ಮತಾಂಧ ಪಾಕಿಸ್ತಾನದ ನೆಲದಲ್ಲೇ ನಿಂತು “ಯೋಗಿ ಭಾರತದ ಪ್ರಧಾನಮಂತ್ರಿಯಾದರೆ ಪಾಕಿಸ್ತಾನಿಗಳೂ ಭಾರತೀಯರಾಗುತ್ತಾರೆ” ಎಂದ ಕೆಚ್ಚೆದೆಯ ಪಾಕಿಸ್ತಾನಿ ಯುವತಿ

ಯಾವಾಗಿನಿಂದ ಕಟ್ಟರ್ ಹಿಂದುತ್ವವಾದಿ, ಅಪ್ಪಟ ದೇಶಭಕ್ತ, ಗೋಪ್ರೇಮಿ ಯೋಗಿ ಆದಿತ್ಯನಾಥರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೋ ಅಂದಿನ ಕ್ಷಣದಿಂದ ಇಂದಿನವರೆಗೂ ದೇಶದ ವಿದೇಶಗಳಲ್ಲಿ ಯೋಗಿ ಆದಿತ್ಯನಾಥರ ಕುರಿತಾಗಿ ಭಿನ್ನ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ ಹಾಗು ಕೇಳಲು ಸಿಗುತ್ತಿವೆ. ಈ ಮಧ್ಯೆ ಪಾಕಿಸ್ತಾನದ ಯುವಯಿಯೊಬ್ಬಳು ಯೋಗಿ ಆದಿತ್ಯನಾಥರನ್ನ ಹಾಡಿ ಹೊಗಳಿದ್ದಾಳೆ.

ನಿಮಗೆಲ್ಲಾ ಗೊತ್ತಿರುವಂತೆ ಪಾಕಿಸ್ತಾನದಲ್ಲಿ ಹಿಂದುಗಳ ಸ್ಥಿತಿ ಹೇಳ ತೀರದು. ಪ್ರತಿ ದಿನ ಪ್ರತಿ ಕ್ಷಣವೂ ಜೀವಭಯದಿಂದ ಜೀವನ ಸಾಗಿಸುತ್ತಿರುವ ಹಿಂದುಗಳಿಗೆ ಯಾವಾಗ ತಮ್ಮ ಮನೆಯ ಮೇಲೆ ದಾಳಿಯಾಗುತ್ತೋ, ಯಾವಾಗ ತಮ್ಮ ಮನೆಯ ಹೆಣ್ಣುಮಕ್ಕಳನ್ನ ಕಿಡ್ನ್ಯಾಪ್, ರೇಪ್ ಮಾಡಿ ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿಬಿಡುತ್ತಾರೋ ಅನ್ನೋ ಭಯ ಕ್ಷಣಕ್ಷಣಕ್ಕೂ ಕಾಡುತ್ತಲೇ ಇರುತ್ತೆ.

1947 ಕ್ಕೂ ಮುನ್ನ ಪಾಕಿಸ್ತಾನವೂ ಭಾರತದ ಅಭಿನ್ನ ಅಂಗವಾಗಿತ್ತು, ಪಾಕಿಸ್ತಾನದ ನೆಲದಲ್ಲೂ ಹಿಂದುಗಳು ವಾಸಿಸುತ್ತಿದ್ದರು ಆದರೆ 1947 ರಲ್ಲಿ ಭಾರತ ವಿಭಜನೆಯಾಗಿ ಪಾಕಿಸ್ತಾನ ಸೃಷ್ಟಿಯಾದ ಬಳಿಕ‌ ಪಾಕಿಸ್ತಾನದಿಂದ ಕೋಟ್ಯಂತರ ಹಿಂದುಗಳು ಭಾರತಕ್ಕೆ ವಲಸೆ ಬಂದಿದ್ದರು ಆದರೆ ಇನ್ನೂ ಹಲವಾರು ಹಿಂದು ಕುಟುಂಬಗಳು ತಮ್ಮ‌ಮನೆ ಮಠ ಬಿಟ್ಟು ಬರದೆ ಅನಿವಾರ್ತವಾಗಿ ಪಾಕಿಸ್ತಾನದಲ್ಲೇ ಉಳಿದುಕೊಂಡು ಬಿಟ್ಟರು.

