ಮುಸ್ಲಿಮರಿಗೆ ಬಿಗ್ ಶಾಕ್ ಕೊಟ್ಟ ಪಾಕ್ ಪ್ರಧಾನಿ

ಇಸ್ಲಾಂ ಧರ್ಮದಲ್ಲಿ ಪ್ರತಿಯೊಬ್ಬರೂ ನಿಭಾಯಿಸಬೇಕಾದ ಐದು ಪ್ರಮುಖ ಕರ್ತವ್ಯಗಳ ಪೈಕಿ ಹಜ್ ಯಾತ್ರೆ ಕೂಡ ಒಂದು. ಇಸ್ಲಾಂನ ಪ್ರಮುಖ ಸ್ತಂಭಗಳಲ್ಲಿ ಹಜ್ ಯಾತ್ರೆಗೆ ಸ್ಥಾನ ನೀಡಲಾಗಿದೆ. ಪ್ರತಿಯೊಬ್ಬ ಮುಸಲ್ಮಾನ ನಮಾಜ್ ಮತ್ತು ರೋಜಾವನ್ನು ಕಡ್ಡಾಯವಾಗಿ ಕೈಗೊಳ್ಳುವಂತೆಯೇ ಜೀವನದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆಯನ್ನು ಕೈಗೊಳ್ಳಬೇಕು ಎಂಬ ನಿಯಮವಿದೆ.

ಪಾಕಿಸ್ತಾನದ ಆರ್ಥಿಕ ಸ್ಥಿತಿ ತೀವ್ರ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಹಜ್ ಯಾತ್ರಿಗಳಿಗೆ ಸಬ್ಸಿಡಿ ನೀಡುವುದಕ್ಕೆ ಇಸ್ಲಾಂನಲ್ಲಿ ಅವಕಾಶ ಇದೆಯೆ ಅಥವಾ ಇಲ್ಲವೆ ಎಂಬ ಬಗ್ಗೆ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು ಎಂದು ಧಾರ್ವಿುಕ ಮತ್ತು ಅಂತರ್ ಧರ್ವಿುಯ ಸೌಹಾರ್ದ ಸಚಿವ ನೂರುಲ್ ಹಕ್ ಖಾದ್ರಿ ತಿಳಿಸಿದ್ದಾರೆ. ಹಿಂದೆ ಅಧಿಕಾರದಲ್ಲಿದ್ದ ಪಿಎಂಎಲ್-ಎನ್ ಪಕ್ಷ ಸರ್ಕಾರಿ ಕೋಟಾದಲ್ಲಿ ಹಜ್ ಯಾತ್ರೆ ಕೈಗೊಳ್ಳುವವರಿಗೆ 42ಸಾವಿರ ರೂ. ಸಬ್ಸಿಡಿ ನೀಡುತ್ತಿತ್ತು. 

ಹಜ್ ಯಾತ್ರಿಗಳು ಅಗತ್ಯ ಆರ್ಥಿಕ ಸಂಪನ್ಮೂಲವನ್ನು ತಮ್ಮ ದುಡಿಮೆಯಿಂದಲೇ ಒದಗಿಸಿಕೊಳ್ಳಬೇಕು. ಧನ ಸಹಾಯ ಪಡೆಯುವುದು ಧರ್ಮಬಾಹಿರ ಎಂದು ಇಸ್ಲಾಂನ ಅನೇಕ ಮೌಲ್ವಿ ಗಳು ಹೇಳಿದ್ದಾರೆ. ಹೀಗಾಗಿ ಜಗತ್ತಿನ ಬಹುತೇಕ ಇಸ್ಲಾಂ ರಾಷ್ಟ್ರಗಳಲ್ಲಿ ಹಜ್ ಸಬ್ಸಿಡಿ ನೀಡುವುದಿಲ್ಲ ಎಂದು ಹೇಳಲಾಗುತ್ತದೆ.

ಮುಸ್ಲಿಮರ ಪವಿತ್ರ ಕ್ಷೇತ್ರ ಮೆಕ್ಕಾ ಮತ್ತು ಮದೀನಾಕ್ಕೆ ಹಜ್ ಯಾತ್ರೆ ಕೈಗೊಳ್ಳುವವರಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ಪಾಕಿಸ್ತಾನ ಸರ್ಕಾರ ರದ್ದು ಮಾಡಿದೆ. ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ವಾರ್ಷಿಕವಾಗಿ 450 ಕೋಟಿ ಪಾಕ್ ಕರೆನ್ಸಿ ಉಳಿತಾಯವಾಗಲಿದೆ.

ಕಳೆದ ವರ್ಷ ಜನವರಿ ಯಲ್ಲಿ ಕೇಂದ್ರ ಸರ್ಕಾರ ಹಜ್ ಸಬ್ಸಿಡಿಯನ್ನು ಹಂತ ಹಂತವಾಗಿ ರದ್ದು ಮಾಡುವ ನಿರ್ಧಾರ ಕೈಗೊಂಡಿತ್ತು. 2022ಕ್ಕೆ ಸಂಪೂರ್ಣವಾಗಿ ಇದು ಸ್ಥಗಿತಗೊಳ್ಳಲಿದೆ. ಹಜ್ ಸಬ್ಸಿಡಿಗೆ ನೀಡುತ್ತಿದ್ದ ಅನುದಾನವನ್ನು ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಸಬಲೀಕರಣಕ್ಕೆ ವಿನಿಯೋಗಿಸಲಾಗುವುದು ಎಂದು ಅಲ್ಪಸಂಖ್ಯಾತರ ವ್ಯವಹಾರ ಖಾತೆ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಹೇಳಿದ್ದರು. 

ಒಟ್ಟಿನಲ್ಲಿ ಹೇಳುವುದಾದರೇ ಬಹುಸಂಖ್ಯಾತ ಮುಸ್ಲಿಮರು ವಾಸಿಸುವ ಪಾಕಿಸ್ತಾನದಲ್ಲಿ ಅವರು ತಮ್ಮ ಪವಿತ್ರ ಸ್ಥಳವಾದ ಹಜ್ ಯಾತ್ರೆಗೆ ಹೋಗುತ್ತಿರುವುದನ್ನು ತಡೆದ ಪಾಕ್ ಪ್ರಧಾನಿ ವಿರುದ್ಧ ಪಾಕಿಸ್ಥಾನದ ಕೆಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಇಮ್ರಾನ್ ಖಾನ್ ಅವರ ಈ ಹೇಳಿಕೆಯ ವಿರುದ್ಧ ಕೆಂಡ ಕಾರುತ್ತಿದ್ದಾರೆಂದು ಹೇಳಲಾಗುತ್ತಿದೆ.

-Team Google Guru

Leave a Reply

Your e-mail address will not be published. Required fields are marked *

error: Content is protected !!