ಭಾರತದ ಈ 8 ದೇವಸ್ಥಾನಗೆ ಪುರುಷರಿಗೆ ಪ್ರವೇಶಿಸುವಂತಿಲ್ಲ

ಭಾರತದಲ್ಲಿರುವಂತಹ ಕೆಲವೊಂದು ದೇವಾಲಯಗಳಿಗೆ ಪುರುಷರಿಗೆ ಪ್ರವೇಶವಿಲ್ಲದೆಂದು ಹೇಳಿದರೆ ನಿಮಗೆ ಅಚ್ಚರಿಯಾಗಬಹುದು. ಕೆಲವೊಂದು ಮಂದಿರಗಳಲ್ಲಿ ಕೆಲವು ದಿನಗಳಲ್ಲಿ ಹಾಗೂ ಇನ್ನು ಕೆಲವು ದೇವಾಲಯಗಳಲ್ಲಿ ಸಂಪೂರ್ಣವಾಗಿ ನಿಷೇಧವಿದೆ. ಇಂತಹ ದೇವಾಲಯಗಳ ಬಗ್ಗೆಯೂ ನಾವು ತಿಳಿದುಕೊಳ್ಳಬೇಕಿದೆ.

1. ಚಕ್ಕುಲತುಕವು ಮಂದಿರ: ಕೇರಳದಲ್ಲಿರುವ ಭಗವತಿ ದೇವಿಯ ದೇವಾಲಯ. ಇಲ್ಲಿ ವಾರ್ಷಿಕವಾಗಿ ನಾರಿ ಪೂಜೆಯನ್ನು ಮಾಡಲಾಗುತ್ತದೆ. ಇಲ್ಲಿ ಪುರುಷ ಅರ್ಚಕರು, ಡಿಸೆಂಬರ್ ಮೊದಲ ವಾರದ ಶುಕ್ರವಾರದಿಂದ 10 ದಿನಗಳ ಕಾಲ ಉಪವಾಸ ಮಾಡುವ ಮಹಿಳಾ ಭಕ್ತರ ಪಾದ ತೊಳೆಯುವರು.

2. ಕೊಟ್ಟಂಕುಲಂರ ದೇವಿ, ಕೇರಳ: ಭಗವತಿ ಮಂದಿರದಲ್ಲಿ ಮಹಿಳೆಯರೇ ಪೂಜೆಗಳನ್ನು ನಡೆಸುವರು. ಪುರುಷರು ಮಹಿಳೆಯರ ವೇಷ ಧರಿಸಿ ಬಂದು ಮಹಿಳೆಯರ ಆಶೀರ್ವಾದ ಪಡೆದುಕೊಳ್ಳುತ್ತಾರೆ.

3.ಮಾತಾ ಮಂದಿರ: ಬಿಹಾರದ ಮುಝಫ್ಫರಪುರದಲ್ಲಿರುವ ಈ ಮಂದಿರಕ್ಕೆ ಕೆಲವು ನಿರ್ದಿಷ್ಟ ದಿನಗಳಂದು ಪುರುಷರಿಗೆ ಪ್ರವೇಶ ನಿರಾಕರಿಸಲಾಗಿದೆ. ಮಂದಿರದ ಒಳಗೆ ಪುರುಷ ಅರ್ಚಕರಿಗೂ ಪ್ರವೇಶವಿಲ್ಲ. ಕೆಲವು ದಿನಗಳಲ್ಲಿ ಮಹಿಳೆಯರಿಗೆ ಮಾತ್ರ ಇಲ್ಲಿಗೆ ಪ್ರವೇಶ.

4. ಕಾಮಾಖ್ಯ ದೇವಾಲಯ, ಆಂಧ್ರ: ಗುಹವಾತಿಯಲ್ಲಿರುವ ಕಾಮಾಖ್ಯ ದೇವಾಲಯದ ರೀತಿಯಲ್ಲೇ ಇದು ಸಹ ಇದೆ. ತಿಂಗಳಿನ ಕೆಲ ದಿನ ಇಲ್ಲಿ ಪುರುಷರಿಗೆ ಪ್ರವೇಶ ನಿಷಿದ್ಧ. ದೇವಿ ತನ್ನ ನಿಸರ್ಗದ ಕ್ರಿಯೆಯಲ್ಲಿ ಇರುತ್ತಾಳೆ ಎಂನ ನಂಬಿಕೆ ಇದ್ದು ಆ ಸಂದರ್ಭ ಪುರುಷರಿಗೆ ಪ್ರವೇಶ ಇಲ್ಲ.

