ರಾತ್ರೋ ರಾತ್ರಿ ದುಬೈ ರಾಜನ ಹೆಂಡತಿ ಪರಾರಿ.!

ಕೋಟ್ಯಾಧಿಪತಿಯಾದ ದುಬೈ ಪ್ರಧಾನಮಂತ್ರಿಯ ಪತ್ನಿಯು 271 ಕೋಟಿ ರೂಪಾಯಿ ನಗದು ತೆಗೆದುಕೊಂಡು ಪರಾರಿಯಾಗಿದ್ದಾಳೆ ಹೌದು ಸಾವಿರಾರು ಕೋಟಿ ಆಸ್ತಿಯ ಒಡೆಯನಾದ ದುಬೈ ರಾಜನ ರಾಣಿಯಾದ ಹಯಾ ಕೊಟ್ಯಾಂತರ ರೂಪಾಯಿ ಹಾಗೂ ತನ್ನ ಸ್ವಂತ ಎರಡು ಮಕ್ಕಳ ಜೊತೆ ಪಲಾಯನ ಮಾಡಿದ್ದಾಳೆ.

ಯುಎಇ ಮಾಧ್ಯಮಗಳ ಮೂಲದ ಪ್ರಕಾರ ದುಬೈ ರಾಜನಾದ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಹತುಮ್ ಜೊತೆ ಪತ್ನಿಯಾದ ಬೇಗಂ ಸಂಬಂಧದಲ್ಲಿ ಬಿರುಕು ಮೂಡಿದ್ದು ಇತ್ತಿಚಿನ ದಿನಗಳಲ್ಲಿ ತಮ್ಮ ಸಂಸಾರದಲ್ಲಿ ಜಗಳ ಹಾಗೂ ಗೊಂದಲದ ವಾತಾವರಣ ಮೂಡಿತ್ತು ಎನ್ನಲಾಗಿದೆ.

ಇದೀಗ ಹಯಾ ಇಂಗ್ಲೆಂಡ್‌ನ ರಾಜಧಾನಿ ಲಂಡನ್‌ನಲ್ಲಿ ವಾಸವಾಗಿರುವ ಮಾಹಿತಿ ಲಭ್ಯವಾಗಿದೆ. ಜಾರ್ಡನ್‌ನ ರಾಜ ಅಬ್ದುಲ್ಲಾ ಅವರ ಸಹೋದರಿಯಾದ ಹಯಾ ದುಬೈ ರಾಜನ ಜೊತೆಗೆ ಮದುವೆಯಾಗಿದ್ದಳು ಆದರೆ ಇದೀಗ ಮದುವೇ ಜೀವನ ಮುರಿದು ಬಿದ್ದಿದ್ದು, ಹೇಳದೆ ಕೇಳದೆ ಸಂಸಾರಿಕ ಜೀವನ ತ್ಯಜಿಸುವ ಮೂಲಕ ಲಂಡನ್ ಗೆ ಪರಾರಿಯಾಗಿದ್ದಾಳೆ.

ಲಂಡನ್‌ನಿಂದ ದುಬೈಗೆ ವಾಪಸ್ಸಾಗಲು ನಿರಾಕರಿಸುತ್ತಿರುವ ದುಬೈ ರಾಜನ ಹೆಂಡತಿ ಹಯಾ ಅಲ್ಲಿಂದಲೇ ವಿವಾಹ ವಿಚ್ಚೇದನ ಪಡೆಯಲು ಅರ್ಜಿ ಸಲ್ಲಿಸಿದ್ದಾಳೆಂದು ಮೂಲಗಳಿಂದ ತಿಳಿದು ಬಂದಿದೆ, ಹಾಗೂ ಆಕೆಯ ಇಬ್ಬರು ಮಕ್ಕಳಾದ ಜಾಲಿಯಾ ಮತ್ತು ಜಾಯದ್ ತನ್ನ ಜೊತೆ ಇರಬೇಕು ಎಂದು ಕಾನೂನಾತ್ಮಕ ಅನುಮತಿ ಪಡೆಯಲು ಅರ್ಜಿ ಕೋರಿದ್ದಾರಂತೆ.

ಇನ್ನೂ ಕೆಲವು ಮಾಧ್ಯಮಗಳು ಹೇಳುವಂತೆ ದುಬೈ ರಾಣಿಯಾದ ಹಯಾ ತನ್ನ ಹೊಸ ಜೀವನ ಪ್ರಾರಂಬಿಸಲು ಸರಿ ಸುಮಾರು 271 ಕೋಟಿ ರುಪಾಯಿ ತೆಗೆದುಕೊಂಡು ಪರಾರಿಯಾಗಿದ್ದಾಳೆ ಎಂದು ಹೇಳಲಾಗುತ್ತಿದೆ. ಈ ರೀತಿ ಹಣ ತೆಗೆದುಕೊಂಡು ಬಂದರೆ ಆರ್ಥಿಕ ಜಗಳವಾಗಲ್ಲ ಎಂದು ಆಕೆಯ ನಂಬಿಕೆಯಂತೆ.

ಹಯಾ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆದುಕೊಂಡಿದ್ದು ಆಕೆಗೆ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿದ್ದಾಳಂತೆ ಹೀಗಾಗಿ ದುಬೈ ರಾಣಿ ಇದೀಗ ಪಶ್ಚಿಮ ದೇಶಗಳೊಡನೆ ಮಾತುಕತೆ ನಡೆಸುತ್ತಿದ್ದು ಇಂಗ್ಲೆಂಡ್ ‌ನಲ್ಲಿ ಕುಳಿತುಕೊಂಡೆ ತಲಾಕ್ ಪಡೆಯಲು ಯತ್ನಿಸುತ್ತುದ್ದಾಳಂತೆ. ಇಷ್ಟೇ ಅಲ್ಲದೆ ಹಯಾ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾರೆ ಎಂದು ಹೇಳಲಾಗ್ತಿದೆ.

-Team Google Guru

Leave a Reply

Your e-mail address will not be published. Required fields are marked *

error: Content is protected !!