ಡಾಲರ್ ಗೆ ಸೆಡ್ಡು ಹೊಡೆಯಲು ಮೋದಿ ರೂಪಿಸಿದ ಹೊಸ ತಂತ್ರ

ದಿನದಿಂದ ದಿನಕ್ಕೆ ಬಲಗೊಳ್ಳುತ್ತಿರುವ ಡಾಲರ್​ ವರ್ಚಸ್ಸಿಗೆ ಪ್ರತಿಯಾಗಿ ರೂಪಾಯಿ ಮೌಲ್ಯ ವೃದ್ಧಿಸಿ, ಡಾಲರ್​ ವಹಿವಾಟು ತಗ್ಗಿಸಲು ಪ್ರಧಾನಿ ನರೇಂದ್ರ ಮೋದಿ ಹೊಸ ಪ್ಲ್ಯಾನ್ ಮಾಡಿದ್ದಾರೆ. ಅಮೆರಿಕ ಹೊರತುಪಡಿಸಿ ಇತರ ರಾಷ್ಟ್ರಗಳೊಂದಿಗೆ ಸ್ನೇಹಪರ ವ್ಯಾಪಾರ ವಹಿವಾಟಿನ ಸಾಧ್ಯತೆಗಳ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಡಾಲರ್​ ಮುಂದೆ ರೂಪಾಯಿ ಮೌಲ್ಯ ದುರ್ಬಲ ಆಗುತ್ತಿರುವುದರಿಂದ, ಆತ್ಮಿಯ ಸ್ನೇಹಪರ ರಾಷ್ಟ್ರಗಳೊಂದಿಗೆ ಡಾಲರ್ ರಹಿತ ವ್ಯಾಪಾರ ವಹಿವಾಟು ನಡೆಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಮೂಲಕ ರೂಪಾಯಿ ಸ್ಥಿರತೆಗೆ ಹೊಸ ಮಾರ್ಗ ಕಂಡುಕೊಳ್ಳಲಾಗಿದೆ. ಕರೆನ್ಸಿ ವಿನಿಮಯ ಒಪ್ಪಂದದಿಂದ ಭಾರತದಲ್ಲಿ ಲಭ್ಯವಿರುವ ವಿದೇಶಿ ಬಂಡವಾಳವನ್ನು ಅಗತ್ಯಕ್ಕೆ ತಕ್ಕಂತೆ ಬಳಸುವ ಅವಕಾಶ ಭಾರತಕ್ಕೆ ದೊರೆಯಲಿದೆ ಎಂದು ತಜ್ಞರು ಈ ನಡೆಯನ್ನು ವಿಶ್ಲೇಷಿಸಿದ್ದಾರೆ.

ಮೊನ್ನೆಯಷ್ಟೇ  ರಷ್ಯಾದ ಜೊತೆ ರಕ್ಷಣಾ ಒಪ್ಪಂದವನ್ನು ಮಾಡಿಕೊಂಡು ಅಮೆರಿಕದ ಯಾವುದೇ ಬೆದರಿಕೆಗೂ ಮೋದಿ ಅವರು ಜಗ್ಗದೆ ಸ್ಪಷ್ಟ ಸಂದೇಶವನ್ನು ವಿಶ್ವದ ದೊಡ್ಡಣ್ಣನಿಗೆ ರವಾನಿಸಿದರು. ಇದನ್ನು ಅರಿತುಕೊಂಡ ಟ್ರಂಪ್ ರವರು ನಾವು ಯಾವುದೇ ಆರ್ಥಿಕ ನಿರ್ಬಂಧಗಳನ್ನು ಭಾರತದ ಮೇಲೆ ಹೇರುವುದಿಲ್ಲ ಎಂದು ಉಲ್ಟಾ ಹೊಡೆದಿದ್ದರು.

ಆದರೆ ಈಗ ಟ್ರಂಪ್ ರವರಿಗೆ ಮತ್ತೊಂದು ಶಾಕ್ ಎದುರಾಗಿದೆ. ಇತ್ತೀಚೆಗೆ ಭಾರತದ ರೂಪಾಯಿ ಮೌಲ್ಯ ಕುಸಿಯುತ್ತಿದೆ ಎಂದು ಹೇಳಲಾಗುತ್ತದೆ ಆದರೆ ರೂಪಾಯಿ ಮೌಲ್ಯ ಇದ್ದಷ್ಟೇ ಇದೆ ಬದಲಾಗಿ ಡಾಲರ್ ಮೌಲ್ಯ ಬೆಳೆಯುತ್ತಿದೆ ಕಾರಣ  ಟ್ರಂಪ್  ಅವರ ಕೆಲವು  ದ್ವಂದ ನೀತಿಗಳು.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಮೋದಿ ರವರು ರೂಪಾಯಿ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಡಾಲರ್ ಏರಿಕೆ ಅಥವಾ ಇಳಿಕೆಯು ಭಾರತದ ರೂಪಾಯಿ ಮೇಲೆ ಯಾವುದೇ ಪರಿಣಾಮವನ್ನು ಬೀಳದಿರಲು ಇತಿಹಾಸದಲ್ಲೇ ಮೊದಲ ಬಾರಿಗೆ ಐತಿಹಾಸಿಕ ಕ್ರಮವನ್ನು ಕೈಗೊಳ್ಳಲು ನಿರ್ಧರಿಸಿದ್ದಾರೆ.

ಸಾಮಾನ್ಯವಾಗಿ ಭಾರತವು ತೈಲ ದೇಶಗಳ ಜೊತೆ ಡಾಲರ್ ನಲ್ಲಿ ವ್ಯವಹಾರವನ್ನು ನಡೆಸುತ್ತಿತ್ತು ಇದರಿಂದ ಡಾಲರ್ ಬಲಿಷ್ಟ ಕೊಳ್ಳುವುದಷ್ಟೆ ಅಲ್ಲದೆ ರೂಪಾಯಿ ಮೌಲ್ಯ ಸಹ ಕೆಲವೊಮ್ಮೆ ಕಡಿಮೆಯಾಗುತ್ತಿತ್ತು ಇದನ್ನು ಅರಿತುಕೊಂಡ ನರೇಂದ್ರ ಮೋದಿ ಅವರು ಇನ್ನು ಮುಂದೆ ಭಾರತವು ಇರಾನ್ ನೊಂದಿಗೆ ಡಾಲರ್ ಬದಲು ರೂಪಾಯಿಗಳಲ್ಲಿ ತೈಲವನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.

ಈ ನಿರ್ಧಾರ ಒಂದು ಐತಿಹಾಸಿಕ ಘಟನೆಯಾಗಿದ್ದು ಮೋದಿ ರವರಿಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಘಟನೆಯಿಂದ ಶಾಕ್ ಗಿರುವ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕಾವು ಇನ್ನು ಮುಂದೆ ಭಾರತದ ಮೇಲೆ ಯಾವುದೇ ಹೇಳಿಕೆಗಳನ್ನು ಅಥವಾ ನಿರ್ಬಂಧಗಳನ್ನು ಇರುತ್ತೇವೆ ಎಂದು ಹೇಳಲು ಒಂದು ಕ್ಷಣ ಯೋಚಿಸಬೇಕಾಗುತ್ತದೆ ಯಾಕೆಂದರೆ ಇಲ್ಲಿ ಭಾರತವನ್ನು ಮುನ್ನಡೆಸುತ್ತಿರುವುದು 56 ಇಂಚಿನ ಎದೆಗಾರಿಕೆ.

-Team Google Guru

Leave a Reply

Your e-mail address will not be published. Required fields are marked *

error: Content is protected !!