ಪ್ರಧಾನಿ ಮೋದಿಯವರ ಭದ್ರತಾ ವ್ಯವಸ್ಥೆ ಹೇಗಿರುತ್ತೆ ಗೊತ್ತಾ

ನರೇಂದ್ರ ಮೋದಿ ಭಾರತದ ಎಂಥಾ ಶಕ್ತಿಶಾಲಿ ಪ್ರಧಾನಿಯೆಂದರೆ ಅವರ ವರ್ಚಸ್ಸು, ನಿರ್ಧಾರ, ದೇಶದ ಪರ ಅವರಿಗಿರುವ ಕಾಳಜಿ, ಭಯೋತ್ಪಾದಕರನ್ನ ಮಟ್ಟ ಹಾಕುವ ಅವರ ಛಾತಿಯಿಂದಲೇ ಭಯೋತ್ಪಾದಕರ ಟಾಪ್ ಹಿಟ್ ಲಿಸ್ಟ್ ನಲ್ಲಿ ಮೊಟ್ಟ ಮೊದಲನೆಯ ಹೆಸರೇ ನರೇಂದ್ರ ಮೋದಿಯಾಗಿದೆ. ಹಲವಾರು ಭಯೋತ್ಪಾದಕ ಸಂಘಟನೆಗಳ ಹಿಟ್ ಲಿಸ್ಟ್ ನಲ್ಲಿ ಪ್ರಧಾನಿ ಮೋದಿಯೇ ಮೊದಲ ಟಾರ್ಗೇಟ್ ಆಗಿದ್ದಾರೆ.

ಇದೇ ಕಾರಣಕ್ಕಾಗಿ ಪ್ರಧಾನಿ ಮೋದಿ ಎಲ್ಲೇ ತೆರಳಿದರೂ ಭೂಮಿಯಿಂದ ಹಿಡಿದು ಆಕಾಶದವರೆಗೂ ಎಂಟೂ ದಿಕ್ಕುಗಳಲದಲಿ ಪ್ರಧಾನಿ ಮೋದಿಯವರ ಸೆಕ್ಯೂರಿಟಿ ಟೀಂ ಹದ್ದಿನ ಕಣ್ಣಿಟ್ಟಿರುತ್ತದೆ. ಬನ್ನಿ ಪ್ರಧಾನಿ ಮೋದಿಯವರಿಗಿರುವ ಟೈಟ್ ಸೆಕ್ಯೂರಿಟಿ ಹೇಗಿರುತ್ತೆ ಅನ್ನೋದನ್ನ ನಾವು ನಿಮಗೆ ತಿಳಿಸುತ್ತೇವೆ.

ಪ್ರಧಾನಿ ಮೋದಿಯವರ ಭದ್ರತೆ ಅಥವ ಸೆಕ್ಯೂರಿಟಿ ಹಿಂದಿನ ಪ್ರಧಾನಿ ಮನಮೋಹನ್ ಸಿಂಗರಿಗಿಂತಲೂ ಎರಡು ಪಟ್ಟು ಹೆಚ್ಚಿದೆ. ಪ್ರಧಾನಿ ಮೋದಿ ಯಾವ ರಸ್ತೆಯಿಂದ ತೆರಳಿತ್ತಿರುತ್ತಾರೋ ಅಲ್ಲಲ್ಲಿ SPG(Special Protection Guards) ಅಂದರೆ ವಿಶೇಷ ಭದ್ರತಾ ಪಡೆಯ ಕಮಾಂಡೋಗಳು ಹದ್ದಿನ ಕಣ್ಣಿಟ್ಟಿರುತ್ತಾರೆ. ಪ್ರಧಾನಿ ಮೋದಿಯವರ ಸೆಕ್ಯೂರಿಟಿ ಗಾಗಿ ಭಿನ್ನ ಭಿನ್ನ ರೂಪದಲ್ಲಿ ಒಂದು ಸಾವಿರಕ್ಕೂ ಅಧಿಕ ಕಮಾಂಡೋಗಳು ಕೆಲಸ ಮಾಡುತ್ತಿದ್ದಾರೆ.