5. ಸಾವಿತ್ರಿ ದೇವಾಲಯ, ರಾಜಸ್ಥಾನ: ರಾಜಸ್ಥಾನದ ಪುಷ್ಕರ್ ನಲ್ಲಿ ಈ ಮಂದಿರವಿದೆ. ವಿವಾಹಿತ ಪುರುಷರಿಗೆ ಈ ದೇವಾಲಯಕ್ಕೆ ಪ್ರವೇಶ ನಿಷಿದ್ಧ. ಬ್ರಹ್ಮ ದೇವರು ಪುಷ್ಕರ ಸರೋವರದಲ್ಲಿ ಯಜ್ಞವೊಂದನ್ನು ಆಯೋಜಿಸುವರು. ಆದರೆ ಅವರ ಪತ್ನಿ ಸರಸ್ವತಿ ಇಲ್ಲಿಗೆ ಆಗಮಿಸಲು ವಿಳಂಬ ಮಾಡುವರು. ಇದರಿಂದ ಬ್ರಹ್ಮ ದೇವರು ಗಾಯತ್ರಿ ದೇವಿಯನ್ನು ಮದುವೆಯಾಗುವರು ಮತ್ತು ವಿಧಿವಿಧಾನಗಳನ್ನು ಪೂರೈಸುವರು. ಇದರಿಂದ ಕೋಪಿತರಾದ ಸರಸ್ವತಿ ದೇವಿಯು ಈ ದೇವಾಲಯಕ್ಕೆ ವಿವಾಹಿತ ಪುರುಷರು ಪ್ರವೇಶಿಸಬಾರದು ಮತ್ತು ಹಾಗೊಂದು ವೇಳೆ ಪ್ರವೇಶಿಸಿದರೆ ಅವರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುವುದು ಎಂದು ಶಾಪ ನೀಡಿದ್ದಾಳೆ ಎಂದು ಪುರಾಣ ಹೇಳುತ್ತದೆ.

6. ಭಗತಿ ಮಾ ಮಂದಿರ, ಕೇರಳ: ಈ ಮಂದಿರವು ಕನ್ಯಾಕುಮಾರಿಯಲ್ಲಿದೆ. ಕನ್ಯಾ ಮಾತೆ ಭಗವತಿ ದುರ್ಗೆಯು ಸಮುದ್ರ ನಡುವಿನ ಏಕಾಂತ ಪ್ರದೇಶಕ್ಕೆ ಹೋಗಿ ಶಿವನು ತನ್ನ ಪತಿಯಾಗಬೇಕೆಂದು ತಪಸ್ಸನ್ನು ಆಚರಿಸುವರು. ಪುರಾಣಗಳ ಪ್ರಕಾರ ಸತಿಯ ಬೆನ್ನುಹುರಿಯು ಈ ದೇವಾಲಯದಲ್ಲಿ ಬೀಳುತ್ತದೆ. ಈ ದೇವಿಯನ್ನು ಸನ್ಯಾಸ ದೇವಿಯೆಂದು ಕರೆಯಲಾಗುತ್ತದೆ. ಈ ಕಾರಣದಿಂದಾಗಿ ಸನ್ಯಾಸಿ ಪುರುಷರಿಗೆ ಮಂದಿರದ ಆವರಣದ ತನಕ ಮಾತ್ರ ಪ್ರವೇಶವಿದೆ. ಆದರೆ ವಿವಾಹಿತ ಪುರುಷರಿಗೆ ಸಂಪೂರ್ಣ ನಿಷೇಧವಿದೆ.

