ಪ್ರಧಾನಿ ಮೋದಿ, ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಗರ್‌ಬರ್ಗ್ ಕೂಡ ಭೇಟಿಯಾಗಿದ್ದಾರೆ ಈ ವ್ಯಕ್ತಿಯನ್ನ

ಭರತ ಭೂಮಿಯಲ್ಲಿ ಸಾಕಷ್ಟು ರಹಸ್ಯ, ಇಂದಿಗೂ ಕಂಡು ಹಿಡಿಯಲಾಗದ ಚಮತ್ಕಾರಿ ವಿಷಯಗಳು ಸಾಕಷ್ಟಿವೆ, ಭರತ ಭೂಮಿಯ ಭೂಗರ್ಭದಲ್ಲಿ ಅಡಗಿರುವ ರಹಸ್ಯಮಯ ವಸ್ತುಗಳನ್ನ ಹಾಗು ಚಮತ್ಕಾರಿ ವಿಷಯಗಳನ್ನ ಕಂಡು ಹಿಡಿಯೋಕೆ ಈಗಲೂ ವಿಜ್ಞಾನಿಗಳು ತಡಕಾಡುತ್ತಿದ್ದಾರೆ. ಅಂತಹುದೇ ಸ್ಥಳವೊಂದರ ಬಗ್ಗೆ ಇಂದು ನಾವು ನಿಮಗೆ ತಿಳಿಸಲಿದ್ದೇವೆ.

ಹಿಮಾಲಯದ ತಪ್ಪಲಿನಲ್ಲಿರುವ ಉತ್ತರಾಖಂಡ ರಾಜ್ಯ ಭಾರತದ ಸ್ವಿಟ್ಜರ್ಲೆಂಡ್‌‌ ಎಂದೇ ಪ್ರಸಿದ್ಧವಾದ ರಾಜ್ಯವಾಗಿದೆ. ಇದೇ ಉತ್ತರಾಖಂಡ ರಾಜ್ಯದ ನೈನಿತಾಲ್ ನ ಕಾಂಡಪಾಲ್ ಬಳಿಯಿರುವ ಅಂಜನೇಯನ ಅವತಾರ ರೂಪಿಯೆಂದೇ ಕರೆಯುವ ಬಾಬಾ (ನೀಮ್ ಕರೋಲಿ ಬಾಬಾ) ರವರ ಬಳಿ ಸ್ವತಃ ಅಂಜನೇಯನೇ ನೀಡಿದ ಪಾತ್ರೆಯೊಂದಿದೆ ಎಂದು ಹೇಳಲಾಗುತ್ತದೆ.

ಭಕ್ತಾದಿಗಳು ಹಾಗು ದೇವಸ್ಥಾನದ ಅರ್ಚಕರು, ಸುತ್ತಮುತ್ತಲಿನ ಜನ ಹೇಳುವಂತೆ ಸಾಕ್ಷಾತ್ ಆಂಜನೇಯನೇ ಈ ಪಾತ್ರೆಯೊಂದನ್ನ ನೀಮ್ ಕರೋಲಿ ಬಾಬಾಗೆ ನೀಡಿದ್ದೆಂದು ಹೇಳಲಾಗುತ್ತೆ. ಮಂಜು ಹೇಳುವಂತೆ ಯಾವಾಗಿನಿಂದ ಬಾಬಾಜೀ ನೀಡಿರುವ ಕೃಪಾ ಪಾತ್ರ ಪಾತ್ರೆ ಅವರ ಬಳಿಯಿದೆಯೋ ಆಗಿನಿಂದ ಅವರ ಸಕಲ ಸಂಕಷ್ಟಗಳೂ ದೂರವಾಗಿವೆಯಂತೆ.

ನೈನಿತಾಲ್ ನಿವಾಸಿಯಾಗಿರುವ ಮಂಜು ಕಾಂಡಪಾಲ್, ಪತಿ ಬಿ.ಡಿ ಕಾಂಡಪಾಲ್ ಹನುಂತನ ಅವತಾರ(ನೀಮ್ ಕರೋಲಿ ಬಾಬಾ)ವನ್ನ ಸಾಕ್ಷಾತ್ ದರ್ಶನವನ್ನ ಮಾಡಿದ್ದಾರಂತೆ. ಹೌದು ಹನುಮನ ಅವತಾರವೆಂದೇ ಕರೆಯುವ ಬಾಬಾ ನೀಮ್ ಕರೋಲಿಯವರು ಮಂಜುವಿಗೆ ಈ ಕೃಪಾಪಾತ್ರ ಪಾತ್ರೆಯನ್ನ ನೀಡಿದ್ದರು.

