ವಿಶ್ವನಾಯಕರು ಮೋದಿಯನ್ನ ಹಾಡಿಹೊಗಳಿದ ಬಳಿಕ ಬೆಚ್ಚಿಬಿದ್ದ ಪಾಕಿಸ್ತಾನ ಸರ್ಕಾರ ಈಗ ಮೋದಿಗೆ ಕಳಿಸಿರುವ ಅಧಿಕೃತ ಸಂದೇಶವೇನು ಗೊತ್ತಾ

ಲೋಕಸಭಾ ಚುನಾವಣೆ 2019 ರ ಫಲಿತಾಂಶ ಬಂದ ಬಳಿಕ ಪ್ರಧಾನಿ ಮೋದಿಗೆ ಜಗತ್ತಿನ ದಿಗ್ಗಜ ರಾಷ್ಟ್ರಗಳ ನಾಯಕರ ಶುಭಾಷಯಗಳ ಮಹಾಪೂರವೇ ಹರಿದು ಬಂದಿತ್ತು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, ಚೀನಾ ಅಧ್ಯಕ್ಷ ಜಿನ್ ಪಿಂಗ್, ಭೂತಾನ್ ರಾಜ, ನೇಪಾಳದ ಪ್ರಧಾನಿ, ಅಫ್ಘಾನಿಸ್ತಾನದ ಅಧ್ಯಕ್ಷ, ಜಪಾನ್ ಪ್ರಧಾನಿ ಶಿಂಜೋ ಅಬೆ ಹೀಗೆ ಜಗತ್ತಿನ ಹಲವು ನಾಯಕರು ಪ್ರಧಾನಿ ಮೋದಿಗೆ ಶುಭಾಷಯ ಕೋರಿದ್ದರು.

ಆದರೆ ಪಾಕಿಸ್ತಾನದ ವತಿಯಿಂದ ಪ್ರಧಾನಿ ಮೋದಿಗೆ ಯಾವ ಸಂದೇಶವೂ ಬಂದಿರಲಿಲ್ಲ. ಪ್ರಧಾನಿ ಮೋದಿಯ ಭರ್ಜರಿ ಗೆಲುವು ಕಂಡು ಬಹುಶಃ ಪಾಕಿಸ್ತಾನಕ್ಕೆ ಎರಡು ಮೂರು ದಿನಗಳ ಕಾಲ ನಿದ್ದೆ ಬಂದಿಲ್ಲವೆನಿಸುತ್ತೆ. ನೆನ್ನೆ ಪಾಕಿಸ್ತಾನದ ವಿದೇಶಾಂಗ ಮಂತ್ರಿ ಶಾಹ್ ಮೆಹಮೂದ್ ಖುರೇಷಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಲೋಕಸಭಾ ಚುನಾವಣೆಯ ಭರ್ಜರಿ ಗೆಲುವಿಗೆ ಶುಭಾಷಯಗಳನ್ನ ತಿಳಿಸಿದ್ದಾರೆ. ಜೊತೆ ಜೊತೆಗೆ ಭಾರತ ಪಾಕಿಸ್ತಾನದ ಜೊತೆ ಮಾತುಕತೆ ನಡೆಸುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

ಪಾಕ್ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ ಹೇಳುವ ಪ್ರಕಾರ ಭಾರತದ ನೂತನ ಸರ್ಕಾರದ ಜೊತೆ ಮಾತುಕತೆ ನಡೆಸಿ ಬಗೆಹರಿಯದ ಸಮಸ್ಯೆಗಳಿಗೆ (ಉದಾಹರಣೆಗೆ ಕಾಶ್ಮೀರ, ಭಯೋತ್ಪಾದನೆ) ಪರಿಹಾರ ಕಂಡುಕೊಳ್ಳಲು ನಾವು ತಯಾರಿದ್ದೇವೆ. ಭಾರತ ಹಾಗು ಪಾಕಿಸ್ತಾನ ಒಂದು ಟೇಬಲ್‌ನಲ್ಲಿ ಜೊತೆಗೆ ಕೂತಿ ಮಾತುಕತೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಎರಡೂ ರಾಷ್ಟ್ರಗಳ ನಡುವೆ ಶಾಂತಿಸ್ಥಾಪನೆ ಮಾಡೋಣ ಎಂದಿದ್ದಾರೆ.