1947 ರ ಪಾಕಿಸ್ತಾನದ ಜನಸಂಖ್ಯೆಯಲ್ಲಿ ಹಿಂದುಗಳು ಬರೋಬ್ಬರಿ 23% ಇದ್ದರು, ಇಲ್ಲಿ ಗಮನಿಸುವ ಅಂಶವೇನೆಂದರೆ ಯಾವುದೇ ಧರ್ಮದ ಜನಸಂಖ್ಯೆಯಿದ್ದರೂ ಅದು ಏರುತ್ತಲೇ ಹೋಗಬೇಕು ಆದರೆ ಇಸ್ಲಾಮಿಕ್ ರಾಷ್ಟ್ರವಾಗಿ ಉದಯಿಸಿದ ರಾಕ್ಷಸಿ ಪಾಕಿಸ್ತಾನ ರಾಷ್ಟ್ರದಲ್ಲಿ ಮಾತ್ರ ಹಿಂದುಗಳ ಜನಸಂಖ್ಯೆ ಏರುಮುಖದಲ್ಲಲ್ಲ ಬದಲಾಗಿ ಇಳಿಮುಖ ಕಂಡು ಈಗ ಅಲ್ಲಿ ಹಿಂದುಗಳ ಜನಸಂಖ್ಯೆ ಕೇವಲ 1% ಗೆ ಬಂದು ನಿಂತಿದೆ.

ಇಂತಹ ಇಸ್ಲಾಮಿಕ್ ಭಯೋತ್ಪಾದಕರ ನಾಡಲ್ಲಿ ಭಾರತದ ಬಗ್ಗೆ ಬಿಡಿ ತಮ್ಮ ಮನೆಯಲ್ಲಿ ನಿರ್ಭಿತಿಯಿಂದ ಪೂಜೆಯನ್ನೂ ಮಾಡೋಕೂ ಸಾಧ್ಯವಿಲ್ಲ ಆದರೆ ಇಂತಹ ಮತಾಂಧರ ನಾಡು ಪಾಕಿಸ್ತಾನದ ನೆಲದಲ್ಲೇ ನಿಂತು ಪಾಕಿಸ್ತಾನದ ಆ ಯುವತಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಒಂದು ವೇಳೆ ಯೋಗಿ ಆದಿತ್ಯನಾಥರು ಭಾರತದ ಪ್ರಧಾನಮಂತ್ರಿಯಾದರೆ ನಮಗೂ(ಪಾಕಿಸ್ತಾನಿಯರಿಗೂ) ಭಾರತೀಯ ನಾಗರಿಕರಾಗೋದಕ್ಕೆ ಹೆಚ್ಚು ಸಮಯ‌ಹಿಡಿಯುವುದಿಲ್ಲ ಎಂದಿದ್ದಾಳೆ.

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಈ ಯುವತಿಯ ಹೆಸರು ನರೋಧಾ ಮಾಲಿನಿ ಅಂತ. ಈ ಯುವತಿ ಕಳೆದ ವರ್ಷ ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಹೋಳಿ ಹಬ್ಬದ ಕಾರ್ಯಕ್ರಮವೊಂದರಲ್ಲಿ ಗಾಯತ್ರಿ ಮಂತ್ರ ಪಠಣ ಮಾಡಿದ್ದಳು. ಆ ಕಾರ್ಯಕ್ರಮದಲ್ಲಿ ಆಗಿನ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಕೂಡ ಉಪಸ್ಥಿತನಿದ್ದ. ಗಾಯಕಿ ನರೋಧಾ ಮಾಲಿನಿಯ ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಮಾಲಿನಿ ಹೇಳುವಂತೆ ಆಕೆಗೆ ಹಿಂದುಸ್ತಾನವೆಂದರೆ ಪಂಚಪ್ರಾಣವಂತೆ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಕೆಲಸ ಕಾರ್ಯಗಳು ಹಾಗು ಅವರ ದಿಟ್ಟ ನಿರ್ಧಾರಗಳನ್ನ ಅತ್ಯುತ್ತಮ ನಿರ್ಧಾರಗಳೆಂದು ಮಾಲಿನಿ ಹೇಳಿದ್ದಾರೆ. ಇಷ್ಟೇ ಅಲ್ಲದೆ ಯೋಗಿ ಭಾರತದ ಪ್ರಧಾನಮಂತ್ರಿಯಾದರೆ ಭಾರತ ಹಿಂದೆಂದೂ ಕಾಣದಂತಹ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ ಎಂದಿದ್ದಾರೆ ಮಾಲಿನಿ.

ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ನರೋದಾ ಮಾಲಿನಿ ಗಾಯಂತ್ರಿ ಮಂತ್ರವನ್ನ ಹಾಡಿದ್ದಾಗ ಆ ವೇದಿಕೆಯ ಮೇಲೆ ಆಗಿನ ಪ್ರಧಾನಮಂತ್ರಿ ನವಾಜ್ ಷರೀಫ್ ಕೂಡ ಇದ್ದ. ಸಡನ್ ಆಗಿ ಈ ಯುವತಿ ಗಾಯತ್ರಿ ಮಂತ್ರ ಪಠಣ ಮಾಡೋಕೆ ಶುರು ಮಾಡಿದಾಗ ಕಾರ್ಯಕ್ರಮದಲ್ಲಿ ನೆರೆದಿದ್ದ ಜನರೆಲ್ಲ ಒಬ್ಬರ ಮುಖ ಒಬ್ಬರು ನೋಡುತ್ತ ಕುಳಿತುಬಿಟ್ಟಿದ್ದರು. ಆ ವಿಶಾಲವಾದ ಸಭಾಗೃಹದಲ್ಲಿ ಆಯೋಜಿತವಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನ ಗಾಯತ್ರಿ ಮಂತ್ರ ಕೇಳಿ ಒಂದು ಕ್ಷಣ ಉಲ್ಲಾಸಭರಿತರಾಗಿದ್ದರು.

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪಾಕಿಸ್ತಾನದ ಆಗಿನ ಪ್ರಧಾನಮಂತ್ರಿ ನವಾಜ್ ಷರೀಫ್ ಬಲವಂತದ ಮತಾಂತರವನ್ನ ಅಪರಾಧವೆಂದು ಹೇಳಿದ್ದ. ಆತ ಮಾತನಾಡುತ್ತ ಅನ್ಯ ಧರ್ಮದ ಪೂಜಾ ಸ್ಥಳಗಳನ್ನ ಧ್ವಂಸ ಮಾಡೋದು ಇಲ್ಲ ಅಪವಿತ್ರಗೊಳಿಸೋದು ಇಸ್ಲಾಂ ಹಾಗು ಪಾಕಿಸ್ತಾನದಲ್ಲಿ ಅಪರಾಧವೆಂದಿದ್ದ.

ಮುಂದೆ ಮಾತನಾಡುತ್ತ ನವಾಜ್ ಷರೀಫ್ “ಒಂದು ಧರ್ಮವನ್ನ ಒಪ್ಪಿಕೊಳ್ಳುವಂತೆ ಅನ್ಯ ಧರ್ಮೀಯರ ಮೇಲೆ ಒತ್ತಡ ಹೇರಕೂಡದು. ಇಸ್ಲಾಂ ಎಂದರೆ ಅದು ಎಲ್ಲ ಜಾತಿ ಮತ ಧರ್ಮಗಳಿಗೂ ಮಹತ್ವ ನೀಡುತ್ತದೆ. ಸ್ಪಷ್ಟವಾಗಿ ನಾನು ಹೇಳುವುದೇನೆಂದರೆ ಬಲವಂತದ ಹಾಗು ಅತ್ಯಾಚಾರದ ಮೂಲಕ ಮತಾಂತರ ಮಾಡೋದು ನಿಷಿದ್ಧ ಹಾಗು ಅಪರಾಧ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಪೂಜಾಸ್ಥಳಗಳನ್ನ ರಕ್ಷಿಸಬೇಕು” ಎಂದು ನವಾಜ್ ಷರೀಫ್ ಹೇಳಿದ್ದ

– Team Google Guruu

Leave a Reply

Your email address will not be published. Required fields are marked *

error: Content is protected !!