ಮಂಜು ಹೇಳುವಂತೆ ತಾವು ಒಂಭತ್ತನೆಯ ತರಗತಿಯಲ್ಲಿ ಓದುತ್ತಿರುವಾಗಲೇ ನೀಮ್ ಕರೋಲಿ ಬಾಬಾರವರು ಅವರಿಗೆ ಪ್ರಸಾದದಿಂದ ತುಂಬಿದ್ದ ಒಂದು ಪಾತ್ರೆಯನ್ನ ನೀಡಿ ಅದನ್ನ ಸದಾ ತನ್ನ ಬಳಿಯೇ ಇಟ್ಟುಕೊಳ್ಳುವಂತೆ ಹೇಳಿದ್ದರಂತೆ. ಅಂದಿನಿಂದ ಇಂದಿನವರೆಗೂ ಮಂಜುರವರ ಸಕಲ ಸಂಕಷ್ಟಗಳೂ ದೂರವಾಗಿವೆಯೆಂದು ಮಂಜು ಹೇಳುತ್ತಾರೆ.

ಮಂಜು ಕಾಂಡಪಾಲ್ ಟಿವಿ ಅಭಿನೇತ್ರಿ ಸುಕೀರ್ತಿ ಕಾಂಡಪಾಲ್ ರವರ ತಾಯಿ. ಸುಕೀರ್ತಿ ಕಾಂಡಪಾಲ್ ಹಿಂದಿ ಬಿಗ್ ಬಾಸ್ ನಲ್ಲೂ ಕಾಣಿಸಿಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಫೇಸ್ಬುಕ್ ಸಿಇಓ ಮಾರ್ಕ್ ಜುಗರ್‌ಬರ್ಗ್ ವರೆಗೂ ನೀಮ್ ಕರೋಲಿ ಬಾಬಾರ ದರ್ಶನವನ್ನ ಪಡೆದು ಬಂದಿದ್ದರಿಂದ ಇಂದು ಈ ಆಶ್ರಮ ಸಾಕಷ್ಟು ಫೇಮಸ್ ಆಗಿದ್ದು ಭಕ್ತರ ದಂಡೇ ಹರಿದು ಬರುತ್ತಿದೆ.

ನೈನಿತಾಲ್ ನ ಕೈಂಚಿ ಧಾಮ್ ಮಂದಿರದ ಹೊರತಾಗಿ ವಿಂಧ್ಯಾಚಲದಲ್ಲಿ ಅಷ್ಟಭುಜಾ ಪರ್ವತದ ಮೇಲೂ ಮಾರ್ಕ್ ಜುಗರ್‌ಬರ್ಗ್ ರವರ ಆಧ್ಯಾತ್ಮಿಕ ಗುರು ಹಾಗು ಆ್ಯಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಭೇಟಿ ನೀಡಿದ್ದ ಆಶ್ರಮವಿದೆ. ಈ ಸ್ಥಳ ಈಗಲೂ ಹಲವಾರು ರಹಸ್ಯಗಳಿಂದ ಕೂಡಿದೆಯೆಂದು ಹೇಳಲಾಗುತ್ತದೆ.