ಪ್ರಧಾನಿ ಮೋದಿ ಭರ್ಜರಿ ಜಯಗಳಿಸಿ ಮತ್ತೆ ಪ್ರಧಾನಿ ಹುದ್ದೆಗೆ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಪಾಕಿಸ್ತಾನದಿಂದ ಶಾಹ್ ಮೆಹಮೂದ್ ಖುರೇಷಿಯಿಂದ ಇಂತಹ ಹೇಳಿಕೆ ಈಗ ಬಂದಿದೆ. ಇದಕ್ಕೂ ಮೊದಲು ಮೊನ್ನೆ ಗುರುವಾರದಂದು ಇಮ್ರಾನ್ ಖಾನ್ ಪ್ರಧಾನಿ ಮೋದಿಯವರಿಗೆ ಗೆಲುವಿನ ಶುಭಾಷಯ ತಿಳಿಸಿದ್ದರು. ಎರಡೂ ರಾಷ್ಟ್ರಗಳ ಮಧ್ಯೆ ಶಾಂತಿ ಹಾಗು ಸಮೃದ್ಧಿಗಾಗಿ ಇಬ್ಬರೂ ಕೂಡಿ ಕೆಲಸ ಮಾಡೋಣ ಎಂದು ಇಮ್ರಾನ್ ತಿಳಿಸಿದ್ದರು.

ಇಮ್ರಾನ್ ಖಾನ್ ಟ್ವೀಟ್ ಮಾಡುತ್ತ “ನಾನು ಬಿಜೆಪಿ ಹಾಗು ಮಿತ್ರಪಕ್ಷಗಳ ಈ ಚುನಾವಣೆಯ ಭರ್ಜರಿ ಗೆಲುವಿಗಾಗಿ ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪಿಎಂ ಮೋದಿವಜೊತೆ ದಕ್ಷಿಣ ಏಷ್ಯಾದಲ್ಲಿ ಶಾಂತಿ, ಪ್ರಗತಿ ಹಾಗು ಸಮೃದ್ಧಿಗಾಗಿ ಜೊತೆಯಾಗಿ ಕೆಲಸ ಮಾಡಲು ನಾವು ಉತ್ಸುಕರಾಗಿದ್ದೇವೆ” ಎಂದಿದ್ದರು.

ಲೋಕಸಭಾ ಚುನಾವಣೆಯ ಫಲಿತಾಂಶದ ಎರಡು ದಿನಗಳ ಬಳಿಕ ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ ಭಾರತೀಯ ಸಮಕ್ಷಮ ಸುಷ್ಮಾ ಸ್ವರಾಜ್ ರ ಜೊತೆಗೆ ಬುಧವಾರದಂದು ಕಿರ್ಗಿಸ್ತಾನ್‌ನ ಬಿಷ್ಕೇಕ್ ನಲ್ಲಿ ವಿದೇಶಾಂಗ ಮಂತ್ರಿಗಳ ಶಾಂಘಾಯ್ ಸಹಯೋಗ ಸಂಘಟನೆ ಪರಿಷತ್ ಬೈಠಕ್ ನ ಸಂದರ್ಭದಲ್ಲಿ ಮಾತುಕತೆ ನಡೆಸಿದ್ದರು.

ಪಾಕಿಸ್ತಾನದ ಇಚ್ಛೆಯನ್ನ ವ್ಯಕ್ತಪಡಿಸುತ್ತ ಮಾತುಕತೆಯ ಮೂಲಕ ಎರಡೂ ದೇಶಗಳ ನಡುವಿನ ವಿವಾದಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ಸುಷ್ಮಾ ಸ್ವರಾಜ್ ಗೆ ತಿಳಿಸಿದ್ದರು.

– Team Google Guruu

Leave a Reply

Your e-mail address will not be published. Required fields are marked *

error: Content is protected !!