡಿ ಸರ್ದಾರ್ ಪಟೇಲರ ಬದಲು‌ ನೆಹರುವನ್ನ ಪ್ರಧಾನಿಯಾಗುವಂತೆ ಮಾಡಿದ್ದು ತಮಗೆಲ್ಲಾ ತಿಳಿದಿರುವ ವಿಷಯವೇ.

ನೆಹರು ತನ್ನ ಮಂತ್ರಿಮಂಡಲದಲ್ಲಿ ಸರ್ದಾರ್ ಪಟೇಲರಿಗೆ ಮಂತ್ರಿ ಸ್ಥಾನವನ್ನೂ ಕೊಡಲು ಇಷ್ಟವಿರಲಿಲ್ಲ ಆದರೆ ಕಾಂಗ್ರೆಸ್ಸಿನ ಹಲವು ನಾಯಕರ ವಿರೋಧ ವ್ಯಕ್ತಪಡಿಸಬಹುದೆಂಬ ಭಯದಿಂದ ಹಾಗು ಗಾಂಧಿ ಮಾತಿಗೆ ಒಪ್ಪಿ ನೆಹರು ಪಟೇಲರಿಗೆ ಗೃಹಮಂತ್ರಿಯಾಗಲು ಒಪ್ಪಿಗೆ ಸೂಚಿಸಿದ. ಹಾಗು ಪಟೇಲರು ದೇಶದ ಪ್ರಥಮ ಗೃಹಮಂತ್ರಿಯಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದರು.

ಭಾರತ ಸ್ವತಂತ್ರವಾಗಿ ಭಾರತದ ವಿಭಜನೆಯಾದ ಬಳಿಕವೂ ಬಳಿಕವೂ ನೆಹರು ಭಾರತದಲ್ಲಿ ಕೂಡ ಹಲವಾರು ಇಸ್ಲಾಮಿಕ್ ರಾಜಸಂಸ್ಥಾನಗಳಾಗೇ ಉಳಿದಿರುವಂತೆ ನೆಹರು ಬಯಸಿದ್ದ, ಇದೇ ಕಾರಣಕ್ಕಾಗಿ ಸಮಯಕ್ಕೆ ಸರಿಯಾಗಿ ಭಾರತೀಯ ಸೇನೆಯನ್ನ ಕಾಶ್ಮೀರಕ್ಕೆ ಕಳಿಸಲು ನೆಹರು ನಿರಾಕರಿಸಿದ್ದ ಹಾಗು ಕಾಶ್ಮೀರದ ಅರ್ಧ ಭಾಗವನ್ನ ಅಂದರೆ ಈಗಿನ ಪಾಕ್ ಆಕ್ರಮಿತ ಕಾಶ್ಮೀರ (POK) ಕೂಡ ಬಿಟ್ಟು ಕೊಟ್ಟಿದ್ದ. ಕಾಶ್ಮೀರದ ಹೊರತಾಗಿಯೂ ನೆಹರು ಅವಧ್, ಹೈದ್ರಾಬಾದ್, ಜುನಾಗಢ್ ಹಾಗು ಇನ್ನೂ ಕೆಲವು ಪ್ರದೇಶಗಳನ್ನ ಮುಸ್ಲಿಂ ರಾಜರುಗಳಿಗೇ ಒಪ್ಪಿಸಲು ನಿರ್ಧಾರ ಮಾಡಿದ್ದ.

ಆದರೆ ನೆಹರುವಿನ ಈ ನಿರ್ಧಾರಕ್ಕೆ ಸರ್ದಾರ್ ಪಟೇಲರು ಸುತಾರಾಂ ಒಪ್ಪಲಿಲ್ಲ ಹಾಗು ಅವರು ಗುಜರಾತಿನ ಜುನಾಗಢ್ ಹಾಗು ಭಾರತೀಯ ಸೇನೆಯ ಮೂಲಕ ಅಪರೇಷನ್ ಪೋಲೋ ಮಾಡಿಸುವ ಮೂಲಕ ಹೈದ್ರಾಬಾದ್ ಹಾಗು ಇನ್ನಿತರ ಸಣ್ಣಪುಟ್ಟ ಮುಸ್ಲಿಂ ರಾಜರುಗಳ ಸಂಸ್ಥಾನಗಳನ್ನ ಭಾರತದ ಜೊತೆ ವಿಲೀನ ಮಾಡಿಬಿಟ್ಟಿದ್ದರು. ಸರ್ದಾರ್ ಪಟೇಲರ ಈ ಖಡಕ್ ನಿರ್ಧಾರಗಳು ನೆಹರೂವಿಗೆ ಹಿಡಿಸಲಿಲ್ಲ‌. ಪಟೇಲರೆಂದರೆ ನೆಹರೂವಿಗಿದ್ದ ದ್ವೇಷ ಎಷ್ಟು ಅನ್ನೋದಕ್ಕೆ ಹಲವು ಸಾಕ್ಷಿಗಳು ನಮಗೆ ಸಿಗುತ್ತವೆ.

