ಈ ಯುವತಿಯ ಕಥೆಯನ್ನ ಪ್ರತಿಯೊಬ್ಬ ಭಾರತೀಯನೂ ಓದಲೇಬೇಕು

ನಿಶಿತಾ ರಾಜಪೂತ್ ಗುಜರಾತಿನ ವಲಸಡ್ ನಿವಾಸಿಯಾಗಿದ್ದಾರೆ. ನಿಶಿತಾ ಈ ಪ್ರಪಂಚದಲ್ಲಿ ಅನಾತರಾಗಿರುವ ಹಾಗು ಅವರನ್ನ ಮನೆಯಿಂದ ಹೊರದಬ್ಬಿರುವ ಬಡ ಮಕ್ಕಳು ಹಾಗು ವೃದ್ಧರಿಗೆ ಸಹಾಯಹಸ್ತ ಚಾಚುತ್ತಿದ್ದಾರೆ. ನಿಶಿತಾ ತಾವು ಒಬ್ಬರೇ ಪ್ರತಿದಿನ ಸಂಜೆ ಊರಿನ 155 ವೃದ್ಧರಿಗೆ ಊಟ ತಲುಪಿಸುತ್ತಾರೆ. ವೃದ್ಧರಿಗೆ ಊಟ ನೀಡಬೇಕು ಎಂಬ ಈ ಚಿಂತನೆ ಅವರಿಗೆ ಒಬ್ಬ ವಯಸ್ಸಾದ ಅಜ್ಜಿ ಒಣ ಕಟಿಯಾದ ರೊಟ್ಟಿ ತಿನ್ನೋದನ್ನ ನೋಡಿದಾಗ ಮನಕಲುಕಿ ಇಂತಹ ವೃದ್ಧರಿಗೆ ಊಟ ನೀಡಬೇಕು ಎಂಬ ಆಲೋಚನೆಬಂದಿತ್ತಂತೆ.

ನಿಶಿತಾ ರವರು ಮಾತನಾಡುತ್ತ “ನಾನು ಇಂತಹ ವಯೋವೃದ್ಧರ ಸುತ್ತಮುತ್ತಲಿನ ಜನರನ್ನ ಅಂದರೆ ವೃದ್ಧರಿಗೆ ಸಮಯಕ್ಕೆ ಸರಿಯಾಗಿ ದುಡ್ಡು ತೆಗೆದುಕೊಂಡಾದರೂ ಸರಿ ಅವರಿಗೆ ಊಟ ತಲುಪಿಸುವ ಜನರನ್ನ ಹುಡುಕುತ್ತೇನೆ. ಇಷ್ಟೇ ಅಲ್ಲದೆ ನಾನು ತಮ್ಮ ಬರ್ತಡೇ ದಿನದಂದು ತಮ್ಮ ಕೇಕ್‌ಗಳನ್ನ ದಾನ ಮಾಡುವ ಜನಗಳ ಜೊತೆ ಸಂಪರ್ಕದಲ್ಲಿಯೂ ಇರುತ್ತೇನೆ. ನಾನು ನನ್ನ ಡಾಕ್ಯುಮೆಂಟರಿಗಳಿಂದ ಆಯಾ ದಿನ ಯಾವ ಮಕ್ಕಳ ಜನ್ಮದಿನವಿದೆ ಅನ್ನೋದನ್ನ ಹುಡುಕಿ ತೆಗೆಯುತ್ತೇನೆ.

