ಪ್ರಧಾನಿ ಮೋದಿಯಿಂದ ದೇಶದ ಜನತೆಗೆ ಭಾರೀ ಬಿಗ್ ಗಿಫ್ಟ್; ಬರೋಬ್ಬರಿ 10 ಕೋಟಿ ಜನರ ಅಕೌಂಟ್ ‌ಗೆ ಬೀಳಲಿದೆ ಹಣ

ಪ್ರಧಾನಿ ಮೋದಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ದೇಶ ಅಭಿವೃದ್ಧಿಯ ಪಥದತ್ತ ಸಾಗಿದೆ, ಈ ಹಿಂದೆ ಯಾವ ದೇಶಗಳು ಭಾರತವನ್ನ ಹಾವಾಡಿಗರ ದೇಶವಂತ ಹೀಗಳೆಯುತ್ತಿದ್ದವೋ ಈಗ ಅದೇ ರಾಷ್ಟ್ರಗಳು ಭಾರತವನ್ನ ದೊಡ್ಡಣ್ಣನಂತೆ ನೋಡುತ್ತಿವೆ. ಪ್ರಧಾನಿ ಮೋದಿಯವರನ್ನ ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಕೋರಲು ತುದಿಗಾಲ ಮೇಲೆ ನಿಂತಿವೆ.

ದೇಶದಲ್ಲಿ ಮಿತಿ ಮೀರಿ ನಡೆಯುತ್ತಿದ್ದ ಭ್ರಷ್ಟಾಚಾರ, ಲೂಟಿ, ಕುಸಿದೇ ಹೋಗಿದ್ದ ಕಾನೂನು ಸುವ್ಯವಸ್ಥೆ, ದಿನ ಬೆಳಗಾದರೆ ಭಯೋತ್ಪಾದಕರ ಅಟ್ಟಹಾಸ, ಬಾಂಬ್ ದಾಳಿ, ಸೈನಿಕರ ಕಗ್ಗೊಲೆ, ಪ್ರತ್ಯೇಕತಾವಾದಿಗಳ ಅಟ್ಟಹಾಸ ಹೀಗೆ ನಾನಾ ಸಮಸ್ಯೆಗಳಿಂದ ಜರ್ಜರಿತವಾಗಿದ್ದ ದೇಶಕ್ಕೆ ಆಶಾಕಿರಣದಂತೆ ಕಂಡವರೇ ನರೇಂದ್ರ ಮೋದಿ.

ಯುಪಿಎ ಸರ್ಕಾರದ ಹತ್ತು ವರ್ಷಗಳ ದುರಾಡಳಿತ ಕಂಡು ರೋಸಿ ಹೋಗಿದ್ದ ಜನ ನರೇಂದ್ರ ಮೋದಿಯವರನ್ನ 2014 ರಲ್ಲಿ ಪ್ರಧಾನಿಯಾಗಿ ಪೂರ್ಣ ಬಹುಮತದಿಂದ ಪ್ರಧಾನಿಯಾಗಿ ಆಯ್ಕೆ ಮಾಡಿದ್ದರು. ಹತ್ತು ವರ್ಷಗಳಿಂದ ಪಾತಾಳಕ್ಕೆ ಕುಸಿದಿದ್ದ ಆರ್ಥಿಕತೆ,‌ ಕಂಡ ಕಂಡ ರಾಷ್ಟ್ರಗಳಿಂದ ಪಡೆದಿದ್ದ ಸಾಲದ ಹೊರೆ, ವಿಶ್ವದಲ್ಲಿ ಕುಸಿದಿದ್ದ ಭಾರತದ ವರ್ಚಸ್ಸನ್ನ ಮತ್ತೆ ಮರಳಿ ತರುವಲ್ಲಿ ಪ್ರಧಾನಿ ಮೋದಿ ಅವಿರತ ಶ್ರಮಪಟ್ಟು ಒಂದು ಲೆವಲ್ಲಿಗೆ ತಂದು ನಿಲ್ಲಿಸಿದ್ದಾರೆ.

ಇಷ್ಟಾದರೂ ಕೂಡ ಪ್ರಧಾನಿ ಮೋದಿಯವರನ್ನ ವಿರೋಧಪಕ್ಷಗಳು ಅದರಲ್ಲೂ ಕಾಂಗ್ರೆಸ್ ಮಾತ್ರ ಮೊದಲ ದಿನದಿಂದಲೂ ನರೇಂದ್ರ ಮೋದಿಯವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನ ಮಾಡುತ್ತಲೇ ಬರುತ್ತಿದೆ. ಸುಳ್ಳು ಆರೋಪಗಳನ್ನ ಮಾಡುತ್ತಲೇ ಜನರ ಹಾದಿ ತಪ್ಪಿಸಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಅದೇ ಕುತಂತ್ರದಿಂದ 2019 ರಲ್ಲೂ ಚುನಾವಣೆ ಗೆಲ್ಲುವ ಕನಸನ್ನ ಕಾಂಗ್ರೆಸ್ ಕಂಡಿತ್ತು ಆದರೆ ದೇಶದ ಜನತೆ ಸರಿಯಾದ ಪಾಠವನ್ನೇ ಕಲಿಸಿ ಹೀನಾಯವಾಗಿ ಸೋಲಿಸಿದ್ದಾರೆ.

