ನೀವು ಮೋದಿಗಿಂತ ಗ್ರೇಟ್ ಎಂದಿದ್ದಕ್ಕೆ ಪ್ರತಾಪ್ ಚಂದ್ರ ಸಾರಂಗಿ ಕೊಟ್ಟ ಉತ್ತರವೇನು ಗೊತ್ತಾ.?

ಓಡಿಸ್ಸಾದ ನಿಲಗಿರಿ ಕ್ಷೇತ್ರದಿಂದ ಶಾಸಕರಾಗಿದ್ದರೂ ತಮಗಾಗಿ ಸ್ವಂತ ಮನೆಯನ್ನು ಕೂಡ ನಿರ್ಮಿಸಿಕೊಳ್ಳದ ಈ ವ್ಯಕ್ತಿ ಇದೀಗ ದೇಶದೆಲ್ಲೆಡೆ ಸುದ್ದಿಯಾಗಿದ್ದಾರೆ. ಸಣ್ಣ ಗುಡಿಸಲಿನಲ್ಲಿ ವಾಸಮಾಡಿಕೊಂಡು, ಸೈಕಲ್‌ನಲ್ಲಿ ಸಂಚರಿಸುವ ಪ್ರತಾಪ್‌ ಚಂದ್ರ ಸಾರಂಗಿ ಅವರ ಸರಳತೆ ದೇಶದ ಜನರಿಗೆ ಅಚ್ಚರಿ ಮೂಡಿಸಿದೆ, ಒಬ್ಬ ರಾಜಕಾರಣಿ ಹೀಗೂ ಇರ್ತಾರಾ ಎಂದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಪ್ರತಾಪ್ ಅವರನ್ನು ಒಡಿಶಾದ ಮೋದಿ, ಅಥವಾ ‘ನಾನಾ’ ಎಂದೇ ಇವರು ಹೆಸರುವಾಸಿಯಾಗುದ್ದಾರೆ. ಬಾಲ್ಯದಿಂದಲೂ ಆಧ್ಯಾತ್ಮದ ಕಡೆಗೆ ಒಲವು ಬೆಳಸಿಕೊಂಡಿರುವ ಇವರು, ರಾಮಕೃಷ್ಣ ಮಠದಲ್ಲಿ ಸನ್ಯಾಸಿಯಾಗುವ ಇಚ್ಛೆ ಹೊಂದಿದ್ದರು. ಆದರೆ ತಾಯಿ ಜೀವಂತವಿದ್ದ ಕಾರಣ ಅವರ ನಿರ್ವಹಣೆ ಕರ್ತವ್ಯಕ್ಕೆ ಬದ್ಧರಾಗಿ ಗ್ರಾಮದಲ್ಲಿ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಪ್ರತಾಪ್ ಚಂದ್ರ ಸಾರಂಗಿ ಬೆಳೆದರು.

ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದ ಪ್ರತಾಪ್ ಅವರು ಇಡೀ ದೇಶವೇ ಅವರ ಸರಳತೆಯನ್ನು ಹೊಗಳಿಕೆ ಮೂಲಕ ಕೊಂಡಾಡುತ್ತಿದೆ ಎಂದು ಹೇಳಬಹುದು. ಅದರಲ್ಲೂ ಕೆಲವರು ಇವರೇ ನಮ್ಮ ಮುಂದಿನ ಪ್ರಧಾನಿ ಎಂದು ಹೇಳುತ್ತಿದ್ದಾರೆ, ಈ ಕುರಿತಾಗಿ ಮಾಧ್ಯಮಗಳು ಸಾರಂಗಿ ಅವರ ಜೊತೆ ಮಾತನಾಡಿದ್ದಾರೆ.

ನಿಮ್ಮನ್ನು ಓಡಿಶಾದ ಜನ ನಾನಾ ಹಾಗೂ ಓಡಿಶಾದ ಮೋದಿ ಅಂತ ಕರೆಯುತ್ತಿದ್ದಾರೆ, ಪ್ರಧಾನಿ ಮೋದಿಗೆ ನಿಮ್ಮನ್ನು ಹೋಲಿಕೆ ಮಾಡುತ್ತಿದ್ದಾರೆ, ನೀವೆ ಮುಂದಿನ ಪ್ರಧಾನಿ ಎಂಬ ಮಾತುಗಳು ಕೇಳಿಬರುತ್ತಿವೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರತಾಪ್ ಚಂದ್ರ ಸಾರಂಗಿ ಉತ್ತರ ನೀಡಿದ್ದಾರೆ.

ನನ್ನನ್ನು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಹೋಲಿಕೆ ಮಾಡುವುದು ಖುಷಿಯ ಸಂಗತಿ ಎಂದು ತಮ್ಮ ಸರಳತೆಯಿಂದಲೇ ಅಪಾರ ಮೆಚ್ಚುಗೆಗೆ ಪಾತ್ರವಾಗಿರುವ ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಅವರು ಹೇಳಿದ್ದಾರೆ.
ಜನ ನನ್ನನ್ನು ಒಡಿಶಾದ ಮೋದಿ ಎಂದು ಏಕೆ ಕರೆಯುತ್ತಿದ್ದಾರೆ ಗೊತ್ತಿಲ್ಲ. ಆದರೆ ಈ ರೀತಿಯ ಹೋಲಿಕೆ ಸರಿಯಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯ. ಆದರೆ ಮೋದಿ ಅಸಾಮಾನ್ಯ ಪ್ರತಿಭಾವಂತ ಎಂದು ಸಾರಂಗಿ ಹೇಳಿದ್ದಾರೆ.

ನಾನು ಸಚಿವನಾದರೂ ನನ್ನ ಸ್ವಭಾವ ಅಥವಾ ನಿಲುವುಗಳಲ್ಲಿ ಬದಲಾವಣೆಯಾಗುವುದಿಲ್ಲ. ಇದುವರೆಗೆ ಬದುಕು ಸಾಗಿಸಿದ ರೀತಿಯಲ್ಲೇ ಇನ್ನು ಮುಂದೆಯೂ ನನ್ನ ಜೀವನ ಸರಳವಾಗಿ ಇರುತ್ತದೆ ಎಂದು ಪ್ರತಾಪ್ ಚಂದ್ರ ಸಾರಂಗಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಇದೀಗ 64 ವರ್ಷದ ಪ್ರತಾಪ್‌ ಚಂದ್ರ ಸಾರಂಗಿ ಅವರು ಒಡಿಶಾದ ಬಾಲಾಸೋರ್‌ನಿಂದ ಇದೇ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದು, ಮೋದಿ ಸಂಪುಟದಲ್ಲಿ ಪಶು ಸಂಗೋಪನಾ, ಮೀನುಗಾರಿಕೆ ಖಾತೆ ರಾಜ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿ ಮೋದಿ ಸರಕಾರದಲ್ಲಿ ಕೆಲಸ ಮಾಡಲು ಸಿದ್ದವಾಗಿದ್ದಾರೆ.

-Team Google Guru

Leave a Reply

Your email address will not be published. Required fields are marked *

error: Content is protected !!