ನಾನು ನನ್ನ ಪೋಸ್ಟ್ ಗ್ರ್ಯಾಜುಯೇಷನ್(PG) ಇತ್ತೀಚೆಗಷ್ಟೇ ಮುಗಿಸಿದ್ದೇನೆ ಆದರೆ ಸಮಾಜ ಸೇವೆ ಮಾಡಬೇಕೆನ್ನುವ ನನ್ನ ಆಸೆ ಅದ್ಯಾವಾಗಲೋ ಶುರುವಾಗಿತ್ತು‌. 7 ವರ್ಷಗಳ ಹಿಂದಿನ ಮಾತು, ಆಗ ನನ್ನ ವಯಸ್ಸು ಬಹುಶಃ 19 ಇದ್ದಿರಬಹುದು. ನಾನು 12 ನೆಯ ತರಗತಿಯ ಪರೀಕ್ಷೆ ಬರೆದಿದ್ದೆ ಹಾಗು ಮುಂದೆ ಕಾಮರ್ಸ್ ಶಿಕ್ಷಣಕ್ಕಾಗಿ ತಯಾರಿ ನಡೆಸುತ್ತಿದ್ದೆ. ಬೇಸಿಗೆಕಾಲದ ರಜೆಗಳಲ್ಲಿ ನಾವು ಹಲವು ಅನಾಥಾಶ್ರಮಗಳಲ್ಲಿ ಅನಾಥ ಮಕ್ಕಳನ್ನ ಭೇಟಿಯಾಗಲು ಹೋಗುತ್ತಿದ್ದೇವು. ಆ ಅನಾಥಾಶ್ರಮದಲ್ಲಿ ನಮಗೆ ಆ ಮಕ್ಕಳನ್ನು ನಮ್ಮ ಮನೆಗೆ ಕರೆದುಕೊಂಡು ಬಂದು ನಮ್ಮ ಏರಿಯಾದ ಪರಿಚಯ ಹಾಗು ಆ ಮಕ್ಕಳನ್ನ ಯಾರಾದರೂ ದತ್ತು ತೆಗೆದುಕೊಳ್ಳುತ್ತಾರಾ ಎಂಬುದನ್ನ ಕೇಳುವ ಪರ್ಮಿಷನ್ನನ್ನೂ ಅನಾಥಾಶ್ರಮ ನಮಗೆ ನೀಡಿತ್ತು‌.

ತಂದೆ ತಾಯಂದಿರ ಉತ್ತಮ ಸಂಸ್ಕಾರ ಹಾಗು ನಡತೆಯಿಂದ ಮಕ್ಕಳ ಭವಿಷ್ಯದ ಮೇಲೂ ಸಕಾರಾತ್ಮಕ ಪರಿಣಾಮವೇ ಬೀರುತ್ತದೆ‌. ನನ್ನ ಜೊತೆಯೂ ಹೀಗೇ ಆಗಿತ್ತು. ನಮ್ಮ ಮನೆಯಲ್ಲಿನ ಪರಂಪರೆಯಂತೆ ನಾವು ಯಾವುದೇ ಹಬ್ಬವಾಗಲಿ ಅದನ್ನ ವೃದ್ಧಾಶ್ರಮ, ಅನಾಥಾಶ್ರಮ ದಂತಹ ಜಾಗಗಳಿಗೆ ಹೋಗಿ ತಮ್ಮೆಲ್ಲಾ ಖುಷಿ ಕಳೆದುಕೊಂಡಿರುವ ಜನಗಳ ಜೊತೆ ಆಚರಿಸುತ್ತಿದ್ದೆವು. ಇಂತಹ ಸಂದರ್ಭಗಳಲ್ಲಿ ನಾವು ಸಹಕುಟುಂಬ ಅಂತಹ ಅನಾಥರಿಗೆ, ನೊಂದವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದೆವು. ನಾನು ಚಿಕ್ಕವಳಿದ್ದಾಗಿನಿಂದಲೇ ಸಮಾಹದ ಇಂತಹ ವಂಚಿತರ ಪರವಾಗಿ ಸಂವೇದನಾಶೀಲತೆ ಇಟ್ಟುಕೊಂಡಿದ್ದೇನೆ.

ನಾನು ಮನೆಕೆಲಸ ಮಾಡುವ ಮಹಿಳೆಯರ ಜೊತೆ ಜೊತೆಗೆ ಅವರ ಮಕ್ಕಳುಗಳು ಶಾಲೆಗೆ ಹೋಗೋದಿಲ್ಲ ಎಂಬ ವಿಷಯವನ್ನೂ ತಿಳಿದುಕೊಂಡೆ. ಬಹುಶಃ ಅವರು ಶಾಲೆಗೆ ಹೋಗೋಕು ಆಗುತ್ತಿರಲಿಲ್ಲ ಅನಿಸುತ್ತೆ, ಅದಕ್ಕೆ ಕಾರಣ ಅವರ ಕಡುಬಡತನ. ಸಮಾಜದ ಪ್ರತಿ ಕಳಕಳಿಯಂತೂ ನನ್ನಲ್ಲಿ ಇದ್ದೇ ಇತ್ತು, ನನ್ನ ಮನಸ್ಸಿನಲ್ಲಿ ಇಂತಹ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂಬ ಯೋಚನೆ ಸದಾ ಕಾಡುತ್ತಿರುತ್ತಿತ್ತು. ಆದರೆ ನಾನು ಕೆಲ ಮಕ್ಕಳಿಗಷ್ಟೇ ಅಲ್ಲ ಸಾವಿರಾರು ಮಕ್ಕಳಿಗೆ ಶಿಕ್ಷಣ ಸಿಗುವಂತಾಗಬೇಕು ಅಂತಹ ಯೋಜನೆಯ ಬಗ್ಗೆ ಚಿಂತಿಸುತ್ತಿದ್ದೆ. 