7. ಅಟ್ಟುಕಲ್ ಮಂದಿರ: ಕೇರಳದ ಅಟ್ಟುಕಲ್ ಭಗವತಿ ಮಂದಿರದಲ್ಲಿ ಮಹಿಳೆಯರೇ ಪೂಜೆಗಳನ್ನು ನಡೆಸುವರು. ಈ ದೇವಾಲಯದಲ್ಲಿ ಸುಮಾರು ಮೂರು ಮಿಲಿಯನ್ ಮಹಿಳೆಯರು ಸೇರಿ ಪೊಂಗಲ್ ಆಚರಣೆ ಮಾಡಿ ಗಿನ್ನಿಸ್ ದಾಖಲೆಗೆ ಬರೆದಿದ್ದಾರೆ. ಹಬ್ಬದ ವೇಳೆ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಸೇರುವ ಕಾರಣದಿಂದಾಗಿ ಪುರುಷರಿಗೆ ಇಲ್ಲಿ ಪ್ರವೇಶವಿಲ್ಲ.

8. ಕನ್ಯಾಕುಮಾರಿ ದೇವಿ: ಈ ದೇವಾಲಯವು ತಮಿಳು ನಾಡಿನಲ್ಲಿದೆ. ಈ ದೇವಾಲಯವು ಅಷ್ಟಾದಶ ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಈ ದೇವಾಲಯದ ಸ್ಥಳ ಪುರಾಣದ ಪ್ರಕಾರ ಸತಿ ದೇವಿ ಪಾರ್ವತಿ ಮರಣಿಸಿದ ನಂತರ ಪರಮೇಶ್ವರನು ನೋವಿನಿಂದ ಪಾರ್ವತಿಯ ಶರೀರವನ್ನು ತೆಗೆದುಕೊಂಡು ಕೈಲಾಸಕ್ಕೆ ತೆರಳುವಾಗ ಪಾರ್ವತಿಯ ಬೆನ್ನಿನ ಮೂಳೆ ಈ ಸ್ಥಳದಲ್ಲಿ ಬಿದ್ದು ಶಕ್ತಿ ಪೀಠವಾಯಿತು. ಪಾರ್ವತಿ ದೇವಿಯ ಅಂಶವಾದ ಭಗವತಿ ಮಾತ ಸನ್ಯಾಸಿಯಾಗಿ ಈ ದೇವಾಲಯದಲ್ಲಿ ನೆಲೆಸಿದ್ದಾಳೆ. ಈ ತಾಯಿಯನ್ನು ದೇವಿ ಕುಮಾರಿ ಎಂದು ಕರೆಯುತ್ತಾರೆ. ಈ ತಾಯಿ ಸನ್ಯಾಸಿಯಾದ ಕಾರಣ ಈ ದೇವಾಲಯಕ್ಕೆ ತೆರಳುವ ಪುರುಷರು ಕೇವಲ ಸನ್ಯಾಸಿಯಾಗಿಯೇ ಇರಬೇಕು ಎಂದು ನಿಯಮ ಏರ್ಪಟ್ಟಿತು

ಒಂದು ಕಡೆ ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ವಿಚಾರ ತುಂಬಾ ಸುದ್ದಿಯಾಗಿತ್ತು. ಸುಪ್ರೀಂ ಕೋರ್ಟ್ ಮಹಿಳೆಯರಿಗೆ ಶಬರಿಮಲೆ ಮುಕ್ತ ಎಂದು ತೀರ್ಪು ನೀಡಿದ್ದರೂ ಪ್ರವೇಶ ಮಾತ್ರ ಇಲ್ಲಿವರೆಗೆ ಸಾಧ್ಯ ಆಗಿಲ್ಲ. ಆದರೇ ಈ ದೇವಸ್ತಾನಗಳಿಗೆ ಪುರುಷರು ಪ್ರವೇಶ ಬೇಕು ಎಂದು ಹೋರಾಟ ಆರಂಭ ಮಾಡ್ತಾರೋ ಸುಮ್ಮನಿರ್ತಾರೋ ಕಾದು ನೋಡೊಣ.

– Team Google Guru

Leave a Reply

Your email address will not be published. Required fields are marked *

error: Content is protected !!