ಜನಸಾಮಾನ್ಯರ, ಬಡವರ, ರೈತರ, ದೀನ ದಲಿತರ ಪರವಾಗಿ ಅಸಂಖ್ಯಾತ ಜನಪ್ರಿಯ ಯೋಜನೆಗಳನ್ನ ಜಾರಿಗೆ ತಂದಿದ್ದ ಮೋದಿ ಸರ್ಕಾರ ಇದೀಗ ದೇಶದ 10 ಕೋಟಿ ಜನತೆಗೆ ಬಿಗ್ ಗಿಫ್ಟ್ ನೀಡಲು ಚಿಂತನೆ ನಡೆಸಿದ್ದಾರೆ. ಕೇಂದ್ರ ಸರ್ಕಾರ ಇದೀಗ ಯೂನಿವರ್ಸಲ್ ಬೇಸಿಕ್ ಇನಕಮ್(UBI) ಮಾಧ್ಯಮದಿಂದ ದೇಶದ 10 ಕೋಟಿ ಜನರಿಗೆ ಖುಷಿ ಸುದ್ದಿ ನೀಡಲು ಹೊರಟಿದೆ.

ಇದಕ್ಕಾಗಿ ಮೋದಿ ಸರ್ಕಾರ ದೇಶದ 10 ಕೋಟಿ ಜನರನ್ನ ಆಯ್ಕೆ ಮಾಡಲಿದೆ, ಇದಾದ ಬಳಿಕ ಈ 10 ಕೋಟಿ ಜನತೆಗೆ ಪ್ರತಿ ತಿಂಗಳು 2,500 ರೂಪಾಯಿಗಳನ್ನ ನೀಡುವ ಯೋಜನೆಯೊಂದಕ್ಕೆ ಕೈ ಹಾಕಿದೆ. ನವಭಾರತ್ ಟೈಮ್ಸ್ ಸುದ್ದಿಯ ಪ್ರಕಾರ ಕಾಂಗ್ರೆಸ್ ನಡೆಸುತ್ತಿರುವ ರೈತರ ಸಾಲ ಮನ್ನಾ ನಾಟಕಕ್ಕೆ ಕೇಂದ್ರ ಸರ್ಕಾರ ಉತ್ತರ ನೀಡದೆ ಹೋದರೆ ದೇಶದ ಜನತೆಗೆ ಕಾಂಗ್ರೆಸ್ ಮತ್ತೆ ಮೋಸ ಮಾಡಿ ಅಧಿಕಾರದ ಗದ್ದುಗೆ ಹಿಡಿಯುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತೆ ಹೀಗಾಗಿ ದೇಶದ ಜನತೆಗೆ ಗಿಫ್ಟ್ ನೀಡಲು ಮೋದಿ ಸರ್ಕಾರ ಸಿದ್ಧತೆ ನಡೆಸಿದೆಯಂತೆ.

ಕಾಂಗ್ರೆಸ್ಸಿನ ಸಾಲ ಮನ್ನಾ ಅಸ್ತ್ರದ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸಲು ಮೋದಿ ಸರ್ಕಾರ ಇದೀಗ UBI ಜಾರಿಗೊಳಿಸುವ ಪ್ಲ್ಯಾನ್ ನಡೆಸುತ್ತಿದೆ‌ ಇದರ ಕುರಿತಾಗಿ UBI ಜಾರಿಗೊಳಿಸುವ ಈ ನಿರ್ಧಾರಕ್ಕಾಗಿ ದೇಶಾದ್ಯಂತ ಸಮೀಕ್ಷೆ ನಡೆಸಲಿದೆಯಂತೆ ಮೋದಿ ಸರ್ಕಾರ. ಈ ಯೋಜನೆಯ ಪ್ರಕಾರ ಸರ್ಕಾರ ಮೊದಲು 2000 ರಿಂದ 2500 ರೂ.ವರೆಗೆ ಪ್ರತಿ ತಿಂಗಳು ಜನರಿಗೆ ನೀಡುತ್ತಂತೆ.

ಕೇಂದ್ರದ ಈ ಯೋಜನೆಯ ಘೋಷಣೆ ಮುಂದಿನ ವರ್ಷದ ಮೊದಲ ತಿಂಗಳು ಅಂದರೆ ಜನೇವರಿ 15 ರವರೆಗೆ ಘೋಷಣೆ ಮಾಡುವ ಎಲ್ಲ ಸಕಲ ಸಿದ್ಧತೆಗಳನ್ನ ನಡೆಸುತ್ತಿದೆ. ಕೇಂದ್ರ ಸರ್ಕಾರದ ಈ ಯೋಜನೆಗಾಗಿ 10 ಸಾವಿರ ಕೋಟಿ ರೂ.ಗಳನ್ನ ಮೀಸಲಿಟ್ಟಿದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಏನಿದು UBI ಸ್ಕೀಮ್? ಯಾರ‌್ಯಾರಿಗೆ ಸಿಗಲಿದೆ ಈ ಯೋಜನೆಯ ಲಾಭ?

ಯಾರು ತಮ್ಮ ಸಂಪಾದನೆ ಮಾಡಲು‌ ಅನರ್ಹರಾಗಿದ್ದಾರೋ, ಯಾರು ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಾರೋ ಅಂಥವರಿಗಾಗಿ ಕೇಂದ್ರ ಸರ್ಕಾರ ನೇರವಾಗಿ ಜನರ ಅಕೌಂಟಿಗೇ ಹಣವನ್ನ ಹಾಕುವ ಕೆಲಸವನ್ನ ಮಾಡಲಿದೆ ಎಂಬುದನ್ನ ಇಂಡಿಯಾ ಟುಡೇ ವರದಿ ಮಾಡಿದೆ.

– Team Google Guruu

Leave a Reply

Your e-mail address will not be published. Required fields are marked *

error: Content is protected !!