ಪ್ರಧಾನಿ ಮೋದಿ ಭಾರೀ ಸುರಕ್ಷತೆಯುಳ್ಳ ಬುಲೆಟ್ ಪ್ರೂಫ್ ಬಿಎಮ್‌ಡಬ್ಲ್ಯೂ-7 ಕಾರಿನಲ್ಲಿ ಪ್ರಯಾಣಿಸುತ್ತಾರೆ. ಪ್ರಧಾನಿ ಮೋದಿಯವರ ಕಾರಿನ ಜೊತೆಗೆ ಇನ್ನೂ ಎರಡು ಡಮ್ಮಿ ಕಾರುಗಳೂ ಇರುತ್ತವೆ, ಅವರ ಮೇಲೆ ದಾಳಿ ಮಾಡೋಕೆ ಬರೋರ ದಿಕ್ಕು ತಪ್ಪಿಸೋಕೆ ಈ ರೀತಿಯ ತಂತ್ರವನ್ನ ಭದ್ರತಾ ಪಡೆಗಳು ಅನುಸರಿಸುತ್ತವೆ.

ಪ್ರಧಾನಿ ಮೋದಿಯವರ ಸೆಕ್ಯೂರಿಟಿಗಾಗಿ ಮೊದಕು ದೆಹಲಿ ಪೋಲಿಸ್ ಸೆಕ್ಯೂರಿಟಿ ಸ್ಟ್ಯಾಫ್ ಗಾಡಿ ಸೈರನ್ ಹೊಡೆದುಕೊಂಡು ಮೊದಲು ಬರುತ್ತವೆ. ಅದರ ಬಳಿಕ SPG ಕಮಾಂಡೋಗಳ ಕಾರುಗಳು ಹಾಗು ಎರಡು ಗಾಡಿಗಳು ಬರುತ್ತವೆ, ಇದಾದ ಬಳಿಕ ಎಡಕ್ಕೆ ಹಾಗು ಬಲಕ್ಕೆ ಎರಡು ಕಾರ್ ಗಳಿದ್ದು ಅದರ ಮಧ್ಯದ ಕಾರಿನಲ್ಲಿ ಪ್ರಧಾನಿ ಮೋದಿ ಕೂತಿರುವ ಬುಲೆಟ್ ಪ್ರೂಫ್ ಕಾರ್ ಇರುತ್ತೆ.

ಪ್ರಧಾನಿ ಮೋದಿಯವರ ಸುತ್ತಮುತ್ತ ಚಲಿಸುವ ಸೆಕ್ಯೂರಿಟಿ ಕಾರ್ ಗಳನ್ನೂ SPG ಕಮಾಂಡೋಗಳು ಸಂಪೂರ್ಣವಾಗಿ ಚೆಕಿಂಗ್ ನಡೆಸುತ್ತಾರೆ. ಪ್ರಧಾನಿ ಮೋದಿಯವರಿಗೆ ಸೆಕ್ಯೂರಿಟಿ ನೀಡುವ ಕಾರುಗಳ ಮೇಲೆ ಜಾಮರ್ ಅಳವಡಿಸಲಾಗಿರುತ್ತೆ. ಈ ಜಾಮರ್ ನಲ್ಲಿ ಎರಡು ಆ್ಯಂಟಿನಾಗಳಿರುತ್ತೆ, ಇವುಗಳಿಂದ ಪ್ರಧಾನಿ ಮೋದಿ ಸಂಚರಿಸುವ ಸುತ್ತಮುತ್ತಲಿನ 100 ಮೀಟರ್ ಎಲ್ಲೇ ವಿಸ್ಫೋಟಕ ವಸ್ತುಗಳಿದ್ದರೂ ಅವು ಆಟೋಮೆಟಿಕ್ ನಿಷ್ಕ್ರಿಯವಾಗಿಬಿಡುತ್ತವೆ.

ಪ್ರಧಾನಿ ಮೋದಿಯವರ ಸೆಕ್ಯೂರಿಟಿ ವಾಹನಗಳ ಮಧ್ಯೆ ಒಂದು ಆ್ಯಂಬುಲೆನ್ಸ್ ಕೂಡ ಇರುತ್ತೆ ಹಾಗು ದೆಹಲಿ ಪೋಲಿಸರ ಜಿಪ್ಸಿ ಗಾಡಿಗಳು ಹಿಂದೆ ಮುಂದೆ ಚಲಿಸುತ್ತಿರುತ್ತವೆ. ಪ್ರಧಾನಿ ಮೋದಿ ತಮ್ಮ ಕಾರಿನಿಂದ ಇಳಿದು ನಡೆಯೋಕೆ ಮುಂದಾದರೆ ಅವರ ಹಿಂದೆ ಮುಂದೆ ಸಾಮಾನ್ಯ ಬಟ್ಟೆಗಳನ್ನ ಧರಿಸಿ ಜನಸಾಮಾನ್ಯರಂತೇ ಕಾಣುವ NSG ಕಮಾಂಡೋಗಳಿರುತ್ತಾರೆ.