ಫೇಸ್ಬುಕ್ ಸಂಸ್ಥೆ ಹಾಗು ಆ್ಯಪಲ್ ಸಂಸ್ಥೆಯ ಸಂಸ್ಥಾಪಕರಾದ ಮಾರ್ಕ್ ಜುಕರ್‌ಬರ್ಗ್ ಹಾಗು ಸ್ಟೀವ್ ಜಾಬ್ಸ್ ರವರಿಗೆ ಆಧ್ಯಾತ್ಮಿಕತೆಯ ದಾರಿಯನ್ನ ತೋರಿಸಿದ ನೀಮ್ ಕರೋಲಿ ಬಾಬಾ ರವರ ಶಕ್ತಿ ಪಶ್ಚಿಮ ದೇಶಗಳಲ್ಲೂ ಭಾರತೀಯ ಪರಂಪರೆ, ಸಂಸ್ಕೃತಿಯನ್ನ ಪ್ರತಿನಿಧಿತ್ವ ಮಾಡುವಂತೆ ಮಾಡಿದೆ. ಸದಾ ಕಾಲ ಒಂದು ಕಂಬಳಿಯನ್ನೇ ಹೊದ್ದುಕೊಂಡಿರುತ್ತಿದ್ದ ಬಾಬಾರ ದರ್ಶನ, ಆಶೀರ್ವಾದ ಪಡೆಯಲು ಭಾರತೀಯರಷ್ಟೇ ಅಲ್ಲದೆ ದೊಡ್ಡ ದೊಡ್ಡ ವಿದೇಶಿ ಕಂಪೆನಿಗಳ ಮಾಲೀಕರೂ ಆಶ್ರಮಕ್ಕೆ ಬರುತ್ತಿದ್ದರು.

ನೀಮ್ ಕರೋಲಿ ಬಾಬಾರವರ ಕೆಲ ವಿಷಯಗಳು ಅವರನ್ನು ಭಾರತದ ಮಹಾಪುರುಷರಲ್ಲೊಬ್ಬರ ಸಾಲಿನಲ್ಲಿ ತಂದು ನಿಲ್ಲಿಸುತ್ತದೆ‌. ಬನ್ನಿ ಅವರ ಜೀವನದ ಕುರಿತಾದ ಕೆಲ ವಿಷಯಗಳನ್ನ ತಿಳಿದುಕೊಳ್ಳೋಣ

ನೀಮ್ ಕರೋಲಿ ಬಾಬಾ ರ ಜನ್ಮ ಉತ್ತರಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಅಕ್ಬರ್‌ಪುರಾ ದಲ್ಲಿನ ಬ್ರಾಹ್ಮಣ ಪರಿವಾರದಲ್ಲಾಗಿತ್ತು. ಕೇವಲ‌ 11 ವರ್ಷದ ವಯಸ್ಸಿನಲ್ಲೇ ಅವರಿಗೆ ಬ್ರಾಹ್ಮಣ ಕನ್ಯೆಯೊಂದಿಗೆ ಮದುವೆ ಮಾಡಿಸಲಾಗಿತ್ತು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಅವರು ಮನೆ ಬಿಟ್ಟು ಹೋಗಿ ಸನ್ಯಾಸಿಯಾಗಿಬಿಟ್ಟಿದ್ದರು.

ಮೂಲಗಳ ಪ್ರಕಾರ ಕೇವಲ 17 ನೆಯ ವಯಸ್ಸಿನಲ್ಲಿಯೇ ಬಾಬಾ ರಿಗೆ ಬ್ರಹ್ಮಾಂಡದ ಇಡೀ ಜ್ಞಾನಾರ್ಜನೆಯಾಗಿಬಿಟ್ಟಿತ್ತಂತೆ. ಬಾಬಾ ಮನೆ ಬಿಟ್ಟು 10 ವರ್ಷಗಳ ಬಳಿಕ ತಮ್ಮ ಮಗ ಹೀಗೆ ಸಾಧುವಾಗಿಬಿಟ್ಟಿದಾನೆ ಅನ್ನೋ ಮಾಹಿತಿಯನ್ನ ಬಾಬಾರವರ ತಂದೆಗೆ ತಿಳಿಸಿದಾಗ ಆ ತಂದೆ ಬಾಬಾರಿಗೆ ಮನೆಗೆ ವಾಪಸ್ ಮರಳುವಂತೆಹಾಗು ವೈವಾಹಿಕ ಜೀವನ ನಡೆಸುವಂತೆ ಆಗ್ರಹಿಸಿದರು.