ಮುಂಬೈನಲ್ಲಿ ಡಿಸೆಂಬರ್ 15, 1950 ರಂದು ಸರ್ದಾರ್ ಪಟೇಲರ ನಿಧನವಾಯಿತು, ಆಗ ಅವರಿನ್ನೂ ದೇಶದ ಗೃಹಮಂತ್ರಿಯಾಗೇ ಇದ್ದರು, ಆದರೆ ಪಟೇಲರ ಅಂತಿಮ ದರ್ಶನಕ್ಕೂ ಕೂಡ ನೆಹರು ಹೋಗಲು ನಿರಾಕರಿಸಿದ್ದ. ಕೊನೆಗೆ ಹೋಗಲೂ‌ ಇಲ್ಲ‌. ಇಷ್ಟೇ ಅಲ್ಲದೆ ಪಟೇಲರೆಂದರೆ ನೆಹರೂವಿಗೆ ಎಷ್ಟು ದ್ವೇಷವಿತ್ತೆಂದರೆ ಆತ ದೇಶದ ಪ್ರಥಮ ರಾಷ್ಟ್ರಪತಿಯಾಗಿದ್ದ ರಾಜೇಂದ್ರ ಪ್ರಸಾದರಿಗೂ ಪಟೇಲರ ಅಂತಿಮ ಸಂಸ್ಕಾರಕ್ಕೆ ಹೋಗದಂತೆ ತಡೆದಿದ್ದ.‌

ಆದರೆ ರಾಜೇಂದ್ರ ಪ್ರಸಾದ್ ರವರು ನೆಹರು ಮಾತನ್ನ ಧಿಕ್ಕರಿಸಿ ಸರ್ದಾರ್ ಪಟೇಲರ ಅಂತಿಮ ದರ್ಶನ ಪಡೆದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಪಟೇಲರನ್ನ ಮೊದಲು ದ್ವೇಷಿಸಿದ್ದ ನೆಹರೂವಿಗೆ ಈಗ ತನ್ನ ಮಾತನ್ನ ಧಿಕ್ಕರಿಸಿ ಪಟೇಲರ ಅಂತ್ಯ ಕ್ರಿಯೆಗೆ ತೆರಳಿದ್ದ ರಾಜೇಂದ್ರ ಪ್ರಸಾದ್ ಮೇಲೆ ಕೋಪ ನೆತ್ತಿಗೇರಿತ್ತು.

ಇದಾದ ಬಳಿಕ 1962 ರವರೆಗೆ ರಾಜೇಂದ್ರ ಪ್ರಸಾದ್ ರಾಷ್ಟ್ರದ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದರು ಹಾಗು 1962 ರ ಮೇ ತಿಂಗಳಿನಲ್ಲಿ ನಿವೃತ್ತಿಯಾದರಯ ಹಾಗು ಹೊಸ ರಾಷ್ಟ್ರಪತಿಯಾಗಿ ಸರ್ವೇಪಲ್ಲಿ ರಾಧಾಕೃಷ್ಣನ್ ಆಯ್ಕೆಯಾದರು. ಆದರೆ ಕೆಲವೇ ತಿಂಗಳುಗಳಲ್ಲಿ‌ ಅಂದರೆ 1963 ರ ಫೆಬ್ರವರಿ ತಿಂಗಳಿನಲ್ಲೇ ರಾಜೇಂದ್ರ ಪ್ರಸಾದರು ವಿಧಿವಶರಾಗಿಬಿಟ್ಟರು. ಆಗಲೂ ನೆಹರು ದೇಶದ ಪ್ರಧಾನಿಯಾಗೇ ಇದ್ದ‌.

ರಾಜೇಂದ್ರ ಪ್ರಸಾದರ ಅಂತಿಮ ದರ್ಶನಕ್ಕಷ್ಟೇ ಅಲ್ಲದೆ ಅಂತ್ಯ ಸಂಸ್ಕಾರಕ್ಕೂ ನೆಹರು ಹೋಗಲಿಲ್ಲ, ಅಷ್ಟೇ ಅಲ್ಲದೆ ಆಗ ರಾಷ್ಟ್ರಪತಿಯಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ರವರನ್ನೂ ರಾಜೇಂದ್ರ ಪ್ರಸಾದ್ ರವರ ಅಂತಿಮ ದರ್ಶನಕ್ಕೆ ತೆರಳಬಾರದೆಂದು ಹೇಳಿಬಿಟ್ಟಿದ್ದ. ಪಟೇಲರ ಅಂತಿಮ ದರ್ಶನಕ್ಕೆ ಹೋಗಬೇಡವೆಂದರೂ ರಾಜೇಂದ್ರ ಪ್ರಸಾದರು ಹೇಗೆ ನೆಹರು ಮಾತನ್ನ ಧಿಕ್ಕರಿಸಿ ಹೋಗಿದ್ದರೋ ಅದೇ ರೀತಿಯಲ್ಲಿ ರಾಧಾಕೃಷ್ಣನ್ ರವರೂ ಕೂಡ ನೆಹರೂವಿನ ಮಾತನ್ನ ಧಿಕ್ಕರಿಸಿ ರಾಜೇಂದ್ರ ಪ್ರಸಾದರ ಅಂತಿಮ ದರ್ಶನ ಪಡೆದಿದ್ದರು.

ಬಳಿಕ ಅಂದರೆ 1964 ರಲ್ಲಿ ನೆಹರು ನಿಧನವಾಯಿತು, ಹೀಗಿತ್ತು ದೇಶದ ಪ್ರಥಮ ಪ್ರಧಾನಮಂತ್ರಿ ನೆಹರೂವಿನ ಕರಾಳ ಚರಿತ್ರೆ. ಆದರೂ ನೆಹರೂ ದಿ ಗ್ರೇಟ್ ಅಂತೆ. ಈಗ ಹೇಳಿ ಆತ ಗ್ರೇಟಾ ಅಥವ…..

– Vinod Hindu Nationalist

Leave a Reply

Your e-mail address will not be published. Required fields are marked *

error: Content is protected !!