SPG ಕಮಾಂಡೋಗಳ ಬಳಿ ವಿಶಿಷ್ಟ ರೀತಿಯ ಅಡ್ವಾನ್ಸ್ಡ್ ಟೆಕ್ನಾಲಜಿಯ ಅತ್ಯಾಧುನಿಕ ರೈಫಲ್ ಗಳಿರುತ್ತವೆ. ಈ ರೈಫಲ್ ಗಳಿಂದ ಒಂದೇ ನಿಮಿಷದಲ್ಲಿ ಬರೋಬ್ಬರಿ 800 ಬಾರಿ ಫೈರ್ ಮಾಡಬಹುದಾಗಿದೆ. ಪ್ರಧಾನಿ ಮೋದಿಯವರ ಸೆಕ್ಯೂರಿಟಿ ನೀಡುವ ಕಮಾಂಡೋಗಳು ಯಾವಾಗಲೂ ಕಪ್ಪು ಬಣ್ಣದ ಕನ್ನಡಕ ಹಾಕಿಕೊಂಡಿರುತ್ತಾರೆ. ಪ್ರಧಾನಿ ಮೋದಿಯವರ ಮೇಲೆ ದಾಳಿ ಮಾಡುವ ವ್ಯಕ್ತಿ ತನ್ನನ್ನ ಕಮಾಂಡೋಗಳು ಗುರುತಿಸಿದ್ದಾರೆ ಅಂತ ತಿಳಿಯೋಕೂ ಆಗಬಾರದೆಂಬ ಕಾರಣಕ್ಕೆ ಕಪ್ಪು ಕನ್ನಡಕ ಧರಿಸುತ್ತಾರೆ ಕಮಾಂಡೋಗಳು.

ಪ್ರಧಾನಮಂತ್ರಿ ವಾಸಿಸುವ ದೆಹಲಿಯ 7 ರೇಸ್‌ಕೋರ್ಸ್ ರಸ್ತೆಯಲ್ಲಿರುವ ಅವರ ನಿವಾಸದಲ್ಲೂ 500 ಕ್ಕೂ ಹೆಚ್ಚು SPG ಕಮಾಂಡೋಗಳು ನಿಯೋಜಿತರಾಗಿರುತ್ತಾರೆ. ಪ್ರಧಾನಿ ಮೋದಿ ಒಂದು ವೇಳೆ ವಿದೇಶಕ್ಕೆ ತೆರಳುತ್ತಾರೆಂದರೆ ಅವರ ವಿದೇಶ ಪ್ರಯಾಣಸ ಜವಾಬ್ದಾರಿಯನ್ನ ಭಾರತೀಯ ವಾಯುಸೇನೆ ವಹಿಸಿಕೊಳ್ಳುತ್ತದೆ.

ಪ್ರಧಾನ ಮಂತ್ರಿ ಏರಪೋರ್ಟ್ ತಲುಪುವ ಮೊದಲೇ ಆ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳು ತಯಾರಾಗಿ ನಿಂತಿರುತ್ತವೆ. ಒಂದು ವೇಳೆ ದು ವಿಮಾನ ಕೆಟ್ಟರೆ ಮತ್ತೊಂದನ್ನ ಬಳಸಲು ಈ ರೀತಿಯಾಗಿ ವ್ಯವಸ್ಥೆ ಮಾಡಿಟ್ಟಿರಲಾಗುತ್ತೆ. ಪ್ರಧಾನಮಂತ್ರಿಗಳ ವಿಮಾನ ಹಾರಾಟವಾಗುವುದಕ್ಕೂ ಮೊದಲು ಪ್ರಧಾನಿಯವರ ವಿಮಾನ ತೆರಳುವ ರೂಟ್(ಫ್ಲೈಯಿಂಗ್ ರೂಟ್) ನ ಪೂರ್ಣ ಪ್ರದೇಶವನ್ನ ನೋ ಫ್ಲೈಯಿಂಗ್ ಜೋನ್ (ಹಾರಾಟ ನಿಷೇಧಿತ ಪ್ರದೇಶ) ವೆಂದು ಮಾಡಿಬಿಡಲಾಗುತ್ತೆ.

– Vinod Hindu Nationalist

Leave a Reply

Your e-mail address will not be published. Required fields are marked *

error: Content is protected !!