ಬಳಿಕ ಮನೆಗೆ ವಾಪಸ್ಸಾದ ಬಾಬಾ ವೈವಾಹಿಕ ಜೀವನ ನಡೆಸಿದರು, ಅವರಿಗೆ ಇಬ್ಬರು ಗಂಡುಮಕ್ಕಳು ಹಾಗು ಒಬ್ಬ ಹೆಣ್ಣುಮಗಳೂ ಜನಿಸಿದರು. ಗೃಹಸ್ಥರಾದರೂ ಕೂಡ ಅವರು ತಮ್ಮನ್ನ ತಾವು ಸಾಮಾಜಿಕ ಜೀವನದಲ್ಲಿ ವ್ಯಸ್ಥರಾಗಿರುವಂತೆ ನೋಡಿಕೊಳ್ಳುತ್ತಿದ್ದರು. 1962 ರ ದಶಕದಲ್ಲಿ ನೀಮ್ ಕರೋಲಿ ಬಾಬಾ ಕೈಂಚಿ ಹಳ್ಳಿಯಲ್ಲಿ ದೇವಸ್ಥಾನದ ರೀತಿಯಲ್ಲಿ ಮಠವೊಂದನ್ನ ನಿರ್ಮಿಸಿದರು.

ನೀಮ್ ಕರೋಲಿ ಬಾಬಾ ಆಂಜನೇಯನ ಪರಮಭಕ್ತರಾಗಿದ್ದರು. ಬಾಬಾ ತಮ್ಮ ಜೀವಿತಾವಧಿಯಲ್ಲಿ ಬರೋಬ್ಬರಿ 108 ಹನುಮನ ದೇವಸ್ಥಾನಗಳನ್ನ ಕಟ್ಟಿಸಿದ್ದಾರೆ. ಸದ್ಯ ಭಾರತವಷ್ಟೇ ಅಲ್ಲದೇ ಅಮೇರಿಕಾದ ಟೆಕ್ಸಾಸ್ ನಲ್ಲೂ ಕೂಡ ಬಾಬಾ ಕಟ್ಟಿಸಿದ ಹನುಮಾನ್ ಮಂದಿರವಿದೆ. ನೀಮ್ ಕರೋಲಿ ಬಾಬಾ ರವರಿಗೆ 1960 ರ ದಶಕದಲ್ಲಿ ಅಂತರಾಷ್ಟ್ರೀಯ ಗುರುತು, ಸಮ್ಮಾನ ಸಿಗಲಾರಂಭಿಸಿತು.

1960 ರ ದಶಲದಲ್ಲಿ ನೀಮ್ ಕರೋಲಿ ಬಾಬಾ ಬಗ್ಗೆ ಅವರ ಭಕ್ತ ಬಾಬಾ ರಾಮದಾಸ್ ರವರು ಪುಸ್ತಕವನ್ನೇ ಬರೆದಿದ್ದರು, ಅದರಲ್ಲಿ ಅವರು ನೀಮ್ ಕರೋಲಿ ಬಾಬಾ ರ ಬಗ್ಗೆಯೇ ಬರೆದಿದ್ದರು. ಆ ಪುಸ್ತಕ ಬರೆದಾದ ಬಳಿಕ ಪಶ್ಚಿಮಿ ದೇಶಗಳಿಂದ ಹಲವಾರು ಜನ ಬಾಬಾರ ಆಶೀರ್ವಾದ, ದರ್ಶನ ಪಡೆಯಲು ಭಾರತಕ್ಕೆ ಬರಲಾರಂಭಿಸಿದರು. ಆ ಲಿಸ್ಟ್ ನಲ್ಲಿ ಆ್ಯಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಹಾಗು ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಕೂಡ ಇದ್ದಾರೆ.

ನೀಮ್ ಕರೋಲಿ ಬಾಬಾ ತಮ್ಮ ಸಮಾಧಿಗಾಗಿ ಬೃಂದಾವನದ ಪಾವನ ಭೂಮಿಯನ್ನೇ ಆಯ್ಕೆ ಮಾಡಿಕೊಂಡಿದ್ದರು. ಅವರು ಸೆಪ್ಟೆಂಬರ್ 10, 1973 ರಂದು ದೈವಾಧೀನರಾದರು. ಅವರ ನೆನಪಿನಲ್ಲಿ ಆಶ್ರಮದೊಳಗೆ ಒಂದು ಮಂದಿರವನ್ನೂ ಕಟ್ಟಲಾಗಿದ್ದು ಬಾಬಾರ ಪ್ರತಿಮೆಯನ್ನೂ ಆಶ್ರಮದಲ್ಲಿ ಸ್ಥಾಪಿಸಲಾಗಿದೆ.

– Vinod Hindu Nationalist

Leave a Reply

Your e-mail address will not be published. Required fields are marked *

error: Content is protected !!