ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಅಮಿತ್ ಶಾಹ್ ರಾಜೀನಾಮೆ? ಹೊಸ ಬಿಜೆಪಿ ಅಧ್ಯಕ್ಷ ಯಾರು ಗೊತ್ತಾ?

ಲೋಕಸಭಾ ಚುನಾವಣೆ 2019 ಫಲಿತಾಂಶ ಮೇ 23 ಕ್ಕೆ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಅಧ್ಯಕ್ಷ, ಚಾಣಕ್ಯ ಅಮಿತ್ ಶಾಹ್ ಕೂಡ ಗುಜರಾತಿನ ಗಾಂಧಿನಗರದಿಂದ ಸ್ಪರ್ಧಿಸಿ ಭರ್ಜರಿಯಾದ ಗೆಲುವು ಸಾಧಿಸಿ ಇದೀಗ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇಂದು ಸಂಜೆ ನರೇಂದ್ರ ಮೋದಿ ಎರಡನೆಯ ಬಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಲಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಬಿಜಿಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಮಿತ್ ಶಾಹ್ ಕಾರ್ಯ ನಿರ್ವಹಿಸಿದ್ದು ಭಾರತೀಯ ಜನತಾ ಪಕ್ಷವನ್ನ ಭಾರತದಾದ್ಯಂತ ಕಮಲ ಅರಳುವಂತೆ ಮಾಡಿ ನರೇಂದ್ರ ಮೋದಿಯವರನ್ನ ಪ್ರಧಾನಮಂತ್ರಿಯಾಗಿ ಗದ್ದುಗೆಯಲ್ಲಿ ಕೂರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಇದೇ ಅಮಿತ್ ಶಾಹ್. 2014 ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಿದ್ದಾಗ ಅಮಿತ್ ಶಾಹ್ ಇನ್ನೂ ರಾಜ್ಯಸಭಾ ಸದಸ್ಯ ಅಥವ ಲೋಕಸಭಾ ಸದಸ್ಯರಾಗಿರಲಿಲ್ಲ.

ಹಾಗಾಗಿ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಅಮಿತ್ ಶಾಹ್ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಬಳಿಕ ಮೋದಿ ಮಂತ್ರಿಮಂಡಲದಲ್ಲಿ ಅಮಿತ್ ಶಾಹ್‌ಗೆ ಗೃಹ ಸಚಿವ ಪಟ್ಟ ಸಿಗಬಹುದು ಎಂದು ಹೇಳಲಾಗುತ್ತಿದೆ. ಅಮಿತ್ ಶಾಹ್ ಮಂತ್ರಿಮಂಡಲದಲ್ಲಿ ಮಂತ್ರಿಯಾದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಯಾರ ಹೆಗಲಿದೆ ಎಂಬ ಸಸ್ಪೆನ್ಸ್ ಈಗ ಬಯಲಾಗಿದೆ.

ಒಂದು ವೇಳೆ ಬಿಜೆಪಿ ಚಾಣಕ್ಯ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಹ್ ಮೋದಿ ಸಂಪುಟಕ್ಕೆ ಸೇರಿದರೆ ಬಿಜೆಪಿ ಕೇಂದ್ರ ನಾಯಕ ಹಾಗು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಮುಂದಿನ ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನವನ್ನ ಅಲಂಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೆಪಿ ನಡ್ಡಾ ರವರು ಅಮಿತ್ ಶಾಹ್ ಆಪ್ತರಾಗಿದ್ದು ಅವರೇ ಮುಂದಿನ ಬಿಜೆಪಿ ರಾಷ್ಟ್ರಾಧ್ಯಕ್ಷ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಜುಲೈ 10 (ಬಹುಶಃ) ಯೂನಿಯನ್ ಬಜೆಟ್ ಆದ ಬಳಿಕ ಈ ವರ್ಷದ ಸೆಪ್ಟೆಂಬರ್ ನಲ್ಲಿ ಮಹಾರಾಷ್ಟ್ರ, ಝಾರ್ಖಂಡ್ ಹಾಗು ಹರಿಯಾಣಾ ಮೂರು ರಾಜ್ಯಗಳ ಚುನಾವಣೆ ಮುಗಿದ ಬಳಿಕ ಬಿಜೆಪಿ ರಾಷ್ಟ್ರಾಧ್ಯಕ್ಷ ಚುನಾವಣೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಜೆಪಿ‌ ನಡ್ಡಾ ಈ ಚುನಾವಣೆಗಳಿಗಾಗಿ ಪ್ರಚಾರ ಕಾರ್ಯದ ರಣತಂತ್ರಗಳು ರೂಪಿಸಲಿದ್ದಾರೆ.

ಮುಂಬರುವ ಜಮ್ಮು ಕಾಶ್ಮೀರದಲ್ಲೂ ಚುನಾವಣೆ ನಡೆಯಲಿವೆ ಹಾಗು ಕರ್ನಾಟಕದಲ್ಲೂ ಮೈತ್ರಿ ಸರ್ಕಾರ ಬೀಳಬಹುದು ಎಂದು ಹೇಳಲಾಗುತ್ತಿದೆ, ಮುಂದಿನ ವರ್ಷ ದೆಹಲಿಯಲ್ಲೂ ಚುನಾವಣೆ ಎದುರಾಗಲಿದ್ದು ಈ ಚುನಾವಣೆಗಳಿಗಾಗಿ ಜೆಪಿ ನಡ್ಡಾ ಬಿಜೆಪಿ ರಾಷ್ಟ್ರಾಧ್ಯಕ್ಷನ ಮೂಲಕ ಬಿಜೆಪಿ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

55 ವರ್ಷ ವಯಸ್ಸಿನ ಜೆಪಿ ನಡ್ಡಾ ರಾಜ್ಯಸಭಾ ಸದಸ್ಯರಾಗಿದ್ದು ಅವರು ಪಾರ್ಲಿಮೆಂಟರಿ ಬೋರ್ಡಿನ ಸೆಕ್ರೆಟರಿ ಕೂಡ ಆಗಿದ್ದಾರೆ. ನಡ್ಡಾ ರವರು ಬಿಜೆಪಿಯ ಮಾಸ್ಟರ್ ಸ್ಟ್ರ್ಯಾಟಜಿಸ್ಟ್ ಕೂಡ ಆಗಿದ್ದು ಬಿಜೆಪಿ ಪಕ್ಷ ಅವರಿಗೆ ಉತ್ತರಪ್ರದೇಶದ ಉಸ್ತುವಾರಿಯನ್ನೂ ನೀಡಿದ್ದರು ಹಾಗು ಜೆಪಿ‌ ನಡ್ಡಾ ಕೂಡ ಭರ್ಜರಿಯಾದ ರಣತಂತ್ರ ರೂಪಿಸಿ 80 ಕ್ಷೇತ್ರಗಳ ಪೈಕಿ 62 ಸೀಟುಗಳನ್ನ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.‌

– Team Google Guruu

Leave a Reply

Your e-mail address will not be published. Required fields are marked *

error: Content is protected !!