ಪ್ರಧಾನಿ ಮೋದಿಯ ಪ್ರಚಂಡ ಗೆಲುವಿಗೆ ರಷ್ಯಾ ಅಧ್ಯಕ್ಷ ಪುಟಿನ್ ಹೀಗೆ ಹೇಳ್ತಾರಂತ ಯಾರೂ ಊಹಿಸಿರಲಿಲ್ಲ

ಭಾರತದಲ್ಲಿ ಲೋಕಸಭಾ ಚುನಾವಣೆ 2019 ರ ಫಲಿತಾಂಶ ಬಂದಾಗಿದೆ ಹಾಗು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಸ್ವತಂತ್ರ ಭಾರತದ ಇತಿಹಾಸದಲ್ಲೇ ಮತ್ತೊಂದು ಐತಿಹಾಸಿಕ ಗೆಲುವನ್ನ ದಾಖಲಿಸಿದ್ದಾರೆ. 2014 ರಲ್ಲಿ ಕಾಂಗ್ರೆಸ್ ಪಕ್ಷವನ್ನ ಖೆಡ್ಡಾ ತೋಡಿ ಹೀನಾಯ ಸೋಲುಣಿಸಿದ್ದ ನರೇಂದ್ರ ಮೋದಿ ಭಾರತದ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದರು.

ಕಾಂಗ್ರೆಸ್ಸಿನ ಭ್ರಷ್ಟಾಚಾರ, ಜಾತಿ ಜಾತಿ ಧರ್ಮ ಧರ್ಮಗಳ ನಡುವೆ ಹಚ್ಚುತ್ತಿದ್ದ ಬೆಂಕಿಯಲ್ಲಿ ಬೆಂದು ಹೋಗಿದ್ದ ದೇಶದ ಜನ 2014 ರಲ್ಲಿ ಕಾಂಗ್ರೆಸ್ ಪಕ್ಷಕ್ಕೇ ಗುಂಡಿ ಅಗೆದು ಹೂತುಬಿಟ್ಟಿದ್ದರು‌. ಕಾಂಗ್ರೆಸ್ ಮುಕ್ತ ಭಾರತವೆಂದಿದ್ದ ಪ್ರಧಾನಿ ಮೋದಿಯವರ ಕನಸನ್ನ ದೇಶದ ಜನತೆ 2014 ರಲ್ಲಷ್ಟೇ ಅಲ್ಲದೆ ಈಗ 2019 ರಲ್ಲಿ ಮತ್ತೆ ನನಸು ಮಾಡಿ ಸಾಬೀತು ಮಾಡಿ ತೋರಿಸಿದ್ದಾರೆ.

ಹಾಗು ಈಗ ಜಗತ್ತು ಕೂಡ ಮೋದಿಯವರಿಗೆ ನಮಿಸುತ್ತ ತಲೆ ಬಾಗುತ್ತಿದೆ, ಮೋದಿಯವರ ಭರ್ಜರಿಯಾದ ಪ್ರಚಂಡ ಬಹುಮತ ಹಾಗು ಗೆಲುವಿಗೆ ಇದೀಗ ರಷ್ಯಾ ರಾಷ್ಟ್ರಪತಿ ವ್ಲಾದಿಮಿರ್‌‌ ಪುಟಿನ್ ಶುಭಾಷಯದ ಸಂದೇಶವನ್ನ ಕಳಿಸಿದ್ದಾರೆ. ವ್ಲಾದಿಮಿರ್‌‌ ಪುಟಿನ್ ರವರು ಮೋದಿಗೆ ಗೆಲುವಿನ ಶುಭಾಷಯ ಕೋರುತ್ತ ನರೇಂದ್ರ ಮೋದಿ ಕೇವಲ ಭಾರತದ ನಾಯಕ ಅಷ್ಟೇ ಅಲ್ಲ ಅವರೊಬ್ಬ ಗ್ಲೋಬಲ್ ಲೀಡರ್ ಎಂದಿದ್ದಾರೆ.

ಪುಟಿನ್ ರವರು ನರೇಂದ್ರ ಮೋದಿಯವರನ್ನ ವರ್ಲ್ಡ್ ಲೀಡರ್ ಎನ್ನುತ್ತ ಭಾರತದಲ್ಲಿ ಹೊಸ ಇತಿಹಾಸ ಸೃಷ್ಟಿಸಿರುವುದಕ್ಕೆ ಶುಭಾಷಯ ಕೋರಿದ್ದಾರೆ. ಮೋದಿಯವರ ಗೆಲುವಿನ ಬಗ್ಗೆ ಪುಟಿನ್ ಮುಂದೆ ಮಾತನಾಡುತ್ತ ಈ ಗೆಲುವು ಐತಿಹಾಸಿಕ ಜಯವಾಗಿದೆ ಹಾಗು ಮುಂಬರುವ ದಿನಗಳಲ್ಲಿ ರಷ್ಯಾ ಹಾಗು ಭಾರತದ ಸಂಬಂಧಗಳಲ್ಲಿ ಮತ್ತಷ್ಟು ವೃದ್ಧಿಯಾಗಲಿದೆ ಎಂದಿದ್ದಾರೆ.

ಪುಟಿನ್ ರವರು ಪ್ರಧಾನಿ ಮೋದಿಯವರನ್ನ ಇದೇ ವರ್ಷ ರಷ್ಯಾಗೆ ಬನ್ನಿ ಎಂದು ಆಹ್ವಾನ ನೀಡಿದ್ದರು, ನಿಮ್ಮ‌ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಪುಟಿನ್ ಹಾಗು ಪ್ರಧಾನಿ ಮೋದಿಯವರ ನಡುವೆ ಉತ್ತಮ ಬಾಂಧವ್ಯವಿದ್ದು ಎರಡೂ ರಾಷ್ಟ್ರಗಳು ಜೊತೆಗೂಡಿ ಎರಡೂ ರಾಷ್ಟ್ರಗಳ ಅಭಿವೃದ್ಧಿ ಹಾಗು ದೇಶದ ರಕ್ಷಣೆಗಾಗಿ ಟೊಂಕ ಕಟ್ಟಿ ಕಾರ್ಯ ನಿರ್ವಹಿಸಲಿದ್ದಾರೆ.

– Team Google Guruu

Leave a Reply

Your e-mail address will not be published. Required fields are marked *

error: Content is protected !!