ತಂದೆಯವರ ಸಹಾಯದಿಂದ ನಾನು ಮೊದಲು ಹತ್ತಿರತ್ತಿರ 351 ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತುಕೊಂಡೆ. ಇದಕ್ಕಾಗಿ ನಾನು ಆ ಎಲ್ಲಾ ಮಕ್ಕಳ ಶಾಲಾ ಶುಲ್ಕ (ಫೇಸ್) ಜಮೆ ಮಾಡಿದೆ. ಇಂತಹ ಪುಣ್ಯ ಕಾರ್ಯಗಳಿಗೆ ಸಹಾಯಹಸ್ತ ಚಾಚುವವರ ಸಂಖ್ಯೆಯೇನು ಸಮಾಜದಲ್ಲಿ ಕಡಿಮೆಯಿಲ್ಲ. ಆದರೆ ಪಾರದರ್ಶಕತೆ ಇರದ ಕಾರಣ ತಮ್ಮ ಹಣ ದುರುಪಯೋಗವಾಗಿ ಬಿಡುತ್ತೆ ಅನ್ನೋ ಕಾರಣಕ್ಕಾಗಿ ಜನ ಸಹಾಯ ಮಾಡಲು ಹಿಂದೆ ಮುಂದೆ ನೋಡುತ್ತಾರೆ.

ಆದರೆ ಸ್ವತಃ ನಾನೇ ಆ ಹಣ ಪಡೆಯದೆ ಆಯಾ ಶಾಲೆಗಳಿಗೇ ಅವರ ಕಡೆಯಿಂದ ಹಣ ಜಮಾ ಆಗುವಂತೆ ಅಥವ ಆ ಪರಿವಾರದ ಮಕ್ಕಳ ಪೋಷಕರ ಬ್ಯಾಂಕ್ ಖಾತೆಗೇ ಜಮೆಯಾಗುವ ಚೆಕ್‌ಗಳನ್ನ ಸ್ವೀಕರಿಸುತ್ತೇನೆ. ಅದಾದ ಬಳಿಕ ಯಾವ ಮಗುವಿಗೆ ಸಹಾಯವಾಗಿದೆಯೋ ಆ ಮಗುವಿನ ಪೂರ್ಣ ಬಯೋಡಾಟಾವನ್ನ ಸಹಾಯಹಸ್ತ ಚಾಚುವ ಡೋನರ್‌ಗಳಿಗೆ ನೀಡುತ್ತೇನೆ‌. ಈ ರೀತಿಯಾಗಿ ನಾನು ಮಾಡುವುದರಿಂದ ಜನರಿಗೆ ನನ್ನ ಮೇಲೆ ನಂಬಿಕೆ ವಿಶ್ವಾಸ ಹೆಚ್ಚಾಗುತ್ತ ಹೋಯಿತು ಹಾಗು ನೋಡು ನೋಡುತ್ತಲೇ ದೇಶ ವಿದೇಶಗಳಿಂದ ಸಹಾಯ ಮಾಡಲು ಹಲವು ದಾನಿಗಳು ಮುಂದೆ ಬಂದರು” ಎಂದು ಹೇಳುತ್ತಾರೆ ನಿಶಿತಾ.

ಈ ಯುವತಿ ಯಾವ ವಯೋವೃದ್ಧರಿಗೆ ಊಟ ನೀಡುತ್ತಿದ್ದಾಳೆಯೋ ಅವರು ಈಕೆಯನ್ನ ತಮ್ಮ ಮಗಳೆಂದೇ ಹೇಳುತ್ತಾರೆ ಹಾಗು ಆ ಮಕ್ಕಳು ಈಕೆಯನ್ನ ತಾಯಿ ರೂಪದಲ್ಲೇ ಕಾಣುತ್ತಿದ್ದಾರೆ. ಈಕೆಯ ನಿಸ್ವಾರ್ಥ ಸೇವೆಗೆ ಇಡೀ ದೇಶವೇ ಈಕೆಗೆ ಸೆಲ್ಯೂಟ್ ಹೇಳಲೇಬೇಕು. ಹ್ತಾಟ್ಸಾಫ್ ನಿಶಿತಾ ಜೀ

– Team Google Guruu

Leave a Reply

Your e-mail address will not be published. Required fields are marked *

error: Content is protected !!